गर्लगुंजी ग्रामपंचायत सदस्य प्रसाद पाटील यांच्या प्रयत्नांना यश; KLE हॉस्पिटलकडून गावांचा आरोग्यदत्तक उपक्रम सुरू.
खानापूर (28 जुलै): गर्लगुंजी ग्रामपंचायत सदस्य प्रसाद पाटील यांच्या सततच्या पाठपुराव्याला यश येत असून, बेळगाव येथील KLE शताब्दी चॅरिटेबल हॉस्पिटल या नामवंत संस्थेने गर्लगुंजीसह निट्टूर, तोपिनकट्टी, बरगाव व बैलूर या गावांना आरोग्याच्या दृष्टीने “दत्तक” घेण्याचा निर्णय घेतला आहे.
या उपक्रमाबाबत KLE हॉस्पिटलचे मुख्य कार्यकारी अधिकारी प्रशांत देसाई व प्रसाद पाटील यांच्यात सविस्तर चर्चा झाली. त्यानुसार, या गावांमध्ये आठवड्यातून एक किंवा दोन वेळा MBBS/MD डॉक्टर आरोग्य तपासणीसाठी येणार असून, मोफत ॲम्बुलन्स सेवा, मोफत किंवा अत्यल्प दरात औषधे, आणि रुग्णालयात दाखल झाल्यास मोफत तपासणी यासारख्या सुविधा मिळणार आहेत.
ऑपरेशन किंवा इतर खर्चिक उपचारांसाठी वेगवेगळ्या योजनांमधून सवलती दिल्या जाणार असून, अत्यल्प दरात उपचारही उपलब्ध होतील. हा उपक्रम KLE संस्थेचे कार्याध्यक्ष डॉ. प्रभाकर कोरे यांच्या जन्मदिनी सुरू होणार आहे, असे प्रशांत देसाई यांनी सांगितले.
या बैठकीला KLE हॉस्पिटलच्या जनसंपर्क अधिकारी प्रभावती, निट्टूर ग्रामपंचायत सदस्य नागेश नार्वेकर, तसेच जनसंपर्क अधिकारी संतोष, विजय आणि सागर यांचीही मोलाची साथ लाभल्याचे प्रसाद पाटील यांनी सांगितले.
“या हॉस्पिटलमधून आतापर्यंत 1000 हून अधिक रुग्णांना आपण चांगले उपचार मिळवून दीले असून, गरजूंना ब्लड बँकेमधून रक्त देण्याचीही मदत झाली आहे. येथील डॉक्टर्स, नर्सेस आणि इतर कर्मचारी उत्तम सहकार्य करतात,” असे समाधान त्यांनी व्यक्त केले.
यासोबतच रेशन कार्ड, आधार कार्ड, यशस्विनी, वाजपेयी आरोग्यश्री व अशा इतर योजनांद्वारे रुग्णांना लाभ मिळवून देता येतो. त्यामुळे ग्रामीण भागातील नागरिकांनी KLE हॉस्पिटलच्या या सेवांचा लाभ घ्यावा, असे आवाहनही प्रसाद पाटील यांनी यावेळी केले.
ಗರ್ಲಗುಂಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಪಾಟೀಲ ಅವರ ಪ್ರಯತ್ನಕ್ಕೆ ಯಶ; ಕೆಎಲ್ಇ ಆಸ್ಪತ್ರೆಯಿಂದ ಗ್ರಾಮಗಳಿಗೆ ಆರೋಗ್ಯ ದತ್ತಕ ಯೋಜನೆ ಆರಂಭ
ಖಾನಾಪುರ (ಜುಲೈ 28): ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮ ಪಂಚಾಯತ ಸದಸ್ಯರಾದ ಪ್ರಸಾದ್ ಪಾಟೀಲ ಅವರ ನಿರಂತರ ಪ್ರಯತ್ನಗಳ ಫಲವಾಗಿ, ಬೆಳಗಾವಿಯ ಪ್ರಸಿದ್ಧ ಸಂಸ್ಥೆಯಾದ ಕೆಎಲ್ಇ ಶತಾಬ್ದಿ ಚಾರಿಟೆಬಲ್ ಆಸ್ಪತ್ರೆ ಗರ್ಲಗುಂಜಿ, ನಿಟ್ಟೂರ, ತೋಪಿನಕಟ್ಟಿ, ಬರಗಾಂವ ಮತ್ತು ಬೈಲೂರ ಗ್ರಾಮಗಳನ್ನು ಆರೋಗ್ಯ ದೃಷ್ಟಿಯಿಂದ “ದತ್ತಕ” ತೆಗೆದುಕೊಳ್ಳಲು ನಿರ್ಧರಿಸಿದೆ.
