भावाच्या अल्पवयीन मुलीवर लैंगिक अत्याचार; आरोपीला 30 वर्षांची शिक्षा.
खानापूर : अल्पवयीन पुत्नीचे अपहरण करून तिच्यावर लैंगिक अत्याचार केल्याप्रकरणी आरोपीस विशेष पोक्सो न्यायालयाने 30 वर्षांच्या सक्तमजुरीची शिक्षा आणि 1 लाख रुपयांचा दंड ठोठावला आहे.
याबाबत मिळालेल्या माहितीनुसार, संजय विठ्ठल बैलूर (वय 36, रा. डोरी, ता. अळ्नावर, जि. धारवाड) याने स्वतःच्या मोठ्या भावाची मुलगी अल्पवयीन असल्याचे माहीत असूनही 2025 मध्ये तिचे अपहरण करून लैंगिक अत्याचार केला होता. या घटनेप्रकरणी खानापूर पोलिस ठाण्यात पोक्सो कायद्यान्वये गुन्हा दाखल करण्यात आला होता.

या प्रकरणाचा तपास पीएसआय एम. बी. बिरादार व पीआय एल. एच. गौंडी यांनी केला. त्यांना तपासात सहाय्यक म्हणून सीपीसी-3703 मंजुनाथ मुसळी यांनी मदत केली. तपास पूर्ण करून दोषारोपपत्र न्यायालयात दाखल करण्यात आले. तसेच कोर्ट कामकाजासाठी सीपीसी-3573 प्रविण होंडद यांनी कर्तव्य बजावले.
सदर प्रकरणाची सुनावणी बेळगाव येथील विशेष पोक्सो न्यायालयात अवघ्या एक वर्षात पूर्ण झाली. सुनावणीदरम्यान आरोपीने गुन्हा केल्याचे सिद्ध झाल्याने न्यायाधीश श्रीमती सी. एम. पुष्पलता यांनी आरोपीस 30 वर्षांची शिक्षा व 1 लाख रुपयांचा दंड अशी शिक्षा सुनावली.
या प्रकरणात सरकारी अभियोक्ता एल. व्ही. पाटील यांनी सरकारतर्फे प्रभावी युक्तिवाद मांडला.
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 30 ವರ್ಷದ ಶಿಕ್ಷೆ
ಖಾನಾಪುರ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ ವಿಶೇಷ ಪಾಕ್ಸೋ ನ್ಯಾಯಾಲಯವು 30 ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ಕುರಿತು ಲಭಿಸಿದ ಮಾಹಿತಿಯ ಪ್ರಕಾರ, ಸಂಜಯ ವಿಠ್ಠಲ ಬೈಲೂರ (ವಯಸ್ಸು 36, ಸಾ. ಡೋರಿ, ತಾ. ಅಳ್ನಾವರ, ಜಿ. ಧಾರವಾಡ) ಇವರು ತನ್ನ ದೊಡ್ಡಣ್ಣನ ಮಗಳು ಅಪ್ರಾಪ್ತೆ ಎಂಬುದು ತಿಳಿದಿದ್ದರೂ ಸಹ 2025ರಲ್ಲಿ ಆಕೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಘಟನೆ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪಾಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ತನಿಖೆಯನ್ನು ಪಿಎಸ್ಐ ಎಂ. ಬಿ. ಬಿರಾದಾರ ಹಾಗೂ ಪಿಐ ಎಲ್. ಎಚ್. ಗೌಂಡಿ ಅವರು ನಡೆಸಿದರು. ಅವರಿಗೆ ತನಿಖೆಯಲ್ಲಿ ಸಹಾಯಕರಾಗಿ ಸಿಪಿಸಿ-3703 ಮಂಜುನಾಥ ಮುಸಳಿ ಸಹಕರಿಸಿದರು. ತನಿಖೆ ಪೂರ್ಣಗೊಳಿಸಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಹಾಗೆಯೇ ನ್ಯಾಯಾಲಯದ ಕಾರ್ಯಚರಣೆಗೆ ಸಿಪಿಸಿ-3573 ಪ್ರವೀಣ ಹೊಂಡದ ಅವರು ಕರ್ತವ್ಯ ನಿರ್ವಹಿಸಿದರು.
ಈ ಪ್ರಕರಣದ ವಿಚಾರಣೆ ಬೆಳಗಾವಿಯ ವಿಶೇಷ ಪಾಕ್ಸೋ ನ್ಯಾಯಾಲಯದಲ್ಲಿ ಕೇವಲ ಒಂದು ವರ್ಷದೊಳಗೆ ಪೂರ್ಣಗೊಂಡಿತು. ವಿಚಾರಣೆ ವೇಳೆ ಆರೋಪಿಯು ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಶ್ರೀಮತಿ ಸಿ. ಎಂ. ಪುಷ್ಪಲತಾ ಅವರು ಆರೋಪಿಗೆ 30 ವರ್ಷದ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು.
ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಅವರು ಸರ್ಕಾರದ ಪರವಾಗಿ ಪರಿಣಾಮಕಾರಿ ವಾದ ಮಂಡಿಸಿದರು.



