मुलांमध्ये वाचनाची गोडी निर्माण करण्यासाठी ‘कलिका हब्ब’ उपक्रम महत्त्वाचा – सीआरपी ईराण्णा अंकलगी.
कक्केरी / खानापूर : मुलांमध्ये वाचनाची आवड निर्माण करून त्यांच्या शैक्षणिक गुणवत्तेत वाढ करण्याच्या उद्देशाने मुलांचा कलिका हब्ब (शैक्षणिक उत्सव) राबविण्यात येत असल्याचे प्रतिपादन सीआरपी ईराण्णा अंकलगी यांनी केले.
सार्वजनिक शिक्षण विभाग, बेळगाव व क्षेत्र शिक्षणाधिकारी कार्यालय, खानापूर यांच्या मार्गदर्शनाखाली स्थानिक सरकारी मॉडेल वरिष्ठ प्राथमिक शाळा, समुह संसाधन केंद्र कक्केरी (ता. खानापूर) यांच्या वतीने सन 2025–26 च्या मुलांच्या कलिका हब्ब निमित्त आयोजित जाथा कार्यक्रमाचे उद्घाटन करताना ते बोलत होते.
यावेळी बोलताना त्यांनी सांगितले की, शिकण्यात मागे असलेल्या मुलांची बुनियादी साक्षरता व संख्याज्ञान वाढविण्यासाठी FLN (फाउंडेशनल लिटरेसी अँड न्यूमरेसी) कार्यक्रम अत्यंत उपयुक्त ठरत आहे.
ग्रामपंचायत अध्यक्षा कविता हंचिनमनी यांनी विद्यार्थ्यांनी दर्जेदार शिक्षण घेऊन गावाचे व पालकांचे नाव उज्ज्वल करावे, असे आवाहन केले.
ग्रामपंचायत सदस्य रियाज अहमद पाटील यांनी सांगितले की, आम्हीही याच शाळेत शिक्षण घेतले असून त्याच शिक्षणाच्या बळावर आज राजकीय क्षेत्रात, साखर कारखान्याच्या अध्यक्षपदी व ग्रामपंचायत सदस्य म्हणून सेवा करता येत आहे.
अखिल कर्नाटक रयत संघ, बेंगळूरुचे राज्य उपाध्यक्ष किशोर मिठारी यांनी विद्यार्थ्यांनी खासगी शाळांकडे धाव घेण्याऐवजी सरकारी शाळांमध्येच शिक्षण घ्यावे, असे सांगितले. राज्य सरकारकडून सरकारी शाळांसाठी पोषण आहार, मध्यान्ह भोजन, गणवेश, बूट, मोजे, पुस्तके यासह विविध योजना राबविल्या जात असून या माध्यमातून सरकारी शाळा सक्षम केल्या जात आहेत. या शाळांमधूनच विद्यार्थी आयएएस, आयपीएस अधिकारी व्हावेत, अशी अपेक्षाही त्यांनी व्यक्त केली.
या कार्यक्रमास शाळेचे मुख्याध्यापक एस. बी. बडिगेर, माध्यमिक शाळेचे मुख्याध्यापक वाय. एफ. पाटील, शिक्षक अस्फाक पाटील, पी. सी. पाळेकर, बसवराज मेदार, अत्तरलीचे तहसीलदार, बहुबली उपाध्याय, सी. जी. बाविमनी, नजमीनबानो बेळगांकर, शारीरिक शिक्षण शिक्षक एस. वाय. पाटील, एसडीएमसी अध्यक्ष सुरेश मंगु माळी, सर्व सदस्य, शिक्षणप्रेमी रमेश कोचेरी, ग्रामपंचायत सदस्य भीमप्पा अंबोजी, दयानंद गुपीत, भद्रप्पा दोड्डमनी, विद्यार्थी, पालक व ग्रामस्थ मोठ्या संख्येने उपस्थित होते.
कार्यक्रमाचे सूत्रसंचालन शिक्षक बसवराज अप्पोजी यांनी केले. प्रास्ताविक व स्वागत मुख्याध्यापक एस. बी. बडिगेर यांनी केले, तर रफीक कक्केरी यांनी आभार मानले.
ಮಕ್ಕಳಲ್ಲಿ ಓದಿನ ಆಸಕ್ತಿ ಬೆಳೆಸಲು ‘ಕಲಿಕಾ ಹಬ್ಬ’ ಮಹತ್ವದ್ದು – ಸಿಆರ್ಪಿ ಈರಣ್ಣ ಅಂಕಲಗಿ.
