दुभाजकाला धडकून गाडीला आग: लोकायुक्त इन्स्पेक्टर जिवंत जळाले!
धारवाड ; धारवाडमध्ये आणखी एका भीषण रस्ते अपघाताची घटना घडली असून, लोकायक्त विभागाचे इन्स्पेक्टर पंचम अक्षरी सालीमठ यांचा या दुर्घटनेत बळी गेला आहे. नुकताच आयएएस (IAS) अधिकारी महांतेश बीळगी यांच्या निधनाची घटना लोकांच्या मनात ताजी असतानाच, आणखी एका गंभीर कार अपघातामुळे राज्यात चिंताजनक वातावरण निर्माण झाले आहे.
लोकायक्त इन्स्पेक्टरच्या गाडीचा अपघात….
हावेरीमध्ये लोकायक्त इन्स्पेक्टर म्हणून कार्यरत असलेले पंचम अक्षरी सालीमठ हे बुधवारी सायंकाळी i20 कारमधून गदगकडे प्रवास करत होते.
अण्णिगेरी शहराच्या बाहेरील भद्रापूरजवळ, गदग-हुबळी राष्ट्रीय महामार्गावर गाडीवरील नियंत्रण सुटून रस्त्याच्या दुभाजकाला (Divider) जोरदार धडक बसली.
धडकेच्या वेगामुळे काही क्षणातच गाडीने पेट घेतला आणि आग खूप वेगाने पसरली. गाडीच्या दरवाजाचे लॉक उघडता न आल्याने इन्स्पेक्टर सालीमठ यांना गाडीतून बाहेर पडता आले नाही.
हा अपघात सायंकाळी 7.30 वाजता झाला, त्यावेळी इन्स्पेक्टर पंचम अक्षरी सालीमठ स्वतः गाडी चालवत होते. कुटुंबाला भेटण्यासाठी ते गदगला जात असताना ही दुर्घटना घडली असल्याचे सूत्रांनी सांगितले.
“कार धडकल्यानंतर पेट्रोल गळती होऊन स्पार्क झाल्याने आग लागली असावी, अशी प्राथमिक माहिती पोलिसांनी दिली आहे.”
घटनेची माहिती मिळताच त्वरित अण्णिगेरी पोलीस कर्मचारी आणि अग्निशमन दलाचे जवान घटनास्थळी दाखल झाले आणि त्यांनी आग विझवण्याचे काम सुरू केले. मात्र, तोपर्यंत कार पूर्णपणे जळून खाक झाली होती. गाडीच्या आत असलेले पंचम अक्षरी सालीमठ जिवंत जाळले गेल्याचे निष्पन्न झाले आहे.
सुरुवातीला इन्स्पेक्टर यांचा मृतदेह ओळखणे कठीण झाले. नंतर त्यांच्या हातातील ब्रेसलेटच्या आधारावर कुटुंबातील सदस्यांनी त्यांची ओळख पटवली. यानंतर पोलिसांनी महत्त्वपूर्ण माहिती गोळा करून पुढील तपास सुरू केला आहे.
धारवाड जिल्हा पोलीस अधीक्षक गुंजन आर्य यांनी घटनास्थळी भेट देऊन पाहणी केली आहे.
या अपघातामुळे स्थानिक लोक, सहकारी आणि कुटुंबीयांनी तीव्र दुःख व्यक्त केले आहे. आयएएस महांतेश बीळगी यांच्या निधनाची बातमी विस्मरणात जाण्याआधीच आणखी एका इन्स्पेक्टरचा जीव गेल्याने राज्यातील कायदा व सुव्यवस्था क्षेत्रात चिंतेचे वातावरण निर्माण झाले आहे.
“ಡಿವೈಡರ್ಗೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ : ಲೋಕಾಯುಕ್ತ Inspector ಸಜೀವ ದಹನ”.
ಧಾರವಾಡ : ಧಾರವಾಡದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲೋಕಾಯುಕ್ತ ಇಲಾಖೆಯ ಇನ್ಸ್ಪೆಕ್ಟರ್ (Inspector) ರಾದ ಪಂಚಾಕ್ಷರಿ ಸಾಲಿಮಠ ದುರ್ಘಟನೆಗೆ ಬಲಿಯಾಗಿದ್ದಾರೆ. ಇತ್ತೀಚೆಗೆ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಮೃತಪಟ್ಟ ಘಟನೆ ಇನ್ನೂ ಜನರ ಮನಸಿನಲ್ಲಿ ಮಸುಕಾಗುವುದಕ್ಕೂ ಮುನ್ನ, ಮತ್ತೊಂದು ಗಂಭೀರ ಕಾರು ದುರಂತ ರಾಜ್ಯವನ್ನು ಕಂಗೆಡಿಸಿದೆ.
