मामाच्या मुलीशी लग्न करणाऱ्यांसाठी महत्त्वाची बातमी; सुप्रीम कोर्टाची केंद्र सरकारला नोटीस, काय बदल होणार?
नवी दिल्ली : वृत्तसंस्था
मामाच्या मुलीशी किंवा जवळच्या रक्ताच्या नात्यात लग्न करणाऱ्यांसंदर्भातील आरोग्यविषयक मुद्दा आता सर्वोच्च न्यायालयात पोहोचला असून, या प्रकरणामुळे देशभरात चर्चेला सुरुवात झाली आहे. अशा विवाहांमधून जन्माला येणाऱ्या मुलांना काही आनुवंशिक आजारांचा धोका अधिक असू शकतो, या चिंतेच्या पार्श्वभूमीवर सर्वोच्च न्यायालयाने केंद्र सरकारला नोटीस बजावली आहे. जवळच्या नात्यातील विवाहांबाबत कायदेशीर तरतूद करावी का आणि यासंदर्भात लोकांमध्ये वैद्यकीय जनजागृती घडवून आणता येईल का, यावर विचार करण्याची भूमिका न्यायालयाने मांडली आहे.
मात्र, या सुनावणीमुळे मामाच्या मुलीशी लग्न करण्यावर देशभर बंदी लागू झाली आहे, असा अर्थ काढणे चुकीचे ठरणार आहे. न्यायालयाने अद्याप अशा विवाहांवर कोणताही बंदी आदेश दिलेला नाही.
नेमके प्रकरण काय आहे?
बंगळुरूमधील चार्वी एस. या कायद्याच्या विद्यार्थिनीने सर्वोच्च न्यायालयात याचिका दाखल केली आहे. जवळच्या रक्ताच्या नात्यात विवाह झाल्यास मुलांच्या आरोग्यावर त्याचे परिणाम होण्याची शक्यता आणि आनुवंशिक विकारांचा धोका याबाबत तिने चिंता व्यक्त केली आहे.
याचिकेत कौटुंबिक अनुभवांचा संदर्भ देत अशा विवाहांमधून पुढील पिढीला उद्भवू शकणाऱ्या वैद्यकीय समस्यांकडे लक्ष वेधण्यात आले. विवाहापूर्वी संबंधित जोडप्यांना आनुवंशिक जोखमींबाबत योग्य माहिती मिळावी, वैद्यकीय मार्गदर्शन उपलब्ध व्हावे आणि या विषयावर व्यापक जनजागृती केली जावी, अशी मागणी करण्यात आली आहे.
जवळच्या नात्यात विवाह झाल्यास आनुवंशिक धोका का वाढतो?
मामाची मुलगी, मावशीचा मुलगा किंवा इतर जवळच्या रक्ताच्या नात्यातील व्यक्ती यांच्यामध्ये काही समान जनुकीय घटक असण्याची शक्यता अधिक असते. पालक दोघांकडेही एखाद्या आनुवंशिक आजाराशी संबंधित जनुकातील बदल असल्यास, तो बदल मुलांमध्ये एकत्र येऊन आजार निर्माण होण्याची शक्यता वाढू शकते.
वैद्यकीयदृष्ट्या अशा परिस्थितीत काही आजार किंवा समस्यांचा धोका वाढू शकतो, त्यामध्ये :
- काही आनुवंशिक आजार
- जन्मजात शारीरिक दोष
- श्रवण किंवा दृष्टीविषयक समस्या
- काही विकासात्मक अडचणी
- दुर्मिळ जनुकीय विकार
अर्थात, जवळच्या नात्यात लग्न झाले म्हणजे मुलांना आजार होणारच, असे नाही. प्रत्यक्ष धोका हा पालकांच्या जनुकीय स्थितीवर, कुटुंबातील आजारांच्या इतिहासावर आणि संबंधित आनुवंशिक घटकांवर अवलंबून असतो.
अशा विवाहांवर कायदेशीर बंदी येणार का?
