खानापूर लायन्स क्लबतर्फे रुमेवाडी शाळेला शुद्ध पाणी यंत्र (वाटर फिल्टर) ची देणगी.
खानापूर : खानापूर लायन्स क्लबच्या वतीने रुम्मेवाडी येथील शासकीय मराठी उच्च प्राथमिक शाळेस शुद्ध पाण्याचे यंत्र दान करण्यात आले. मुलांच्या आरोग्याची काळजी घेत शुद्ध पाण्याची गरज ओळखून लायन्स क्लबने ही सुविधा उपलब्ध करून दिली. 79 व्या स्वातंत्र्य दिनाच्या औचित्यावर हा उपक्रम राबविण्यात आला.
याच प्रसंगी विद्यार्थ्यांमध्ये स्पर्धात्मक वृत्ती वाढीसाठी भाषण स्पर्धेचे आयोजन करण्यात आले होते. प्रत्येक गटातील विद्यार्थ्यांना पहिले तीन क्रमांक देऊन त्यांचा गौरव करण्यात आला.
या कार्यक्रमाला शाळा सुधारणा समितीचे अध्यक्ष गणेश हल्याळकर, मुख्याध्यापक सूर्याजी पाटील, भारतीय सैन्यदलातील सैनिक नागेश चौगुले, इतर शिक्षकवर्ग व मोठ्या संख्येने पालक उपस्थित होते. लायन्स क्लबचे अध्यक्ष विकास कल्याणी यांच्या हस्ते शुद्ध पाणी यंत्राचे उद्घाटन करण्यात आले.
लायन बसवराज हम्मण्णावर यांनी विद्यार्थ्यांना उद्देशून लायन्स क्लबच्या सेवा व कार्याची माहिती दिली. या वेळी लायन्स सदस्य अजीत पाटील, महेश पाटील, डॉ. अतरस बिऱादार, मल्लेशप्पा बेनकटी, प्रकाश बेतगावडा, जुनेद तोपिनकट्टी, उद्योजक कुमार थंगम, माजी अध्यक्ष रविसागर उप्पीन, भाऊराव चव्हाण उपस्थित होते.
शिक्षक ज्योतीबा घाडी यांनी उपस्थितांचे स्वागत करून कार्यक्रमाचे सूत्रसंचालन केले. शाळा सुधारणा समितीचे अध्यक्ष गणेश हल्याळकर यांनी क्लबच्या सेवाभावी कार्याचे समाधान व्यक्त केले. सैनिक नागेश चौगुले यांनीही क्लबच्या कार्याचे कौतुक केले. शेवटी पारितोषिक वितरण झाले. मुख्याध्यापक सूर्याजी पाटील यांनी आभार मानले.
ಖಾನಾಪುರ ಲಯನ್ಸ್ ಕ್ಲಬ್ ವತಿಯಿಂದ ಶುದ್ಧ ನೀರು ಘಟಕ ದೇಣಿಗೆ.
ಖಾನಾಪುರ : ಖಾನಾಪುರದ ಲಯನ್ಸ್ ಕ್ಲಬ್ ವತಿಯಿಂದ ರುಮೆವಾಡಿ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ನೀರಿನ ಘಟಕವನ್ನು ದೇಣಿಗೆ ನೀಡಲಾಯಿತು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶುದ್ಧನೀರಿನ ಅವಶ್ಯಕತೆ ಅರಿತು ಖಾನಾಪುರದ ಲಯನ್ಸ್ ಕ್ಲಬ್ ಶುದ್ಧ ನೀರಿನ ವ್ಯವಸ್ಥೆ ಮಾಡಿಕೊಟ್ಟು ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಅವರ ಕಾಳಜಿಯನ್ನು ತೋರಿಸಿದೆ.
79 ನೆಯ ಸ್ವಾತಂತ್ತ್ಯೋತ್ಸವದ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರತಿ ವರ್ಗದ ಮಕ್ಕಳಿಗೆ ಪ್ರಥಮ ಮೂರು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಶಾಲಾ ಸುಧಾರಣಾ ಸಮಿತಿಯ ಅಧಕ್ಷರಾದ ಗಣೇಶ ಹಲ್ಯಾಳಕರ್, ಪ್ರಧಾನ ಗುರುಗಳಾದ ಸುರ್ಯಾಜಿ ಪಾಟೀಲ್, ಭಾರತೀಯ ಸೇನೆಯ ಸೈನಿಕ ನಾಗೇಶ ಚೌಗುಲೆ ಹಾಗೂ ಇತರ ಶಿಕ್ಷರು ಮತ್ತು ಬಹುಸಂಖ್ಯಾ ಪಾಲಕರು ಹಾಜರಿದ್ದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಕಾಸ ಕಲ್ಯಾಣಿ ಶುದ್ಧ ನೀರಿನ ಘಟಕದ ಉದ್ಘಾಟನೆ ಮಾಡಿ ಮಾತನಾಡಿದರು. ಮಕ್ಕಳನ್ನು ಉದ್ದೇಶಿಸಿ ಲಯನ್ ಬಸವರಾಜ ಹಮ್ಮಣ್ಣವರ ಮಾತನಾಡಿ ಲಯನ್ಸ್ ಕ್ಲಬ್ ಸೇವೆ ಹಾಗೂ ಸಂಸ್ಥೆಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಲಯನ್ಸ್ ಸದಸ್ಯರಾದ ಅಜಿತ್ ಪಾಟೀಲ್, ಮಹೇಶ್ ಪಾಟೀಲ್, ಡಾ. ಅತರೇಶ್ ಬಿರಾದಾರ್, ಮಲ್ಲೇಶಪ್ಪ ಬೆನಕಟ್ಟಿ, ಪ್ರಕಾಶ್ ಬೆತಗೌಡ, ಜುನೆದ್ ತೋಪಿನಕಟ್ಟಿ, ಉದ್ಯಮಿ ಕುಮಾರ್ ತಂಗಮ್, ಮಾಜಿ ಅಧಕ್ಷ ರವಿಸಾಗರ ಉಪ್ಪಿನ್, ಭಾವುರಾವ್ ಚವಾನ ಉಪಸ್ಥಿತರಿದ್ದರು.
ಶಿಕ್ಷಕರಾದ ಜ್ಯೋತಿಬಾ ಘಾಡಿ ಉಪಸ್ಥಿತರಿಗೆ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು ಮಾತನಾಡಿ ಕ್ಲಬ್ ಸೇವೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಸೈನಿಕ ನಾಗೇಶ್ ಚೌಗುಲೆ ಮಾತನಾಡಿ ಕ್ಲಬ್ಬಿನ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕೊನೆಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಶಾಲೆಯ ಪ್ರಧಾನ ಗುರುಗಳಾದ ಸೂರ್ಯಾಜಿ ಪಾಟೀಲ್ ವಂದಿಸಿದರು.



