कांजळे गावात हत्तींचा धुमाकूळ; तीन दिवसांत ऊस व भात पिकांचे मोठे नुकसान, शेतकरी हवालदिल ; आमदारांनी लक्ष देण्याची मागणी.
खानापूर : प्रतिनिधी
खानापूर तालुक्यातील कांजळे गाव परिसरात गेल्या तीन दिवसांपासून हत्तींचा वावर वाढला असून, हत्तींच्या कळपाने शेतात घुसून ऊस व भात पिकांचे मोठ्या प्रमाणात नुकसान केले आहे. हत्तींच्या सततच्या धुडगूसामुळे शेतकरी हवालदिल झाले असून, हातातोंडाशी आलेल्या पिकांचे नुकसान झाल्याने शेतकऱ्यांवर आर्थिक संकट ओढवले आहे. खानापूर तालुक्याचे आमदार विठ्ठल हलगेकर यांनी याकडे लक्ष देऊन हत्तींचा कायमस्वरूपी बंदोबस्त करण्यासाठी पावलं उचलावीत शेतकऱ्यांची मागणी.
कांजळे गावातील सर्वे क्रमांक 46 व 23 मधील शेतांमध्ये हत्ती घुसून ऊस आणि भात पिकांची नासधूस केली आहे. गेल्या तीन दिवसांपासून हत्तींचा वावर कायम असल्याने शेतकऱ्यांना शेतात जाणेही धोकादायक बनले आहे. रात्रीच्या वेळी हत्ती शेतात घुसून पिके तुडवत असल्याने शेतकऱ्यांना रात्र जागून काढावी लागत आहे.
या हत्तींच्या हल्ल्यात सुभाष जयवंत गांवकर, प्रकाश रेमान्ना गांवकर, मारुती सूर्योबा गांवकर, आनंत केशव गांवकर, पांडुरंग सहदेव गांवकर, नामदेव महादेव गांवकर या शेतकऱ्यांच्या पिकांचे मोठ्या प्रमाणात नुकसान झाल्याची माहिती मिळाली आहे.
शेतकऱ्यांनी मोठ्या मेहनतीने ऊस व भात पिकांची लागवड केली होती. पीक तयार होण्याच्या अवस्थेत असताना हत्तींकडून नुकसान झाल्याने शेतकऱ्यांना आर्थिक फटका बसला आहे. वन्यप्राण्यांकडून वारंवार होणाऱ्या पिकांच्या नुकसानीमुळे परिसरातील शेतकरी चिंतेत आहेत.
वनविभागाने कांजळे परिसरात हत्तींच्या हालचालींवर लक्ष ठेवून नुकसानग्रस्त शेतांची पाहणी करावी, हत्तींचा बंदोबस्त करण्यासाठी आवश्यक उपाययोजना राबवाव्यात तसेच नुकसान झालेल्या पिकांचे पंचनामे करून शेतकऱ्यांना योग्य नुकसानभरपाई द्यावीत, तसेच हत्तींचा कायमस्वरूपी बंदोबस्त करावा अशी मागणी नुकसानग्रस्त शेतकऱ्यांकडून होत आहे.
हत्तींचा वाढता वावर आणि शेतीच्या नुकसानीमुळे कांजळे परिसरातील शेतकरी आता आमदार विठ्ठल हलगेकर व वनविभागाच्या तातडीच्या कारवाईकडे लक्ष लावून बसले आहेत.
