स्वातंत्र्याला 77 वर्षे उलटली तरी शिरोली ग्रामपंचायत व्याप्तीतील मांगीनहाळ पुलाची अद्यापही प्रतीक्षा. वाहतूक व प्रवासाची दयनीय परिस्थिती कायम – अधिकारी झोपेतच?
खानापूर, ता. 17 : शिरोली ग्रामपंचायतीच्या हद्दीतील मांगीनहाळ हे गाव आजही मूलभूत सुविधांपासून वंचित आहे. स्वातंत्र्याला 77 वर्षे उलटूनही या गावाला हलात्री नदीवर कायमस्वरूपी पूल नाही, ही वस्तुस्थिती शासन आणि प्रशासनाच्या उदासीनतेची असह्य कहाणी सांगते. गावाची लोकसंख्या सुमारे 400, एकूण घरे 45, तर रोज 50 ते 60 विद्यार्थी शिक्षणासाठी शिरोली व खानापूरला जातात. तसेच वृद्ध, आजारी रुग्ण आणि गर्भवती महिलांना उपचारांसाठी खानापूरला आणण्यासाठी त्रास होतात, जेडीएस चे नेते नासीर बागवान यांनी लोखंडी ब्रिज उभारला आहे परंतु हा सुद्धा गंजलेला असून मोडकळीला आलेला आहे. या सर्व गोष्टींचा विचार करून खासदार विश्वेश्वर हेगडे-कागेरी व खानापूर तालुक्याचे आमदार विठ्ठल हलगेकर यांनी मांगीनहाळ ग्रामस्थांचा होणारा त्रास लक्षात घेऊन हा पूल होण्यासाठी प्रयत्न करावेत अशी मागणी या भागाचे सामाजिक कार्यकर्ते व शिरोली ग्राम पंचायतीचे माजी चेअरमन व विद्यमान ग्रामपंचायत सदस्य कृष्णा गुरव व ग्रामस्थानी केली आहे.
दळणवळणाचे साधन नाही – गावकऱ्यांचा जीव मुठीत!
सध्या वाहतुकीसाठी फक्त गंजलेला लोखंडी तात्पुरता पूल असून त्यावरून फक्त दुचाकी व पायीच प्रवास करणे शक्य आहे. चारचाकी वाहने नदीच्या पात्रातून घसरत-धोक्यातून मार्गक्रमण करतात.
विशेष म्हणजे, पुढील महिन्यात शेतकरी पाणी आडवण्यासाठी बांध घालणार आहेत. त्यानंतर चारचाकी वाहनांचा मार्ग पूर्णपणे बंद होतो. तसेच पावसाळ्यात नदीला पाणी आल्यावर दोन ते तीन महिने संपूर्ण मांगीनहाळ गावाचा संपर्क खंडित होतो. यामुळे…..
▪ विद्यार्थ्यांचे 2–3 महिने शिक्षणाचे प्रचंड नुकसान होत आहे.
▪ वृद्ध, आजारी रुग्ण आणि गर्भवती महिलांच्या जीवाला धोका.
▪ शिरोली येथून रेशन आणण्यासाठी तसेच कृषी पत्तीन सोसायटीला व शासकीय कामांसाठी खानापूर ला जाता येत नाही. नागरिक घरातच अडकलेले असतात.
पूल मंजूर झाला… पण कागदांमध्येच अडकला!
ग्रामस्थांच्या माहितीनुसार पूल मंजूर झाला होता, परंतु वन विभागातील किचकट अडथळे आणि प्रशासनाच्या ढिलाईमुळे कामाला सुरुवातच झाली नाही. परिणामी मांगीनहाळ ग्रामस्थांना रोज मृत्यूला आमंत्रण देत प्रवास करावा लागत आहे.
लक्षात घेण्यासारखी बाब म्हणजे…….
दहा वर्षांपूर्वी जेडीएस नेते नासिर बागवान यांनी स्वतःच्या खर्चातून हा तात्पुरता लोखंडी पूल उभारला होता आणि आजही गाव त्याच्यावरच अवलंबून आहे.
मात्र पूल अतिशय जर्जर व गंजलेला असून, कधीही मोठा अपघात होण्याची शक्यता निर्माण झाली आहे.
ग्रामस्थांची ठाम मागणी…..
या पुलाच्या बांधकामासाठी खासदार विश्वेश्वर हेगडे-कागेरी आणि खानापूरचे आमदार विठ्ठल हलगेकर यांनी तातडीने पुढाकार घेऊन पुन्हा निधी मंजूर करून कामाला सुरुवात करावी, अशी एकमुखी मागणी ग्रामस्थांकडून करण्यात आली आहे.
ग्रामस्थांची आर्त प्रतिक्रिया…..
