गुंजी ग्रामपंचायतीच्या जमाबंदी बैठकीत गैरव्यवहारांचे आरोप; चौकशीचे आदेश देण्याचे आश्वासन.
खानापूर : खानापूर तालुक्यातील गुंजी ग्रामपंचायतीच्या विकासकामांतील कथित अनियमिततेचा मुद्दा सोमवारी झालेल्या तिसऱ्या जमाबंदी बैठकीत चांगलाच तापला. काही कामे प्रत्यक्षात न करता निधी खर्च दाखविल्याचा आरोप ग्रामस्थांनी करत संबंधित कामांची सखोल चौकशी करण्याची मागणी केली. नागरिकांच्या आक्रमक प्रश्नांमुळे पंचायत अधिकाऱ्यांची चांगलीच कोंडी झाली. यावेळी नोडल अधिकारी किरण कुमार उपाळे यांनी वादग्रस्त कामांची वरिष्ठ अधिकाऱ्यांकडून तपासणी करून घेण्याचे आश्वासन दिले.
बैठकीच्या सुरुवातीलाच जनावरांच्या गोठ्यांसाठी मंजूर निधीच्या खर्चावरून शेतकऱ्यांनी आक्षेप घेतले. कामतगा येथे गोठा उभारण्यात न येताच घराचे फोटो सादर करून बिल काढल्याचा आरोप ग्रामस्थांनी केला. काही गोठे रातोरात रिपेरी करून त्यांची बिले काढण्यात आल्याचेही सांगण्यात आले. दुसरीकडे, अनेक दिवसांपूर्वी जीपीएस नोंदणीसह गोठे बांधलेल्या लाभार्थ्यांना योजनेतून वगळल्याबद्दल ग्रामस्थांनी पीडीओंना जाब विचारला.
मोरी रिपेरीच्या नावावर निधी खर्च?
ग्रामपंचायत क्षेत्रातील एका मोरीच्या कामाबाबतही संशय व्यक्त करण्यात आला. मोरी रिपेरीसाठी निधी वापरल्याचे पीडीओ विनोद मुतगी यांनी सांगितले. मात्र, पुंडलिक जोशीलकर, अशोक गवाळकर आणि रामचंद्र (पप्पू) पाटील यांनी त्या ठिकाणी पूर्वी मोरीच अस्तित्वात नसताना रिपेरीचे काम कसे झाले, असा सवाल उपस्थित केला. या प्रश्नावर समाधानकारक उत्तर न मिळाल्याने पीडीओंनी माजी ग्रामपंचायत अध्यक्षा स्वाती गुरव यांच्याकडे निर्देश केला. गुरव यांनीही आपल्याला या प्रकरणाची माहिती नसल्याचे सांगितले.
मात्र, कामाच्या कृती आराखड्यावर तसेच संबंधित कागदपत्रांवर त्यांची स्वाक्षरी असल्याचे निदर्शनास आणून दिल्यानंतर त्या बैठकीतून निघून गेल्या. या प्रकारामुळे उपस्थित ग्रामस्थांमध्ये चर्चेला उधाण आले.
इतर विकासकामांच्या खर्चावरही प्रश्नचिन्ह
गटार स्वच्छता, ग्रामपंचायत हद्दीतील शाळांच्या सोलार यंत्रणा, किरावळा-आंबेवाडी येथील बेंच तसेच अन्य विकासकामांवर खर्च करण्यात आलेल्या निधीबाबतही नागरिकांनी आक्षेप घेतले. संबंधित कामांची नव्याने तपासणी करून अनियमितता आढळल्यास खर्च झालेली रक्कम सरकारी तिजोरीत परत जमा करावी, अशी मागणी ग्रामस्थांनी केली. यावर नोडल अधिकाऱ्यांनी फेरचौकशीचे आदेश देण्याचे आश्वासन दिले.
चेकबुक-पासबुक नसल्याने संताप
बैठकीत ग्रामस्थ रामा मादर यांनी एससी-एसटी कॉलनीतील गटारांची स्वच्छता न करताच निधी खर्च दाखविल्याचा आरोप केला. निधी क्रमांक दोनमधील खर्चाचा तपशीलही त्यांनी मागितला. पंच हमी योजनेचे अध्यक्ष सूर्यकांत कुलकर्णी यांनी संबंधित खर्चाची माहिती, बँक पासबुक स्टेटमेंट आणि चेकबुक सादर करण्याची मागणी केली.