ಕಾಂಜಳೆ ಗ್ರಾಮದಲ್ಲಿ ಆನೆಗಳ ಹಾವಳಿ; ಮೂರು ದಿನಗಳಲ್ಲಿ ಕಬ್ಬು ಹಾಗೂ ಭತ್ತದ ಬೆಳೆಗಳಿಗೆ ಭಾರೀ ಹಾನಿ, ರೈತರು ಕಂಗಾಲು ; ಶಾಸಕರು ಹಾಗೂ ಅರಣ್ಯ ಇಲಾಖೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರ ಆಗ್ರಹ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕಿನ ಕಾಂಜಳೆ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ಆನೆಗಳ ಹಿಂಡು ಹೊಲಗಳಿಗೆ ನುಗ್ಗಿ ಕಬ್ಬು ಹಾಗೂ ಭತ್ತದ ಬೆಳೆಗಳನ್ನು ವ್ಯಾಪಕವಾಗಿ ಹಾನಿಗೊಳಿಸಿದೆ. ಆನೆಗಳ ನಿರಂತರ ಹಾವಳಿಯಿಂದ ರೈತರು ಕಂಗಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆಳೆ ನಷ್ಟದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಶಾಸಕರಾದ ವಿಠ್ಠಲ ಹಲಗೇಕರ ಹಾಗೂ ಅರಣ್ಯ ಇಲಾಖೆ ಅವರು ಈ ಸಮಸ್ಯೆಯತ್ತ ಗಮನಹರಿಸಿ, ಆನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕಾಂಜಳೆ ಗ್ರಾಮದ ಸರ್ವೆ ನಂಬರ್ 46 ಹಾಗೂ 23ರ ಹೊಲಗಳಿಗೆ ಆನೆಗಳು ನುಗ್ಗಿ ಕಬ್ಬು ಮತ್ತು ಭತ್ತದ ಬೆಳೆಗಳನ್ನು ತುಳಿದು ನಾಶಪಡಿಸಿವೆ. ಕಳೆದ ಮೂರು ದಿನಗಳಿಂದ ಆನೆಗಳ ಸಂಚಾರ ನಿರಂತರವಾಗಿರುವುದರಿಂದ ರೈತರಿಗೆ ಹೊಲಗಳಿಗೆ ತೆರಳುವುದೂ ಅಪಾಯಕಾರಿಯಾಗಿದೆ. ರಾತ್ರಿ ವೇಳೆ ಆನೆಗಳು ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿರುವುದರಿಂದ ರೈತರು ರಾತ್ರಿ ಇಡೀ ನಿದ್ದೆಯಿಲ್ಲದೆ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆನೆಗಳ ದಾಳಿಯಿಂದ ಸುಭಾಷ್ ಜಯವಂತ ಗಾಂವ್ಕರ್, ಪ್ರಕಾಶ್ ರೇಮಾನ್ನಾ ಗಾಂವ್ಕರ್, ಮಾರುತಿ ಸೂರ್ಯೋಬಾ ಗಾಂವ್ಕರ್, ಅನಂತ ಕೇಶವ ಗಾಂವ್ಕರ್, ಪಾಂಡುರಂಗ ಸಹದೇವ ಗಾಂವ್ಕರ್ ಹಾಗೂ ನಾಮದೇವ ಮಹಾದೇವ ಗಾಂವ್ಕರ್ ಅವರ ಕೃಷಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ರೈತರು ಅಪಾರ ಶ್ರಮವಹಿಸಿ ಕಬ್ಬು ಮತ್ತು ಭತ್ತದ ಬೆಳೆಗಳನ್ನು ಬೆಳೆದಿದ್ದರು. ಬೆಳೆಗಳು ಕಟಾವಿಗೆ ಬರುವ ಹಂತದಲ್ಲಿರುವಾಗಲೇ ಆನೆಗಳಿಂದ ಹಾನಿಯಾಗಿರುವುದರಿಂದ ರೈತರಿಗೆ ದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ. ಕಾಡುಪ್ರಾಣಿಗಳಿಂದ ಪದೇಪದೇ ಕೃಷಿ ಬೆಳೆಗಳಿಗೆ ಹಾನಿಯಾಗುತ್ತಿರುವುದರಿಂದ ಈ ಭಾಗದ ರೈತರು ಆತಂಕದಲ್ಲಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಕಾಂಜಳೆ ಪ್ರದೇಶದಲ್ಲಿ ಆನೆಗಳ ಚಲನವಲನದ ಮೇಲೆ ನಿಗಾ ವಹಿಸಿ, ಹಾನಿಗೊಳಗಾದ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆನೆಗಳ ಹಾವಳಿಯನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ನಷ್ಟಕ್ಕೊಳಗಾದ ರೈತರು ಒತ್ತಾಯಿಸಿದ್ದಾರೆ.
ಆನೆಗಳ ಹೆಚ್ಚುತ್ತಿರುವ ಸಂಚಾರ ಹಾಗೂ ಕೃಷಿ ಬೆಳೆಗಳ ನಷ್ಟದಿಂದ ಕಾಂಜಳೆ ಭಾಗದ ರೈತರು ಈಗ ಶಾಸಕ ವಿಠ್ಠಲ ಹಲಗೇಕರ ಮತ್ತು ಅರಣ್ಯ ಇಲಾಖೆಯ ತುರ್ತು ಕ್ರಮದ ನಿರೀಕ್ಷೆಯಲ್ಲಿದ್ದಾರೆ.

