रक्ताने इन्स्पेक्टरला प्रेमपत्र; प्रेम करण्यासाठी त्रास करणारी महिला कारागृहात
बेंगळूर : “कोणी तरी प्रेम करण्यासाठी जबरदस्ती करत आहे, मला संरक्षण हवे आहे” अशी तक्रार सहसा पोलीस ठाण्यात येते. मात्र, येथे एका महिलेने थेट पोलीस इन्स्पेक्टरलाच रक्ताने प्रेमपत्र लिहून प्रेम करण्यासाठी छळ केल्याची धक्कादायक घटना उघडकीस आली आहे. राममूर्ती नगर पोलीस ठाण्याचे इन्स्पेक्टर जी. जे. सतीश यांना त्रास देणाऱ्या महिलेला अखेर अटक करण्यात आली असून तिला परप्पन अग्रहार कारागृहात न्यायालयीन कोठडी सुनावण्यात आली आहे.
अय्यप्पानगर येथील रहिवासी संजना उर्फ वनजा ही महिला गेल्या काही दिवसांपासून इन्स्पेक्टर सतीश यांना सतत फोन करून, “मी तुमच्यावर प्रेम करते, तुम्हीही माझ्यावर प्रेम केले पाहिजे” असे म्हणत होती. सुरुवातीला विनोद समजून दुर्लक्ष करण्यात आले. मात्र, नंतर वेगवेगळ्या क्रमांकांवरून सातत्याने कॉल येऊ लागल्याने सर्व क्रमांक ब्लॉक करण्यात आले.
या सततच्या त्रासामुळे इन्स्पेक्टर सतीश यांनी स्वतःच आपल्या पोलीस ठाण्यात तक्रार दाखल केली. तक्रारीच्या आधारे पोलिसांनी आरोपी महिलेचा शोध घेऊन तिला अटक केली.
शिफारशींचा दावा… तक्रारीत नमूद केल्याप्रमाणे, वनजा स्वतःला काँग्रेस कार्यकर्ती असल्याचे सांगत होती. मुख्यमंत्री, उपमुख्यमंत्री, गृहमंत्री, मोटोम्मा व लक्ष्मी हेब्बाळकर यांच्यासोबतचे फोटो व्हॉट्सॲपवर पाठवून “त्यांच्याकडून शिफारस करून घेईन” असे म्हणत होती. उपमुख्यमंत्री व गृहमंत्र्यांकडून फोन आल्याचाही उल्लेख तक्रारीत आहे. मात्र, महिला कधीही थेट ठाण्यात येऊन अधिकृत तक्रार दिलेली नव्हती, असे इन्स्पेक्टर सतीश यांनी स्पष्ट केले.
ठाण्यात भेटवस्तू ठेवून जाणे इन्स्पेक्टर कार्यालयात नसताना आरोपी महिला ठाण्यात येऊन स्वतःला इन्स्पेक्टरची नातेवाईक असल्याचे सांगत होती. तिने फुलांचा गुच्छ व डबा ठेवून गेल्याचाही उल्लेख एफआयआरमध्ये आहे. अशा प्रकारे कोणतीही वस्तू देऊ नये, असे तिला फोनवरून स्पष्ट करण्यात आले होते.
जमीन–इमारत काबीज करण्याचा प्रयत्न..
वनजा हिच्याविरोधात यापूर्वीही गुन्हा दाखल आहे. के. आर. पुर पोलीस ठाण्यात 27 सप्टेंबर 2023 रोजी कंत्राटदार सतीश रेड्डी यांच्या तीन मजली इमारत बळकावण्याचा प्रयत्न केल्याचा गुन्हा नोंद आहे. इमारत ताब्यात घेण्याच्या उद्देशाने जवळीक वाढवून नंतर गुंड पाठवण्याच्या धमक्या दिल्याचा आरोप आहे. तपासात आरोपी महिला यापूर्वीही पोलीस कर्मचारी व वरिष्ठ अधिकाऱ्यांना लक्ष्य करून अशाच प्रकारचे कृत्य करत असल्याचे समोर आले आहे.