मात्र, हे दस्तऐवज ग्रामपंचायतीत उपलब्ध नसल्याचे पीडीओ मुतगी यांनी सांगितल्याने ग्रामस्थ संतप्त झाले. चेकबुक व पासबुक गायब कसे झाले, ते जाणीवपूर्वक लपवून ठेवले आहे का, असा सवाल करत नागरिकांनी प्रशासनाला धारेवर धरले. अखेर नोडल अधिकाऱ्यांनी मध्यस्थी करत २६ नोव्हेंबर रोजी होणाऱ्या ग्रामसभेत पीडीओंनी संपूर्ण हिशोब व संबंधित कागदपत्रे सादर करण्याचे निर्देश दिले.
तिसऱ्या बैठकीतही गोंधळ; पीडीओंची उत्तरे अपुरी
जमाबंदी प्रक्रिया यापूर्वीही वादात सापडली होती. पहिली बैठक केवळ स्वसहाय्य संघातील महिलांपुरती मर्यादित ठेवून नागरिकांची दिशाभूल करण्यात आल्याचा आरोप झाल्यानंतर जागरूक ग्रामस्थांनी पुन्हा जमाबंदी घेण्याची मागणी केली होती. दुसऱ्या बैठकीतही पीडीओंकडून वेळकाढूपणा करून प्रश्नांना बगल दिल्याचा आरोप झाल्याने सोमवारी तिसऱ्यांदा बैठक घेण्यात आली.
दुसऱ्या बैठकीला माजी अध्यक्ष व सदस्य गैरहजर असल्याबाबतही वृत्त प्रसिद्ध झाले होते. त्यामुळे सोमवारी झालेल्या बैठकीला माजी अध्यक्षा स्वाती जयकुमार गुरव उपस्थित होत्या. मात्र, विकासकामांतील कथित गैरव्यवहारांवर प्रश्नांची सरबत्ती सुरू झाल्यानंतर पीडीओंसह माजी अध्यक्षांकडून समाधानकारक उत्तरे मिळाली नाहीत. त्यानंतर माजी अध्यक्षा अचानक बैठकीतून बाहेर पडल्याने ग्रामस्थांमध्ये उलटसुलट चर्चा सुरू झाली.
या बैठकीला गुंजीतील ज्येष्ठ पंच राजाराम देसाई, दीपक देसाई, दिनेश कुलकर्णी, पंकज कुट्रे, रावजी बिरजे, सुभाष घाडी, सूर्यकांत कुलकर्णी, गजानन पवार, श्रावणी शास्त्री यांच्यासह विविध गावांतील नागरिक उपस्थित होते.
ಗುಂಜಿ ಗ್ರಾಮ ಪಂಚಾಯಿತಿಯ ಜಮಾ ಖರ್ಚು ಮಂಡಿಸುವ ಸಭೆಯಲ್ಲಿ ಅವ್ಯವಹಾರದ ಆರೋಪ; ತನಿಖೆಗೆ ಆದೇಶ ನೀಡುವ ಭರವಸೆ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕಿನ ಗುಂಜಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ಕುರಿತು ಸೋಮವಾರ ನಡೆದ ಮೂರನೇ ಜಮಾ ಖರ್ಚು ಮಂಡಿಸುವ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಕೆಲವು ಕಾಮಗಾರಿಗಳನ್ನು ವಾಸ್ತವವಾಗಿ ಕೈಗೊಳ್ಳದೆ ಹಣ ಖರ್ಚು ಮಾಡಿರುವುದಾಗಿ ದಾಖಲೆಗಳಲ್ಲಿ ತೋರಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ, ಸಂಬಂಧಪಟ್ಟ ಕಾಮಗಾರಿಗಳ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು. ನಾಗರಿಕರು ಆಕ್ರಮಣಕಾರಿಯಾಗಿ ಪ್ರಶ್ನೆಗಳನ್ನು ಕೇಳಿದ್ದರಿಂದ ಪಂಚಾಯಿತಿ ಅಧಿಕಾರಿಗಳು ತೀವ್ರ ಮುಜುಗರಕ್ಕೊಳಗಾದರು. ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಕಿರಣಕುಮಾರ ಉಪಾಳೆ ಅವರು ವಿವಾದಿತ ಕಾಮಗಾರಿಗಳನ್ನು ಹಿರಿಯ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸುವ ಭರವಸೆ ನೀಡಿದರು.
