
हिरेहट्टीहोळी गावातील जीना मंदिर व गाडीकोप्प तळ्यातील गाळ काढण्यासाठी श्री क्षेत्र धर्मस्थळ कडून आर्थिक सहाय्य.
खानापूर ; खानापुर तालुक्यातील गाडीकोप्प गावात, “दोड्ड केरे विकास समिती” आणि ग्रामपंचायत हिरेहट्टीहोळी यांच्या संयुक्त विद्यमाने श्री क्षेत्र धर्मस्थळ ग्रामीण विकास योजनेच्या आर्थिक सहाय्याने गाडीकोप्प गावातील “दोड्ड केरे” मोठ्या तळ्यातील गाळ काढून पुनरुज्जीवन करण्यासाठी आणि हिरेहट्टीहोळी गावातील जीना मंदिराच्या सामुदायिक सभागृहाच्या बांधकामासाठी श्री क्षेत्र मंजुनाथ धर्मस्थळाने मंजूर केलेल्या रक्कमेचा धनादेश वितरण कार्यक्रम हस्तांतरित करण्यासाठी एक कार्यक्रम आयोजित करण्यात आला होता.
श्री क्षेत्र धर्मस्थळ ग्रामीण विकास प्रकल्पाच्या प्रादेशिक संचालिका श्रीमती दयाशील यांनी तलावाच्या नामफलकाचे अनावरण करून, तलावाला बगीना अर्पण करून, दीपप्रज्वलन करून कार्यक्रमाचे उद्घाटन केले. धर्मस्थळ ग्रामीण विकास प्रकल्पामार्फत तलावातील गाळ काढणे, मंदिराचे नूतनीकरण, स्मशानभूमी विकास कार्यक्रम, शाळांसाठी शिक्षकांची तरतूद, मुलांसाठी सुग्ननिधी शिष्यवृत्ती, महिलांसाठी स्वयंरोजगार प्रशिक्षण इत्यादी अनेक प्रगतीशील कामांची माहिती त्यांनी दिली. कार्यक्रमाचे प्रमुख पाहुणे डीसीसी बँकेचे संचालक आणि माजी आमदार अरविंद पाटील होते, यावेळी त्यांच्या हस्ते धनादेश वाटप करण्यात आला. धर्मस्थळ प्रकल्पातून गाडीकोप्प गावातील जिना मंदिराच्या नूतनीकरणासाठी 2 लाख रुपये मंजूर करण्यात आले असून, ग्राम विकास प्रकल्पाचा लाभ घेण्याची विनंती लोकांना यावेळी करण्यात आली. कार्यक्रमाला श्री रुद्र स्वामी मठ बिळकी अवरोळी मठाचे स्वामीजी चन्नबसव देवरू यांची दिव्य उपस्थिती होती. कार्यक्रमाच्या अध्यक्षस्थानी ग्रामपंचायत अध्यक्ष श्रीधर लवागी होते.
कार्यक्रमाला प्रमुख पाहुणे म्हणून प्रमोद कोचेरी उद्योजक खानापू, मल्लिकार्जुन वाली जिल्हा जनजागृती वेदिकेचे सदस्य, सतीश नाईक जिल्हा संचालक, भरतेश कल्लाप्पा जोला, राजकुमार कंची, बसवराज राजन्नावर, देवेंद्र जोला, पी.एस.गडद, प्रकल्प अधिकारी गणपती नाईक, केरे अभियंता निंगराज, पर्यवेक्षक युनियनचे अध्यक्ष ए.एल. यदुकानंद, पर्यवेक्षक लक्ष्मीकांत पाटील आदी उपस्थित होते. हट्टीहोळी, सेवा प्रतिनिधी गिरीजा तलवार, राजश्री नवलूर, सुजाता कडेमनी, व्हीएलई भरतेश कांची व समिती सदस्य देवेंद्र तलवार, पिंटू जोला, भरतेश जक्कनवर, जिनेंद्र हट्टीहोळी, देवराज हट्टीहोळी उपस्थित होते.
ಹಿರೇಹಟ್ಟಿಹೊಳಿ ಗ್ರಾಮದ ಜಿನಾ ದೇವಸ್ಥಾನ ಮತ್ತು ಗಾಡಿಕೊಪ್ಪ ಕೆರೆಯ ಹೂಳು ತೆಗೆಯಲು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆರ್ಥಿಕ ನೆರವು.
ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಾಯದೊಂದಿಗೆ ದೊಡ್ಡಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಹಿರೆಹಟ್ಟಿಹೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಗಾಡಿಕೊಪ್ಪ ಗ್ರಾಮದ ದೊಡ್ಡಕೆರೆಯ ಹೂಳೆತ್ತಿ ಪುನಶ್ಚೇತನ ಗೊಳಿಸಲಾದ ಕೆರೆ ಹಸ್ತಾಂತರ ಕಾರ್ಯಕ್ರಮ ಮತ್ತು ಹಿರೇಹಟ್ಟಿಹೊಳಿ ಗ್ರಾಮದ ಜಿನಾ ಮಂದಿರದ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾತಿಯಾದ ಧನ (ಡಿ ಡಿ) ವಿತರಣಾ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ರವರು ಕೆರೆಯ ನಾಮಪಲಕ ಅನಾವರಣಗೊಳಿಸಿ ಕೆರೆಗೆ ಬಾಗಿನ ಅರ್ಪಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹತ್ತು ಹಲವಾರು ಪ್ರಗತಿಪರ ಕಾರ್ಯಗಳ ನಡೆಯುತ್ತಿದ್ದು ಕೆರೆ ಹೂಳೆತ್ತುವುದು, ದೇವಸ್ಥಾನ ಜೀರ್ಣೋದ್ಧಾರ, ಸ್ಮಶಾನ ಅಭಿವೃದ್ಧಿ ಕಾರ್ಯಕ್ರಮ, ಶಾಲೆಗಳಿಗೆ ಶಿಕ್ಷಕರ ವ್ಯವಸ್ಥೆ, ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ ಓದಗಣೆ, ಮಹಿಳೆಯರಿಗೆ ಸ್ವಉದ್ಯೋಗ ತರಬೇತಿಗಳು, ಮುಂತಾದ ವ್ಯವಸ್ಥೆಗಳನ್ನು ನೀಡುತ್ತಿರುವ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರು ಮಾಜಿ ಶಾಸಕರು ಆಗಿರುವ ಅರವಿಂದ್ ಪಾಟೀಲ್ ರವರು ಧರ್ಮಸ್ಥಳ ಯೋಜನೆಯಿಂದ ಗಾಡಿಕೊಪ್ಪ ಗ್ರಾಮದ ಜಿನಾಮಂದಿರದ ಜೀರ್ಣೋದ್ಧಾರಕ್ಕಾಗಿ ಮಂಜೂರಾತಿಯಾಗಿರುವ 2 ಲಕ್ಷ ರೂಗಳ ಚೆಕ್ ವಿತರಣೆ ಮಾಡಿದರು ಹಾಗೂ ಗ್ರಾಮ ಅಭಿವೃದ್ಧಿ ಯೋಜನೆಯಿಂದ ಅನೇಕ ಒಳ್ಳೆಯ ಕೆಲಸಗಳು ನಡೆಯುತ್ತಿದ್ದು ಜನರು ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು ಹಾಗೂ ಈ ಕಾರ್ಯಕ್ರಮದಲ್ಲಿ ಧಿವ್ಯ ಸಾನಿಧ್ಯವನ್ನು ಶ್ರೀ ರುದ್ರ ಸ್ವಾಮಿಗಳ ಮಠ ಬಿಳಕಿ ಅವರೊಳ್ಳಿ ಮಠದ ಸ್ವಾಮೀಜಿಗಳಾದ ಚನ್ನಬಸವ ದೇವರು ದಿವ್ಯ ಸಾನಿಧ್ಯ ವಹಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ಲಾವಾಗಿ ರವರು ವಹಿಸಿಕೊಂಡಿದ್ದರು ಹಾಗೂ
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಮೋದ್ ಕೂಚೇರಿ ಉದ್ಯಮಿಗಳು ಖಾನಾಪುರ, ಮಲ್ಲಿಕಾರ್ಜುನ ವಾಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಸತೀಶ್ ನಾಯ್ಕ್ ಜಿಲ್ಲಾ ನಿರ್ದೇಶಕರು, ಭರತೇಶ್ ಕಲ್ಲಪ್ಪ ಜೋಳದ, ರಾಜಕುಮಾರ್ ಕಂಚಿ ಬಸವರಾಜ್ ರಾಜಣ್ಣವರ್, ದೇವೇಂದ್ರ ಜೋಳದ, ಪಿ ಎಸ್ ಎಸ್ ಘಡಾದ, ಯೋಜನಾಧಿಕಾರಿಗಳಾದ ಗಣಪತಿ ನಾಯ್ಕ್, ಕೆರೆ ಅಭಿಯಂತರರಾದ ನಿಂಗರಾಜ್, ಮೇಲ್ವಿಚಾರಕರಾದ ಯದುನಂದನ್ ಎಲ್, ಕೃಷಿ ಅಧಿಕಾರಿ ಪ್ರಕಾಶ್, ಒಕ್ಕೂಟ ಅಧ್ಯಕ್ಷರಾದ ಸರಸ್ವತಿ ಹಟ್ಟಿಹೊಳಿ, ಸೇವಾ ಪ್ರತಿನಿಧಿಗಳಾದ ಗಿರಿಜಾ ತಳವಾರ್, ರಾಜಶ್ರೀ ನವಲೂರು, ಸುಜಾತ ಕಡೆಮನಿ, vle ಭರತೇಶ್ ಕಂಚಿ ಹಾಗೂ ಸಮಿತಿ ಸದಸ್ಯರಾದ ದೇವೇಂದ್ರ ತಳವಾರ್, ಪಿಂಟು ಜೋಳದ, ಭರತೇಶ ಜಕ್ಕಣ್ಣವರ, ಜಿನೇಂದ್ರ ಹಟ್ಟಿಹೊಳಿ, ದೇವರಾಜ್ ಹಟ್ಟಿಹೊಳಿ ಹಾಜರಿದ್ದರು