‘लव्ह यू चिन्नी’ रक्ताने लिहिलेले पत्र 7 नोव्हेंबर रोजी तक्रारींची सुनावणी सुरू असताना वनजा इन्स्पेक्टर कार्यालयात आली आणि एक लिफाफा दिला. त्यात तीन पत्रे व 20 गोळ्या आढळून आल्या. पत्रात प्रेमाची कबुली देत “तुम्हाला त्रास द्यायचा नाही, पण मी आत्महत्या करेन; माझ्या मृत्यूस तुम्ही जबाबदार असाल” अशी धमकी देण्यात आली होती. एका कागदावर “लव्ह यू चिन्नी…” असे रक्ताने लिहिलेले आहे. असेही तिने सांगितल्याचे तक्रारीत नमूद आहे.
या सर्व बाबींच्या आधारे पोलिसांनी कारवाई करून आरोपी महिलेला अटक केली असून सध्या ती न्यायालयीन कोठडीत आहे.
ರಕ್ತದಲ್ಲಿ ಇನ್ಸ್ಪೆಕ್ಟರ್ಗೆ ಪ್ರೇಮ ಪತ್ರ ಬರೆದು, ಪ್ರೀತಿಸುವಂತೆ ಕಾಡಿದ ಮಹಿಳೆ ಜೈಲಿಗೆ.
ಬೆಂಗಳೂರು : ‘ಯಾರೊ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದಾರೆ. ನನಗೆ ರಕ್ಷಣೆ ಬೇಕು’ ಎಂದು ಸಾಮಾನ್ಯವಾಗಿ ಪೊಲೀಸ್ ಠಾಣೆಗೆ ಬರುತ್ತಾರೆ. ಆದರೆ, ಇಲ್ಲಿ ಮಹಿಳೆಯೊಬ್ಬರು ಇನ್ಸ್ಪೆಕ್ಟರ್ ಅವರಿಗೆ ರಕ್ತದಲ್ಲಿಯೇ ಪ್ರೇಮಪತ್ರ ಬರೆದು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದರು. ಇನ್ಸ್ಪೆಕ್ಟರ್ಗೆ ಕಾಡಿದ ಮಹಿಳೆ ಕೊನೆಗೂ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ನೀವೂ ಪ್ರೀತಿಸಬೇಕು’ ಎಂದು- ರಾಮಮೂರ್ತಿನಗರ ಠಾಣೆಯ ಇನ್ಸ್ಪೆಕ್ಟರ್ ಜಿ.ಜೆ.ಸತೀಶ್ ಅವರಿಗೆ ಅಯ್ಯಪ್ಪನಗರದ ನಿವಾಸಿ ಸಂಜನಾ ಅಲಿಯಾಸ್ ವನಜಾ ಅವರು ಕಳೆದ ಕೆಲವು ದಿನಗಳಿಂದ ಕಾಟ ನೀಡುತ್ತಿದ್ದರು.
ಮಹಿಳೆಯಿಂದ ತೊಂದರೆಗೆ ಸಿಲುಕಿದ್ದ ಇನ್ಸ್ಪೆಕ್ಟರ್ ಸತೀಶ್ ಅವರು, ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಗೇ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ಮಹಿಳೆ ವಾಸವಿದ್ದ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ‘ಪ್ರೀತ್ಸೆ ಪ್ರೀತ್ಸೆ’ ಎಂದು ಕರೆ ಮಾಡುತ್ತಿದ್ದ ಮಹಿಳೆ ಕಾರಾಗೃಹ ಸೇರಿದ್ದಾರೆ.
