बेळगाव टूर प्लॅन: वायव्य कर्नाटक रोड ट्रान्सपोर्ट कॉर्पोरेशनच्या बेळगावी विभागाकडून एकूण 9 विशेष टूर पॅकेजेसची सोय करण्यात आली आहे. या स्पेशल टूरमध्ये धबधबे, धार्मिक स्थळे, प्रेक्षणीय स्थळे, शहर भ्रमण, व प्रेक्षणीय स्थळे यांचा समावेश आहे.
बेळगाव : पावसाळा सुरू होताच बेळगाव जिल्ह्याच्या आसपासच्या प्रेक्षणीय स्थळांनी लोकांना आकर्षित केले आहे. काही लोकांना जीवनाच्या व्यस्ततेत वेळ नसतो. जरी तुम्हाला ब्रेक मिळाला तरी तुम्ही सर्व काही पाहू शकत नाही. अशा वेळी पर्यटकांच्या सोयीसाठी वायव्य कर्नाटक मार्ग परिवहन महामंडळाने विशेष बसची सोय केली आहे.
एक दिवसाचा प्रवास..
उत्तर-पश्चिम कर्नाटक मार्ग परिवहन महामंडळाच्या बेळगाव विभागाकडून एकूण 9 विशेष टूर पॅकेजेस प्रदान करण्यात आली आहेत. या स्पेशल टूरमध्ये धबधबे, धार्मिक स्थळे, प्रेक्षणीय स्थळे, शहर भ्रमण, प्रेक्षणीय स्थळे यांचा समावेश आहे. सर्व काही एक दिवसाची सहल आहे. आणि प्रत्येक गोष्टीची खास किंमत आहे. राज्य सरकारच्या शक्ती योजनेचा या टूर पॅकेजमध्ये समावेश नाही.
मागणी वाढली..
यापूर्वी सुरू करण्यात आलेल्या एकदिवसीय विशेष बसेसला लोकांचा चांगला प्रतिसाद पाहता हे विशेष पॅकेज इतर ठिकाणी वाढविण्याची मागणी करण्यात आली होती. अशाप्रकारे, वायव्य कर्नाटक मार्ग परिवहन महामंडळाच्या बेळगाव विभागामार्फत बेळगाव शहर केंद्रस्थानी ठेवून एकूण 9 विशेष टूर उपलब्ध करून देण्यात आल्या आहेत. प्रत्येक रविवार, दुसरा आणि चौथा शनिवार आणि सार्वजनिक सुट्टीच्या दिवशी विशेष बस सेवा उपलब्ध आहे.
पॅकेज क्रमांक-1
बेळगाव परिवहन विभागाने निश्चित केलेल्या पॅकेज क्रमांक-1 मध्ये बेळगाव जिल्ह्यातील धबधबे पाहण्याची सोय करण्यात आली आहे, ज्यामध्ये हिडकल धरण, गोदाचिनामल्की धबधबा आणि गोकाक धबधबा पाहता येतो. एक्स्प्रेस बस बेळगावहून सकाळी 9 वाजता सुटते आणि संध्याकाळी 6 वाजता बेळगावला परत येईल. प्रौढांसाठी 190. आणि मुलांसाठी 100 रु. नियोजित आहे.
पॅकेज क्रमांक-2
या पॅकेजमध्ये बेळगाव जिल्ह्याच्या सीमेला लागून असलेल्या महाराष्ट्र राज्यातील नगरटास आणि आंबोली धबधबे पाहण्याची सुविधा देण्यात आली आहे. एक्स्प्रेस बस बेळगावहून सकाळी 9 वाजता सुटते आणि संध्याकाळी 6 वाजता बेळगावला परत येईल. प्रौढांसाठी 290. आणि मुलांसाठी 150 रु. नियोजित आहे.
पॅकेज क्रमांक-3
पॅकेज क्रमांक 3 मध्ये, तुम्ही कोल्हापुरातील महालक्ष्मी मंदिर आणि क्षेत्र कान्हेरी मठाला भेट देऊ शकता जे महाराष्ट्रातील एक प्रसिद्ध ठिकाण आहे. व्होल्वो एसी बस बेळगाव मध्यवर्ती बसस्थानकावरून सकाळी 8 वाजता सुटेल आणि महालक्ष्मी देवस्थान व क्षेत्र कान्हेरी मठाचे दर्शन घेतल्यानंतर सायंकाळी 7.30 वाजता बेळगावला परतेल. प्रौढांसाठी 600. रू आणि मुलांसाठी 450 रु. नियोजित तिकीट दर आहे.