ಸಭೆಯ ಆರಂಭದಲ್ಲಿಯೇ ಜಾನುವಾರುಗಳ ಕೊಟ್ಟಿಗೆ ನಿರ್ಮಾಣಕ್ಕೆ ಮಂಜೂರಾದ ಅನುದಾನದ ವೆಚ್ಚದ ಕುರಿತು ರೈತರು ಆಕ್ಷೇಪ ವ್ಯಕ್ತಪಡಿಸಿದರು. ಕಾಮತಗಾ ಗ್ರಾಮದಲ್ಲಿ ಕೊಟ್ಟಿಗೆ ನಿರ್ಮಿಸದಿದ್ದರೂ ಮನೆಯ ಫೋಟೋಗಳನ್ನು ಸಲ್ಲಿಸಿ ಬಿಲ್ ಮಾಡಿಸಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಕೆಲವು ಕೊಟ್ಟಿಗೆಗಳನ್ನು ರಾತ್ರೋರಾತ್ರಿ ದುರಸ್ತಿ ಮಾಡಿ ಅವುಗಳ ಹೆಸರಿನಲ್ಲಿ ಬಿಲ್ ಪಡೆಯಲಾಗಿದೆ ಎಂಬ ಆರೋಪವೂ ಕೇಳಿಬಂತು. ಮತ್ತೊಂದೆಡೆ, ಹಲವು ದಿನಗಳ ಹಿಂದೆಯೇ ಜಿಪಿಎಸ್ ನೋಂದಣಿಯೊಂದಿಗೆ ಕೊಟ್ಟಿಗೆಗಳನ್ನು ನಿರ್ಮಿಸಿದ್ದ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಟ್ಟಿರುವ ಬಗ್ಗೆ ಗ್ರಾಮಸ್ಥರು ಪಿಡಿಒ ಅವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಚರಂಡಿ ದುರಸ್ತಿ ಹೆಸರಿನಲ್ಲಿ ಅನುದಾನ ವೆಚ್ಚ?
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಒಂದು ಮೋರಿ ಕಾಮಗಾರಿಯ ಬಗ್ಗೆಯೂ ಅನುಮಾನ ವ್ಯಕ್ತವಾಯಿತು. ಮೋರಿ ದುರಸ್ತಿಗಾಗಿ ಅನುದಾನ ಬಳಸಲಾಗಿದೆ ಎಂದು ಪಿಡಿಒ ವಿನೋದ್ ಮುತಗಿ ತಿಳಿಸಿದರು. ಆದರೆ, ಪುಂಡಲೀಕ ಜೋಶೀಲ್ಕರ್, ಅಶೋಕ ಗವಾಳ್ಕರ್ ಹಾಗೂ ರಾಮಚಂದ್ರ (ಪಪ್ಪು) ಪಾಟೀಲ ಅವರು, ಆ ಸ್ಥಳದಲ್ಲಿ ಈ ಹಿಂದೆ ಮೋರಿ ಅಸ್ತಿತ್ವದಲ್ಲೇ ಇಲ್ಲದಿದ್ದಾಗ ದುರಸ್ತಿ ಕಾಮಗಾರಿ ಹೇಗೆ ಕೈಗೊಳ್ಳಲಾಯಿತು ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಿಡಿಒ ಅವರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ಗುರವ ಅವರತ್ತ ಬೊಟ್ಟು ಮಾಡಿದರು. ಆದರೆ, ಈ ಪ್ರಕರಣದ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ವಾತಿ ಗುರವ ತಿಳಿಸಿದರು.
