मराठी माध्यमातून शिक्षण घेतलेले विद्यार्थीच सरकारी शाळांचे भविष्य – रणजीत पाटील.
खानापूर : मराठी माध्यमातून शिक्षण घेतलेले अनेक विद्यार्थी आज विविध क्षेत्रात यशस्वीपणे कार्यरत आहेत. अशा युवा उद्योजकांनी व माजी विद्यार्थ्यांनी आपल्या गावातील शाळांच्या विकासासाठी पुढाकार घेतल्यास सरकारी शाळांचा कायापालट होऊ शकतो. माजी विद्यार्थ्यांच्या सहभागामुळे शाळांची गुणवत्ता वाढून विद्यार्थ्यांची संख्या निश्चितच वाढेल, असे प्रतिपादन मध्यवर्ती महाराष्ट्र एकीकरण समितीचे सदस्य रणजीत पाटील यांनी केले.
हलगा (ता. खानापूर) येथील सरकारी मराठी शाळा व अंगणवाडीतील विद्यार्थ्यांना हलगा गावचे सुपुत्र व सध्या नायजेरिया येथे वास्तव्यास असलेले प्रकाश कडगावकर यांच्या वतीने जर्किन वितरणाचा कार्यक्रम पार पडला. या कार्यक्रमाच्या अध्यक्षस्थानी माजी ग्रामपंचायत सदस्य नागेशी गावडू पाटील होते.

यावेळी बोलताना रणजीत पाटील म्हणाले की, हलगा शाळेतून शिक्षण घेतलेले अनेक विद्यार्थी आज विविध क्षेत्रात उल्लेखनीय कामगिरी करत आहेत. नायजेरियासारख्या देशात नोकरी करत असतानाही प्रकाश कडगावकर यांनी गावातील शाळेतील विद्यार्थ्यांचा विचार करून आपल्या आई-वडीलांच्या कै श्रीमती वंदना दत्तू कडगावकर व कै दत्तू गणपती कडगावकर यांच्या स्मरणार्थ मदतीचा हात पुढे केला, ही अत्यंत कौतुकास्पद बाब आहे. गावातील इतर माजी विद्यार्थ्यांनीही शाळा व विद्यार्थ्यांसाठी विविध उपक्रम राबवावेत. त्यामुळे विद्यार्थ्यांना थेट लाभ होऊन नव्याने प्रवेश घेणाऱ्या विद्यार्थ्यांची संख्या वाढेल, असेही त्यांनी नमूद केले.
यावेळी प्रकाश कडगावकर यांनी मनोगत व्यक्त करताना सांगितले की, परदेशात किंवा देशाच्या इतर भागात नोकरी करत असतानाही आपल्या गावाशी नाळ कायम ठेवणे आवश्यक आहे. येणाऱ्या काळातही शाळेतील विद्यार्थ्यांसाठी विविध प्रकारचे शैक्षणिक साहित्य उपलब्ध करून देण्यासाठी आपण प्रयत्नशील राहणार असल्याची माहिती त्यांनी दिली.
कार्यक्रमाच्या प्रारंभी विद्यार्थिनींनी ईशस्तवन व स्वागतगीत सादर केले. दीपप्रज्वलनाने कार्यक्रमाची सुरुवात झाली. शाळेच्या मुख्याध्यापिका सौ. जे. पी. कुंभार यांनी स्वागतपर भाषणात शाळेच्या शैक्षणिक व सर्वांगीण प्रगतीची सविस्तर माहिती दिली.
या कार्यक्रमास पुंडलिक पाटील, शाळा सुधारणा समितीचे अध्यक्ष महाबळेश्वर फठाण, उपाध्यक्ष गीतगंगा फठाण, गंगाराम पाटील, नागेश फठाण, विनोद फठाण, रामचंद्र सुतार यांच्यासह ग्रामस्थ, पालक, शिक्षकवर्ग व विद्यार्थी मोठ्या संख्येने उपस्थित होते.
ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳೇ ಮರಾಠಿ ಸರ್ಕಾರಿ ಶಾಲೆಗಳ ಆಸ್ತಿ – ರಂಜಿತ್ ಪಾಟೀಲ.