ಲೋಕಾಯುಕ್ತ ಇನ್ಸ್ಪೆಕ್ಟರ್ (Inspector) ಕಾರು ಅಪಘಾತ :
ಹಾವೇರಿಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ (Inspector) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಚಾಕ್ಷರಿ ಸಾಲಿಮಠ ಬುಧವಾರ ಸಂಜೆ ಗದಗ ಕಡೆಗೆ i20 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಅಣ್ಣಿಗೇರಿ ಪಟ್ಟಣ ಹೊರವಲಯದ ಭದ್ರಾಪುರದ ಬಳಿ ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ (Divider) ಭೀಕರವಾಗಿ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಕ್ಷಣಾರ್ಧದಲ್ಲಿ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿ ಅತಿ ವೇಗವಾಗಿ ವ್ಯಾಪಿಸಿದ್ದು, ಕಾರ್ ಲಾಕ್ ತೆಗೆಯಲು ಸಾಧ್ಯವಾಗಿಲ್ಲ ಕಾರಣ Inspector ಅವರು ಕಾರಿನಿಂದ ಹೊರಬರಲು ಸಾಧ್ಯವಾಗಿಲ್ಲ.
ಅಪಘಾತ ಸಂಜೆ 7.30ರ ಸಮಯದಲ್ಲಿ ನಡೆದಿದೆ. ಆಗ Inspector ಪಂಚಾಕ್ಷರಿ ಸಾಲಿಮಠ ತಮ್ಮ ವಾಹನವನ್ನು ಸ್ವತಃ ಚಾಲನೆ ಮಾಡುತ್ತಿದ್ದರು. ಕುಟುಂಬವನ್ನು ಭೇಟಿಯಾಗಲು ಗದಗಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದಂತೆ ಮೂಲಗಳು ತಿಳಿಸಿವೆ.
“ಡಿಕ್ಕಿಯ ನಂತರ ಪೆಟ್ರೋಲ್ ಸೋರಿಕೆ ಆಗಿ ಸ್ಪಾರ್ಕ್ ಉಂಟಾಗಿ ಬೆಂಕಿ ಹಬ್ಬಿದ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.”
ಘಟನಾ ಸ್ಥಳಕ್ಕೆ ತಕ್ಷಣವೇ ಅಣ್ಣಿಗೇರಿ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಒಳಗಿದ್ದ ಪಂಚಾಕ್ಷರಿ ಸಾಲಿಮಠ ಸಜೀವವಾಗಿ ದಹನಗೊಂಡಿರುವುದು ದೃಢಪಟ್ಟಿದೆ.
Inspector ಮೃತದೇಹ ಗುರುತಿಸಲು ಆರಂಭದಲ್ಲಿ ಕಷ್ಟ ಎದುರಾಯಿತು. ನಂತರ ಅವರ ಕೈಯಲ್ಲಿದ್ದ ಬ್ರೆಪ್ಲೆಟ್ ಆಧರಿಸಿ ಕುಟುಂಬದ ಸದಸ್ಯರು ಗುರುತು ಪತ್ತೆಹಚ್ಚಿದರು. ಇದಾದ ಬಳಿಕ ಪೊಲೀಸರು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.
ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಅಪಘಾತದಿಂದ ಸ್ಥಳೀಯರು, ಸಹೋದ್ಯೋಗಿಗಳು ಹಾಗೂ ಕುಟುಂಬದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಐಎಎಸ್ ಮಹಾಂತೇಶ್ ಬೀಳಗಿ ನಿಧನದ ಸುದ್ದಿ ಮಾಸುವ ಮುನ್ನೇ ಮತ್ತೊಂದು Inspector ಓರ್ವರ ಜೀವ ಹಾನಿ ರಾಜ್ಯದ ಕಾನೂನು ಜಾಗೃತಿ ವಲಯದಲ್ಲಿ ಆತಂಕ ಮೂಡಿಸಿದೆ.