‘ಮೂರು ತಿಂಗಳಿಂದ ರಾಮಮೂರ್ತಿನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಅಕ್ಟೋಬರ್ 30ರಂದು ಠಾಣೆಯಲ್ಲಿದ್ದಾಗ ಕರೆ ಬಂದಿತ್ತು. ಯಾರೊ ದೂರುದಾರರು ಇರಬಹುದೆಂದು ಭಾವಿಸಿ, ಕರೆ ಸ್ವೀಕರಿಸಿದ್ದೆ. ರಾಮಮೂರ್ತಿನಗರ ನಿವಾಸಿ ಸಂಜನಾ ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಅಸಂಬದ್ಧವಾಗಿ ಮಾತನಾಡಲು ಆರಂಭಿಸಿದ್ದರು. ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ನೀವೂ ಪ್ರೀತಿಸಬೇಕು’ ಎಂದು ಹೇಳಿದ್ದರು. ತಮಾಷೆ ಮಾಡಿರಬೇಕು ಎಂಬುದಾಗಿ ಭಾವಿಸಿದ್ದೆ. ಅದಾದ
ಮೇಲೆ ಬೇರೆ ಬೇರೆ ನಂಬರ್ಗಳಿಂದ ಕರೆ ಮಾಡಿದ್ದರು. ಎಲ್ಲ ಸಂಖ್ಯೆಗಳನ್ನೂ ಬ್ಲಾಕ್ ಲೀಸ್ಟ್ಗೆ ಹಾಕಿದ್ದೇನೆ’ ಎಂದು ಸತೀಶ್ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಿಫಾರಸು ಮಾಡಿಸುತ್ತೇನೆ…:
‘ನಾನು ಕಾಂಗ್ರೆಸ್ ಕಾರ್ಯಕರ್ತೆ ಎಂದು ವನಜಾ ಹೇಳಿಕೊಂಡಿದ್ದರು. ಮುಖ್ಯಮಂತ್ರಿ, ಡಿಸಿಎಂ, ಗೃಹ ಸಚಿವರು, ಮೋಟಮ್ಮ ಹಾಗೂ ಲಕ್ಷ್ಮಿ ಹೆಬ್ಬಾಳಕರ ಅವರ ಜತೆಯಲ್ಲಿರುವ ಫೋಟೊಗಳನ್ನು ವಾಟ್ಸ್ಆಯಪ್ಗೆ ಕಳುಹಿಸಿ, ಇವರಿಂದ ಶಿಫಾರಸು ಮಾಡಿಸುತ್ತೇನೆ. ನನ್ನನ್ನು ಪ್ರೀತಿಸಿ ಎಂದು ಪದೇ ಪದೇ ಹೇಳುತ್ತಿದ್ದರು. ಅದಾದ ಮೇಲೆ ಡಿಸಿಎಂ ಹಾಗೂ ಗೃಹ ಸಚಿವರಿಂದ ಕರೆ ಬಂದಿತ್ತು. ಮಹಿಳೆ ನೀಡಿದ ದೂರು ಏಕೆ ಸ್ವೀಕರಿಸುತ್ತಿಲ್ಲ ಎಂದು ವಿಚಾರಿಸಿದ್ದರು. ಅವರು ಠಾಣೆಗೆ ಬಂದು ದೂರು ನೀಡಿಲ್ಲ. ಅಲ್ಲದೇ ಕರೆ ಮಾಡಿ ಅಸಂಬದ್ಧವಾಗಿ ಮಾತನಾಡಿದ್ದಾರೆ. ಠಾಣೆಗೆ ಬಂದು ದೂರು ಕೊಟ್ಟರೆ ಸ್ವೀಕರಿಸುತ್ತೇನೆ ಎಂಬುದಾಗಿ ತಿಳಿಸಿದ್ದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ನಾನು ಇಲ್ಲದಿರುವಾಗ ಆರೋಪಿ ಮಹಿಳೆ ಠಾಣೆಗೆ ಬಂದು ಇನ್ಸ್ಪೆಕ್ಟರ್ ಸಂಬಂಧಿಕರು ಎಂದು ಹೇಳಿಕೊಂಡಿದ್ದರು. ಅಲ್ಲದೇ ಹೂಗುಚ್ಛ ಹಾಗೂ ಡಬ್ಬಿಯನ್ನು ಇಟ್ಟು ಹೋಗಿದ್ದರು. ಈ ರೀತಿ ಯಾವುದೇ ವಸ್ತುಗಳನ್ನು ನೀಡಬಾರದೆಂದು ಕರೆ