ಆದರೆ, ಕಾಮಗಾರಿಯ ಕ್ರಿಯಾ ಯೋಜನೆ ಹಾಗೂ ಸಂಬಂಧಪಟ್ಟ ದಾಖಲೆಗಳ ಮೇಲೆ ಅವರ ಸಹಿ ಇರುವುದನ್ನು ಗ್ರಾಮಸ್ಥರು ಗಮನಕ್ಕೆ ತಂದ ನಂತರ ಅವರು ಸಭೆಯಿಂದ ಹೊರನಡೆದರು. ಈ ಘಟನೆಯಿಂದ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರಲ್ಲಿ ತೀವ್ರ ಚರ್ಚೆ ಆರಂಭವಾಯಿತು.
ಇತರೆ ಅಭಿವೃದ್ಧಿ ಕಾಮಗಾರಿಗಳ ವೆಚ್ಚದ ಮೇಲೂ ಅನುಮಾನ
ಚರಂಡಿ ಸ್ವಚ್ಛತೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿನ ಸೋಲಾರ್ ವ್ಯವಸ್ಥೆ, ಕಿರಾವಳ ಹಾಗೂ ಆಂಬೇವಾಡಿ ಗ್ರಾಮಗಳಲ್ಲಿನ ಬೆಂಚುಗಳ ಖರೀದಿ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಖರ್ಚು ಮಾಡಿರುವ ಅನುದಾನದ ಬಗ್ಗೆಯೂ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಎಲ್ಲ ಕಾಮಗಾರಿಗಳನ್ನು ಮರುಪರಿಶೀಲನೆ ನಡೆಸಬೇಕು. ಒಂದು ವೇಳೆ ಅಕ್ರಮಗಳು ಕಂಡುಬಂದಲ್ಲಿ ವೆಚ್ಚ ಮಾಡಿರುವ ಹಣವನ್ನು ಸರ್ಕಾರಿ ಖಜಾನೆಗೆ ಮರುಪಾವತಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೋಡಲ್ ಅಧಿಕಾರಿ, ಕಾಮಗಾರಿಗಳ ಕುರಿತು ಮರುತನಿಖೆ ನಡೆಸಲು ಆದೇಶ ನೀಡುವ ಭರವಸೆ ನೀಡಿದರು.
ಚೆಕ್ಬುಕ್, ಪಾಸ್ಬುಕ್ ಇಲ್ಲದಿರುವುದಕ್ಕೆ ಗ್ರಾಮಸ್ಥರ ಆಕ್ರೋಶ
ಸಭೆಯಲ್ಲಿ ಗ್ರಾಮಸ್ಥ ರಾಮಾ ಮಾದರ ಅವರು ಎಸ್ಸಿ-ಎಸ್ಟಿ ಕಾಲೋನಿಯಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸದಿದ್ದರೂ ಸ್ವಚ್ಛತಾ ಕಾಮಗಾರಿ ನಡೆಸಿರುವುದಾಗಿ ತೋರಿಸಿ ಅನುದಾನ ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು. ನಿಧಿ ಸಂಖ್ಯೆ ಎರಡರಲ್ಲಿನ ವೆಚ್ಚದ ವಿವರಗಳನ್ನೂ ಅವರು ಕೇಳಿದರು.
ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ಸಂಬಂಧಪಟ್ಟ ವೆಚ್ಚದ ಸಂಪೂರ್ಣ ಮಾಹಿತಿ, ಬ್ಯಾಂಕ್ ಪಾಸ್ಬುಕ್ ಸ್ಟೇಟ್ಮೆಂಟ್ ಹಾಗೂ ಚೆಕ್ಬುಕ್ಗಳನ್ನು ಸಭೆಯಲ್ಲಿ ಹಾಜರುಪಡಿಸುವಂತೆ ಒತ್ತಾಯಿಸಿದರು.
ಆದರೆ, ಈ ದಾಖಲೆಗಳು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿಲ್ಲ ಎಂದು ಪಿಡಿಒ ಮುತಗಿ ತಿಳಿಸಿದ್ದರಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚೆಕ್ಬುಕ್ ಮತ್ತು ಪಾಸ್ಬುಕ್ಗಳು ಹೇಗೆ ಕಾಣೆಯಾಗಿವೆ? ಅವುಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆಯೇ? ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೊನೆಗೆ ನೋಡಲ್ ಅಧಿಕಾರಿ ಮಧ್ಯಪ್ರವೇಶಿಸಿ, ನವೆಂಬರ್ 26ರಂದು ನಡೆಯಲಿರುವ ಗ್ರಾಮಸಭೆಯಲ್ಲಿ ಪಿಡಿಒ ಅವರು ಸಂಪೂರ್ಣ ಲೆಕ್ಕಪತ್ರ ಹಾಗೂ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸುವಂತೆ ಸೂಚನೆ ನೀಡಿದರು.