“नदीवर पूल नसल्याने विशेषतः महिला, वृद्ध, शाळकरी विद्यार्थी आणि गर्भवती महिलांना प्रचंड त्रास सहन करावा लागतो. स्वातंत्र्य मिळून 77 वर्षे उलटली तरी रस्ता, पूल आणि पाण्याच्या मूलभूत सुविधांचा अभाव आहे. लोकप्रतिनिधींच्या दुर्लक्षामुळे गाववासीयांना अजून किती दिवस हा जीवघेणा प्रवास करावा लागणार?”
— प्रकाश हनबर, नागरिक, मांगीनहाळ..
जनता प्रश्न विचारते – उत्तर कोण देणार?
पूल कागदावर मंजूर – पण काम प्रत्यक्षात शून्य….
ग्रामस्थांच्या जीवाशी खेळ — जबाबदार कोण?…
प्रशासनाने आता तरी जागे व्हावे!…
मांगीनहाळ पुलाच्या प्रश्नाकडे शासन व लोकप्रतिनिधींनी दुर्लक्ष केल्यास, मोठ्या जनआंदोलनाचा इशारा ग्रामस्थांनी दिला आहे.
गावाला रस्ता व कायमस्वरूपी पूल मिळेपर्यंत ग्रामस्थ आता शांत बसणार नाहीत! असे ग्रामस्थांनी सांगितले आहे.
ದೇಶ ಸ್ವಾತಂತ್ರ್ಯವಾಗಿ 77 ವರ್ಷ ಕಳೆದರೂ ಶಿರೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾಂಗೀನಹಾಳ ಊರಿಗೆ ಸೇತುವೆಯ ಇನ್ನೂ ನಿರೀಕ್ಷೆ. ಸಾರಿಗೆ ಮತ್ತು ಪ್ರಯಾಣದ ದಯನೀಯ ಪರಿಸ್ಥಿತಿ ಮುಂದುವರಿಕೆ – ಅಧಿಕಾರಿಗಳು ನಿದ್ರೆಯಲ್ಲಿದಾರೆಯೇ ಎಂಬ ಯಕ್ಷ ಪ್ರಶ್ನೆ?
ಖಾನಾಪುರ, ತಾ. 17 : ಶಿರೋಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಂಗೀನಹಾಳ ಗ್ರಾಮ ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಸ್ವಾತಂತ್ರ್ಯ ಸಿಕ್ಕಿ 77 ವರ್ಷ ಕಳೆದರೂ ಈ ಗ್ರಾಮಕ್ಕೆ ಹಲಾತ್ರಿ ನದಿಯ ಮೇಲೆ ಶಾಶ್ವತ ಸೇತುವೆ ಇಲ್ಲ ಎಂಬ ವಾಸ್ತವ್ಯ ಸರ್ಕಾರ ಮತ್ತು ಆಡಳಿತದ ನಿರ್ಲಕ್ಷ್ಯದ ನೋವಿನ ಕಥೆಯನ್ನು ಹೇಳುತ್ತದೆ.
ಗ್ರಾಮದ ಜನಸಂಖ್ಯೆ ಸುಮಾರು 400, ಒಟ್ಟು ಮನೆಗಳು 45. ಪ್ರತಿದಿನ 50 ರಿಂದ 60 ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಶಿರೋಲಿ ಮತ್ತು ಖಾನಾಪುರಕ್ಕೆ ತೆರಳುತ್ತಾರೆ. ಜೊತೆಗೆ ವೃದ್ಧರು, ಅಸ್ವಸ್ಥರು ಮತ್ತು ಗರ್ಭಿಣಿ ಮಹಿಳೆಯರನ್ನು ಚಿಕಿತ್ಸೆಗಾಗಿ ಖಾನಾಪುರಕ್ಕೆ ತರಲು ತೀವ್ರ ಸಂಕಷ್ಟ ಎದುರಾಗುತ್ತದೆ. ಜೆಡಿಎಸ್ ನಾಯಕ ನಾಸೀರ್ ಬಾಗವಾನ್ ಅವರು ಕಬ್ಬಿಣದ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ, ಆದರೆ ಅದು ಈಗ ಜೀರ್ಣಗೊಂಡಿದ್ದು ಅಪಾಯಕಾರಿಯಾಗಿದೆ. ಈ ಎಲ್ಲಾ ಸಂಗತಿಗಳನ್ನು ಪರಿಗಣಿಸಿ, ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಮತ್ತು ಖಾನಾಪುರ ವಿಧಾನಸಭೆಯ ಶಾಸಕ ವಿಠ್ಠಲ ಹಲಗೇಕರ್ ಅವರು ಮಾಂಗೀನಹಾಳ ಗ್ರಾಮಸ್ಥರ ಸಂಕಷ್ಟವನ್ನು ಗಮನಿಸಿ, ಈ ಸೇತುವೆ ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ಸಾಮಾಜ ಸೇವಕ ಮತ್ತು ಶಿರೋಲಿ ಗ್ರಾಮಪಂಚಾಯಿತಿಯ ಮಾಜಿ ಅಧ್ಯಕ್ಷ ಮತ್ತು ಪ್ರಸ್ತುತ ಸದಸ್ಯ ಕೃಷ್ಣ ಗುರುವ್ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಾರಿಗೆ ಸೌಲಭ್ಯವಿಲ್ಲ – ಗ್ರಾಮಸ್ಥರ ಜೀವ ಕೈಯಲ್ಲಿ!
