18 वर्षांखालील मुलांसाठी सोशल मीडियावर बंदी घालण्याची मागणी; वाढत्या डिजिटल धोक्यांविरोधात जिल्हाधिकाऱ्यांना निवेदन.
बेळगाव : 18 वर्षांखालील मुला-मुलींना सोशल मीडिया प्लॅटफॉर्मवर प्रवेशबंदी घालावी किंवा त्यावर कडक निर्बंध आणावेत, अशी मागणी करत श्री. अवधूत तुडवेकर व त्यांच्या टीमकडून बेळगाव जिल्ह्याचे जिल्हाधिकारी यांना दि. 16 फेब्रुवारी 2026 रोजी लेखी निवेदन देण्यात आले आहे. वाढत्या डिजिटल धोक्यांच्या पार्श्वभूमीवर ही मागणी करण्यात आली आहे.
निवेदनात म्हटले आहे की, सध्या Instagram आणि Facebook सारख्या सोशल मीडिया प्लॅटफॉर्मचा अल्पवयीन मुलांकडून मोठ्या प्रमाणावर वापर होत असून, या माध्यमांवरून गंभीर स्वरूपाचे गुन्हे आणि मानसिक हानी वाढत आहेत.
विशेषतः कृत्रिम बुद्धिमत्ता (Artificial Intelligence) तंत्रज्ञानाच्या वाढत्या वापरामुळे ‘डीपफेक’सारख्या प्रकारांमध्ये झपाट्याने वाढ होत आहे. अल्पवयीन मुलींचे फोटो व व्हिडिओ चोरून त्यांचे अश्लील किंवा आक्षेपार्ह स्वरूपात संपादन केले जात असल्याचे प्रकार समोर येत आहेत. या माध्यमातून ब्लॅकमेलिंग, सामाजिक बदनामी तसेच पीडित व त्यांच्या कुटुंबीयांना दीर्घकालीन मानसिक आघात सहन करावा लागत असल्याचे निवेदनात नमूद करण्यात आले आहे.
तसेच, सोशल मीडियावर सतत दिसणाऱ्या अवास्तव सौंदर्य मानदंडांमुळे आणि दिखाऊ जीवनशैलीमुळे अल्पवयीन मुलांमध्ये न्यूनगंड, नैराश्य, चिंता आणि आत्मविश्वासाची कमतरता वाढत असल्याची चिंता व्यक्त करण्यात आली आहे.
सायबर बुलिंग आणि ऑनलाईन भक्षक (प्रिडेटर्स) यांच्यापासून मुलांना स्वतःचे संरक्षण करण्याची पुरेशी भावनिक परिपक्वता नसल्याने ते सहज शोषणाचे बळी ठरत असल्याचेही निवेदनात अधोरेखित करण्यात आले आहे.
याशिवाय ‘रील्स’ आणि लघु व्हिडिओंच्या व्यसनामुळे विद्यार्थ्यांची एकाग्रता कमी होत असून, अभ्यासाकडे दुर्लक्ष वाढत आहे. परिणामी शैक्षणिक दर्जात लक्षणीय घसरण होत असल्याचा इशाराही देण्यात आला आहे.
या सर्व पार्श्वभूमीवर, विशेषतः एआय-आधारित शोषणाच्या गंभीर घटनांचा विचार करून, 18 वर्षांखालील मुलांसाठी सोशल मीडिया वापरावर बंदी घालावी किंवा त्यावर कठोर नियंत्रण ठेवण्यासाठी धोरणात्मक पावले उचलावीत, अशी मागणी श्री. अवधूत तुडवेकर व त्यांच्या टीमने जिल्हाधिकाऱ्यांकडे केली आहे.
“मुलांचे सुरक्षित भविष्य आणि मानसिक आरोग्य जपण्यासाठी प्रशासनाने तातडीने ठोस निर्णय घ्यावा,” अशी अपेक्षा व्यक्त करत संबंधित निवेदनावर त्वरित कारवाई करण्याची मागणी करण्यात आली आहे.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಹೇರಲು ಆಗ್ರಹ; ಹೆಚ್ಚುತ್ತಿರುವ ಡಿಜಿಟಲ್ ಅಪಾಯಗಳ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ.
ಬೆಳಗಾವಿ : 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕ–ಬಾಲಕಿಯರಿಗೆ ಸಾಮಾಜಿಕ ಜಾಲತಾಣ ಪ್ಲಾಟ್ಫಾರ್ಮ್ಗಳಲ್ಲಿ ಪ್ರವೇಶ ನಿಷೇಧಿಸಬೇಕು ಅಥವಾ ಕಠಿಣ ನಿಯಂತ್ರಣಗಳನ್ನು ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಶ್ರೀ. ಅವಧೂತ ತುಡವೆಕರ ಹಾಗೂ ಬಳಗದಿಂದ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ದಿ. 16 ಫೆಬ್ರವರಿ 2026ರಂದು ಲಿಖಿತ ಮನವಿ ಸಲ್ಲಿಸಿದ್ದಾರೆ. ಹೆಚ್ಚುತ್ತಿರುವ ಡಿಜಿಟಲ್ ಅಪಾಯಗಳ ಹಿನ್ನೆಲೆ ಈ ಮನವಿ ಸಲ್ಲಿಸಲಾಗಿದೆ.
