मलप्रभा साखर कारखान्यातील टर्बाइन स्फोटावरून शेतकरी नेते आक्रमक; अध्यक्ष चन्नराज हट्टीहोळी यांच्या कारभारावर गंभीर आरोप!
बेळगाव : प्रतिनिधी
मलप्रभा साखर कारखान्यात झालेल्या टर्बाइन स्फोटाच्या घटनेने आता जिल्ह्यातील साखर उद्योग आणि शेतकरी वर्तुळात मोठी खळबळ उडाली आहे. या घटनेवरून शेतकरी नेत्यांनी कारखाना व्यवस्थापनाविरोधात आक्रमक भूमिका घेतली असून, कारखान्याचे अध्यक्ष तथा विधानपरिषद सदस्य चन्नराज हट्टीहोळी यांच्या कार्यपद्धतीवर गंभीर प्रश्न उपस्थित केले आहेत. कारखान्याने यंदाच्या हंगामात चार लाख टन ऊस गाळपाचे उद्दिष्ट निश्चित केले होते. मात्र, टर्बाइन स्फोटामुळे गाळपावर परिणाम झाल्यास या नुकसानीची जबाबदारी अध्यक्षांनी स्वतः स्वीकारावी आणि उद्दिष्ट पूर्ण न झाल्यास स्वतःच्या खिशातून नुकसानभरपाई द्यावी, अशी मागणी शेतकरी नेते प्रकाश नायक यांनी केली आहे.
शुक्रवारी बेळगाव येथे आयोजित पत्रकार परिषदेत विविध शेतकरी नेत्यांनी कारखान्याच्या व्यवस्थापनावर जोरदार टीका केली. हंगाम सुरू होऊन काही दिवस उलटताच टर्बाइनचा स्फोट होणे ही अत्यंत गंभीर बाब असून, या घटनेमागील नेमके कारण काय, याची सखोल चौकशी होणे आवश्यक आहे, असे प्रकाश नायक यांनी सांगितले.
टर्बाइन स्फोटामुळे कारखान्याचे किती आर्थिक नुकसान झाले, यंत्रसामग्रीची स्थिती काय होती आणि कामगारांच्या सुरक्षेसाठी कोणत्या उपाययोजना करण्यात आल्या होत्या, याबाबत व्यवस्थापनाने पारदर्शकपणे माहिती द्यावी. कारखान्याचे गाळप बंद पडल्यामुळे परिसरातील शेतकऱ्यांचा ऊस हर्षा, मृणाल आणि लैला या अन्य साखर कारखान्यांकडे वळविण्याची वेळ आली आहे. त्यामुळे शेतकऱ्यांना वाहतूक, तोडणी आणि गाळपाच्या नियोजनाबाबत अडचणी निर्माण होण्याची शक्यता असल्याचेही त्यांनी नमूद केले.
जर्मन तंत्रज्ञानाच्या आश्वासनाचे काय झाले?…..
शेतकरी नेते सिदगौडा मोदगी यांनीही कारखाना व्यवस्थापनाच्या कार्यपद्धतीवर तीव्र नाराजी व्यक्त केली. जर्मन तंत्रज्ञानाच्या माध्यमातून मलप्रभा साखर कारखान्याचा कायापालट होईल, आधुनिक यंत्रसामग्री बसवून कारखाना प्रगतीच्या दिशेने वाटचाल करेल, या अपेक्षेने शेतकऱ्यांनी चन्नराज हट्टीहोळी यांच्याकडे नेतृत्व सोपविले होते. मात्र, प्रत्यक्षात कारखान्याच्या कामकाजाबाबत अनेक प्रश्न निर्माण झाले आहेत.
मृणाल साखर कारखान्याला ऊस पुरवठा करता यावा, या उद्देशानेच टर्बाइन स्फोटाची घटना घडवून आणली असावी, असा संशय त्यांनी व्यक्त केला. या आरोपांची निष्पक्ष चौकशी होऊन सत्य जनतेसमोर यावे आणि या संपूर्ण प्रकरणाची नैतिक जबाबदारी अध्यक्षांनी स्वीकारावी, अशी मागणी मोदगी यांनी केली.
दुरुस्तीच्या कामातील कंत्राटांवरही प्रश्नचिन्ह…..
