जिल्हास्तरीय कबड्डी व थ्रो बॉल स्पर्धांना स्वामी विवेकानंद शाळा खानापूर येथे आजपासून सुरुवात, होणार.
खानापूर : शालेय शिक्षण विभाग (पूर्व-विद्यापीठ), बेळगाव व श्री स्वामी विवेकानंद शिक्षण सेवा सोसायटीच्या वतीने आयोजित “बेळगाव जिल्हास्तरीय पी.यू. कॉलेज कबड्डी व थ्रो बॉल स्पोर्ट्स मीट 2025-26” या स्पर्धांचा भव्य शुभारंभ बुधवार दि. 17 सप्टेंबर 2025 रोजी सकाळी 9.30 वा. खानापूर येथील श्री स्वामी विवेकानंद पी.यू. कॉलेज मैदानावर, होणार आहे.
या स्पर्धेचे उद्घाटन खानापूरचे आमदार श्री. विठ्ठलराव एस. हळगेकर यांच्या हस्ते होणार असून, प्रमुख पाहुणे म्हणून श्री. एम. एम. कांबळे (उपसंचालक, शालेय शिक्षण विभाग, पी.यू., बेळगाव) उपस्थित राहणार आहेत..
विशेष अतिथी म्हणून आंतरराष्ट्रीय पातळीवर भारताला गौरव मिळवून देणारे नामांकित बॉडीबिल्डर श्री. सुनील एन. आपटेकर (मिस्टर इंडिया सुवर्णपदक, मिस्टर एशिया कांस्यपदक विजेते) उपस्थित राहणार आहेत..
कार्यक्रमाचे अध्यक्षस्थान ॲड. श्री. चेतन ए. मनेरीकर (अध्यक्ष, श्री स्वामी विवेकानंद शिक्षण सेवा सोसायटी, खानापूर) भूषवणार आहेत.. यावेळी श्री. सुहास व्ही. कुलकर्णी (सचिव, सोसायटी), श्री. एन. के. बजंत्री (अध्यक्ष, बेळगाव जिल्हा प्राचार्य संघटना), श्री. प्रभू शिवनायक (जिल्हा क्रीडा समन्वयक) व श्री. श्रीधर हिरेमठ (तालुका क्रीडा समन्वयक, खानापूर), आदी मान्यवर उपस्थित राहणार आहेत.
या स्पर्धांच्या यशस्वी आयोजनासाठी, महाविद्यालयाचे शारीरिक शिक्षण संचालक श्री. रजत साळुंखे, आयोजन समितीचे सचिव श्री. शशिकांत एस. पाटील तसेच महाविद्यालयीन प्राचार्य श्री. पी. के. चापगावंकर व सर्व शिक्षकवृंद, कर्मचारी व विद्यार्थीवर्ग परिश्रम घेत आहेत.
या उद्घाटन सोहळ्यास व क्रीडा स्पर्धांना मोठ्या संख्येने उपस्थित राहण्याचे आवाहन आयोजकांनी केले आहे.
ಜಿಲ್ಲಾ ಮಟ್ಟದ ಕಬಡ್ಡಿ ಮತ್ತು ಥ್ರೋಬಾಲ್ ಸ್ಪರ್ಧೆಗಳು ಇಂದಿನಿಂದ ಖಾನಾಪುರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಪ್ರಾರಂಭವಾಗಲಿವೆ.
