सावित्रीबाईंनी सनातनी व्यवस्थेवर असूड ओढला ; नंदगड जेसीएस शाळेत क्रांतीज्योती सावित्रीबाई फुले जयंती साजरी.
खानापूर : क्रांतीज्योती सावित्रीबाई फुले यांना नेहमीच स्त्रियांची सामाजिक स्थिती बदलायची होती. भारतातील पहिल्या शिक्षिका म्हणून त्यांनी मुलींच्या शिक्षणाची मुहूर्तमेढ रोवली. बालविवाह, बालविधवांचे मुंडन, लैंगिक शोषण अशा अन्यायकारक प्रथांविरोधात त्यांनी ठामपणे आवाज उठवला. रुढी-परंपरांना विरोध करत त्यांनी तत्कालीन सनातनी समाजव्यवस्थेवर प्रभावी प्रहार केला, असे प्रतिपादन मराठी मुलांच्या शाळेच्या मुख्याध्यापिका वैशाली पाटील यांनी केले.
त्या नंदगड येथील जेसीएस शाळेत क्रांतीज्योती सावित्रीबाई फुले जयंतीनिमित्त आयोजित कार्यक्रमात बोलत होत्या. कार्यक्रमाच्या अध्यक्षस्थानी मराठी मुलींच्या शाळेच्या मुख्याध्यापिका मिना उत्तूरकर होत्या. प्रारंभी क्रांतीसूर्य जोतिबा फुले व क्रांतीज्योती सावित्रीबाई फुले यांच्या प्रतिमांचे पूजन करण्यात आले. त्यानंतर विद्यार्थ्यांनी आपल्या भाषणातून सावित्रीबाईंच्या कार्याचा गौरव केला.
अध्यक्षस्थानावरून बोलताना मुख्याध्यापिका मिना उत्तूरकर म्हणाल्या की, सावित्रीबाई फुले यांनी मुलींच्या शिक्षणाला सर्वोच्च महत्त्व देत फुलेवाड्यात पहिली मुलींची शाळा सुरू केली. समाजाने ज्या शिक्षणाचे दरवाजे मुलींसाठी बंद केले होते, ते फुले दांपत्याने खुले केले. त्यामुळेच आज स्त्री सबल बनून विविध क्षेत्रांत पुरुषांच्या खांद्याला खांदा लावून उभी आहे. याचे सर्व श्रेय सावित्रीबाई फुले यांनाच जाते.
यावेळी बोलताना छाया मिटकर यांनी सांगितले की, त्या काळात अस्पृश्यतेसारख्या सामाजिक दुष्कृत्यांमुळे अनेक स्त्रियांना आत्महत्या करावी लागत होती. महिलांना पाण्यासाठी त्रास होऊ नये म्हणून सावित्रीबाईंनी स्वतंत्र विहीरही खोदली. त्यांनी मुलींवरील भेदभावाविरोधात लढा उभारला. आजच्या महिलांनी सोवळ्या-ओवळ्यांच्या बंधनात अडकून न पडता स्वतंत्र विचारसरणी स्वीकारली पाहिजे, असे त्यांनी नमूद केले.
या कार्यक्रमास सीआरपी सौ. चापगावकर, शिक्षिका सविता देसाई, कल्पना बाबलीचे, निलांबिका वस्त्रद, मेघा पाटील, मंजुळा देमट्टी, प्रियंका चन्नेवाडकर, स्वाती पाटील यांच्यासह शाळा सुधारणा समितीच्या अध्यक्षा स्मिता पाटील, सदस्य प्रणाली तोरगल तसेच विद्यार्थी मोठ्या संख्येने उपस्थित होते.
ಸಾವಿತ್ರಿಬಾಯಿ ಆ ಕಾಲದ ಸನಾತನ ವ್ಯವಸ್ಥೆಯ ವಿರೋಧವಾಗಿ ಕಠೋರ ಪ್ರಹಾರ ನಡೆಸಿದರು; ನಂದಗಡ JCS ಶಾಲೆಯಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ.