ಪ್ರಸ್ತುತ ಸಂಚಾರಕ್ಕೆ ಜೀರ್ಣಗೊಂಡ ಕಬ್ಬಿಣದ ತಾತ್ಕಾಲಿಕ ಸೇತುವೆ ಮಾತ್ರ ಇದ್ದು, ಅದರ ಮೂಲಕ ಎರಡು ಚಕ್ರ ವಾಹನ ಮತ್ತು ನಡೆದು ಹೋಗುವುದಕ್ಕಷ್ಟೇ ಸಾಧ್ಯ. ನಾಲ್ಕು ಚಕ್ರ ವಾಹನಗಳು ನದಿಯ ದಡದಿಂದ ಜಾರುತ್ತಾ- ಅಪಾಯದಲ್ಲಿಯೇ ಸಂಚರಿಸುತ್ತವೆ.
ಮುಖ್ಯವಾಗಿ ಮುಂದಿನ ತಿಂಗಳಲ್ಲಿ ರೈತರು ನೀರು ತಡೆಯಲು ಅಣೆಕಟ್ಟು ನಿರ್ಮಿಸುವ ಹಿನ್ನೆಲೆ, ನಾಲ್ಕು ಚಕ್ರ ವಾಹನಗಳ ಮಾರ್ಗ ಸಂಪೂರ್ಣ ಬಂದ್ ಆಗುತ್ತದೆ.
ಮಳೆಗಾಲದಲ್ಲಿ ನದಿಗೆ ನೀರು ಬಂದ ನಂತರ ಎರಡು ರಿಂದ ಮೂರು ತಿಂಗಳು ಮಾಂಗೀನಹಾಳ ಗ್ರಾಮ ಸಂಪೂರ್ಣ ಸಂಪರ್ಕ ಕಡಿತ ಆಗುತ್ತದೆ.
ಪರಿಣಾಮವಾಗಿ —
▪ ವಿದ್ಯಾರ್ಥಿಗಳ 2–3 ತಿಂಗಳ ಶಿಕ್ಷಣಕ್ಕೆ ಭಾರೀ ಹಾನಿ
▪ ವೃದ್ಧರು, ಅಸ್ವಸ್ಥರು ಮತ್ತು ಗರ್ಭಿಣಿಯರ ಜೀವಕ್ಕೆ ಅಪಾಯ
▪ ರೇಷನ್ ತರುವುದು, ಕೃಷಿ ಪತಿನ್ ಸೋಸೈಟಿ ಮತ್ತು ಸರ್ಕಾರಿ ಕೆಲಸಗಳಿಗೆ ಖಾನಾಪುರಕ್ಕೆ ಹೋಗುವುದೇ ಸಾಧ್ಯವಿಲ್ಲ
▪ ನಾಗರಿಕರು ಮನೆಯಲ್ಲಿ ಸಿಕ್ಕಿಹಾಕಿಕೊಂಡಂತಾಗುತ್ತಾರೆ
ಸೇತುವೆ ಮಂಜೂರಾಯಿತು… ಆದರೆ ಕಡತಗಳಲ್ಲಿ ಅಟಕಿತು!
ಗ್ರಾಮಸ್ಥರ ಮಾಹಿತಿ ಪ್ರಕಾರ ಸೇತುವೆ ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಅಡೆತಡೆಗಳು ಮತ್ತು ಆಡಳಿತದ ನಿರ್ಲಕ್ಷ್ಯದಿಂದ ಕಾಮಗಾರಿ ಪ್ರಾರಂಭವಾಗಲೇ ಇಲ್ಲ.
ಪರಿಣಾಮವಾಗಿ ಮಾಂಗೀನಹಾಳ ಗ್ರಾಮಸ್ಥರು ಪ್ರತಿದಿನ ಮರಣದ ಆಹ್ವಾನ ನೀಡಿದಂತೆ ಪ್ರಯಾಣ ಮಾಡುತ್ತಿದ್ದಾರೆ.