यंत्रसामग्रीची देखभाल आणि दुरुस्तीच्या कामातील कथित अनियमिततेचा मुद्दा शेतकरी नेते बसनगौडा पाटील यांनी उपस्थित केला. दरवर्षी बॉयलर आणि अन्य यंत्रणांची दुरुस्ती करणाऱ्या अनुभवी तंत्रज्ञांना यंदा डावलण्यात आले असून, नवख्या व्यक्तींना दुरुस्तीचे कंत्राट देण्यात आल्याचा आरोप त्यांनी केला.
दुरुस्तीच्या कामात योग्य ती काळजी घेतली असती तर अशी घटना टाळता आली असती का, याचीही चौकशी होणे गरजेचे आहे. तसेच जाणीवपूर्वक स्फोट घडवून आणून शेतकऱ्यांचा ऊस हर्षा, मृणाल आणि लैला या कारखान्यांकडे वळविण्याचा प्रयत्न झाला आहे का, याबाबतही त्यांनी संशय व्यक्त केला. या सर्व बाबींची तांत्रिक आणि स्वतंत्र चौकशी करण्याची मागणी त्यांनी केली.
स्थानिक ऊसतोडणी मजुरांना डावलल्याचा आरोप…..
कारखान्याच्या व्यवस्थापनावर स्थानिक ऊसतोडणी मजुरांच्या रोजगाराचा प्रश्नही उपस्थित करण्यात आला. कारखान्याच्या स्थापनेपासून स्थानिक ऊसतोडणी टोळ्यांना प्राधान्य दिले जात होते. त्यामुळे अनेक स्थानिक कुटुंबांना रोजगार उपलब्ध होत होता. मात्र, सध्याच्या प्रशासनाने स्थानिक टोळ्यांना बाजूला सारून महाराष्ट्रासह अन्य जिल्ह्यांतील ऊसतोडणी टोळ्यांना सुमारे १६ कोटी रुपयांची उचल दिल्याचा आरोप शेतकरी नेत्यांनी केला.
यामुळे स्थानिक तरुणांच्या रोजगारावर गदा येत असून, स्थानिक मजुरांवर अन्याय होत असल्याची भावना त्यांनी व्यक्त केली. कारखान्याच्या कामकाजात स्थानिक कामगार आणि ऊसतोडणी मजुरांना पुन्हा प्राधान्य देण्यात यावे, तसेच त्यांचा रोजगार सुरक्षित ठेवावा, अशी मागणी करण्यात आली.
तीन वर्षांपासून ऑडिटचा दावा; अहवाल कुठे?……
कारखान्याच्या आर्थिक व्यवहारांबाबतही शेतकरी नेत्यांनी गंभीर प्रश्न उपस्थित केले. गेल्या तीन वर्षांपासून अध्यक्ष हट्टीहोळी हे कारखान्याचे लेखापरीक्षण (ऑडिट) पूर्ण झाल्याचे सांगत आहेत. मात्र, संबंधित शासकीय कार्यालयात चौकशी केली असता ऑडिट पूर्ण झाले नसल्याचे समोर येत असल्याचा दावा शेतकरी नेत्यांनी केला.
जर लेखापरीक्षण पूर्ण झाले असेल तर त्याची अधिकृत प्रत सभासद आणि भागधारकांना उपलब्ध करून द्यावी. अन्यथा तातडीने लेखापरीक्षण पूर्ण करून त्याचा अहवाल सार्वजनिक करावा. कारखान्याच्या आर्थिक व्यवहारांबाबत सभासदांमध्ये संभ्रम निर्माण होऊ नये आणि भागधारकांची दिशाभूल थांबवावी, असा इशाराही यावेळी देण्यात आला.
कारखाना प्रशासनाच्या भूमिकेकडे जिल्ह्याचे लक्ष…..
टर्बाइन स्फोट, कारखान्याचे बंद पडलेले गाळप, ऊस अन्य कारखान्यांकडे वळविण्याची वेळ, दुरुस्तीच्या कामातील कथित अनियमितता, स्थानिक मजुरांचा रोजगार आणि लेखापरीक्षणातील पारदर्शकता अशा अनेक मुद्द्यांवरून मलप्रभा साखर कारखाना व्यवस्थापन सध्या शेतकरी नेत्यांच्या निशाण्यावर आले आहे.