सर्वोच्च न्यायालयाने या विषयात कायदा तयार करणे हा संसदेच्या अधिकारक्षेत्रातील विषय असल्याचे स्पष्ट केले आहे. त्यामुळे न्यायालयाकडून थेट विवाहबंदी लागू करण्यात आलेली नाही. केंद्र सरकारने यासंबंधी कायदेशीर चौकट तयार करण्याची गरज, तसेच आरोग्यविषयक जनजागृतीचे कार्यक्रम राबवण्याची शक्यता तपासावी, यासाठी नोटीस बजावण्यात आली आहे.
त्यामुळे सध्याच्या परिस्थितीत मामाच्या मुलीशी किंवा जवळच्या नातेवाईकाशी विवाह करण्यास देशभरात नव्याने बंदी घालण्यात आलेली नाही. पुढे केंद्र सरकार या नोटीसला काय उत्तर देते आणि या विषयावर कोणती भूमिका घेते, हे महत्त्वाचे ठरणार आहे.
विवाहापूर्वी वैद्यकीय सल्ल्याचे महत्त्व
जवळच्या नात्यात विवाह करण्याचा विचार करणाऱ्या जोडप्यांनी कुटुंबातील आनुवंशिक आजारांचा इतिहास जाणून घेणे महत्त्वाचे आहे. आवश्यकतेनुसार विवाहापूर्वी डॉक्टरांचा सल्ला, जनुकीय समुपदेशन किंवा विशिष्ट तपासण्या केल्यास संभाव्य जोखमींबाबत अधिक स्पष्ट माहिती मिळू शकते.
प्रत्येक जोडप्यासाठी एकच तपासणी योग्य असेल असे नाही. व्यक्तींचा कौटुंबिक वैद्यकीय इतिहास आणि डॉक्टरांच्या सल्ल्यानुसार तपासण्यांची आवश्यकता ठरवली जाते.
सुप्रीम कोर्टाच्या नोटीसमुळे विषय चर्चेत
सर्वोच्च न्यायालयाच्या नोटीसमुळे जवळच्या रक्ताच्या नात्यात विवाह, त्यामागील सामाजिक परंपरा, कायदेशीर बाबी आणि भावी पिढीच्या आरोग्याशी संबंधित मुद्दे पुन्हा चर्चेत आले आहेत. केंद्र सरकारचे उत्तर आणि या प्रकरणातील पुढील सुनावणी याकडे आता लक्ष लागले आहे.
सध्या तरी अशा विवाहांवर बंदी नाही; मात्र विवाहापूर्वी आनुवंशिक आरोग्यविषयक माहिती आणि वैद्यकीय मार्गदर्शन घेण्याच्या गरजेवर या प्रकरणातून भर पडला आहे.
ಮಾವನ ಮಗಳೊಂದಿಗೆ ಮದುವೆಯಾಗುವವರಿಗೆ ಮಹತ್ವದ ಸುದ್ದಿ; ಸುಪ್ರೀಂ ಕೋರ್ಟ್ ನಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್, ಏನಾಗಲಿದೆ ಬದಲಾವಣೆಯ ಅಪೇಕ್ಷೆಯಲ್ಲಿ ಜನಸಾಮಾನ್ಯರು?
