अटल बिहारी वाजपेयी जन्मशताब्दीनिमित्त खानापूर तालुका भाजपकडून दीपोत्सव.
खानापूर, ता. २४ : माजी पंतप्रधान, भारतरत्न कै. अटल बिहारी वाजपेयी यांच्या जन्मशताब्दी वर्षानिमित्त खानापूर तालुका भारतीय जनता पार्टीच्या वतीने विविध कार्यक्रमांचे आयोजन करण्यात आले आहे. या उपक्रमांचा एक भाग म्हणून बुधवार, ता. २४ रोजी सायंकाळी ६ वाजता खानापूर येथील राजा शिवछत्रपती चौकात अटल बिहारी वाजपेयी यांच्या भावचित्रासमोर दीपोत्सव कार्यक्रम मोठ्या उत्साहात संपन्न झाला.
या कार्यक्रमाची सुरुवात भारतरत्न कै. अटल बिहारी वाजपेयी यांच्या प्रतिकृतीस भाजपच्या नेतेमंडळी व पदाधिकाऱ्यांच्या हस्ते पुष्पहार अर्पण करून व पुष्पांजली वाहून करण्यात आली. त्यानंतर दीपप्रज्वलन करून दीपोत्सव साजरा करण्यात आला. चौकात लावण्यात आलेल्या दिव्यांच्या प्रकाशात संपूर्ण परिसर उजळून निघाला होता.
यावेळी अॅड. चेतन मनेरीकर यांनी उपस्थितांना मार्गदर्शन करताना माजी पंतप्रधान अटल बिहारी वाजपेयी यांच्या कार्याचा आढावा घेतला. अटलजी यांनी देशाच्या उभारणीत दिलेले योगदान अतुलनीय असून भारतीय जनता पार्टीच्या विस्तारामागे त्यांचा मोलाचा वाटा असल्याचे त्यांनी सांगितले. तसेच अटल बिहारी वाजपेयी यांच्या विचारांना अभिवादन म्हणून २५ डिसेंबर हा दिवस ‘सुशासन दिन’ म्हणून साजरा केला जात असल्याचेही त्यांनी नमूद केले.
कार्यक्रमादरम्यान “बोलो भारत माता की जय”, “अटल बिहारी वाजपेयी अमर रहें” अशा जोरदार घोषणा देण्यात आल्या. या घोषणांमुळे संपूर्ण परिसर देशभक्तीच्या वातावरणाने भारावून गेला होता.
या दीपोत्सव कार्यक्रमास आमदार विठ्ठल हलगेकर, माजी आमदार अरविंद पाटील, सदानंद पाटील, विजय कामत, सुनील मडीमनी, बसवराज सानिकोप, मल्लप्पा मारिहाळ, गुंडू तोपीनकट्टी, प्रशांत लक्केबैलकर, किशोर हेब्बाळकर, सुनीता पाटील, शंकर पाटील, राजेंद्र रायका, मोहन पाटील, नितीन पाटील, रवी पाटील यांच्यासह खानापूर तालुक्यातील अनेक भाजप पदाधिकारी व कार्यकर्ते मोठ्या संख्येने उपस्थित होते.
ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ನಿಮಿತ್ತ ಖಾನಾಪುರ ತಾಲ್ಲೂಕಾ ಬಿಜೆಪಿ ಘಟಕದ ವತಿಯಿಂದ ದೀಪೋತ್ಸವ ಆಚರಣೆ.
ಖಾನಾಪುರ, ತಾ. 24 : ಮಾಜಿ ಪ್ರಧಾನಮಂತ್ರಿ, ಭಾರತರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ವರ್ಷದ ಅಂಗವಾಗಿ ಖಾನಾಪುರ ತಾಲ್ಲೂಕು ಭಾರತೀಯ ಜನತಾ ಪಕ್ಷದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಉಪಕ್ರಮಗಳ ಭಾಗವಾಗಿ ಬುಧವಾರ, ತಾ. 24ರಂದು ಸಂಜೆ 6 ಗಂಟೆಗೆ ಖಾನಾಪುರದ ರಾಜಾ ಶಿವಛತ್ರಪತಿ ಚೌಕದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರದ ಎದುರು ದೀಪೋತ್ಸವ ಕಾರ್ಯಕ್ರಮವನ್ನು ಭವ್ಯವಾಗಿ ಹಾಗೂ ಉತ್ಸಾಹದಿಂದ ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ಭಾರತರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಗೆ ಬಿಜೆಪಿ ನಾಯಕರು ಹಾಗೂ ಪದಾಧಿಕಾರಿಗಳಿಂದ ಪುಷ್ಪಹಾರ ಅರ್ಪಿಸಿ, ಪುಷ್ಪಾಂಜಲಿ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ನಂತರ ದೀಪಪ್ರಜ್ವಲನೆ ಮಾಡಿ ದೀಪೋತ್ಸವವನ್ನು ಆಚರಿಸಲಾಯಿತು. ಚೌಕದಲ್ಲಿ ಅಳವಡಿಸಿದ್ದ ದೀಪಗಳ ಪ್ರಕಾಶದಿಂದ ಸಂಪೂರ್ಣ ಪ್ರದೇಶ ಬೆಳಗಿದಂತೆ ಕಾಣುತ್ತಿತ್ತು.