पॅकेज क्रमांक-4
एक्स्प्रेस बस बेळगाव मध्यवर्ती बसस्थानकातून सकाळी 7.30 वाजता सुटते. कक्करी बिष्टदेवी मंदिर, दांडेली क्रोकोडाईल पार्क, मौलंगी पार्क, कुलगी नेचर पार्कला भेट दिल्यानंतर सायंकाळी 7.45 वाजता बेळगावला परतेल. प्रौढांसाठी 360. आणि मुलांसाठी 180 रु. नियोजित आहे.
पॅकेज क्रमांक-5
एक्स्प्रेस बस बेळगाव मध्यवर्ती बसस्थानकातून सकाळी 7.45 वाजता सुटेल. राजहंसगड, लष्करी महादेव मंदिर, प्राणीसंग्रहालय, रेवण सिद्धेश्वर मंदिर, हुंचेवरी मठ, अलौकिक ध्यान मंदिर या शहराच्या सहलीत पाहता येणार आहे. सायंकाळी 5.15 ला पुन्हा बेळगावला पोहोचेल. प्रौढांसाठी 150. आणि मुलांसाठी 90 रु. तिकीट दर नियोजित केले आहेत.
पॅकेज क्रमांक-6
या विशेष पॅकेजमध्ये धार्मिक आणि प्रेक्षणीय स्थळे पाहता येतील. एक्स्प्रेस बस बेळगाव स्थानकातून सकाळी 7.45 वाजता सुटते. गंगांबिका आयका प्लेस, एमके हुब्बळ्ळी अश्वत्थ लक्ष्मीनारायण स्वामी मंदिर, कित्तूर राणी चन्नम्मा किल्ला, सोगल सोमेश्वर मंदिर आणि मुनोवल्ली नविलतीर्थ धरण फिरून 7.15 वाजता परत बेळगावला येईल. प्रौढांसाठी 350. आणि मुलांसाठी 180 रु. तिकीट दर नियोजित केले आहेत.
पॅकेज क्रमांक-7
या विशेष पॅकेजमध्ये तुम्ही धार्मिक आणि पर्यटन स्थळांना भेट देऊ शकता. एक्स्प्रेस बस बेळगावहून सकाळी 7.45 वाजता सुटते. बेळगावातील राजहंसगड, बेळगुंदी येथील सिद्धेश्वर स्वामी विश्राम आश्रम, राकसकोप्प जलाशय, धामणे धबधबा, निसर्ग शिबिर आणि महिपाळगड येथील वैजनाथ मंदिराला भेट दिल्यानंतर सायंकाळी 5.30 वाजता बेळगावकडे वापस येणार. प्रौढांसाठी 200 रू आणि मुलांसाठी 100 रु. तिकीट दर नियोजित केले आहेत.
पॅकेज क्रमांक-8
या विशेष पॅकेजमध्ये चालुक्य काळातील राजधानी बदामीला भेट देता येईल. एक्स्प्रेस बस बेळगावहून सकाळी ८ वाजता सुटते. गोदाची वीरभद्रेश्वर मंदिर, बदामीची मेना बासाडी, गुहा मंदिरे, बनशंकरी मंदिर आणि शिवयोग मंदिर येथे दर्शन घेतल्यानंतर सायंकाळी 5.15 वाजता परत बेळगावकडे प्रयाण. प्रौढांसाठी 270 रू आणि मुलांसाठी 140 रु. तिकीट दर नियोजित केले आहेत.
पॅकेज क्रमांक-9
या पॅकेजमध्ये तुम्ही धार्मिक आणि पर्यटन स्थळांना भेट देऊ शकता. एक्स्प्रेस बस बेळगावहून सकाळी 7.45 वाजता सुटेल. बेळगावचा राजहंसगड, असोगा नदीचा किनारा, नंदगड संगोळी रायाण्णाची समाधी, हालसी भू वराह लक्ष्मी नरसिंह मंदिर आणि कक्केरी बिष्टवा देवी मंदिराला भेट दिली जाते. सायंकाळी 5.15 वाजता बेळगावला परत येईल. प्रौढांसाठी 230. रु आणि मुलांसाठी 120 रु. तिकीट दर नियोजित केले आहेत. अधिक माहितीसाठी संस्थेच्या 7760991631 किंवा 9945536685 या भ्रमणध्वनी क्रमांकावर संपर्क साधावा, असे संस्थेच्या पत्रकात म्हटले आहे.
