खानापूर–गर्लगुंजी बस वेळेत सोडा; रविवारी बेळगाव–गर्लगुंजी बस पूर्ववत सुरू करा ; बस डेपो व्यवस्थापकांना निवेदन.
खानापूर : प्रतिनिधी
खानापूर आगारातून गर्लगुंजीकडे जाणारी सकाळी 9 वाजताची बस वेळेत सोडण्यात यावी, तसेच रविवारी बंद करण्यात आलेली बेळगाव–गर्लगुंजी बससेवा पूर्ववत सुरू करावी, अशी जोरदार मागणी गर्लगुंजी परिसरातील ग्रामस्थांनी केली आहे. यासंदर्भात खानापूर बस डेपोचे व्यवस्थापक संतोष यांची भेट घेऊन त्यांना निवेदन सादर करण्यात आले.
खानापूर आगारातून सकाळी 9 वाजता सुटणारी बस गेल्या सुमारे 15 दिवसांपासून वेळेत खानापूरला पोहोचत नसल्याने गर्लगुंजी, निडगल, भांडरगाळी आणि बरगाव येथील शाळकरी विद्यार्थ्यांना मोठा त्रास सहन करावा लागत आहे. बस उशिरा येत असल्यामुळे विद्यार्थ्यांना शाळेतील सुरुवातीचा एक तास चुकवावा लागत आहे. शाळांमध्ये विद्यार्थ्यांची उपस्थिती ऑनलाइन पद्धतीने नोंदवली जात असल्याने त्याचा परिणाम विद्यार्थ्यांच्या उपस्थितीवर होत असून, विनाकारण विद्यार्थ्यांचे शैक्षणिक नुकसान होत आहे.
बससेवेतील या अनियमिततेमुळे विद्यार्थ्यांसह सर्वसामान्य प्रवाशांनाही मनस्ताप सहन करावा लागत आहे. त्यामुळे सकाळपासून खानापूर आगारातून सुटणाऱ्या सर्व बसेस निर्धारित वेळापत्रकानुसार वेळेत सोडण्यात याव्यात, अशी मागणी निवेदनातून करण्यात आली.
त्याचबरोबर बेळगाव आगारातून रविवारी धावणारी बेळगाव–गर्लगुंजी बस प्रवाशांची संख्या कमी असल्याचे कारण देत बंद करण्यात आली होती. मात्र, या बससेवेवर अवलंबून असलेल्या नागरिकांना रविवारी बेळगावला जाण्या-येण्यासाठी मोठ्या अडचणींचा सामना करावा लागत आहे. त्यामुळे ही बससेवा पूर्वीप्रमाणे नियमित सुरू ठेवावी, अशी मागणीही ग्रामस्थांनी केली.
यावेळी बस डेपो व्यवस्थापक संतोष यांनी बेळगाव आगार तसेच संबंधित DTO अधिकाऱ्यांशी संपर्क साधून रविवारी बेळगाव–गर्लगुंजी बससेवा सुरळीत करण्याबाबत चर्चा केली. तसेच खानापूर आगारातील बसेस वेळेत सोडण्याची कार्यवाही करण्यात येईल, असे आश्वासन त्यांनी उपस्थितांना दिले.
दरम्यान, विद्यार्थ्यांचे शैक्षणिक नुकसान आणि नागरिकांची गैरसोय यापुढे खपवून घेतली जाणार नाही. बससेवा वेळेत आणि नियमित सुरू न ठेवल्यास यापुढे संबंधित प्रशासनाला जाब विचारला जाईल, असा स्पष्ट इशारा गर्लगुंजीचे माजी ग्रामपंचायत सदस्य प्रसाद पाटील यांनी डेपो व्यवस्थापकांना दिला.
यावेळी गर्लगुंजीचे माजी ग्रामपंचायत सदस्य प्रसाद पाटील, परशराम कोलकार, सदानंद कुंभार, अजय कोलकार, रोहित नावलगी, परशराम बेळगावकर आणि संतोष नाईक उपस्थित होते.