ಖಾನಾಪುರ : ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರ ಸಾಮಾಜಿಕ ಸ್ಥಿತಿಗತಿಯನ್ನು ಬದಲಾಯಿಸುವ ಕನಸನ್ನು ಸದಾ ಹೊತ್ತುಕೊಂಡಿದ್ದರು. ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿರುವ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮುನ್ನುಡಿ ಬರೆದರು. ಬಾಲ್ಯವಿವಾಹ, ಬಾಲ ವಿಧವೆಯರ ಮುಂಡನ, ಲೈಂಗಿಕ ಶೋಷಣೆ ಮುಂತಾದ ಅನ್ಯಾಯಕರ ಪದ್ಧತಿಗಳ ವಿರುದ್ಧ ಅವರು ಧೈರ್ಯದಿಂದ ಧ್ವನಿ ಎತ್ತಿದರು. ರೂಢಿ–ಪರಂಪರಿಗಳಿಗೆ ವಿರೋಧವಾಗಿ ಸನಾತನ ಸಮಾಜ ವ್ಯವಸ್ಥೆಯ ಮೇಲೆ ಪರಿಣಾಮಕಾರಿ ಪ್ರಹಾರ ನಡೆಸಿದರು ಎಂದು ಮರಾಠಿ ಬಾಲಕರ ಶಾಲೆಯ ಮುಖ್ಯಾಧ್ಯಾಪಕಿ ವೈಶಾಲಿ ಪಾಟೀಲ ಹೇಳಿದರು. ಅವರು ನಂದಗಡದ JCS ಶಾಲೆಯಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಾಠಿ ಹೆಣ್ಣು ಮಕ್ಕಳು ಶಾಲೆಯ ಮುಖ್ಯಾಧ್ಯಾಪಕಿ ಮೀನಾ ಉತ್ತೂರಕರ ವಹಿಸಿದ್ದರು. ಆರಂಭದಲ್ಲಿ ಕ್ರಾಂತಿಸೂರ್ಯ ಜ್ಯೋತಿಬಾ ಫುಲೆ ಹಾಗೂ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ವಿದ್ಯಾರ್ಥಿಗಳು ತಮ್ಮ ಭಾಷಣಗಳ ಮೂಲಕ ಸಾವಿತ್ರಿಬಾಯಿಯವರ ಕಾರ್ಯಕ್ಕೆ ಗೌರವ ಸಲ್ಲಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಮುಖ್ಯಾಧ್ಯಾಪಕಿ ಮೀನಾ ಉತ್ತೂರಕರ ಅವರು, ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅತ್ಯುನ್ನತ ಮಹತ್ವ ನೀಡಿ ಫುಲೆವಾಡಾದಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಆರಂಭಿಸಿದರು. ಸಮಾಜವು ಹೆಣ್ಣು ಮಕ್ಕಳಿಗೆ ಮುಚ್ಚಿದ್ದ ಶಿಕ್ಷಣದ ಬಾಗಿಲುಗಳನ್ನು ಫುಲೆ ದಂಪತಿಗಳು ತೆರೆದರು. ಅದರ ಫಲವಾಗಿ ಇಂದು ಮಹಿಳೆ ಸಬಲಳಾಗಿ ವಿವಿಧ ಕ್ಷೇತ್ರಗಳಲ್ಲಿ ಪುರುಷರೊಂದಿಗೆ ಸಮಾನವಾಗಿ ನಿಂತಿದ್ದಾಳೆ. ಇದಕ್ಕೆಲ್ಲಾ ಶ್ರೇಯಸ್ಸು ಸಾವಿತ್ರಿಬಾಯಿ ಫುಲೆ ಅವರಿಗೇ ಸಲ್ಲುತ್ತದೆ ಎಂದರು.
ಈ ವೇಳೆ ಮಾತನಾಡಿದ ಛಾಯಾ ಮಿಟ್ಕರ್ ಅವರು, ಆ ಕಾಲದಲ್ಲಿ ಅಸ್ಪೃಶ್ಯತೆ ಮುಂತಾದ ಸಾಮಾಜಿಕ ದೋಷಗಳಿಂದ ಅನೇಕ ಮಹಿಳೆಯರು ಆತ್ಮಹತ್ಯೆಗೆ ದೂಡಲ್ಪಟ್ಟಿದ್ದರು. ಮಹಿಳೆಯರಿಗೆ ನೀರಿಗಾಗಿ ತೊಂದರೆ ಆಗಬಾರದೆಂದು ಸಾವಿತ್ರಿಬಾಯಿ ಅವರು ಸ್ವತಂತ್ರ ಬಾವಿಯನ್ನೂ ತೋಡಿಸಿದರು. ಅವರು ಬಾಲಕಿಯರ ಮೇಲಿನ ಭೇದಭಾವದ ವಿರುದ್ಧ ಹೋರಾಟ ನಡೆಸಿದರು. ಇಂದಿನ ಮಹಿಳೆಯರು ಯಾವುದೇ ಬಂಧನದಲ್ಲಿ ಸಿಲುಕದೆ ಸ್ವತಂತ್ರ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ CRP ಸೌ. ಚಾಪಗಾವಕರ, ಶಿಕ್ಷಕಿಯರಾದ ಸವಿತಾ ದೇಸಾಯಿ, ಕಲ್ಪನಾ ಬಾಬ್ಲಿಚೆ, ನಿಲಾಂಬಿಕಾ ವಸ್ತ್ರದ್, ಮೇಘಾ ಪಾಟೀಲ, ಮಂಜುಳಾ ದೇಮಟ್ಟೀ, ಪ್ರಿಯಾಂಕಾ ಚನ್ನೇವಾಡಕರ, ಸ್ವಾತಿ ಪಾಟೀಲ, ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷೆ ಸ್ಮಿತಾ ಪಾಟೀಲ, ಸದಸ್ಯೆ ಪ್ರಣಾಲಿ ತೋರಗಲ್ ಹಾಗೂ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