चार लाख टन ऊस गाळपाचे उद्दिष्ट, शेतकऱ्यांच्या उसाचे योग्य नियोजन आणि कारखान्याच्या आर्थिक व्यवहारांची पारदर्शकता या प्रश्नांची उत्तरे व्यवस्थापनाने देणे आवश्यक आहे. शेतकरी नेत्यांनी केलेल्या गंभीर आरोपांवर कारखाना प्रशासन आणि अध्यक्ष चन्नराज हट्टीहोळी यांची अधिकृत भूमिका अद्याप समोर आलेली नाही. त्यामुळे या आरोपांवर व्यवस्थापन काय स्पष्टीकरण देते, टर्बाइन स्फोटाची चौकशी कशी होते आणि कारखान्याचे गाळप पुन्हा कधी सुरू होते, याकडे संपूर्ण बेळगाव जिल्ह्यातील शेतकरी आणि सभासदांचे लक्ष लागले आहे.
ಮಲಪ್ರಭಾ ಸಕ್ಕರೆ ಕಾರ್ಖಾನೆಯ ಟರ್ಬೈನ್ ಸ್ಫೋಟ ಪ್ರಕರಣ; ರೈತ ಮುಖಂಡರ ಆಕ್ರೋಶ – ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಅವರ ಆಡಳಿತ ವೈಖರಿ ವಿರುದ್ಧ ಗಂಭೀರ ಆರೋಪ!
ಬೆಳಗಾವಿ : ಪ್ರತಿನಿಧಿ
ಎಂ ಕೆ ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಟರ್ಬೈನ್ ಸ್ಫೋಟದ ಘಟನೆಯಿಂದ ಇದೀಗ ಜಿಲ್ಲೆಯ ಸಕ್ಕರೆ ಉದ್ಯಮ ಹಾಗೂ ರೈತ ವಲಯದಲ್ಲಿ ಭಾರೀ ಸಂಚಲನ ಉಂಟಾಗಿದೆ. ಈ ಘಟನೆಯನ್ನು ಖಂಡಿಸಿ ರೈತ ಮುಖಂಡರು ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಖಾನೆಯ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರ ಕಾರ್ಯವೈಖರಿ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಯು ನಾಲ್ಕು ಲಕ್ಷ ಟನ್ ಕಬ್ಬು ನುರಿಸುವ ಗುರಿಯನ್ನು ಹೊಂದಿತ್ತು. ಆದರೆ ಟರ್ಬೈನ್ ಸ್ಫೋಟದಿಂದ ಕಬ್ಬು ನುರಿಸುವ ಕಾರ್ಯಕ್ಕೆ ಅಡ್ಡಿಯಾದರೆ, ಅದರಿಂದ ಉಂಟಾಗುವ ನಷ್ಟದ ಹೊಣೆಯನ್ನು ಅಧ್ಯಕ್ಷರೇ ವೈಯಕ್ತಿಕವಾಗಿ ಹೊತ್ತುಕೊಳ್ಳಬೇಕು ಹಾಗೂ ನಿಗದಿತ ಗುರಿ ತಲುಪಲು ಸಾಧ್ಯವಾಗದಿದ್ದರೆ ತಮ್ಮ ಸ್ವಂತ ಹಣದಿಂದ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಪ್ರಕಾಶ್ ನಾಯಕ್ ಆಗ್ರಹಿಸಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವಿಧ ರೈತ ಮುಖಂಡರು ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಬ್ಬು ನುರಿಸುವ ಹಂಗಾಮು ಆರಂಭವಾಗಿ ಎರಡೇ ದಿನಗಳಲ್ಲಿ ಟರ್ಬೈನ್ ಸ್ಫೋಟ ಸಂಭವಿಸಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ಈ ಘಟನೆಯ ಹಿಂದಿನ ನಿಖರ ಕಾರಣವೇನು ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವುದು ಅಗತ್ಯ ಎಂದು ಪ್ರಕಾಶ್ ನಾಯಕ್ ಹೇಳಿದರು.
ಟರ್ಬೈನ್ ಸ್ಫೋಟದಿಂದ ಕಾರ್ಖಾನೆಗೆ ಎಷ್ಟು ಆರ್ಥಿಕ ನಷ್ಟ ಉಂಟಾಗಿದೆ, ಯಂತ್ರೋಪಕರಣಗಳ ಸ್ಥಿತಿ ಹೇಗಿತ್ತು ಹಾಗೂ ಕಾರ್ಮಿಕರ ಸುರಕ್ಷತೆಗಾಗಿ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂಬುದರ ಕುರಿತು ಆಡಳಿತ ಮಂಡಳಿಯು ಪಾರದರ್ಶಕವಾಗಿ ಮಾಹಿತಿ ನೀಡಬೇಕು. ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯ ಸ್ಥಗಿತಗೊಂಡಿರುವುದರಿಂದ ಸುತ್ತಮುತ್ತಲಿನ ರೈತರು ತಮ್ಮ ಕಬ್ಬನ್ನು ಹರ್ಷಾ, ಮೃಣಾಲ್ ಹಾಗೂ ಲೈಲಾ ಸೇರಿದಂತೆ ಇತರ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರಿಗೆ ಕಬ್ಬಿನ ಸಾಗಣೆ, ಕಟಾವು ಹಾಗೂ ನುರಿಸುವಿಕೆಯ ಯೋಜನೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಜರ್ಮನ್ ತಂತ್ರಜ್ಞಾನದ ಭರವಸೆಯ ಕಥೆ ಏನಾಯಿತು?
