माचाळी येथे बाबल खांडेकर यांच्यावर अस्वलाचा हल्ला; सुदैवाने जीवितहानी टळली.
खानापूर : खानापूर तालुक्यातील मोहीशेत ग्रामपंचायत व्याप्तीतील माचाळी येथे आज सकाळी सुमारे 7.00 वाजेच्या सुमारास गावातील नागरिक बाबल खांडेकर यांच्यावर अस्वलाने अचानक हल्ला केल्याची घटना घडली. या हल्ल्यात त्यांच्या मांडीला गंभीर दुखापत झाली आहे. मात्र सुदैवाने मोठी जीवितहानी टळली.

घटनेनंतर परिसरातील नागरिकांमध्ये काही काळ भीतीचे वातावरण निर्माण झाले होते. ग्रामस्थांनी तात्काळ जखमी बाबल खांडेकर यांना तातडीने उपचारासाठी लोंढा येथील प्राथमिक आरोग्य चिकित्सा केंद्रात दाखल करण्यात आले. तेथे प्राथमिक उपचार केल्यानंतर वन विभागाच्या अधिकाऱ्यांनी जखमी बाबल खांडेकर यांना पुढील उपचारासाठी खानापूर येथे हलविण्यात आल्याची माहिती मिळाली आहे.

दरम्यान, या घटनेची माहिती मिळताच वनविभागाकडून या परिसरात अस्वलाच्या हालचालींवर लक्ष ठेवण्यात येत आहे. जंगलालगतच्या भागात राहणाऱ्या नागरिकांनी तसेच जंगल परिसरात जाणाऱ्या शेतकरी व ग्रामस्थांनी सावधगिरी बाळगावी, असे आवाहन वन खात्याच्या अधिकाऱ्यांकडून करण्यात आले आहे.
ಮಾಚಾಳಿ ಗ್ರಾಮದಲ್ಲಿ ಬಾಬಲ್ ಖಾಂಡೆಕರ ಅವರ ಮೇಲೆ ಕರಡಿ ದಾಳಿ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು.
ಖಾನಾಪುರ : ಖಾನಾಪುರ ತಾಲ್ಲೂಕಿನ ಮೊಹಿಶೇತ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಚಾಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಸುಮಾರು 7.00 ಗಂಟೆಯ ಸುಮಾರಿಗೆ ಗ್ರಾಮದ ನಿವಾಸಿ ಬಾಬಲ್ ಖಾಂಡೆಕರ ಅವರ ಮೇಲೆ ಕರಡಿ ಏಕಾಏಕಿ ದಾಳಿ ಮಾಡಿದ ಘಟನೆ ನಡೆದಿದೆ. ಈ ದಾಳಿಯಲ್ಲಿ ಅವರ ತೊಡೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ನಂತರ ಕೆಲವು ಸಮಯದವರೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರು ತಕ್ಷಣವೇ ಗಾಯಗೊಂಡ ಬಾಬಲ್ ಖಾಂಡೆಕರ ಅವರನ್ನು ಚಿಕಿತ್ಸೆಗಾಗಿ ಲೋಂಡಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ ಚಿಕಿತ್ಸೆಗೆ ಗಾಯಾಳು ಬಾಬಲ್ ಖಾಂಡೆಕರ ಅವರನ್ನು ಖಾನಾಪುರಕ್ಕೆ ಕಳುಹಿಸಿರುವ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಕರಡಿಯ ಚಲನವಲನಗಳ ಮೇಲೆ ನಿಗಾ ವಹಿಸಿದೆ. ಕಾಡಿನ ಸಮೀಪದಲ್ಲಿ ವಾಸಿಸುವ ನಾಗರಿಕರು ಹಾಗೂ ಕಾಡಿನ ಪ್ರದೇಶಕ್ಕೆ ಹೋಗುವ ರೈತರು ಮತ್ತು ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.



