कोडचवाडमध्ये 110 केव्ही विद्युत उपकेंद्र अंतिम टप्प्यात; आमदार विठ्ठल हलगेकर व प्रमोद कोचेरी यांची पाहणी..
खानापूर : खानापूर तालुक्यातील कोडचवाड गावामध्ये 110 केव्ही (KPTCL) विद्युत उपकेंद्राच्या उभारणीचे काम प्रगतीपथावर असून ते आता अंतिम टप्प्यात आले आहे. कोडचवाड ग्रामस्थ, आजी-माजी आमदार तसेच भाजपाचे जिल्हा उपाध्यक्ष प्रमोद कोचेरी यांच्या सातत्यपूर्ण प्रयत्नांना यश आले आहे.
शुक्रवार, दि. 26 डिसेंबर रोजी खानापूर तालुक्याचे आमदार विठ्ठल हलगेकर व भाजपाचे जिल्हा उपाध्यक्ष प्रमोद कोचेरी यांनी सुरू असलेल्या कामाची प्रत्यक्ष पाहणी केली. यावेळी आमदारांनी कामाचा दर्जा व गती याबाबत संबंधित अधिकाऱ्यांना आवश्यक सूचना केल्या. या पाहणीप्रसंगी भाजपाचे जिल्हा उपाध्यक्ष श्री. प्रमोद कोचेरी, गुंडू तोप्पीनकट्टी, सहदेव बडगेर, हनुमंत पाटील, सुभाष पुजार आदी मान्यवर उपस्थित होते.
विद्युत समस्येवर कायमस्वरूपी उपाय….
कोडचवाड व पारीशवाड परिसरातील अनेक गावांमध्ये विद्युत पुरवठा सक्षम व सुरळीत नसल्याने शेतकरी व नागरिकांना कायमस्वरूपी विजेच्या समस्येला सामोरे जावे लागत होते. ही समस्या कायमस्वरूपी सोडविण्यासाठी तत्कालीन केपीटीसीएलचे असिस्टंट एक्झिक्युटिव्ह इंजिनियर जाबन्नावर यांनी 110 केव्ही विद्युत उपकेंद्रासाठी चार एकर जागेची आवश्यकता असल्याचे स्पष्ट केले होते.
जागेचा प्रश्न आणि ग्रामस्थांचा पुढाकार……
या अनुषंगाने कोडचवाड गावात भाजपाचे जिल्हा उपाध्यक्ष प्रमोद कोचेरी यांच्या पुढाकाराने ग्रामस्थांची बैठक घेण्यात आली. बैठकीत गावातील गावठाण (गोमाळ) मधील चार एकर जागा विद्युत उपकेंद्रासाठी देण्याचा ठराव करण्यात आला व त्यासाठी जिल्हाधिकाऱ्यांकडे मागणी करण्यात आली. मात्र सदर जागा गावठाणची असल्याने जिल्हाधिकाऱ्यांनी मंजुरी देण्यास नकार दिला.
यानंतर ग्रामस्थांनी व कोडचवाड गावचे रहिवासी प्रमोद कोचेरी यांनी गावठाणला लागून असलेल्या कलमेश्वर मंदिराचे पुजारी असलेले शेतकरी पुजारी यांच्याकडे 110 केव्ही विद्युत उपकेंद्रासाठी जमीन देण्याची विनंती केली. ग्रामस्थांच्या विनंतीला मान देत पुजारी यांनी आपली जमीन उपकेंद्रासाठी देण्यास संमती दिली. त्याबदल्यात सरकारकडून त्यांना प्रति एकर प्रमाणे जमिनीचा मोबदला देण्यात आला.
मंजुरी व कामाची प्रगती…..
जागेचा प्रश्न सुटल्यानंतर केपीटीसीएलचे तत्कालीन असिस्टंट एक्झिक्युटिव्ह इंजिनियर जाबन्नावर यांच्या मार्गदर्शनाखाली प्रमोद कोचेरी व कोडचवाड ग्रामस्थांनी बेंगळूर येथील केपीटीसीएल कार्यालयाकडे 110 केव्ही विद्युत उपकेंद्राच्या मंजुरीसाठी प्रयत्न सुरू केले. यावेळी तत्कालीन आमदार अरविंद पाटील यांनी तत्कालीन ऊर्जा मंत्री डी. के. शिवकुमार यांची भेट घेऊन कोडचवाड, भुरूणकी व बैलूर या तीन विद्युत उपकेंद्रांना मंजुरी मिळवून दिली. या प्रकल्पाला 2019 मध्ये मंजुरी मिळाली.
यानंतर ओडिशा येथील कंत्राटदाराला सदर उपकेंद्राच्या उभारणीचे कंत्राट देण्यात आले. कामास सुरुवात होऊन आज हे काम पूर्णत्वाकडे झुकले असून शेवटच्या टप्प्यात आहे.