ರೈತ ಮುಖಂಡ ಸಿದಗೌಡ ಮೊದಗಿ ಅವರು ಕೂಡ ಕಾರ್ಖಾನೆಯ ಆಡಳಿತ ಮಂಡಳಿಯ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜರ್ಮನ್ ತಂತ್ರಜ್ಞಾನದ ಮೂಲಕ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಸಮಗ್ರ ಅಭಿವೃದ್ಧಿಯಾಗಲಿದೆ, ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ಕಾರ್ಖಾನೆಯನ್ನು ಪ್ರಗತಿಯತ್ತ ಕೊಂಡೊಯ್ಯಲಾಗುವುದು ಎಂಬ ನಿರೀಕ್ಷೆಯಿಂದ ರೈತರು ಚನ್ನರಾಜ ಹಟ್ಟಿಹೊಳಿ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಿದ್ದರು. ಆದರೆ ವಾಸ್ತವದಲ್ಲಿ ಕಾರ್ಖಾನೆಯ ಕಾರ್ಯನಿರ್ವಹಣೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ ಎಂದು ಅವರು ಹೇಳಿದರು.
ಮೃಣಾಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಲು ಅನುಕೂಲವಾಗುವ ಉದ್ದೇಶದಿಂದಲೇ ಟರ್ಬೈನ್ ಸ್ಫೋಟದ ಘಟನೆ ಉಂಟುಮಾಡಿರಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದರು. ಈ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದೆ ತರಬೇಕು. ಅಲ್ಲದೆ, ಈ ಸಂಪೂರ್ಣ ಪ್ರಕರಣದ ನೈತಿಕ ಹೊಣೆಯನ್ನು ಕಾರ್ಖಾನೆಯ ಅಧ್ಯಕ್ಷರು ವಹಿಸಿಕೊಳ್ಳಬೇಕು ಎಂದು ಮೊದಗಿ ಆಗ್ರಹಿಸಿದರು.
ದುರಸ್ತಿ ಕಾಮಗಾರಿಗಳ ಗುತ್ತಿಗೆಗಳ ಬಗ್ಗೆಯೂ ಅನುಮಾನ
ಯಂತ್ರೋಪಕರಣಗಳ ನಿರ್ವಹಣೆ ಹಾಗೂ ದುರಸ್ತಿ ಕಾಮಗಾರಿಗಳಲ್ಲಿನ ಸಂಭಾವ್ಯ ಅವ್ಯವಹಾರಗಳ ಕುರಿತು ರೈತ ಮುಖಂಡ ಬಸನಗೌಡ ಪಾಟೀಲ ಅವರು ಪ್ರಶ್ನೆಗಳನ್ನು ಎತ್ತಿದರು. ಪ್ರತಿವರ್ಷ ಬಾಯ್ಲರ್ ಹಾಗೂ ಇತರ ಯಂತ್ರೋಪಕರಣಗಳ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ಅನುಭವಿ ತಂತ್ರಜ್ಞರನ್ನು ಈ ಬಾರಿ ಕಡೆಗಣಿಸಿ, ಅನುಭವವಿಲ್ಲದ ಹೊಸಬರಿಗೆ ದುರಸ್ತಿ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ ಎಂದು ಅವರು ಆರೋಪಿಸಿದರು.
