
खानापूर च्या के.एल.ई. संस्थेच्या एम.एस. होसमनी पदवीपूर्व महाविद्यालयात क्रीडा आणि सांस्कृतिक कार्यक्रमांचे उद्घाटन.
खानापूर : खानापूर येथील स्थानिक के.एल.ई. संस्थेच्या एम.एस. होसमनी पदवीपूर्व महाविद्यालयात दिनांक 26 जुलै 2025 रोजी क्रीडा आणि सांस्कृतिक कार्यक्रमांच्या उद्घाटन समारंभाचे आयोजन करण्यात आले होते.
या कार्यक्रमाला प्रमुख पाहुणे म्हणून खानपूरचे आमदार श्री विठ्ठलराव हलगेकर उपस्थित होते. आपल्या भाषणात ते म्हणाले की, “विद्यार्थी जीवन ही एक तपस्या आहे. यामध्ये आवड, निष्ठा आणि गुरुभक्ती आवश्यक आहे. माणसासाठी काहीही अशक्य नाही; फक्त ध्येय गाठण्याची जिद्द असावी आणि ते साध्य करण्यासाठी प्रामाणिक प्रयत्न महत्त्वाचे आहेत. यासाठी चांगले आरोग्य आवश्यक आहे. शारीरिक हालचाली करून निरोगी राहा आणि निरोगी राष्ट्र उभारण्याच्या कार्यात आजच्या तरुणांनी स्वतःला गुंतवून घ्यावे. योग्य प्रकारे अभ्यास करून आपल्या पालकांचा मान वाढवावा.”
महाविद्यालय विकास समितीचे सदस्य श्री बसवराज होंडदकट्टी यांनी विद्यार्थ्यांना संबोधित करताना सांगितले की, “आज प्रत्येक क्षेत्रात स्पर्धा आहे. विद्यार्थ्यांनी प्रामाणिकपणे तिचा सामना करून आपले जीवन घडवावे.”
महाविद्यालय विकास समितीचे अध्यक्ष श्री आर.डी. हंजी यांनी विद्यार्थ्यांना प्रेरणा देत म्हटले की, “जेव्हा शिकण्याची संधी मिळते तेव्हा तिचा योग्य वापर करून आपल्यातील प्रतिभा दाखवावी.”
महाविद्यालयाचे प्राचार्य श्री विजय कलमठ यांनी सर्वांचे स्वागत करून प्रास्ताविक भाषण केले. ते म्हणाले की, “विद्यार्थ्यांनी अभ्यासक्रमासोबतच अभ्यासक्रमाव्यतिरिक्त उपक्रमांमध्ये सक्रिय सहभाग घ्यावा. जीवनात ध्येय खूप महत्त्वाचे आहे आणि ते साध्य करण्यात आपण कधीही मागे हटू नये. विद्येसोबतच विनयशीलताही वाढवावी.”
या समारंभात गत शैक्षणिक वर्षाच्या वार्षिक परीक्षेत सर्वाधिक गुण मिळवून खानापूर तालुक्यात विज्ञान शाखेत प्रथम आलेल्या कुमारी लक्ष्मी पाटील हिचा तसेच महाविद्यालयात प्रथम, द्वितीय आणि तृतीय स्थान मिळवलेल्या विद्यार्थ्यांचा सत्कार करण्यात आला.
यावेळी महाविद्यालय विकास समितीचे सदस्य श्री सी.एस. कोडोळी, श्रीमती जयश्री होसमनी, श्री संतोष हंजी तसेच पत्रकार श्री अल्ताफ बसरीकट्टी, श्री दिनकर मरगाळे, विद्यार्थ्यांचे पालक, महाविद्यालयातील सर्व कर्मचारी वर्ग आणि विद्यार्थी उपस्थित होते.
ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ.