Belagavi Tour Plan: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಿಂದ ಒಟ್ಟು 9 ವಿಶೇಷ ಟೂರ್ ಪ್ಯಾಕೇಜ್ಗಳ ಸೌಲಭ್ಯ ಕಲ್ಪಿಸಲಾಗಿದೆ. ಈ ವಿಶೇಷ ಟೂರ್ನಲ್ಲಿ ಜಲಪಾತಗಳು, ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು, ನಗರ ಪ್ರವಾಸ, ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದೆ.
ಬೆಳಗಾವಿ: ಮಳೆಗಾಲ ಆರಂಭಗೊಳ್ಳುತ್ತಿದಂತೆ ಬೆಳಗಾವಿ ಜಿಲ್ಲೆಯ ಸುತ್ತಮುತ್ತಲಿನ ಪ್ರವಾಸಿ ತಾಣಗಳು ಜನರನ್ನು ಆಕರ್ಷಿಸುತ್ತವೆ. ಬದುಕಿನ ಜಂಜಾಟದಲ್ಲಿ ಕೆಲವರಿಗೆ ಸಮಯವೇ ಸಿಗುವುದಿಲ್ಲ. ಒಂದು ಬಿಡುವು ಸಿಕ್ಕರೂ ಎಲ್ಲವೂ ಅಂದೇ ನೋಡಲು ಆಗಲ್ಲ. ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.
ಒಂದು ದಿನದ ಪ್ರವಾಸ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಿಂದ ಒಟ್ಟು 9 ವಿಶೇಷ ಟೂರ್ ಪ್ಯಾಕೇಜ್ಗಳ ಸೌಲಭ್ಯ ಕಲ್ಪಿಸಲಾಗಿದೆ. ಈ ವಿಶೇಷ ಟೂರ್ನಲ್ಲಿ ಜಲಪಾತಗಳು, ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು, ನಗರ ಪ್ರವಾಸ, ಪ್ರೇಕ್ಷಣೀಯ ಸ್ಥಳಗಳು ಒಳಗೊಂಡಿವೆ. ಎಲ್ಲವೂ ಒಂದು ದಿನದ ಪ್ರವಾಸವಾಗಿದ್ದು, ಎಲ್ಲದಕ್ಕೂ ವಿಶೇಷ ದರ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಈ ಟೂರ್ ಪ್ಯಾಕೇಜ್ಗೆ ಒಳಪಡುವುದಿಲ್ಲ.
ಹೆಚ್ಚಿದ ಬೇಡಿಕೆ
ಈ ಮೊದಲು ಆರಂಭಿಸಿದ ಒಂದು ದಿನದ ವಿಶೇಷ ಬಸ್ಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೇರೆ ಸ್ಥಳಗಳಿಗೂ ವಿಶೇಷ ಪ್ಯಾಕೇಜ್ ವಿಸ್ತರಿಸುವಂತೆ ಬೇಡಿಕೆ ಬಂದಿತ್ತು. ಹೀಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಿಂದ ಬೆಳಗಾವಿ ನಗರವನ್ನು ಕೇಂದ್ರವಾಗಿಸಿ ಒಟ್ಟು 9 ವಿಶೇಷ ಟೂರ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ರವಿವಾರ, 2ನೇ ಮತ್ತು 4ನೇ ಶನಿವಾರ ಹಾಗೂ ಸಾರ್ವಜನಿಕ ರಜೆ ದಿನಗಳಂದು ವಿಶೇಷ ಬಸ್ ಸೌಲಭ್ಯ ಲಭ್ಯವಿದೆ.