ನವದೆಹಲಿ : ಸುದ್ದಿ ಸಂಸ್ಥೆ
ಮಾವನ ಮಗಳೊಂದಿಗೆ ಅಥವಾ ಹತ್ತಿರದ ರಕ್ತಸಂಬಂಧಿಗಳ ನಡುವೆ ಮದುವೆಯಾಗುವ ವಿಚಾರಕ್ಕೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಯೊಂದು ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣದಿಂದಾಗಿ ದೇಶಾದ್ಯಂತ ಚರ್ಚೆ ಆರಂಭವಾಗಿದೆ. ಇಂತಹ ಮದುವೆಗಳಿಂದ ಜನಿಸುವ ಮಕ್ಕಳಿಗೆ ಕೆಲವು ಆನುವಂಶಿಕ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಹತ್ತಿರದ ಸಂಬಂಧಿಗಳ ನಡುವಿನ ಮದುವೆಗಳಿಗೆ ಸಂಬಂಧಿಸಿದಂತೆ ಕಾನೂನು ನಿಯಮಗಳನ್ನು ರೂಪಿಸಬೇಕೇ ಮತ್ತು ಈ ಕುರಿತು ಜನರಲ್ಲಿ ವೈದ್ಯಕೀಯ ಜಾಗೃತಿ ಮೂಡಿಸಬಹುದೇ ಎಂಬ ವಿಚಾರವನ್ನು ಪರಿಶೀಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಆದರೆ, ಈ ವಿಚಾರಣೆಯಿಂದ ಮಾವನ ಮಗಳೊಂದಿಗೆ ಮದುವೆಯಾಗುವುದಕ್ಕೆ ದೇಶಾದ್ಯಂತ ನಿಷೇಧ ಜಾರಿಯಾಗಿದೆ ಎಂದು ಅರ್ಥೈಸಿಕೊಳ್ಳುವುದು ಬೇಡ. ಇಂತಹ ಮದುವೆಗಳ ಮೇಲೆ ನ್ಯಾಯಾಲಯವು ಈವರೆಗೆ ಯಾವುದೇ ನಿಷೇಧ ಆದೇಶ ಹೊರಡಿಸಿಲ್ಲ.
ನಿಖರ ಪ್ರಕರಣವೇನು?
ಬೆಂಗಳೂರು ಮೂಲದ ಚಾರ್ವಿ ಎಸ್. ಎಂಬ ಕಾನೂನು ವಿದ್ಯಾರ್ಥಿನಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು. ಹತ್ತಿರದ ರಕ್ತಸಂಬಂಧಿಗಳ ನಡುವೆ ಮದುವೆಯಾದರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಾಗೂ ಆನುವಂಶಿಕ ಕಾಯಿಲೆಗಳ ಅಪಾಯದ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅರ್ಜಿಯಲ್ಲಿ ಕುಟುಂಬದ ಅನುಭವಗಳನ್ನು ಉಲ್ಲೇಖಿಸಿ, ಇಂತಹ ಮದುವೆಗಳಿಂದ ಮುಂದಿನ ಪೀಳಿಗೆಗೆ ಉಂಟಾಗಬಹುದಾದ ವೈದ್ಯಕೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗಿದೆ. ಮದುವೆಗೆ ಮುನ್ನ ಸಂಬಂಧಿತ ಜೋಡಿಗಳಿಗೆ ಆನುವಂಶಿಕ ಅಪಾಯಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು, ವೈದ್ಯಕೀಯ ಮಾರ್ಗದರ್ಶನ ಲಭ್ಯವಾಗಬೇಕು ಹಾಗೂ ಈ ವಿಷಯದ ಕುರಿತು ವ್ಯಾಪಕ ಜನಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಲಾಗಿದೆ.
ಹತ್ತಿರದ ಸಂಬಂಧಿಗಳ ನಡುವೆ ಮದುವೆಯಾದರೆ ಆನುವಂಶಿಕ ಅಪಾಯ ಏಕೆ ಹೆಚ್ಚಾಗುತ್ತದೆ?
ಮಾವನ ಮಗಳು, ಅತ್ತೆಯ ಮಗ ಅಥವಾ ಇತರ ಹತ್ತಿರದ ರಕ್ತಸಂಬಂಧಿಗಳ ನಡುವೆ ಮದುವೆಯಾದಾಗ ಇಬ್ಬರಲ್ಲೂ ಒಂದೇ ರೀತಿಯ ಆನುವಂಶಿಕ ಅಂಶಗಳು ಇರುವ ಸಾಧ್ಯತೆ ಹೆಚ್ಚಿರುತ್ತದೆ. ತಂದೆ ಮತ್ತು ತಾಯಿ ಇಬ್ಬರಲ್ಲೂ ಯಾವುದಾದರೂ ಆನುವಂಶಿಕ ಕಾಯಿಲೆಗೆ ಸಂಬಂಧಿಸಿದ ಜೀನ್ನ ಬದಲಾವಣೆ ಇದ್ದರೆ, ಆ ಬದಲಾವಣೆ ಮಗುವಿನಲ್ಲಿ ಒಟ್ಟಾಗಿ ಸೇರಿ ಕಾಯಿಲೆ ಉಂಟಾಗುವ ಸಾಧ್ಯತೆ ಹೆಚ್ಚಬಹುದು.
