
खानापूर महामार्गाच्या कामाला विलंब: कंत्राटदाराला ₹3.2 कोटींचा दंड.
नवी दिल्ली: बेळगाव जिल्ह्यातील खानापूर ते गोवा सीमेपर्यंतच्या (NH 748) राष्ट्रीय महामार्गाच्या कामाला विलंब झाल्यामुळे कंत्राटदाराला ₹3.2 कोटींचा दंड ठोठावण्यात आला आहे, अशी माहिती केंद्रीय महामार्ग आणि भूपृष्ठ वाहतूक मंत्री नितीन गडकरी यांनी दिली.
राज्यसभेत प्रश्नोत्तराच्या तासात लेखी उत्तर देताना मंत्र्यांनी सांगितले की, दुपदरी असलेल्या या 52 किमी लांबीच्या कामाला कंत्राटदारांमुळे विलंब झाला आहे. या कामापैकी आतापर्यंत 72% काम पूर्ण झाले आहे. पुढील वर्षाच्या मार्च अखेरपर्यंत काम पूर्ण होईल, अशी माहितीही त्यांनी दिली.
खानापूर भागातील 20.8 किमीचे काम पूर्ण झाले आहे आणि तेथे वापरकर्ता शुल्क (टोल) आकारले जात आहे. खानापूर ते कर्नाटक सीमेपर्यंतचे काम पूर्ण न झाल्यामुळे त्या भागातून वापरकर्ता शुल्क घेतले जात नाही, असेही त्यांनी स्पष्ट केले.
ಖಾನಾಪುರ ಹೆದ್ದಾರಿ ಕಾಮಗಾರಿ ವಿಳಂಬ: ಗುತ್ತಿಗೆದಾರರಿಗೆ ₹3.2 ಕೋಟಿ ದಂಡ
ನವದೆಹಲಿ: ಬೆಳಗಾವಿ ಜಿಲ್ಲೆಯ ಖಾನಾಪುರದಿಂದ ಗೋವಾ
ಗಡಿಯವರೆಗೆ (ಎನ್ಎಚ್ 748) ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗಿರುವುದಕ್ಕೆ ಗುತ್ತಿಗೆದಾರರಿಗೆ ₹3.2 ಕೋಟಿ ದಂಡ ವಿಧಿಸಲಾಗಿದೆ ಎಂದು ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನಿತ್ತರ ಅವಧಿಯಲ್ಲಿ ಲಿಖಿತ ಉತ್ತರ ನೀಡಿರುವ ಸಚಿವರು, ದ್ವಿಪಥದ ಈ ಕಾಮಗಾರಿಯ ಉದ್ದ 52 ಕಿ.ಮೀ ಗುತ್ತಿಗೆದಾರರಿಂದಾಗಿ ಕಾಮಗಾರಿ ವಿಳಂಬವಾಗಿದೆ. ಈ ವರೆಗೆ ಶೇ 72 ಕೆಲಸ ಮುಗಿದಿದೆ. ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಖಾನಾಪುರ ಭಾಗದಲ್ಲಿ 20.8 ಕಿ.ಮೀ ಕಾಮಗಾರಿ ಮುಗಿದಿದೆ. ಇಲ್ಲಿ ಬಳಕೆದಾರರ ಶುಲ್ಕ ಸಂಗ್ರಹಿಸಲಾಗುತ್ತಿದೆ. ಖಾನಾಪುರದಿಂದ ಕರ್ನಾಟಕದ ಗಡಿ ವರೆಗಿನ ಕಾಮಗಾರಿ ಪೂರ್ಣಗೊಳ್ಳದ ಕಾರಣಕ್ಕೆ ಬಳಕೆದಾರರ ಶುಲ್ಕ ಸಂಗ್ರಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
