शिरोली ग्रामपंचायतीत 25% कमिशन प्रकरणाने खळबळ; आमदार हलगेकरांच्या पीएवर गंभीर आरोप.
खानापूर : खानापूर तालुक्यात मोठी खळबळ उडवणारा गंभीर आरोप शिरोली ग्रामपंचायतीचे विद्यमान सदस्य कृष्णा गुरव यांनी केला आहे. खानापूरचे आमदार विठ्ठल हलगेकर यांचे पीए म्हणून परिचित असलेल्या चरकी यांनी शिरोली ग्रामपंचायतीत मंजूर झालेल्या विकासात्मक निधीतील कामांसाठी 25% कमिशन मागितल्याचा दावा गुरव यांनी पत्रकार परिषद घेऊन केला.
यावेळी ग्रामपंचायत अध्यक्षा नीलम विजय मादार उपस्थित होत्या. गुरव यांनी पत्रकार परिषदेत मोबाईल संभाषणाची ऑडिओ क्लिप आणि पीए चरकी यांचा मोबाईल नंबर सुद्धा सादर केला.
वीस लाखांचा निधी आणि 25% कमिशनची मागणी?…
शिरोली ग्रामपंचायतीस फिफ्टी फायनान्स मधुन 22 लाखांचा विकास निधी मंजूर झाला आहे. या निधीतील कामे घेण्यासाठी 25% कमिशन देणे आवश्यक असल्याची मागणी आमदारांचे पीए चरकी यांनी केल्याचे गुरव यांनी सांगितले.
त्यातील 10% रक्कम स्वतःसाठी मागितल्याचा दावा गुरव यांनी केला आहे.
आमदारांकडून हस्तक्षेप थांबवण्याची मागणी…
कृष्णा गुरव यांनी आमदार विठ्ठल हलगेकर यांना उद्देशून,
“आपल्या पीएचा शिरोली ग्रामपंचायतीतील हस्तक्षेप रोखा, अन्यथा आम्ही गप्प बसणार नाही,” असा इशारा दिला आहे. तसेच तालुक्यातील कोणत्याही ग्रामपंचायत मध्ये आमदार व त्यांच्या पीएनी हस्तक्षेप करू नयेत असा इशाराही त्यांनी दिला आहे..
तसेच, “आमदारांचे पीए सरकारी दवाखान्यात एका कर्मचाऱ्याने पैसे मागितल्याने त्याच्यावर कारवाईचा इशारा देतात, पण स्वतःच 25% कमिशन कसे मागतात?”
असा प्रश्न उपस्थित केला आहे.
आमदार व पीएची प्रतिक्रिया….
खानापूर न्यूज पोर्टलच्या वतीने प्रतिक्रिया विचारल्यावर—
आमदार विठ्ठल हलगेकर यांनी या वादाबाबत “मला काहीही माहित नाही, ही त्यांच्या दोघांमधील घटना आहे” असे म्हटले आहे.
तर पीए चरकी यांनी “ऑडिओतील आवाज माझा नाही” असा दावा केला आहे.
ऑडिओ क्लिप जनतेच्या न्यायालयात.
कृष्णा गुरव यांनी आपली ऑडिओ क्लिप आणि प्रतिक्रिया सार्वजनिक करून
“खरे-खोटे जनतेनेच ठरवावे” असे आवाहन केले आहे.
या कमिशन प्रकरणामुळे शिरोली आणि खानापूर तालुक्यात प्रचंड खळबळ उडाली असून राजकीय क्षेत्रातही याची जोरदार चर्चा सुरू आहे.
ಶಿರೋಲಿ ಗ್ರಾಮ ಪಂಚಾಯಿತಿಗೆ 25% ಕಮಿಷನಗೆ ಬೇಡಿಕೆ ಪ್ರಕರಣದಿಂದ ; ಶಾಸಕ ಹಲಗೇಕರರ ಪಿಎ ವಿರುದ್ಧ ಗಂಭೀರ ಆರೋಪ
ಖಾನಾಪುರ : ಖಾನಾಪುರ ತಾಲ್ಲೂಕಿನಲ್ಲಿ ಭಾರಿ ಸಂಚಲನ ಮೂಡಿಸುವ ಗಂಭೀರ ಆರೋಪವನ್ನು ಶಿರೋಲಿ ಗ್ರಾಮಪಂಚಾಯಿತಿಯ ಪ್ರಸ್ತುತ ಸದಸ್ಯ ಕೃಷ್ಣ ಗುರವ ಅವರು ಮಾಡಿದ್ದಾರೆ. ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರ ಪಿಎ ಎಂದು ಪರಿಚಿತರಾದ ಚರಕಿ ಅವರು ಶಿರೋಲಿ ಗ್ರಾಮಪಂಚಾಯಿತಿಯಲ್ಲಿ ಮಂಜೂರಾದ ಅಭಿವೃದ್ಧಿ ನಿಧಿಯಿಂದ ನಡೆಯುವ ಕೆಲಸಗಳಿಗೆ 25% ಕಮಿಷನ್ ಬೇಡಿಕೆ ಇಟ್ಟಿದ್ದಾರೆಯೆಂಬ ಆರೋಪವನ್ನು ಗುರವ ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ನೀಲಂ ವಿಜಯ ಮಾದಾರ್ ಉಪಸ್ಥಿತರಿದ್ದರು. ಗುರವ ಅವರು ಪತ್ರಿಕಾಗೋಷ್ಠಿಯಲ್ಲಿ ಮೊಬೈಲ್ ಸಂಭಾಷಣೆಯ ಆಡಿಯೋ ಕ್ಲಿಪ್ ಹಾಗೂ ಪಿಎ ಚರಕಿ ಅವರ ಮೊಬೈಲ್ ಸಂಖ್ಯೆಯನ್ನೂ ಪ್ರದರ್ಶಿಸಿದರು.