ಪ್ಯಾಕೇಜ್ ನಂಬರ್-1
ಬೆಳಗಾವಿ ಸಾರಿಗೆ ವಿಭಾಗದಿಂದ ನಿಗದಪಡಿಸಿರುವ ಪ್ಯಾಕೇಜ್ ನಂ-1ರಲ್ಲಿ ಬೆಳಗಾವಿ ಜಿಲ್ಲೆಯ ಜಲಪಾತಗಳನ್ನು ವೀಕ್ಷಿಸಿಸಲು ಅನುಕೂಲ ಮಾಡಲಾಗಿದ್ದು, ಇದರಲ್ಲಿ ಹಿಡಕಲ್ ಡ್ಯಾಂ, ಗೊಡಚಿನಮಲ್ಕಿ ಜಲಪಾತ ಹಾಗೂ ಗೋಕಾಕ್ ಜಲಪಾತ ವೀಕ್ಷಿಸಬಹುದಾಗಿದೆ. ಬೆಳಗಾವಿಯಿಂದ ಬೆಳಗ್ಗೆ 9 ಗಂಟೆಗೆ ಬೀಡುವ ವೇಗದೂತ ಬಸ್ ಸಂಜೆ 6 ಗಂಟೆ ಮರಳಿ ಬೆಳಗಾವಿ ನಗರ ತಲುಪಲಿದೆ. ವಯಸ್ಕರರಿಗೆ 190 ರೂ. ಹಾಗೂ ಮಕ್ಕಳಿಗೆ 100 ರೂ. ನಿಗದಿಪಡಿಸಲಾಗಿದೆ.ನಂಬರ್-
ಪ್ಯಾಕೇಜ್ ನಂಬರ್-2
ಬೆಳಗಾವಿ ಜಿಲ್ಲೆಯ ಗಡಿಭಾಗದ ಮಹಾರಾಷ್ಟ್ರ ರಾಜ್ಯದಲ್ಲಿ ನಗರತಾಸ ಹಾಗೂ ಅಂಬೋಲಿ ಜಲಪಾತ ವೀಕ್ಷಣೆಗೆ ಈ ಪ್ಯಾಕೇಜ್ ಅನುಕೂಲ ಕಲ್ಪಿಸಿದೆ. ಬೆಳಗಾವಿಯಿಂದ ಬೆಳಗ್ಗೆ 9 ಗಂಟೆಗೆ ಬೀಡುವ ವೇಗದೂತ ಬಸ್ ಸಂಜೆ 6 ಗಂಟೆ ಮರಳಿ ಬೆಳಗಾವಿ ನಗರ ತಲುಪಲಿದೆ. ವಯಸ್ಕರರಿಗೆ 290 ರೂ. ಹಾಗೂ ಮಕ್ಕಳಿಗೆ 150 ರೂ. ನಿಗದಿಪಡಿಸಲಾಗಿದೆ.
ಪ್ಯಾಕೇಜ್ ನಂಬರ್-3
ಪ್ಯಾಕೇಜ್ ನಂಬರ್ 3ರಲ್ಲಿ ಮಹಾರಾಷ್ಟ್ರದ ಸುಪ್ರಸಿದ್ಧ ಸುಕ್ಷೇತ್ರವಾದ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನ ಹಾಗೂ ಹಾಗೂ ಕ್ಷೇತ್ರ ಕನ್ಹೇರಿ ಮಠದ ದರ್ಶನ ಪಡೆಯಬಹುದಾಗಿದೆ. ವೋಲ್ವೋ ಎಸಿ ಬಸ್ ಬೆಳಗ್ಗೆ 8ಕ್ಕೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು ಮಹಾಲಕ್ಷ್ಮಿದೇವಸ್ಥಾನ ಹಾಗೂ ಕ್ಷೇತ್ರ ಕನ್ಹೇರಿ ಮಠದ ದರ್ಶನ ಪಡೆದ ನಂತರ ಸಂಜೆ 7.30ಕ್ಕೆ ಬೆಳಗಾವಿಗೆ ಹಿಂದಿರುಗುತ್ತದೆ. ವಯಸ್ಕರರಿಗೆ 600 ರೂ. ಹಾಗೂ ಮಕ್ಕಳಿಗೆ 450 ರೂ. ನಿಗದಿಪಡಿಸಲಾಗಿದೆ.