ದುರಸ್ತಿ ಕಾಮಗಾರಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೆ ಇಂತಹ ಘಟನೆಯನ್ನು ತಪ್ಪಿಸಲು ಸಾಧ್ಯವಿತ್ತೇ ಎಂಬ ಬಗ್ಗೆಯೂ ತನಿಖೆಯಾಗಬೇಕು. ಅಲ್ಲದೆ, ಉದ್ದೇಶಪೂರ್ವಕವಾಗಿ ಸ್ಫೋಟ ಸಂಭವಿಸುವಂತೆ ಮಾಡಿ ರೈತರ ಕಬ್ಬನ್ನು ಹರ್ಷಾ, ಮೃಣಾಲ್ ಹಾಗೂ ಲೈಲಾ ಸಕ್ಕರೆ ಕಾರ್ಖಾನೆಗಳಿಗೆ ವರ್ಗಾಯಿಸುವ ಪ್ರಯತ್ನ ನಡೆದಿದೆಯೇ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದರು. ಈ ಎಲ್ಲ ವಿಷಯಗಳ ಕುರಿತು ತಾಂತ್ರಿಕ ಹಾಗೂ ಸ್ವತಂತ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಸ್ಥಳೀಯ ಕಬ್ಬು ಕಟಾವು ಕಾರ್ಮಿಕರನ್ನು ಕಡೆಗಣಿಸಿದ ಆರೋಪ
ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಸ್ಥಳೀಯ ಕಬ್ಬು ಕಟಾವು ಕಾರ್ಮಿಕರ ಉದ್ಯೋಗದ ವಿಚಾರವಾಗಿಯೂ ಆರೋಪಗಳು ಕೇಳಿಬಂದಿವೆ. ಕಾರ್ಖಾನೆ ಸ್ಥಾಪನೆಯಾದಾಗಿನಿಂದ ಸ್ಥಳೀಯ ಕಬ್ಬು ಕಟಾವು ತಂಡಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಇದರಿಂದ ಅನೇಕ ಸ್ಥಳೀಯ ಕುಟುಂಬಗಳಿಗೆ ಉದ್ಯೋಗಾವಕಾಶ ದೊರೆಯುತ್ತಿತ್ತು. ಆದರೆ ಈಗಿನ ಆಡಳಿತ ಮಂಡಳಿಯು ಸ್ಥಳೀಯ ತಂಡಗಳನ್ನು ಕಡೆಗಣಿಸಿ ಮಹಾರಾಷ್ಟ್ರ ಸೇರಿದಂತೆ ಇತರ ಜಿಲ್ಲೆಗಳ ಕಬ್ಬು ಕಟಾವು ತಂಡಗಳಿಗೆ ಸುಮಾರು 16 ಕೋಟಿ ರೂಪಾಯಿ ಮುಂಗಡ ಹಣ ನೀಡಿದೆ ಎಂದು ರೈತ ಮುಖಂಡರು ಆರೋಪಿಸಿದರು.
ಇದರಿಂದ ಸ್ಥಳೀಯ ಯುವಕರ ಉದ್ಯೋಗಾವಕಾಶಗಳಿಗೆ ಹೊಡೆತ ಬೀಳುತ್ತಿದ್ದು, ಸ್ಥಳೀಯ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದರು. ಕಾರ್ಖಾನೆಯ ಕಾರ್ಯನಿರ್ವಹಣೆಯಲ್ಲಿ ಸ್ಥಳೀಯ ಕಾರ್ಮಿಕರು ಹಾಗೂ ಕಬ್ಬು ಕಟಾವು ತಂಡಗಳಿಗೆ ಮತ್ತೆ ಆದ್ಯತೆ ನೀಡಬೇಕು ಮತ್ತು ಅವರ ಉದ್ಯೋಗವನ್ನು ಭದ್ರಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಮೂರು ವರ್ಷಗಳಿಂದ ಆಡಿಟ್ ಪೂರ್ಣಗೊಂಡಿದೆ ಎಂಬ ಹೇಳಿಕೆ; ವರದಿ ಎಲ್ಲಿದೆ?
ಕಾರ್ಖಾನೆಯ ಆರ್ಥಿಕ ವ್ಯವಹಾರಗಳ ಬಗ್ಗೆಯೂ ರೈತ ಮುಖಂಡರು ಗಂಭೀರ ಪ್ರಶ್ನೆಗಳನ್ನು ಎತ್ತಿದರು. ಕಳೆದ ಮೂರು ವರ್ಷಗಳಿಂದ ಅಧ್ಯಕ್ಷ ಹಟ್ಟಿಹೊಳಿ ಅವರು ಕಾರ್ಖಾನೆಯ ಲೆಕ್ಕಪರಿಶೋಧನೆ (ಆಡಿಟ್) ಪೂರ್ಣಗೊಂಡಿದೆ ಎಂದು ಹೇಳುತ್ತಿದ್ದಾರೆ. ಆದರೆ ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ವಿಚಾರಿಸಿದಾಗ ಆಡಿಟ್ ಪೂರ್ಣಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು.