ಖಾನಾಪುರ. ಸ್ಥಳೀಯ ಕೆ ಎಲ್ ಈ ಸಂಸ್ಥೆಯ ಎಮ್ ಎಸ್ ಹೊಸಮನಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭವನ್ನು ದಿನಾಂಕ26–7-2025 ರಂದು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖಾನಾಪುರಿನ ಶಾಸಕರಾದ ಶ್ರೀ ವಿಠ್ಠಲರಾವ್ ಹಲಗೇಕರ ಮಾತನಾಡಿ ವಿದ್ಯಾರ್ಥಿ ಜೀವನ ಒಂದು ತಪಸ್ಸು.ಇಲ್ಲಿ ಆಸಕ್ತಿ ಮತ್ತು ಶ್ರದ್ಧೆ ಹಾಗೂ ಗುರುಭಕ್ತಿ ಅವಶ್ಯವಾಗಿರುತ್ತದೆ. ಮನುಷ್ಯನಿಗೆ ಅಸಾಧ್ಯವಾದುದು ಯಾವುದು ಇಲ್ಲ ಗುರಿ ಮುಟ್ಟುವ ಮನಸು ಬೇಕು ಅದನ್ನು ಸಾಧಿಸುವ ಪ್ರಾಮಾಣಿಕ ಪ್ರಯತ್ನ ಮುಖ್ಯ ಇದಕ್ಕೆ ಒಳ್ಳೆಯ ಆರೋಗ್ಯ ಬೇಕು ದೈಹಿಕ ಚಟುವಟಿಕೆಗಳು ಮಾಡಿ ಆರೋಗ್ಯವಂತರಾಗಿ ಆರೋಗ್ಯಯುತ ನಾಡನ್ನು ಕಟ್ಟುವ ಕೆಲಸದಲ್ಲಿ ಇಂದಿನ ಯುವಕರು ತಮ್ಮನ್ನು ತೊಡಗಿಸಿಕೊಳ್ಳಬೇಕು,. ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿ ನಿಮ್ಮ ಪಾಲಕರ ಗೌರವವನ್ನು ಹೆಚ್ಚಿಸಿಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಬಸವರಾಜ ಹೊಂಡದಕಟ್ಟಿ ಮಾತನಾಡಿ ಇಂದು ಸ್ಪರ್ಧೆ ಪ್ರತಿ ಕ್ಷೇತ್ರದಲ್ಲೂ ಇದೆ ಅದನ್ನು ಪ್ರಾಮಾಣಿಕವಾಗಿ ಎದುರಿಸಿ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ಆರ್ ಡಿ ಹಂಜಿ ಮಾತನಾಡಿ ಕಲಿಯುವ ಅವಕಾಶ ಸಿಕ್ಕಾಗ ಸರಿಯಾಗಿ ಉಪಯೋಗಿಸಿಕೊಂಡು ನಿಮ್ಮಲ್ಲಿ ಇರುವ ಪ್ರತಿಭೆಯನ್ನು ತೋರಿಸಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀ ವಿಜಯ ಕಲ್ಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಜೀವನದಲ್ಲಿ ಗುರಿ ಬಹು ಮುಖ್ಯ ಅದನ್ನು ಸಾಧಿಸುವಲ್ಲಿ ನಾವೆಂದೂ ಹಿಂಜರಿಯಬಾರದು ವಿದ್ಯೆಯ ಜೊತೆಗೆ ವಿನಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಕಳೆದ ಶೈಕ್ಷಣಿಕ ವಷ೯ದ ವಾಷಿ೯ಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಖಾನಾಪೂರ ತಾಲೂಕಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಬಂದ ಕುಮಾರಿ ಲಕ್ಷ್ಮಿ ಪಾಟೀಲ ಹಾಗೂ ಮಹಾವಿದ್ಮಾಲಯಕ್ಕೆ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಈ ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಸಿ ಎಸ್ ಕೊಡೋಳ್ಳಿ ಶ್ರೀಮತಿ ಜಯಶ್ರೀ ಹೊಸಮನಿ. ಶ್ರೀ ಸಂತೋಷ್ ಹಂಜಿ ಹಾಗೂ ಪತ್ರಕರ್ತ ಶ್ರೀ ಅಲ್ತಾಫ್ ಬಸರೀಕಟ್ಟಿ , ಶ್ರೀ ದಿನಕರ ಮರಗಾಳೆ ವಿದ್ಯಾರ್ಥಿಗಳ ಪಾಲಕರು
ಹಾಗೂ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