शेतकरी व ग्रामस्थांना मोठा दिलासा….
या 110 केव्ही विद्युत उपकेंद्रामुळे कोडचवाड व परिसरातील गावांमध्ये विद्युत पुरवठा सक्षम व सुरळीत होणार असून शेतकरी व ग्रामस्थांना मोठा दिलासा मिळणार आहे. दीर्घकाळ प्रलंबित असलेली विजेची समस्या कायमस्वरूपी सुटण्याच्या मार्गावर असून ग्रामस्थांमध्ये समाधान व्यक्त केले जात आहे.
ಕೋಡಚವಾಡದಲ್ಲಿ ನಿರ್ಮಿಸಲಾಗುತ್ತಿರುವ 110 ಕೆವಿ ವಿದ್ಯುತ್ ಉಪಕೇಂದ್ರ ಅಂತಿಮ ಹಂತದಲ್ಲಿ; ಶಾಸಕ ವಿಠ್ಠಲ ಹಲಗೆಕರ್ ಹಾಗೂ ಪ್ರಮೋದ್ ಕೊಚೇರಿ ಅವರಿಂದ ಪ್ರಗತಿ ಪರಿಶೀಲನೆ..
ಖಾನಾಪುರ : ಖಾನಾಪುರ ತಾಲ್ಲೂಕಿನ ಕೋಡಚವಾಡ ಗ್ರಾಮದಲ್ಲಿ 110 ಕೆವಿ (KPTCL) ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈಗ ಅಂತಿಮ ಹಂತಕ್ಕೆ ತಲುಪಿದೆ. ಕೋಡಚವಾಡ ಗ್ರಾಮಸ್ಥರು, ಮಾಜಿ–ಪ್ರಸ್ತುತ ಶಾಸಕರು ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೊಚೇರಿ ಅವರ ನಿರಂತರ ಪ್ರಯತ್ನಗಳು ಯಶಸ್ವಿಯಾಗಿವೆ.
ಶುಕ್ರವಾರ, ದಿನಾಂಕ 26 ಡಿಸೆಂಬರ್ ರಂದು ಖಾನಾಪುರ ತಾಲ್ಲೂಕಿನ ಶಾಸಕ ವಿಠ್ಠಲ ಹಲಗೇಕರ್ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೊಚೇರಿ ಅವರು ನಡೆಯುತ್ತಿರುವ ಕಾಮಗಾರಿಯನ್ನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕರು ಕಾಮಗಾರಿಯ ಗುಣಮಟ್ಟ ಹಾಗೂ ವೇಗದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಈ ಪರಿಶೀಲನಾ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀ. ಪ್ರಮೋದ್ ಕೊಚೇರಿ, ಗುಂಡು ತೊಪ್ಪಿನಕಟ್ಟಿ, ಸಹದೇವ ಬಡಿಗೇರ, ಹನುಮಂತ ಪಾಟೀಲ್, ಸುಭಾಷ್ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ….
ಕೋಡಚವಾಡ ಹಾಗೂ ಪಾರಿಶವಾಡ ಪ್ರದೇಶದ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸಮರ್ಪಕವಾಗಲ್ಲಿದು ಕಾರಣ ರೈತರು ಹಾಗೂ ನಾಗರಿಕರು ದೀರ್ಘಕಾಲದಿಂದ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆಗಿನ ಕೆಪಿಟಿಸಿಎಲ್ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಾಬನ್ನಾವರ್ ಅವರು 110 ಕೆವಿ ವಿದ್ಯುತ್ ಉಪಕೇಂದ್ರಕ್ಕಾಗಿ ನಾಲ್ಕು ಎಕರೆ ಜಮೀನಿನ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದರು.
ಜಮೀನಿನ ಸಮಸ್ಯೆ ಮತ್ತು ಗ್ರಾಮಸ್ಥರ ಮುಂದಾಳತ್ವ……
ಈ ಹಿನ್ನೆಲೆಯಲ್ಲಿ ಕೋಡಚವಾಡ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೊಚೇರಿ ಅವರ ಮುಂದಾಳತ್ವದಲ್ಲಿ ಗ್ರಾಮಸ್ಥರ ಸಭೆಯನ್ನು ಆಯೋಜಿಸಲಾಯಿತು. ಸಭೆಯಲ್ಲಿ ಗ್ರಾಮದ ಗಾವಠಾಣ (ಗೋಮಾಳ) ಪ್ರದೇಶದಲ್ಲಿನ ನಾಲ್ಕು ಎಕರೆ ಜಮೀನನ್ನು ವಿದ್ಯುತ್ ಉಪಕೇಂದ್ರಕ್ಕಾಗಿ ನೀಡುವ ನಿರ್ಣಯ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಆದರೆ ಆ ಜಮೀನು ಗಾವಠಾಣಕ್ಕೆ ಸೇರಿದ್ದರಿಂದ ಜಿಲ್ಲಾಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದರು.