ಮೂರನೇ ಸಭೆಯಲ್ಲೂ ಗೊಂದಲ; ಪಿಡಿಒ ಉತ್ತರಗಳಿಗೆ ಗ್ರಾಮಸ್ಥರ ಅಸಮಾಧಾನ
ಜಮಾಬಂದಿ ಪ್ರಕ್ರಿಯೆಯು ಈ ಹಿಂದೆಯೂ ವಿವಾದಕ್ಕೆ ಕಾರಣವಾಗಿತ್ತು. ಮೊದಲ ಸಭೆಯನ್ನು ಕೇವಲ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಿ ನಾಗರಿಕರನ್ನು ದಾರಿ ತಪ್ಪಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಾಗೃತ ಗ್ರಾಮಸ್ಥರು ಮತ್ತೊಮ್ಮೆ ಜಮಾಬಂದಿ ಸಭೆ ನಡೆಸುವಂತೆ ಆಗ್ರಹಿಸಿದ್ದರು.
ಎರಡನೇ ಸಭೆಯಲ್ಲಿಯೂ ಪಿಡಿಒ ಅವರು ಕಾಲಹರಣ ಮಾಡಿ ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಸೋಮವಾರ ಮೂರನೇ ಬಾರಿಗೆ ಸಭೆ ನಡೆಸಲಾಯಿತು.
ಎರಡನೇ ಸಭೆಗೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಗೈರಾಗಿದ್ದ ಕುರಿತು ಈ ಹಿಂದೆಯೂ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಭೆಗೆ ಮಾಜಿ ಅಧ್ಯಕ್ಷೆ ಸ್ವಾತಿ ಜಯಕುಮಾರ ಗುರವ ಅವರು ಹಾಜರಾಗಿದ್ದರು. ಆದರೆ, ಅಭಿವೃದ್ಧಿ ಕಾಮಗಾರಿಗಳಲ್ಲಿನ ಆಪಾದಿತ ಅವ್ಯವಹಾರಗಳ ಕುರಿತು ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಗೈದಾಗ ಪಿಡಿಒ ಸೇರಿದಂತೆ ಮಾಜಿ ಅಧ್ಯಕ್ಷರಿಂದಲೂ ಸಮರ್ಪಕ ಉತ್ತರಗಳು ಲಭಿಸಲಿಲ್ಲ.
ಇದಾದ ಬಳಿಕ ಮಾಜಿ ಅಧ್ಯಕ್ಷೆ ಸ್ವಾತಿ ಗುರವ ಅವರು ದಿಢೀರನೆ ಸಭೆಯಿಂದ ಹೊರನಡೆದಿದ್ದರಿಂದ ಗ್ರಾಮಸ್ಥರಲ್ಲಿ ಹಲವು ರೀತಿಯ ಚರ್ಚೆಗಳು ಆರಂಭವಾದವು.
ಈ ಸಭೆಯಲ್ಲಿ ಗುಂಜಿಯ ಹಿರಿಯ ಪಂಚರಾದ ರಾಜಾರಾಮ ದೇಸಾಯಿ, ದೀಪಕ ದೇಸಾಯಿ, ದಿನೇಶ ಕುಲಕರ್ಣಿ, ಪಂಕಜ್ ಕುಟ್ರೆ, ರಾವಜಿ ಬಿರ್ಜೆ, ಸುಭಾಷ್ ಘಾಡಿ, ಸೂರ್ಯಕಾಂತ ಕುಲಕರ್ಣಿ, ಗಜಾನನ ಪವಾರ್, ಶ್ರಾವಣಿ ಶಾಸ್ತ್ರಿ ಸೇರಿದಂತೆ ವಿವಿಧ ಗ್ರಾಮಗಳ ನಾಗರಿಕರು ಉಪಸ್ಥಿತರಿದ್ದರು.