ಖಾನಾಪುರ : ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಯುವ ಉದ್ಯಮಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ತಮ್ಮ ಊರಿನ ಶಾಲೆಗಳ ಅಭಿವೃದ್ಧಿಗೆ ಮುಂದಾದರೆ ಮರಾಠಿ ಸರ್ಕಾರಿ ಶಾಲೆಗಳ ರೂಪಾಂತರ ಸಾಧ್ಯವಾಗುತ್ತದೆ. ಹಳೆಯ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಮರಾಠಿ ಶಾಲೆಗಳ ಗುಣಮಟ್ಟ ಹೆಚ್ಚಾಗಿ, ವಿದ್ಯಾರ್ಥಿಗಳ ಸಂಖ್ಯೆ ನಿಶ್ಚಿತವಾಗಿಯೂ ಹೆಚ್ಚಲಿದೆ ಎಂದು ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯ ರಂಜಿತ್ ಪಾಟೀಲ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಲಗಾ (ತಾ. ಖಾನಾಪುರ) ಗ್ರಾಮದ ಸರ್ಕಾರಿ ಮರಾಠಿ ಶಾಲೆ ಮತ್ತು ಅಂಗನವಾಡಿಯ ವಿದ್ಯಾರ್ಥಿಗಳಿಗೆ, ಹಲಗಾ ಗ್ರಾಮದ ಸುಪುತ್ರರಾದ ಪ್ರಸ್ತುತ ನೈಜೀರಿಯಾದಲ್ಲಿ ವಾಸವಾಗಿರುವ ಪ್ರಕಾಶ್ ಕಡಗಾವಕರ ಅವರ ವತಿಯಿಂದ ಜೆರ್ಕಿನ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಗ್ರಾಮ ಪಂಚಾಯತ್ ಸದಸ್ಯ ನಾಗೇಶಿ ಗಾವಡು ಪಾಟೀಲ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಂಜಿತ್ ಪಾಟೀಲ ಅವರು, ಹಲಗಾ ಮರಾಠಿ ಶಾಲೆಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ನೈಜೀರಿಯಾ ದಂತ ದೇಶದಲ್ಲಿ ಉದ್ಯೋಗದಲ್ಲಿದ್ದರೂ ಪ್ರಕಾಶ್ ಕಡಗಾವಕರ ಅವರು ತಮ್ಮ ಊರಿನ ಮರಾಠಿ ಶಾಲೆಯ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರಿಸಿ, ತಮ್ಮ ತಂದೆ–ತಾಯಿ ದಿವಂಗತ ಶ್ರೀಮತಿ ವಂದನಾ ದತ್ತು ಕಡಗಾವಕರ ಹಾಗೂ ದಿವಂಗತ ದತ್ತು ಗಣಪತಿ ಕಡಗಾವಕರ ಅವರ ಸ್ಮರಣಾರ್ಥ ಸಹಾಯ ಹಸ್ತ ಚಾಚಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಗ್ರಾಮದ ಇತರ ಹಳೆಯ ವಿದ್ಯಾರ್ಥಿಗಳೂ ಸಹ ಮರಾಠಿ ಶಾಲೆ ಮತ್ತು ವಿದ್ಯಾರ್ಥಿಗಳಿಗಾಗಿ ಇಂತಹ ವಿವಿಧ ಉಪಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ನೇರ ಲಾಭ ದೊರೆಯುವುದರ ಜೊತೆಗೆ ಹೊಸದಾಗಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆಯೂ ಹೆಚ್ಚಲಿದೆ ಎಂದು ಅವರು ಹೇಳಿದರು.
ಈ ವೇಳೆ ಪ್ರಕಾಶ್ ಕಡಗಾವಕರ ತಮ್ಮ ಮನೋಗತದಲ್ಲಿ ಮಾತನಾಡಿ, ವಿದೇಶದಲ್ಲಾಗಲಿ ಅಥವಾ ದೇಶದ ಇತರ ಭಾಗಗಳಲ್ಲಿ ಉದ್ಯೋಗದಲ್ಲಿದ್ದರೂ ಸಹ ತಮ್ಮ ಊರಿನೊಂದಿಗೆ ನಂಟನ್ನು ಸದಾ ಜೀವಂತವಾಗಿಟ್ಟುಕೊಳ್ಳುವುದು ಅಗತ್ಯ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿಯೂ ಶಾಲೆಯ ವಿದ್ಯಾರ್ಥಿಗಳಿಗಾಗಿ ವಿವಿಧ ರೀತಿಯ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸಲು ತಾವು ಪ್ರಯತ್ನಿಸುತ್ತಿರುವುದಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಈಶಸ್ತವನ ಹಾಗೂ ಸ್ವಾಗತಗೀತೆ ಪ್ರಸ್ತುತಪಡಿಸಿದರು. ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಶಾಲೆಯ ಮುಖ್ಯಶಿಕ್ಷಕಿ ಸೌ. ಜೆ.ಪಿ. ಕುಂಭಾರ ಅವರು ಸ್ವಾಗತ ಭಾಷಣದಲ್ಲಿ ಶಾಲೆಯ ಶೈಕ್ಷಣಿಕ ಹಾಗೂ ಸರ್ವಾಂಗೀಣ ಪ್ರಗತಿಯ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಪುಂಡಲಿಕ್ ಪಾಟೀಲ, ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಮಹಾಬಳೇಶ್ವರ ಫಠಾಣ, ಉಪಾಧ್ಯಕ್ಷೆ ಗೀತಗಂಗಾ ಫಠಾಣ, ಗಂಗಾರಾಮ ಪಾಟೀಲ, ನಾಗೇಶ ಫಠಾಣ, ವಿನೋದ್ ಫಠಾಣ, ರಾಮಚಂದ್ರ ಸುತಾರ್ ಸೇರಿದಂತೆ ಗ್ರಾಮಸ್ಥರು, ಪಾಲಕರು, ಶಿಕ್ಷಕವರ್ಗ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