ಅನಂತರ ಗ್ರಾಮಸ್ಥರು ಹಾಗೂ ಕೋಡಚವಾಡ ಗ್ರಾಮದ ನಿವಾಸಿಯಾಗಿರುವ ಪ್ರಮೋದ್ ಕೊಚೇರಿ ಅವರು ಗಾವಠಾಣಕ್ಕೆ ಹೊಂದಿಕೊಂಡಿರುವ ಕಲಮೇಶ್ವರ ದೇವಸ್ಥಾನದ ಪೂಜಾರಿಯಾಗಿರುವ ರೈತ ಪೂಜಾರಿ ಅವರ ಬಳಿ 110 ಕೆವಿ ವಿದ್ಯುತ್ ಉಪಕೇಂದ್ರಕ್ಕಾಗಿ ಜಮೀನು ನೀಡುವಂತೆ ವಿನಂತಿಸಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಪೂಜಾರಿಗಳು ತಮ್ಮ ಜಮೀನನ್ನು ಉಪಕೇಂದ್ರಕ್ಕಾಗಿ ನೀಡಲು ಒಪ್ಪಿಗೆ ನೀಡಿದರು. ಅದಕ್ಕೆ ಪ್ರತಿಫಲವಾಗಿ ಸರ್ಕಾರದಿಂದ ಅವರಿಗೆ ಪ್ರತಿ ಎಕರೆಗನುಸಾರ ಜಮೀನಿನ ಪರಿಹಾರ ಮೊತ್ತ ನೀಡಲಾಯಿತು.
ಅನುಮೋದನೆ ಮತ್ತು ಕಾಮಗಾರಿಯ ಪ್ರಗತಿ…..
ಜಮೀನಿನ ಸಮಸ್ಯೆ ಪರಿಹಾರವಾದ ನಂತರ, ಕೆಪಿಟಿಸಿಎಲ್ನ ಆಗಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಾಬನ್ನಾವರ್ ಅವರ ಮಾರ್ಗದರ್ಶನದಲ್ಲಿ ಪ್ರಮೋದ್ ಕೊಚೇರಿ ಹಾಗೂ ಕೋಡಚವಾಡ ಗ್ರಾಮಸ್ಥರು ಬೆಂಗಳೂರಿನ ಕೆಪಿಟಿಸಿಎಲ್ ಕಚೇರಿಯಲ್ಲಿ 110 ಕೆವಿ ವಿದ್ಯುತ್ ಉಪಕೇಂದ್ರದ ಅನುಮೋದನೆಗಾಗಿ ಪ್ರಯತ್ನಗಳನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಆಗಿನ ಶಾಸಕ ಅರವಿಂದ್ ಪಾಟೀಲ್ ಅವರು ಆಗಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಕೋಡಚವಾಡ, ಭೂರುಂಕಿ ಹಾಗೂ ಬೈಲೂರು ಈ ಮೂರು ವಿದ್ಯುತ್ ಉಪಕೇಂದ್ರಗಳಿಗೆ ಅನುಮೋದನೆ ದೊರಕಿಸಿಕೊಟ್ಟರು. ಈ ಯೋಜನೆಗೆ 2019ರಲ್ಲಿ ಅನುಮೋದನೆ ಲಭಿಸಿತು.
ನಂತರ ಓಡಿಸಾ ರಾಜ್ಯದ ಕಂಟ್ರಾಕ್ಟರಗೆ ಈ ಉಪಕೇಂದ್ರ ನಿರ್ಮಾಣದ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಆರಂಭಗೊಂಡು ಇಂದು ಪೂರ್ಣತೆಯತ್ತ ಸಾಗುತ್ತಿದ್ದು, ಅಂತಿಮ ಹಂತದಲ್ಲಿದೆ.
ರೈತರು ಹಾಗೂ ಗ್ರಾಮಸ್ಥರಿಗೆ ಮಹತ್ತರ ನಿರಾಳತೆ….
ಈ 110 ಕೆವಿ ವಿದ್ಯುತ್ ಉಪಕೇಂದ್ರದಿಂದ ಕೋಡಚವಾಡ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸಮರ್ಥ ಹಾಗೂ ಸುಗಮವಾಗಲಿದ್ದು, ರೈತರು ಮತ್ತು ಗ್ರಾಮಸ್ಥರಿಗೆ ದೊಡ್ಡ ಮಟ್ಟದ ನಿರಾಳತೆ ದೊರಕಲಿದೆ. ದೀರ್ಘಕಾಲದಿಂದ ಬಾಕಿಯಿದ್ದ ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುವ ಹಾದಿಯಲ್ಲಿದ್ದು, ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.