ಇಪ್ಪತೈದು ಲಕ್ಷದ ನಿಧಿ ಮತ್ತು 25% ಕಮಿಷನ್ ಬೇಡಿಕೆ?…
ಶಿರೋಲ ಗ್ರಾಮಪಂಚಾಯಿತಿಗೆ ಫಿಫ್ಟಿ ಫೈನಾನ್ಸ್ನಿಂದ 22 ಲಕ್ಷ ರೂ.ಗಳ ಅಭಿವೃದ್ಧಿ ನಿಧಿ ಮಂಜೂರಾಗಿದೆ. ಈ ನಿಧಿಯಲ್ಲಿನ ಕೆಲಸಗಳನ್ನು ಕೈಗೆದುಕೊಳ್ಳಲು 25% ಕಮಿಷನ್ ನೀಡಬೇಕು ಎಂದು ಶಾಸಕರ ಪಿ ಎ ಎಂದು ಕೆಲಸ ಮಾಡುವ ಚರಕಿ ಅವರು ಬೇಡಿಕೆ ಇಟ್ಟಿದ್ದಾರೆಯೆಂದು ಗುರವ ಹೇಳಿದ್ದಾರೆ. ಆ ರಾಶಿಯ 10% ಹಣವನ್ನು ತಮ್ಮಕ್ಕಾಗಿ ಕೇಳಿಕೊಂಡಿದ್ದಾರೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ.
ಶಾಸಕರಿಂದ ಮಧ್ಯಸ್ಥಿಕೆ ನಿಲ್ಲಿಸುವಂತೆ ಬೇಡಿಕೆ…
ಕೃಷ್ಣ ಗುರವ ಅವರು ಶಾಸಕ ವಿಠ್ಠಲ ಹಲಗೆಕರರಿಗೆ ಉದ್ದೇಶಿಸಿ,
“ನಿಮ್ಮ ಪಿಎ ಶಿರೋಲಿ ಗ್ರಾಮಪಂಚಾಯಿತಿಯ ಹಸ್ತಕ್ಷೇಪ ನಿಲ್ಲಿಸಿ, ಇಲ್ಲವಾದರೆ ನಾವು ಮೌನವಾಗಿರುವುದಿಲ್ಲ,”
ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ತಾಲ್ಲೂಕಿನ ಯಾವುದೇ ಗ್ರಾಮಪಂಚಾಯಿತಿಯಲ್ಲಿ ಶಾಸಕ ಹಾಗೂ ಅವರ ಪಿಎ ಹಸ್ತಕ್ಷೇಪ ಮಾಡಬಾರದು ಎಂಬ ಎಚ್ಚರಿಕೆ ಕೂಡ ನೀಡಲಾಗಿದೆ.
ಅದೇ ರೀತಿಯಲ್ಲಿ,
“ಶಾಸಕರ ಪಿಎ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬ ನೌಕರನು ಹಣ ಕೇಳಿದರೆ ಅವನ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ, ಆದರೆ ತಾವೇ 25% ಕಮಿಷನ್ ಹೇಗೆ ಕೇಳುತ್ತಾರೆ?”
ಎಂಬ ಪ್ರಶ್ನೆಯನ್ನೂ ಗುರವ ಅವರು ಆರೋಪಿಸಿದ್ದಾರೆ.
ಶಾಸಕರು ಮತ್ತು ಪಿಎ ಅವರ ಪ್ರತಿಕ್ರಿಯೆ…
ಖಾನಾಪುರ ನ್ಯೂಸ್ ಪೋರ್ಟಲ್ ಪ್ರತಿಕ್ರಿಯೆ ಕೇಳಿದಾಗ —
ಶಾಸಕ ವಿಠ್ಠಲ ಹಲಗೆಕರ ಅವರು,
“ನನಗೆ ಯಾವುದೇ ಮಾಹಿತಿ ಇಲ್ಲ, ಇದು ಇವರಿಬ್ಬರ ನಡುವಿನ ವಿಷಯ”
ಎಂದು ಹಾರಿಕೆ ಉತ್ತರ ನೀಡಿದರು.
ಅದೇ ವೇಳೆ ಪಿಎ ಚರಕಿ ಅವರು,
“ಆಡಿಯೋದಲ್ಲಿರುವ ಶಬ್ದ ನನ್ನದು ಅಲ್ಲ” ಎಂದು ತಿಳಿಸಿದರು.
ಆಡಿಯೋ ಕ್ಲಿಪ್ ಜನರ ನ್ಯಾಯಾಲಯಕ್ಕೆ…
ಕೃಷ್ಣ ಗುರವ ಅವರು ತಮ್ಮ ಆಡಿಯೋ ಕ್ಲಿಪ್ ಹಾಗೂ ಪ್ರತಿಕ್ರಿಯೆ ಸಾರ್ವಜನಿಕವಾಗಿ ಪ್ರಕಟಿಸಿ,
“ನಿಜ-ಸುಳ್ಳು ಜನರೇ ತೀರ್ಮಾನಿಸಲಿ”
ಎಂದು ಮನವಿ ಮಾಡಿದ್ದಾರೆ.
ಈ ಕಮಿಷನ್ ಪ್ರಕರಣದಿಂದ ಶಿರೋಲಿ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಭಾರೀ ಚರ್ಚೆ ಮೂಡಿದ್ದು ರಾಜಕೀಯ ವಲಯದಲ್ಲಿಯೂ ಈ ವಿಷಯ ಗಾಳಿ ಸುದ್ದಿಯಂತೆ ಹರಿದಾಡುತ್ತಿದೆ.