ಈ ಯೋಜನೆ ಕುರಿತು ಕೆಎಲ್ಇ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ದೇಸಾಯಿ ಮತ್ತು ಪ್ರಸಾದ್ ಪಾಟೀಲ ನಡುವೆ ವಿವರವಾದ ಚರ್ಚೆ ನಡೆದು. ಅದರಂತೆ, ಈ ಗ್ರಾಮಗಳಲ್ಲಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಎಂಬಿಬಿಎಸ್ / ಎಂ.ಡಿ. ವೈದ್ಯರು ಆರೋಗ್ಯ ತಪಾಸಣೆಗೆ ಭೇಟಿ ನೀಡಲಿದ್ದಾರೆ. ಇದರೊಂದಿಗೆ ಉಚಿತ ಅಂಬುಲೆನ್ಸ್ ಸೇವೆ, ಉಚಿತ ಅಥವಾ ಕಡಿಮೆ ದರದಲ್ಲಿ ಔಷಧಿ ವಿತರಣೆ, ಮತ್ತು ಆಸ್ಪತ್ರೆಯಲ್ಲಿ ದಾಖಲಾಗುವ ಸಂದರ್ಭದಲ್ಲಿ ಉಚಿತ ತಪಾಸಣೆಯಂತಹ ಸೌಲಭ್ಯಗಳು ಲಭ್ಯವಿರುವುದಾಗಿ ತಿಳಿಸಲಾಗಿದೆ.
ಆಪರೇಶನ್ ಅಥವಾ ಇತರ ಉಪಚಾರಗಳಿಗೆ ಖರ್ಚಿನ ವಿವಿಧ ಯೋಜನೆಗಳ ಅಡಿಯಲ್ಲಿ ಸಬ್ಸಿಡಿ ಮತ್ತು ಕಡಿಮೆ ದರದಲ್ಲಿ ಚಿಕಿತ್ಸೆ ದೊರೆಯಲಿದ್ದು, ಈ ಮಹತ್ತ್ವಾಕಾಂಕ್ಷಿ ಕಾರ್ಯಕ್ರಮವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೊರೆಯವರ ಜನ್ಮದಿನದಂದು ಪ್ರಾರಂಭಿಸಲಾಗುತ್ತಿದೆ ಎಂದು ಪ್ರಶಾಂತ್ ದೇಸಾಯಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಕೆಎಲ್ಇ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಭಾವತಿ, ನಿಟ್ಟೂರ ಗ್ರಾಮ ಪಂಚಾಯತ್ ಸದಸ್ಯ ನಾಗೇಶ್ ನಾರ್ವೇಕರ್, ಹಾಗೂ ಪಿಆರ್ ಸಿಬ್ಬಂದಿ ಸಂತೋಷ, ವಿಜಯ ಹಾಗೂ ಸಾಗರ್ ಉಪಸ್ಥಿತರಿದ್ದರು.
“ಈ ಆಸ್ಪತ್ರೆ ಮೂಲಕ ಈಗಾಗಲೇ 1000ಕ್ಕೂ ಹೆಚ್ಚು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಯಿತೆಂದು ಪ್ರಸಾದ್ ಪಾಟೀಲ ಸಂತೋಷ ವ್ಯಕ್ತಪಡಿಸಿದರು. ರಕ್ತದಾನ ಕೇಂದ್ರದಿಂದ ಅಗತ್ಯವಿದ್ದಾಗ ರಕ್ತ ದೊರೆಯಲು ಸಹ ಸಹಾಯ ಮಾಡಲಾಗಿದೆ. ಇಲ್ಲಿನ ವೈದ್ಯರು, ನರ್ಸ್ಗಳು ಹಾಗೂ ಇತರ ಸಿಬ್ಬಂದಿ ಉತ್ತಮ ಸಹಕಾರ ನೀಡುತ್ತಿದ್ದಾರೆ,” ಎಂದರು.
ಅದರೊಂದಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಮತ್ತು ಇತರ ಯೋಜನೆಗಳ ಮೂಲಕ ರೋಗಿಗಳಿಗೆ ಲಾಭ ಪಡೆಯಲು ಸಾಧ್ಯವಿದೆ. ಆದ್ದರಿಂದ ಗ್ರಾಮೀಣ ಪ್ರದೇಶದ ನಾಗರಿಕರು ಕೆಎಲ್ಇ ಆಸ್ಪತ್ರೆಯ ಈ ಸೇವೆಗಳನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಪ್ರಸಾದ್ ಪಾಟೀಲ ಅವರು ಕರೆ ನೀಡಿದರು.