ಖಾನಾಪುರ–ಗರ್ಲಗುಂಜಿ ನಡುವಿನ ಬಸ್ ಸರಿಯಾದ ಸಮಯಕ್ಕೆ ಬಿಡಲು ಅಗ್ರಹ ; ಭಾನುವಾರ ದಿನದಂದೂ ಬೆಳಗಾವಿ–ಗರ್ಲಗುಂಜಿ ಬಸ್ ಸೇವೆಯನ್ನು ಪುನರಾರಂಭಿಸಿ; ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ.
ಖಾನಾಪುರ : ಪ್ರತಿನಿಧಿ
ಖಾನಾಪುರ ಬಸ್ ಡಿಪೋದಿಂದ ಗರ್ಲಗುಂಜಿಗೆ ತೆರಳುವ ಬೆಳಿಗ್ಗೆ 9 ಗಂಟೆಯ ಬಸ್ ಅನ್ನು ನಿಗದಿತ ಸಮಯಕ್ಕೆ ಸರಿಯಾಗಿ ಬಿಡಬೇಕು. ಅದೇ ರೀತಿ ಭಾನುವಾರದಂದು ಸ್ಥಗಿತಗೊಳಿಸಲಾಗಿರುವ ಬೆಳಗಾವಿ–ಗರ್ಲಗುಂಜಿ ಬಸ್ ಸೇವೆಯನ್ನು ಪುನರಾರಂಭಿಸಬೇಕು ಎಂದು ಗರ್ಲಗುಂಜಿ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರವಾಗಿ ಒತ್ತಾಯಿಸಿದ್ದಾರೆ. ಈ ಕುರಿತು ಖಾನಾಪುರ ಬಸ್ ಡಿಪೋ ವ್ಯವಸ್ಥಾಪಕ ಸಂತೋಷ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಖಾನಾಪುರ ಡಿಪೋದಿಂದ ಬೆಳಿಗ್ಗೆ 9 ಗಂಟೆಗೆ ಹೊರಡುವ ಬಸ್ ಕಳೆದ ಸುಮಾರು 15 ದಿನಗಳಿಂದ ನಿಗದಿತ ಸಮಯಕ್ಕೆ ಖಾನಾಪುರಕ್ಕೆ ತಲುಪುತ್ತಿಲ್ಲ. ಇದರಿಂದಾಗಿ ಗರ್ಲಗುಂಜಿ, ನಿಡಗಲ್, ಭಂಡರಗಾಳಿ ಮತ್ತು ಬರಗಾವ್ ಗ್ರಾಮದ ಶಾಲಾ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬಸ್ ತಡವಾಗಿ ಆಗಮಿಸುತ್ತಿರುವುದರಿಂದ ವಿದ್ಯಾರ್ಥಿಗಳು ಶಾಲೆಯ ಆರಂಭದ ಒಂದು ಗಂಟೆಯ ಪಾಠವನ್ನು ತಪ್ಪಿಸಿಕೊಳ್ಳುವಂತಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಆನ್ಲೈನ್ ಮೂಲಕ ದಾಖಲಿಸಲಾಗುತ್ತಿರುವುದರಿಂದ, ತಡವಾಗಿ ಶಾಲೆಗೆ ತಲುಪುವ ವಿದ್ಯಾರ್ಥಿಗಳ ಹಾಜರಾತಿಯ ಮೇಲೂ ಪರಿಣಾಮ ಬೀರುತ್ತಿದೆ. ಇದರಿಂದ ಯಾವುದೇ ತಪ್ಪಿಲ್ಲದಿದ್ದರೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತಿದೆ.