ಕಕ್ಕೇರಿ / ಖಾನಾಪುರ :
ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಿ ಅವರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಮಕ್ಕಳ ಕಲಿಕಾ ಹಬ್ಬ (ಶೈಕ್ಷಣಿಕ ಹಬ್ಬ)ವನ್ನು ಆಯೋಜಿಸಲಾಗುತ್ತಿದೆ ಎಂದು ಸಿಆರ್ಪಿ ಈರಣ್ಣ ಅಂಕಲಗಿ ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಖಾನಾಪುರ ಇವರ ಮಾರ್ಗದರ್ಶನದಲ್ಲಿ ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸಮೂಹ ಸಂಪನ್ಮೂಲ ಕೇಂದ್ರ ಕಕ್ಕೇರಿ (ತಾ. ಖಾನಾಪುರ) ಇವರ ವತಿಯಿಂದ 2025–26ನೇ ಸಾಲಿನ ಮಕ್ಕಳ ಕಲಿಕಾ ಹಬ್ಬದ ಅಂಗವಾಗಿ ಆಯೋಜಿಸಲಾದ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು ಹೆಚ್ಚಿಸುವಲ್ಲಿ FLN ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಕವಿತಾ ಹಂಚಿನಮನಿ ಅವರು, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಗ್ರಾಮದ ಹಾಗೂ ಪಾಲಕರ ಹೆಸರನ್ನು ಉಜ್ವಲಗೊಳಿಸಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯ ರಿಯಾಜ್ ಅಹಮದ್ ಪಾಟೀಲ ಮಾತನಾಡಿ, ನಾವು ಕೂಡ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆ. ಆ ಶಿಕ್ಷಣದ ಬಲದಿಂದಲೇ ಇಂದು ರಾಜಕೀಯ ಕ್ಷೇತ್ರದಲ್ಲಿ, ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸ್ಥಾನದಲ್ಲಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ರೈತ ಸಂಘ, ಬೆಂಗಳೂರು – ರಾಜ್ಯ ಉಪಾಧ್ಯಕ್ಷ ಕಿಶೋರ್ ಮಿಠಾರಿ ಅವರು, ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ಕಡೆ ಓಡುವ ಬದಲು ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಗಲ್ಲಿ ವಿದ್ಯಾಭ್ಯಾಸ ಸಲುವಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ, ಮಧ್ಯಾಹ್ನದ ಊಟ, ಸಮವಸ್ತ್ರ, ಬೂಟು, ಸೂಜ, ಪಠ್ಯಪುಸ್ತಕಗಳು ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸಲಾಗುತ್ತಿದೆ. ಈ ಶಾಲೆಗಳಿಂದಲೇ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು ಎಂಬ ಆಶೆಯವನ್ನೂ ಅವರು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಎಸ್. ಬಿ. ಬಡಿಗೇರ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೈ. ಎಫ್. ಪಾಟೀಲ, ಶಿಕ್ಷಕರಾದ ಅಸ್ಫಾಕ್ ಪಾಟೀಲ, ಪಿ. ಸಿ. ಪಾಲೇಕರ್, ಬಸವರಾಜ ಮೇದಾರ, ಅತ್ತರಲಿ ತಹಶೀಲ್ದಾರ್, ಬಹುಬಲಿ ಉಪಾಧ್ಯಾ ಸಿ. ಜಿ. ಬಾವಿಮನಿ, ನಜಮೀನಬಾನು ಬೆಳಗಾಂಕರ, ದೈಹಿಕ ಶಯ ಶಿಕ್ಷಕ ಎಸ್. ವೈ. ಪಾಟೀಲ, ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಮಂಗುಮಾಳಿ, ಸರ್ವ ಸದಸ್ಯರು, ಶಿಕ್ಷಣಪ್ರೇಮಿ ರಮೇಶ್ ಕೊಚೇರಿ, ಗ್ರಾಮ ಪಂಚಾಯತ್ ಸದಸ್ಯರಾದ ಭೀಮಪ್ಪ ಅಂಬೋಜಿ, ದಯಾನಂದ ಗುಪೀತ್, ಭದ್ರಪ್ಪ ದೊಡ್ಡಮನಿ, ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಬಸವರಾಜ ಅಪ್ಪೋಜಿ ಅವರು ನಡೆಸಿದರು. ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣವನ್ನು ಮುಖ್ಯೋಪಾಧ್ಯಾಯ ಎಸ್. ಬಿ. ಬಡಿಗೇರ ಅವರು ನೆರವೇರಿಸಿದರು. ರಫೀಕ್ ಕಕ್ಕೇರಿ ಅವರು ವಂದನೆ ಸಲ್ಲಿಸಿದರು.



