संविधानाचे मूल्य आत्मसात करा, जबाबदार नागरिक बना; हलशी हायस्कूलमध्ये मिलिंद देसाई यांचे विद्यार्थ्यांना आवाहन.
खानापूर : प्रतिनिधी
हलशी येथील शिवाजी विद्यामंदिर हायस्कूलमध्ये भारतीय संविधान दिन उत्साहपूर्ण वातावरणात साजरा करण्यात आला. यानिमित्त विद्यार्थ्यांना भारतीय संविधानाची शपथ देण्यात आली तसेच संविधानातील मूल्ये, मूलभूत अधिकार आणि नागरिकांच्या कर्तव्यांविषयी मार्गदर्शन करण्यात आले.
कार्यक्रमाच्या प्रारंभी मिलिंद देसाई यांच्या हस्ते भारतीय संविधानाच्या प्रतिमेचे पूजन करण्यात आले. यावेळी विद्यार्थ्यांना मार्गदर्शन करताना ते म्हणाले की, भारतीय राज्यघटनेने देशातील प्रत्येक नागरिकाला विविध मूलभूत अधिकार बहाल केले आहेत. हे अधिकार समजून घेण्यासाठी प्रत्येक विद्यार्थ्याने संविधानाचा सखोल अभ्यास करणे आवश्यक आहे.
संविधान लागू झाल्यानंतर सर्वसामान्य नागरिकांना अनेक महत्त्वपूर्ण अधिकार प्राप्त झाले असून, लोकशाही व्यवस्थेला बळकटी मिळाली आहे. त्यामुळे विद्यार्थ्यांनी संविधानाबद्दल अधिकाधिक माहिती जाणून घेऊन लोकशाही मूल्यांची जपणूक करावी, असे आवाहन त्यांनी केले.
संविधानाचे ज्ञान केवळ शालेय जीवनापुरते मर्यादित नसून पुढील शैक्षणिक वाटचालीत, स्पर्धात्मक परीक्षांमध्ये तसेच दैनंदिन जीवनातही त्याचा उपयोग होतो. संविधानातील समता, स्वातंत्र्य, बंधुता आणि न्याय या मूलभूत मूल्यांची जाणीव विद्यार्थ्यांमध्ये निर्माण व्हावी आणि त्यांची जबाबदार नागरिक म्हणून जडणघडण व्हावी, हा संविधान दिन साजरा करण्यामागील मुख्य उद्देश असल्याचे त्यांनी स्पष्ट केले.
कार्यक्रमाचे प्रास्ताविक सहशिक्षिका शामल बेळगावकर यांनी केले, तर एस. जी. दड्डीकर यांनी आभार मानले. विद्यार्थ्यांमध्ये संविधानाविषयी जागरूकता निर्माण करणारा हा कार्यक्रम उत्साहात पार पडला.
ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ; ಹಲಶಿ ಹೈಸ್ಕೂಲ್ನಲ್ಲಿ ಮಿಲಿಂದ್ ದೇಸಾಯಿ ವಿದ್ಯಾರ್ಥಿಗಳಿಗೆ ಕರೆ.
ಖಾನಾಪುರ : ಪ್ರತಿನಿಧಿ
ಹಲಶಿ ಗ್ರಾಮದ ಶಿವಾಜಿ ವಿದ್ಯಾಮಂದಿರ ಹೈಸ್ಕೂಲ್ನಲ್ಲಿ ಭಾರತೀಯ ಸಂವಿಧಾನ ದಿನವನ್ನು ಉತ್ಸಾಹಭರಿತ ವಾತಾವರಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಸಂವಿಧಾನದ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಅಲ್ಲದೆ, ಸಂವಿಧಾನದಲ್ಲಿನ ಮೌಲ್ಯಗಳು, ಮೂಲಭೂತ ಹಕ್ಕುಗಳು ಹಾಗೂ ನಾಗರಿಕರ ಕರ್ತವ್ಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಿಲಿಂದ್ ದೇಸಾಯಿ ಅವರ ಹಸ್ತದಿಂದ ಭಾರತೀಯ ಸಂವಿಧಾನದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ವಿವಿಧ ಮೂಲಭೂತ ಹಕ್ಕುಗಳನ್ನು ನೀಡಿದೆ. ಈ ಹಕ್ಕುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಸಂವಿಧಾನ ಜಾರಿಗೆ ಬಂದ ನಂತರ ಸಾಮಾನ್ಯ ನಾಗರಿಕರಿಗೆ ಅನೇಕ ಮಹತ್ವದ ಹಕ್ಕುಗಳು ದೊರೆತಿದ್ದು, ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ ದೊರೆತಿದೆ. ಆದ್ದರಿಂದ ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸಬೇಕು ಎಂದು ಅವರು ಕರೆ ನೀಡಿದರು.
ಸಂವಿಧಾನದ ಜ್ಞಾನವು ಕೇವಲ ಶಾಲಾ ಜೀವನಕ್ಕೆ ಸೀಮಿತವಾಗಿಲ್ಲ. ಮುಂದಿನ ಶೈಕ್ಷಣಿಕ ಜೀವನದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಗೂ ದೈನಂದಿನ ಬದುಕಿನಲ್ಲಿಯೂ ಸಂವಿಧಾನದ ಜ್ಞಾನ ಬಹಳ ಉಪಯುಕ್ತವಾಗಿದೆ. ಸಂವಿಧಾನದಲ್ಲಿರುವ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ನ್ಯಾಯ ಎಂಬ ಮೂಲಭೂತ ಮೌಲ್ಯಗಳ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು. ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು. ಸಂವಿಧಾನ ದಿನ ಆಚರಣೆಯ ಮುಖ್ಯ ಉದ್ದೇಶವೂ ಇದೇ ಆಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನು ಸಹಶಿಕ್ಷಕಿ ಶ್ಯಾಮಲ ಬೆಳಗಾಂಕರ ನೆರವೇರಿಸಿದರು. ಎಸ್. ಜಿ. ದಡ್ಡೀಕರ ಅವರು ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮವು ಉತ್ಸಾಹದಿಂದ ನೆರವೇರಿತು.