ಈ ಸಂದರ್ಭದಲ್ಲಿ ಅಡ್ವೊಕೇಟ್ ಚೇತನ್ ಮನೇರಿಕರ್ ಅವರು ಉಪಸ್ಥಿತರನ್ನು ಉದ್ದೇಶಿಸಿ ಮಾತನಾಡಿ, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾರ್ಯಗಳ ಅವಲೋಕನ ಮಾಡಿದರು. ಅಟಲ್ಜಿ ಅವರು ದೇಶದ ನಿರ್ಮಾಣದಲ್ಲಿ ನೀಡಿದ ಕೊಡುಗೆ ಅಮೂಲ್ಯವಾಗಿದ್ದು, ಭಾರತೀಯ ಜನತಾ ಪಕ್ಷದ ವಿಸ್ತಾರಕ್ಕೆ ಅವರ ಮಹತ್ವದ ಪಾತ್ರವಿದೆ ಎಂದು ತಿಳಿಸಿದರು. ಜೊತೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಚಿಂತನೆಗಳಿಗೆ ಗೌರವ ಸೂಚಕವಾಗಿ ಡಿಸೆಂಬರ್ 25ರಂದು ‘ಸುಶಾಸನ ದಿನ’ವಾಗಿ ಆಚರಿಸಲಾಗುತ್ತಿದೆ ಎಂಬುದನ್ನೂ ಅವರು ಹೇಳಿದರು.
ಕಾರ್ಯಕ್ರಮದ ವೇಳೆ “ಬೋಲೋ ಭಾರತ್ ಮಾತಾ ಕಿ ಜೈ”, “ಅಟಲ್ ಬಿಹಾರಿ ವಾಜಪೇಯಿ ಅಮರ್ ರಹೇ” ಎಂಬ ಘೋಷಣೆಗಳು ಜೋರಾಗಿ ಕೇಳಿಬಂದವು. ಈ ಘೋಷಣೆಗಳಿಂದ ಸಂಪೂರ್ಣ ಭಾಗದಲ್ಲಿ ದೇಶಭಕ್ತಿಯ ವಾತಾವರಣದಿಂದ ತುಂಬಿ ಹೋಗಿತ್ತು.
ಈ ದೀಪೋತ್ಸವ ಕಾರ್ಯಕ್ರಮಕ್ಕೆ ಜನ ಪ್ರಿಯ ಶಾಸಕ ವಿಠ್ಠಲ್ ಹಲಗೇಕರ್, ಮಾಜಿ ಶಾಸಕ ಅರವಿಂದ ಪಾಟೀಲ್, ಎಂ ಡಿ ಸದಾನಂದ ಪಾಟೀಲ್, ವಿಜಯ ಕಾಮತ್, ಸುನಿಲ್ ಮಡ್ಡಿಮಣಿ, ಬಸವರಾಜ ಸಾನಿಕೋಪ್ಪ, ಮಲ್ಲಪ್ಪ ಮಾರಿಹಾಳ, ಗುಂಡು ತೋಪಿನಕಟ್ಟಿ, ಪ್ರಶಾಂತ್ ಲಕ್ಕೇಬೈಲಕರ, ಕಿಶೋರ ಹೆಬ್ಬಾಳಕರ, ಸುನಿತಾ ಪಾಟೀಲ್, ಶಂಕರ ಪಾಟೀಲ್, ರಾಜೇಂದ್ರ ರೈಕಾ, ಮೋಹನ್ ಪಾಟೀಲ್, ನಿತಿನ್ ಪಾಟೀಲ್, ರವಿ ಪಾಟೀಲ್ ಸೇರಿದಂತೆ ಖಾನಾಪುರ ತಾಲ್ಲೂಕಿನ ಅನೇಕ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