ಮಾಡಿ ಅವರಿಗೆ ತಿಳಿಸಿದ್ದೆ’ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಕಟ್ಟಡ ಕಬಳಿಸಲು ಯತ್ನ…
ಗುತ್ತಿಗೆದಾರ ಸತೀಶ್ ರೆಡ್ಡಿ ಅವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡವನ್ನು ಕಬಳಿಸಲು ವನಜಾ ಅವರು ಯತ್ನಿಸಿದ್ದರು ಎಂದು ಕೆ.ಆರ್. ಪುರ ಠಾಣೆಯಲ್ಲಿ 2023ರ ಸೆಪ್ಟೆಂಬರ್ 27ರಂದು ಪ್ರಕರಣ ದಾಖಲಾಗಿತ್ತು. ‘ವನಜಾ ಅವರು ಕಟ್ಟಡವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಉದ್ದೇಶದಿಂದ ಸತೀಶ್ ರೆಡ್ಡಿಯೊಂದಿಗೆ ಸಲುಗೆಯಿಂದ ಇದ್ದರು. ನಂತರ ಇಬ್ಬರ ಸ್ನೇಹ ಕಡಿತವಾಗಿತ್ತು. ಆದರೂ ರೌಡಿಗಳಿದ್ದಾರೆಂದು ಮಹಿಳೆ ಬೆದರಿಸುತ್ತಿದ್ದರು’ ಎಂದು ಎಂದು ಪೊಲೀಸರು ಹೇಳಿದರು. ‘ಪೊಲೀಸ್ ಕಾನ್ಸ್ಟೆಬಲ್ ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿ ಇದೇ ರೀತಿ ಕೃತ್ಯ ಎಸಗುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಲವ್ ಯು ಚಿನ್ನಿ’ ಎಂದು ಬರೆದಿದ್ದ ಮಹಿಳೆ
‘ನ.7ರಂದು ದೂರುಗಳ ವಿಚಾರಣೆ ನಡೆಸುತ್ತಿರುವಾಗ ಕಚೇರಿಗೆ ಬಂದಿದ್ದ ವನಜಾ ಅವರು ಲಕೋಟೆಯೊಂದನ್ನು ನೀಡಿದ್ದರು. ಅದರಲ್ಲಿ ಮೂರು ಪತ್ರಗಳಿದ್ದವು. ಅಲ್ಲದೇ 20 ಮಾತ್ರೆಗಳೂ ಲಕೋಟೆಯಲ್ಲಿ ಇದ್ದವು. ಪತ್ರದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಕಂಡುಬಂತು. ನಿಮಗೆ ತೊಂದರೆ ನೀಡಲು ಇಷ್ಟವಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದರು. ತನ್ನ ಸಾವಿಗೆ ನೀವೇ ಕಾರಣ ಎಂದೂ ಬರೆದಿದ್ದರು. ಒಂದು ಹಾಳೆಯಲ್ಲಿ ‘ಲವ್ ಯು ಚಿನ್ನಿ… ಎಂದು ರಕ್ತದಲ್ಲಿ ಬರೆದಿರುತ್ತೇನೆ ಎಂಬುದಾಗಿಯೂ ಮಹಿಳೆ ಹೇಳಿದ್ದರು’ ಎಂದು ದೂರಿನಲ್ಲಿ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.