ಬಸ್ ಸಂಚಾರದಲ್ಲಿನ ಈ ಅನಿಯಮಿತತೆಯಿಂದ ವಿದ್ಯಾರ್ಥಿಗಳ ಜೊತೆಗೆ ಸಾಮಾನ್ಯ ಪ್ರಯಾಣಿಕರೂ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಬೆಳಿಗ್ಗೆಯಿಂದ ಖಾನಾಪುರ ಡಿಪೋದಿಂದ ಸಂಚರಿಸುವ ಎಲ್ಲ ಬಸ್ಗಳನ್ನು ನಿಗದಿತ ವೇಳಾಪಟ್ಟಿಯಂತೆ ಸಮಯಕ್ಕೆ ಸರಿಯಾಗಿ ಬಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದೇ ಸಂದರ್ಭದಲ್ಲಿ ಬೆಳಗಾವಿ ಡಿಪೋದಿಂದ ಭಾನುವಾರದಂದು ಸಂಚರಿಸುತ್ತಿದ್ದ ಬೆಳಗಾವಿ–ಗರ್ಲಗುಂಜಿ ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ ಎಂಬ ಕಾರಣ ನೀಡಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈ ಬಸ್ ಸೇವೆಯನ್ನು ಅವಲಂಬಿಸಿರುವ ಸಾರ್ವಜನಿಕರು ಭಾನುವಾರದಂದು ಬೆಳಗಾವಿಗೆ ಹೋಗಿ ಬರಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಬಸ್ ಸೇವೆಯನ್ನು ಹಿಂದಿನಂತೆ ನಿಯಮಿತವಾಗಿ ಪುನರಾರಂಭಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಸ್ ಡಿಪೋ ವ್ಯವಸ್ಥಾಪಕ ಸಂತೋಷ ಅವರು ಬೆಳಗಾವಿ ಡಿಪೋ ಹಾಗೂ ಸಂಬಂಧಪಟ್ಟ DTO ಅಧಿಕಾರಿಗಳನ್ನು ಸಂಪರ್ಕಿಸಿ, ಭಾನುವಾರದ ಬೆಳಗಾವಿ–ಗರ್ಲಗುಂಜಿ ಬಸ್ ಸೇವೆಯನ್ನು ಸುಗಮಗೊಳಿಸುವ ಕುರಿತು ಚರ್ಚಿಸಿದರು. ಅಲ್ಲದೆ, ಖಾನಾಪುರ ಡಿಪೋದಿಂದ ಬಸ್ಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಬಿಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮನವಿ ಸಲ್ಲಿಸಿದವರಿಗೆ ಭರವಸೆ ನೀಡಿದರು.
ಇದೇ ವೇಳೆ ವಿದ್ಯಾರ್ಥಿಗಳ ಶೈಕ್ಷಣಿಕ ನಷ್ಟ ಹಾಗೂ ಸಾರ್ವಜನಿಕರ ಅನಾನುಕೂಲತೆಯನ್ನು ಇನ್ನು ಮುಂದೆ ಸಹಿಸುವುದಿಲ್ಲ. ಬಸ್ ಸೇವೆಯನ್ನು ಸಮಯಕ್ಕೆ ಸರಿಯಾಗಿ ಮತ್ತು ನಿಯಮಿತವಾಗಿ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಲಾಗುವುದು ಎಂದು ಗರ್ಲಗುಂಜಿಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ್ ಪಾಟೀಲ ಅವರು ಡಿಪೋ ವ್ಯವಸ್ಥಾಪಕರಿಗೆ ಸ್ಪಷ್ಟ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗರ್ಲಗುಂಜಿಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ್ ಪಾಟೀಲ, ಪರಶುರಾಮ ಕೊಲಕಾರ, ಸದಾನಂದ ಕುಂಬಾರ, ಅಜಯ ಕೊಲಕಾರ, ರೋಹಿತ್ ನಾವಲಗಿ, ಪರಶುರಾಮ ಬೆಳಗಾವಕರ ಹಾಗೂ ಸಂತೋಷ ನಾಯ್ಕ ಉಪಸ್ಥಿತರಿದ್ದರು.