ಮನವಿಯಲ್ಲಿ ಪ್ರಸ್ತಾಪಿಸಿರುವಂತೆ, ಇತ್ತೀಚೆಗೆ Instagram ಮತ್ತು Facebook ಮುಂತಾದ ಸಾಮಾಜಿಕ ಜಾಲತಾಣಗಳನ್ನು ಅಪ್ರಾಪ್ತ ವಯಸ್ಕ ಮಕ್ಕಳು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಈ ಮಾಧ್ಯಮಗಳ ಮೂಲಕ ಗಂಭೀರ ಸ್ವರೂಪದ ಅಪರಾಧಗಳು ಮತ್ತು ಮಾನಸಿಕ ಹಾನಿಗಳು ಹೆಚ್ಚುತ್ತಿರುವುದಾಗಿ ಹೇಳಲಾಗಿದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ‘ಡೀಪ್ಫೇಕ್’ ಮಾದರಿಯ ಘಟನೆಗಳು ವೇಗವಾಗಿ ಹೆಚ್ಚುತ್ತಿವೆ. ಅಪ್ರಾಪ್ತ ವಯಸ್ಕ ಬಾಲಕಿಯರ ಫೋಟೋ ಹಾಗೂ ವೀಡಿಯೊಗಳನ್ನು ಕಳವು ಮಾಡಿ ಅವುಗಳನ್ನು ಅಶ್ಲೀಲ ಅಥವಾ ಆಕ್ಷೇಪಾರ್ಹ ರೂಪದಲ್ಲಿ ಸಂಪಾದಿಸುವ ಘಟನೆಗಳು ಬೆಳಕಿಗೆ ಬರುತ್ತಿವೆ. ಇದರ ಮೂಲಕ ಬ್ಲ್ಯಾಕ್ಮೇಲಿಂಗ್, ಸಾಮಾಜಿಕ ಮಾನಹಾನಿ ಹಾಗೂ ಪೀಡಿತರಿಗೂ ಅವರ ಕುಟುಂಬ ಸದಸ್ಯರಿಗೂ ದೀರ್ಘಕಾಲದ ಮಾನಸಿಕ ಆಘಾತ ಉಂಟಾಗುತ್ತಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವ ಅವಾಸ್ತವ ಸೌಂದರ್ಯ ಮಾನದಂಡಗಳು ಮತ್ತು ಪ್ರದರ್ಶಿತ ಜೀವನಶೈಲಿಯ ಪರಿಣಾಮವಾಗಿ ಅಪ್ರಾಪ್ತ ವಯಸ್ಕರಲ್ಲಿ ಹೀನಭಾವನೆ, ಮಾನಸಿಕ ಖಿನ್ನತೆ, ಆತಂಕ ಹಾಗೂ ಆತ್ಮವಿಶ್ವಾಸದ ಕೊರತೆ ಹೆಚ್ಚುತ್ತಿದೆ ಎಂಬ ಚಿಂತೆ ವ್ಯಕ್ತಪಡಿಸಲಾಗಿದೆ. ಸೈಬರ್ ಬುಲಿಯಿಂಗ್ ಮತ್ತು ಆನ್ಲೈನ್ ಭಕ್ಷಕರಿಂದ (ಪ್ರಿಡೇಟರ್ಸ್) ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೇಕಾದ ಭಾವನಾತ್ಮಕ ಪ್ರೌಢತೆ ಮಕ್ಕಳಲ್ಲಿ ಸಾಕಷ್ಟು ಇಲ್ಲದ ಕಾರಣ ಅವರು ಸುಲಭವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದನ್ನೂ ಮನವಿಯಲ್ಲಿ ಒತ್ತಿ ಹೇಳಲಾಗಿದೆ.
ಅದರ ಜೊತೆಗೆ ‘ರೀಲ್ಸ್’ ಹಾಗೂ ಲಘು ವೀಡಿಯೊಗಳ ವ್ಯಸನದಿಂದ ವಿದ್ಯಾರ್ಥಿಗಳ ಏಕಾಗ್ರತೆ ಕುಗ್ಗಿ, ಅಧ್ಯಯನದತ್ತ ನಿರ್ಲಕ್ಷ್ಯ ಹೆಚ್ಚುತ್ತಿದೆ. ಪರಿಣಾಮವಾಗಿ ಶೈಕ್ಷಣಿಕ ಮಟ್ಟದಲ್ಲಿ ಗಮನಾರ್ಹ ಕುಸಿತ ಉಂಟಾಗುತ್ತಿರುವುದಾಗಿ ಎಚ್ಚರಿಸಲಾಗಿದೆ.
ಈ ಎಲ್ಲಾ ಹಿನ್ನೆಲೆಗಳಲ್ಲಿ, ವಿಶೇಷವಾಗಿ ಎಐ ಆಧಾರಿತ ಶೋಷಣೆಯ ಗಂಭೀರ ಘಟನೆಗಳನ್ನು ಪರಿಗಣಿಸಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯ ಮೇಲೆ ನಿಷೇಧ ಹೇರಬೇಕು ಅಥವಾ ಕಠಿಣ ನಿಯಂತ್ರಣಗಳಿಗಾಗಿ ಧೋರಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶ್ರೀ. ಅವಧೂತ ತುಡವೆಕರ ಹಾಗೂ ಅವರ ಬಳಗದ ವತಿಯಿಂದ ಜಿಲ್ಲಾಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.
“ಮಕ್ಕಳ ಸುರಕ್ಷಿತ ಭವಿಷ್ಯ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಆಡಳಿತವು ತುರ್ತು ಹಾಗೂ ದೃಢ ನಿರ್ಧಾರ ಕೈಗೊಳ್ಳಬೇಕು,” ಎಂದು ಮನವಿಯಲ್ಲಿ ತಿಳಿಸಿ, ಸಂಬಂಧಿತ ಮನವಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.