ಪ್ಯಾಕೇಜ್ ನಂಬರ್-4
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ವೇಗದೂತ ಬಸ್ ಬೆಳಗ್ಗೆ 7.30ಕ್ಕೆ ಹೊರಡುತ್ತದೆ. ಕಕ್ಕೇರಿ ಬಿಷ್ಟಾದೇವಿ ದೇವಸ್ಥಾನ, ದಾಂಡೇಲಿ ಮೊಸಳೆ ಪಾರ್ಕ್, ಮೌಳಂಗಿ ಪಾರ್ಕ್, ಕೂಳಗಿ ನೇಚರ್ ಪಾರ್ಕ್ ವೀಕ್ಷಣೆ ಮುಗಿಸಿಕೊಂಡು ಸಂಜೆ 7.45 ಕ್ಕೆ ಬೆಳಗಾವಿಗೆ ಮರಳಲಿದೆ. ವಯಸ್ಕರರಿಗೆ 360 ರೂ. ಹಾಗೂ ಮಕ್ಕಳಿಗೆ 180 ರೂ. ನಿಗದಿಪಡಿಸಲಾಗಿದೆ.
ಪ್ಯಾಕೇಜ್ ನಂಬರ್-5
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ವೇಗದೂತ ಬಸ್ ಬೆಳಗ್ಗೆ 7.45ಕ್ಕೆ ಹೊರಡಲಿದೆ. ಈ ನಗರದ ಪ್ರವಾಸದಲ್ಲಿ ರಾಜಹಂಸಗಡ, ಮಿಲಿಟರಿ ಮಹಾದೇವ ದೇವಸ್ಥಾನ, ಮೃಗಾಲಯ, ರೇವಣ ಸಿದ್ದೇಶ್ವರ ಮಂದಿರ, ಹುಂಚೆವಾರಿ ಮಠ, ಅಲೌಖಿಕ ಧ್ಯಾನ ಮಂದಿರ ನೋಡಬಹುದಾಗಿದೆ. ಮರಳಿ ಸಂಜೆ 5.15ಕ್ಕೆಬೆಳಗಾವಿ ತಲುಪಿದೆ. ವಯಸ್ಕರರಿಗೆ 150 ರೂ. ಹಾಗೂ ಮಕ್ಕಳಿಗೆ 90 ರೂ. ನಿಗದಿಪಡಿಸಲಾಗಿದೆ.
ಪ್ಯಾಕೇಜ್ ನಂಬರ್-6
ಈ ವಿಶೇಷ ಪ್ಯಾಕೇಜಿನಲ್ಲಿ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದಾಗಿದೆ. ಬೆಳಗಾವಿ ಕ್ಷೇಂದ್ರ ನಿಲ್ದಾಣದಿಂದ ವೇಗದೂತ ಬಸ್ ಬೆಳಗ್ಗೆ 7.45ಕ್ಕೆ ಹೊರಡುತ್ತದೆ. ಗಂಗಾಂಬಿಕ ಐಕ್ಯ ಸ್ಥಳ, ಎಂಕೆ ಹುಬ್ಬಳ್ಳಿಯ ಅಶ್ವತ್ಥ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ, ಕಿತ್ತೂರು ರಾಣಿ ಚೆನ್ನಮ್ಮನ ಕೋಟೆ, ಸೊಗಲ ಸೋಮೇಶ್ವರ ದೇವಸ್ಥಾನ ಹಾಗೂ ಮುನವಳ್ಳಿ ನವಿಲುತೀರ್ಥ ಡ್ಯಾಂ ವೀಕ್ಷಣೆ ಮುಗಿಸಿಕೊಂಡು ಸಂಜೆ 7.15ಕ್ಕೆ ಮರಳಲಿದೆ. ವಯಸ್ಕರರಿಗೆ 350 ರೂ. ಹಾಗೂ ಮಕ್ಕಳಿಗೆ 180 ರೂ. ನಿಗದಿಪಡಿಸಲಾಗಿದೆ.