ವೈದ್ಯಕೀಯವಾಗಿ ಇಂತಹ ಸಂದರ್ಭಗಳಲ್ಲಿ ಕೆಲವು ಕಾಯಿಲೆಗಳು ಅಥವಾ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಅವುಗಳಲ್ಲಿ:
- ಕೆಲ ಆನುವಂಶಿಕ ಕಾಯಿಲೆ
- ಜನ್ಮಜಾತ ದೈಹಿಕ ದೋಷ
- ಶ್ರವಣ ಅಥವಾ ದೃಷ್ಟಿ ಸಂಬಂಧಿತ ಸಮಸ್ಯೆ
- ಕೆಲವು ಬೆಳವಣಿಗೆಯ ತೊಂದರೆಗಳು
- ಅಪರೂಪದ ಜೀನ್ ಸಂಬಂಧಿತ ಕಾಯಿಲೆ
ಆದರೆ, ಹತ್ತಿರದ ಸಂಬಂಧಿಗಳ ನಡುವೆ ಮದುವೆಯಾದ ಮಾತ್ರಕ್ಕೆ ಮಕ್ಕಳಿಗೆ ಕಾಯಿಲೆ ಬರುತ್ತದೆ ಎಂದೇನೂ ಇಲ್ಲ. ನಿಜವಾದ ಅಪಾಯವು ಪೋಷಕರ ಆನುವಂಶಿಕ ಸ್ಥಿತಿ, ಕುಟುಂಬದ ಕಾಯಿಲೆಗಳ ಇತಿಹಾಸ ಹಾಗೂ ಸಂಬಂಧಿತ ಅನುವಂಶಿಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಇಂತಹ ಮದುವೆಗಳ ಮೇಲೆ ಕಾನೂನು ನಿಷೇಧ ಜಾರಿಯಾಗಲಿದೆಯೇ?
ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಕಾನೂನು ರೂಪಿಸುವುದು ಸಂಸತ್ತಿನ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ವಿಷಯ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ನ್ಯಾಯಾಲಯದಿಂದ ನೇರವಾಗಿ ಮದುವೆ ನಿಷೇಧ ಜಾರಿಗೊಳಿಸಲಾಗಿಲ್ಲ. ಈ ಸಂಬಂಧ ಕಾನೂನು ಚೌಕಟ್ಟು ರೂಪಿಸುವ ಅಗತ್ಯವಿದೆಯೇ ಹಾಗೂ ಆರೋಗ್ಯ ಸಂಬಂಧಿತ ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆಯೇ ಎಂಬುದನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ.
ಹೀಗಾಗಿ, ಪ್ರಸ್ತುತ ಮಾವನ ಮಗಳೊಂದಿಗೆ ಅಥವಾ ಹತ್ತಿರದ ಸಂಬಂಧಿಗಳೊಂದಿಗೆ ಮದುವೆಯಾಗುವುದಕ್ಕೆ ದೇಶಾದ್ಯಂತ ಹೊಸದಾಗಿ ಯಾವುದೇ ನಿಷೇಧ ಜಾರಿಯಾಗಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಈ ನೋಟಿಸ್ಗೆ ಯಾವ ಉತ್ತರ ನೀಡುತ್ತದೆ ಮತ್ತು ಈ ವಿಷಯದ ಕುರಿತು ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದು ಮಹತ್ವದ್ದಾಗಿದೆ.