ಖಾನಾಪೂರ : ಪ್ರೌಢ ಶಿಕ್ಷಣ ಇಲಾಖೆ (ಪಿಯು), ಬೆಳಗಾವಿ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸೇವಾ ಸೊಸೈಟಿಯ ವತಿಯಿಂದ ಆಯೋಜಿಸಲಾದ “ಬೆಳಗಾವಿ ಜಿಲ್ಲಾ ಮಟ್ಟದ ಪಿ.ಯು. ಕಾಲೇಜು ಕಬಡ್ಡಿ ಮತ್ತು ತ್ರೋಬಾಲ್ ಸ್ಪೋರ್ಟ್ಸ್ ಮೀಟ್ 2025-26” ಕ್ರೀಡಾಕೂಟದ ಭವ್ಯ ಉದ್ಘಾಟನೆ ಬುಧವಾರ, ದಿನಾಂಕ 17 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 9.30 ಗಂಟೆಗೆ ಖಾನಾಪೂರದ ಶ್ರೀ ಸ್ವಾಮಿ ವಿವೇಕಾನಂದ ಪಿ.ಯು. ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಈ ಸ್ಪರ್ಧೆಯ ಉದ್ಘಾಟನೆ ಖಾನಾಪೂರ ಕ್ಷೇತ್ರದ ಶಾಸಕರಾದ ಶ್ರೀ ವಿಠ್ಠಲರಾವ ಎಸ್. ಹಳಗೇಕರ್ ಅವರಿಂದ ನೆರವೇರಲಿದ್ದು, ಮುಖ್ಯ ಅತಿಥಿಯಾಗಿ ಶ್ರೀ ಎಂ.ಎಂ. ಕಾಂಬಳೆ (ಉಪ ನಿರ್ದೇಶಕ, ಪಿಯು ವಿಭಾಗ, ಬೆಳಗಾವಿ) ಹಾಜರಾಗಲಿದ್ದಾರೆ. ವಿಶೇಷ ಅತಿಥಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದ ಖ್ಯಾತ ಬಾಡಿಬಿಲ್ಡರ್ ಶ್ರೀ ಸುನಿಲ್ ಎನ್. ಆಪಟೇಕರ್ (ಮಿಸ್ಟರ್ ಇಂಡಿಯಾ ಚಿನ್ನದ ಪದಕ, ಮಿಸ್ಟರ್ ಏಷ್ಯಾ ಕಂಚಿನ ಪದಕ ವಿಜೇತ) ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಡ್ವೊ. ಶ್ರೀ ಚೇತನ್ ಎ. ಮನೇರಿಕರ್ (ಅಧ್ಯಕ್ಷರು, ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸೇವಾ ಸೊಸೈಟಿ, ಖಾನಾಪೂರ) ಭೂಷಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸುಹಾಸ್ ವಿ. ಕುಲಕರ್ಣಿ (ಕಾರ್ಯದರ್ಶಿ, ಸೊಸೈಟಿ), ಶ್ರೀ ಎನ್.ಕೆ. ಬಜಂತ್ರಿ (ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಪ್ರಾಚಾರ್ಯರ ಸಂಘ), ಶ್ರೀ ಪ್ರಭು ಶಿವನಾಯಕ (ಜಿಲ್ಲಾ ಕ್ರೀಡಾ ಸಂಯೋಜಕ) ಹಾಗೂ ಶ್ರೀ ಶ್ರೀಧರ ಹಿರೇಮಠ (ತಾಲೂಕು ಕ್ರೀಡಾ ಸಂಯೋಜಕ, ಖಾನಾಪೂರ) ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ಈ ಕ್ರೀಡಾಕೂಟದ ಯಶಸ್ವಿ ಆಯೋಜನೆಗಾಗಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಜತ್ ಸಾಳುಂಖೆ, ಆಯೋಜನಾ ಸಮಿತಿಯ ಕಾರ್ಯದರ್ಶಿ ಶ್ರೀ ಶಶಿಕಾಂತ್ ಎಸ್. ಪಾಟೀಲ, ಮಹಾವಿದ್ಯಾಲಯದ ಪ್ರಾಂಶುಪಾಲರು ಶ್ರೀ ಪಿ.ಕೆ. ಚಾಪಗಾವಂಕರ್, ಎಲ್ಲಾ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿವೃಂದ ಶ್ರಮವಹಿಸುತ್ತಿದ್ದಾರೆ.
ಈ ಉದ್ಘಾಟನಾ ಸಮಾರಂಭ ಹಾಗೂ ಕ್ರೀಡಾಕೂಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