ಪ್ಯಾಕೇಜ್ ನಂಬರ್-7
ಈ ವಿಶೇಷ ಪ್ಯಾಕೇಜಿನಲ್ಲಿ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ಕೊಡಬಹುದಾಗಿದೆ. ಬೆಳಗಾವಿಯಿಂದ ವೇಗದೂತ ಬಸ್ ಬೆಳಗ್ಗೆ 7.45ಕ್ಕೆ ಹೊರಡುತ್ತದೆ. ಬೆಳಗಾವಿಯ ರಾಜಹಂಸಘಡ, ಬೆಳಗುಂದಿಯ ಸಿದ್ದೇಶ್ವರ ಸ್ವಾಮಿ ವಿಶ್ರಾಂತ ಆಶ್ರಮ, ರಕ್ಕಸಕೊಪ್ಪ ಜಲಾಶಯ, ಧಾಮಣಿ ಫಾಲ್ಸ್, ನೇಚರ್ ಕ್ಯಾಂಪ್ ಹಾಗೂ ಮಹಿಪಾಲಘಡದ ವೈಜನಾಥ ದೇವಸ್ಥಾನ ವೀಕ್ಷಣೆ ಬಳಿಕ ಸಂಜೆ 5.30ಕ್ಕೆ ಬೆಳಗಾವಿಗೆ ಮರಳುತ್ತದೆ. ವಯಸ್ಕರರಿಗೆ 200 ರೂ. ಹಾಗೂ ಮಕ್ಕಳಿಗೆ 100 ರೂ. ನಿಗದಿಪಡಿಸಲಾಗಿದೆ.
ಪ್ಯಾಕೇಜ್ ನಂಬರ್-8
ಈ ವಿಶೇಷ ಪ್ಯಾಕೇಜಿನಲ್ಲಿ ಚಾಲುಕ್ಯರ ಕಾಲದ ರಾಜಧಾನಿ ಬದಾಮಿ ವೀಕ್ಷಿಸಬಹದು. ಬೆಳಗಾವಿಯಿಂದ ವೇಗದೂತ ಬಸ್ ಬೆಳಗ್ಗೆ 8ಕ್ಕೆ ಹೊರಡುತ್ತದೆ. ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ಬದಾಮಿಯ ಮೇಣ ಬಸದಿ, ಗುಹಾಂತರ ದೇವಾಲಯಗಳು, ಬನಶಂಕರಿ ದೇವಸ್ಥಾನ ಹಾಗೂ ಶಿವಯೋಗ ಮಂದಿರ ವೀಕ್ಷಣೆ ಮುಗಿಸಿಕೊಂಡು ಸಂಜೆ 5.15ಕ್ಕೆ ಮರಳಿ ಬೆಳಗಾವಿಗೆ ಹಿಂದಿರುಗುತ್ತದೆ. ವಯಸ್ಕರರಿಗೆ 270 ರೂ. ಹಾಗೂ ಮಕ್ಕಳಿಗೆ 140 ರೂ. ನಿಗದಿಪಡಿಸಲಾಗಿದೆ.
ಪ್ಯಾಕೇಜ್ ನಂಬರ್-9
ಈ ಪ್ಯಾಕೇಜಿನಲ್ಲಿ ಧಾರ್ಮಿಕ ಹಾಗೂ ಪ್ರವಾಸಿತಾಣಗಳಿಗೆ ಭೇಟಿ ಕೊಡಬಹುದಾಗಿದೆ. ಬೆಳಗಾವಿಯಿಂದ ಬೆಳಗ್ಗೆ 7.45ಕ್ಕೆ ವೇಗದೂತ ಬಸ್ ಹೊರಡಲಿದೆ. ಬೆಳಗಾವಿಯ ರಾಜಹಂಸಘಡ, ಅಸೋಗಾ ಹೊಳೆದಂಡೆ, ನಂದಗಡ ಸಂಗೊಳ್ಳಿ ರಾಯಣ್ಣನ ಸಮಾಧಿ, ಹಲಸಿ ಭೂ ವರಹಾ ಲಕ್ಷ್ಮಿ ನರಸಿಂಹ ದೇವಸ್ಥಾನ ಹಾಗೂ ಕಕ್ಕೇರಿ ಬಿಷ್ಟಾದೇವಿ ದೇವಸ್ಥಾನ ವೀಕ್ಷಿಸಲಾಗುತ್ತದೆ. ಸಂಜೆ 5.15ಕ್ಕೆ ಮರಳಿ ಬೆಳಗಾವಿ ತಲುಪಲಿದೆ. ವಯಸ್ಕರರಿಗೆ 230 ರೂ. ಹಾಗೂ ಮಕ್ಕಳಿಗೆ 120 ರೂ. ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 7760991631 ಅಥವಾ 9945536685ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.