ಒಂದು ವೇಳೆ ಲೆಕ್ಕಪರಿಶೋಧನೆ ಪೂರ್ಣಗೊಂಡಿದ್ದರೆ ಅದರ ಅಧಿಕೃತ ಪ್ರತಿಯನ್ನು ಕಾರ್ಖಾನೆಯ ಸದಸ್ಯರು ಹಾಗೂ ಷೇರುದಾರರಿಗೆ ಒದಗಿಸಬೇಕು. ಇಲ್ಲದಿದ್ದರೆ ಕೂಡಲೇ ಲೆಕ್ಕಪರಿಶೋಧನೆ ಪೂರ್ಣಗೊಳಿಸಿ ಅದರ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಕಾರ್ಖಾನೆಯ ಆರ್ಥಿಕ ವ್ಯವಹಾರಗಳ ಕುರಿತು ಸದಸ್ಯರಲ್ಲಿ ಗೊಂದಲ ಉಂಟಾಗಬಾರದು ಹಾಗೂ ಷೇರುದಾರರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ಅವರು ಎಚ್ಚರಿಕೆ ನೀಡಿದರು.
ಕಾರ್ಖಾನೆ ಆಡಳಿತ ಮಂಡಳಿಯ ಪ್ರತಿಕ್ರಿಯೆಯತ್ತ ಜಿಲ್ಲೆಯ ಗಮನ
ಟರ್ಬೈನ್ ಸ್ಫೋಟ, ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯ ಸ್ಥಗಿತ, ರೈತರ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ವರ್ಗಾಯಿಸುವ ಅನಿವಾರ್ಯತೆ, ದುರಸ್ತಿ ಕಾಮಗಾರಿಗಳಲ್ಲಿನ ಸಂಭಾವ್ಯ ಅಕ್ರಮಗಳು, ಸ್ಥಳೀಯ ಕಾರ್ಮಿಕರ ಉದ್ಯೋಗ ಹಾಗೂ ಲೆಕ್ಕಪರಿಶೋಧನೆಯಲ್ಲಿನ ಪಾರದರ್ಶಕತೆ ಸೇರಿದಂತೆ ಹಲವು ವಿಚಾರಗಳಿಂದ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಸದ್ಯ ರೈತ ಮುಖಂಡರ ತೀವ್ರ ಟೀಕೆಗೆ ಗುರಿಯಾಗಿದೆ.
ನಾಲ್ಕು ಲಕ್ಷ ಟನ್ ಕಬ್ಬು ನುರಿಸುವ ಗುರಿ, ರೈತರ ಕಬ್ಬಿನ ಸಮರ್ಪಕ ನಿರ್ವಹಣೆ ಹಾಗೂ ಕಾರ್ಖಾನೆಯ ಆರ್ಥಿಕ ವ್ಯವಹಾರಗಳ ಪಾರದರ್ಶಕತೆ ಕುರಿತು ಆಡಳಿತ ಮಂಡಳಿಯು ಸ್ಪಷ್ಟ ಉತ್ತರ ನೀಡಬೇಕಾಗಿದೆ. ರೈತ ಮುಖಂಡರು ಮಾಡಿರುವ ಗಂಭೀರ ಆರೋಪಗಳ ಕುರಿತು ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಅವರ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಂದಿಲ್ಲ.
ಹೀಗಾಗಿ ರೈತ ಮುಖಂಡರ ಆರೋಪಗಳಿಗೆ ಆಡಳಿತ ಮಂಡಳಿಯು ಯಾವ ರೀತಿಯ ಸ್ಪಷ್ಟನೆ ನೀಡಲಿದೆ, ಟರ್ಬೈನ್ ಸ್ಫೋಟದ ಕುರಿತು ಯಾವ ರೀತಿಯ ತನಿಖೆ ನಡೆಯಲಿದೆ ಹಾಗೂ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಪುನಃ ಯಾವಾಗ ಆರಂಭವಾಗಲಿದೆ ಎಂಬುದರ ಕುರಿತು ಬೆಳಗಾವಿ ಜಿಲ್ಲೆಯ ರೈತರು ಹಾಗೂ ಕಾರ್ಖಾನೆಯ ಸದಸ್ಯರು ಕುತೂಹಲದಿಂದ ಕಾಯುತ್ತಿದ್ದಾರೆ.