ಮದುವೆಗೆ ಮುನ್ನ ವೈದ್ಯಕೀಯ ಸಲಹೆಯ ಮಹತ್ವ
ಹತ್ತಿರದ ಸಂಬಂಧಿಗಳ ನಡುವೆ ಮದುವೆಯಾಗಲು ಯೋಚಿಸುವ ಜೋಡಿಗಳು ಕುಟುಂಬದಲ್ಲಿರುವ ಆನುವಂಶಿಕ ಕಾಯಿಲೆಗಳ ಇತಿಹಾಸವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಅಗತ್ಯವಿದ್ದಲ್ಲಿ ಮದುವೆಗೆ ಮುನ್ನ ವೈದ್ಯರ ಸಲಹೆ, ಜೆನೆಟಿಕ್ ಕೌನ್ಸೆಲಿಂಗ್ ಅಥವಾ ನಿರ್ದಿಷ್ಟ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದರಿಂದ ಸಂಭವನೀಯ ಅಪಾಯಗಳ ಕುರಿತು ಸ್ಪಷ್ಟ ಮಾಹಿತಿ ಪಡೆಯಬಹುದು.
ಪ್ರತಿಯೊಂದು ಜೋಡಿಗೂ ಒಂದೇ ರೀತಿಯ ಪರೀಕ್ಷೆಗಳು ಸೂಕ್ತವಾಗಿರುವುದಿಲ್ಲ. ವ್ಯಕ್ತಿಗಳ ಕುಟುಂಬದ ವೈದ್ಯಕೀಯ ಇತಿಹಾಸ ಮತ್ತು ವೈದ್ಯರ ಸಲಹೆಯ ಆಧಾರದ ಮೇಲೆ ಯಾವ ಪರೀಕ್ಷೆಗಳು ಅಗತ್ಯ ಎಂಬುದನ್ನು ನಿರ್ಧರಿಸಲಾಗುತ್ತದೆ.
ಸುಪ್ರೀಂ ಕೋರ್ಟ್ ನೋಟಿಸ್ನಿಂದ ಮತ್ತೆ ಚರ್ಚೆಗೆ ಬಂದ ವಿಷಯ
ಸುಪ್ರೀಂ ಕೋರ್ಟ್ ನೀಡಿರುವ ನೋಟಿಸ್ನಿಂದ ಹತ್ತಿರದ ರಕ್ತಸಂಬಂಧಿಗಳ ನಡುವೆ ಮದುವೆ, ಅದರ ಹಿಂದಿರುವ ಸಾಮಾಜಿಕ ಸಂಪ್ರದಾಯಗಳು, ಕಾನೂನು ವಿಚಾರಗಳು ಹಾಗೂ ಮುಂದಿನ ಪೀಳಿಗೆಯ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು ಮತ್ತೆ ಚರ್ಚೆಗೆ ಬಂದಿವೆ. ಕೇಂದ್ರ ಸರ್ಕಾರದ ಉತ್ತರ ಹಾಗೂ ಈ ಪ್ರಕರಣದ ಮುಂದಿನ ವಿಚಾರಣೆಯತ್ತ ಇದೀಗ ಎಲ್ಲರ ಗಮನ ಹರಿದಿದೆ.
ಸದ್ಯಕ್ಕೆ ಇಂತಹ ಮದುವೆಗಳ ಮೇಲೆ ಯಾವುದೇ ನಿಷೇಧವಿಲ್ಲ. ಆದರೆ, ಮದುವೆಗೆ ಮುನ್ನ ಆನುವಂಶಿಕ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಳ್ಳುವುದು ಮತ್ತು ವೈದ್ಯಕೀಯ ಮಾರ್ಗದರ್ಶನ ಪಡೆಯುವ ಅಗತ್ಯತೆಯನ್ನು ಈ ಪ್ರಕರಣ ಮತ್ತೊಮ್ಮೆ ಒತ್ತಿಹೇಳಿದೆ.