ಗಮನಿಸಬೇಕಾದದ್ದು ಎಂದರೆ —
ಹತ್ತು ವರ್ಷಗಳ ಹಿಂದೆ ಜೆಡಿಎಸ್ ನಾಯಕ ನಾಸೀರ್ ಬಾಗವಾನ್ ಸ್ವಂತ ವೆಚ್ಚದಲ್ಲಿ ಈ ತಾತ್ಕಾಲಿಕ ಕಬ್ಬಿಣದ ಸೇತುವೆ ನಿರ್ಮಿಸಿದ್ದರು ಮತ್ತು ಇಂದು ಸಹ ಗ್ರಾಮ ಅದಕ್ಕೇ ಅವಲಂಬಿತವಾಗಿದೆ.
ಆದಾಗ್ಯೂ ಸೇತುವೆ ಅತ್ಯಂತ ಜೀರ್ಣಗೊಂಡಿದ್ದು ಮತ್ತು ಗಂಜುಗೊಂಡಿದೆ, ಯಾವುದೇ ಕ್ಷಣ ದೊಡ್ಡ ಅಪಘಾತ ಸಂಭವಿಸುವ ಭೀತಿ ಇದೆ.
ಗ್ರಾಮಸ್ಥರ ಸ್ಪಷ್ಟ ಆಗ್ರಹ…
ಈ ಸೇತುವೆ ಕಾಮಗಾರಿಗೆ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಮತ್ತು ಖಾನಾಪುರದ ಶಾಸಕ ವಿಠ್ಠಲ ಹಲಗೇಕರ್ ತಕ್ಷಣವೇ ಮುಂದಾಗಿ ಮತ್ತೆ ಅನುದಾನ ಮಂಜೂರು ಮಾಡಿ ಕಾಮಗಾರಿ ಪ್ರಾರಂಭಗೊಳಿಸಬೇಕು, ಎಂಬ ಒಮ್ಮತದ ಆಗ್ರಹ ಗ್ರಾಮಸ್ಥರಿಂದ ವ್ಯಕ್ತವಾಗಿದೆ.
ಗ್ರಾಮಸ್ಥರ ಆಕ್ರಂದನ…
“ನದಿಗೆ ಸೇತುವೆ ಇಲ್ಲದ ಕಾರಣ ವಿಶೇಷವಾಗಿ ಮಹಿಳೆಯರು, ವೃದ್ಧರು, ಶಾಲಾ ಮಕ್ಕಳು ಮತ್ತು ಗರ್ಭಿಣಿಯರು ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ.
ಸ್ವಾತಂತ್ರ್ಯ ಬಂದ್ದು 77 ವರ್ಷ ಕಳೆದರೂ ರಸ್ತೆ, ಸೇತುವೆ ಮತ್ತು ನೀರಿನ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಾವು ಇನ್ನೆಷ್ಟು ದಿನ ಈ ಜೀವಾಪಾಯದ ಪ್ರಯಾಣ ಮಾಡಬೇಕು?” ಎಂಬ ಅನಿಸಿಕೆ ವ್ಯಕ್ತ ಪಡಿಸಿದ— ಪ್ರಕಾಶ ಹನಬರ, ನಾಗರಿಕ, ಮಾಂಗೀನಹಾಳ
ಜನರ ಪ್ರಶ್ನೆ – ಉತ್ತರ ಯಾರು ಕೊಡುವರು?
ಕಾಗದದಲ್ಲಿ ಸೇತುವೆ ಮಂಜೂರು – ಆದರೆ ಕಾರ್ಯ ಭೂಮಿಯಲ್ಲಿ ಶೂನ್ಯ…
ಗ್ರಾಮಸ್ಥರ ಜೀವದ ಜೊತೆ ಆಟ — ಜವಾಬ್ದಾರರು ಯಾರು?…
ಅಡಳಿತವರ್ಗ ಈಗಾದರೂ ಎಚ್ಚರವಾಗಲಿ!…
ಮಾಂಗೀನಹಾಳ ಸೇತುವೆ ವಿಷಯವನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಮತ್ತಷ್ಟು ನಿರ್ಲಕ್ಷ್ಯ ಮಾಡಿದಲ್ಲಿ ಭಾರಿ ಜನಆಂದೋಲನಕ್ಕೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಕ್ಕೆ ರಸ್ತೆ ಮತ್ತು ಶಾಶ್ವತ ಸೇತುವೆ ಸಿಗುವವರೆಗೂ ಗ್ರಾಮಸ್ಥರು ಈಗ ಮೌನವಾಗಿ ಕೂತಿರಲ್ಲ! ಎಂದು ಗ್ರಾಮಸ್ಥರು ಸ್ಪಷ್ಟವಾಗಿ ತಿಳಿಸಿದ್ದಾರೆ.


