रेणुका यल्लम्मा देवी मंदिर विकास प्राधिकरणावर खानापूर ब्लॉक काँग्रेसचे माजी अध्यक्ष महादेव कोळी यांची निवड.
खानापूर : प्रतिनिधी
खानापूर तालुक्यातील लक्केबैल गावचे रहिवासी तथा खानापूर तालुका ब्लॉक काँग्रेसचे माजी अध्यक्ष महादेव कोळी यांची रेणुका यल्लम्मा देवी मंदिर विकास प्राधिकरणावर निवड करण्यात आली आहे. एआयसीसीच्या राष्ट्रीय सचिव तथा खानापूरच्या माजी आमदार डॉ. अंजलीताई निंबाळकर यांच्या मार्गदर्शनानुसार कर्नाटक सरकारने ही निवड केल्याने खानापूर तालुक्यात आनंदाचे वातावरण निर्माण झाले आहे.
रेणुका यल्लम्मा देवी मंदिर हे कर्नाटकातील लाखो भाविकांचे श्रद्धास्थान असून, सौंदत्ती येथील या प्रसिद्ध तीर्थक्षेत्राला दरवर्षी देशाच्या विविध भागांतून मोठ्या संख्येने भाविक दर्शनासाठी येतात. मंदिराच्या धार्मिक, सांस्कृतिक आणि विकासात्मक कार्याला अधिक गती देण्यासाठी मंदिर विकास प्राधिकरणाची भूमिका महत्त्वपूर्ण मानली जाते.
महादेव कोळी यांनी खानापूर तालुका ब्लॉक काँग्रेसचे अध्यक्ष म्हणून कार्यरत असताना तालुक्यातील पक्ष संघटन मजबूत करण्यासाठी तसेच सामाजिक आणि राजकीय क्षेत्रात सक्रिय योगदान दिले आहे. त्यांच्या कार्याची दखल घेत मंदिर विकास प्राधिकरणावर त्यांची निवड झाल्याने खानापूर तालुक्याला राज्यस्तरावर प्रतिनिधित्व करण्याची संधी मिळाली आहे.
डॉ. अंजली निंबाळकर यांच्या मार्गदर्शनातून झालेल्या या निवडीमुळे खानापूर तालुक्यातील काँग्रेस कार्यकर्त्यांमध्ये उत्साहाचे वातावरण असून, महादेव कोळी यांच्यावर अभिनंदनाचा वर्षाव होत आहे.
या निवडीमुळे रेणुका यल्लम्मा देवी मंदिराच्या विकासकामांमध्ये खानापूर तालुक्याचा सहभाग वाढण्यास मदत होईल, अशी अपेक्षा व्यक्त केली जात आहे.
महादेव कोळी यांच्या निवडीबद्दल खानापूर तालुक्यातून अभिनंदन व पुढील कार्यासाठी शुभेच्छा व्यक्त करण्यात येत आहेत.
ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರಕ್ಕೆ ಖಾನಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಾದೇವ ಕೋಳಿ ಆಯ್ಕೆ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕಿನ ಲಕ್ಕೆಬೈಲ್ ಗ್ರಾಮದ ನಿವಾಸಿ ಹಾಗೂ ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮಹಾದೇವ ಕೋಳಿ ಅವರನ್ನು ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಯ್ಕೆ ಮಾಡಲಾಗಿದೆ. ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ತಾಯಿ ನಿಂಬಾಳ್ಕರ್ ಅವರ ಮಾರ್ಗದರ್ಶನದಂತೆ ಕರ್ನಾಟಕ ಸರ್ಕಾರ ಈ ಆಯ್ಕೆ ಮಾಡಿರುವುದರಿಂದ ಖಾನಾಪುರ ತಾಲೂಕಿನಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನವು ಕರ್ನಾಟಕದ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ಸವದತ್ತಿಯಲ್ಲಿರುವ ಈ ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ಪ್ರತಿವರ್ಷ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಾರೆ. ದೇವಸ್ಥಾನದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡುವಲ್ಲಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಪಾತ್ರ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ.
ಮಹಾದೇವ ಕೋಳಿ ಅವರು ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ತಾಲೂಕಿನ ಪಕ್ಷ ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೊಡುಗೆ ನೀಡಿದ್ದಾರೆ. ಅವರ ಕಾರ್ಯವನ್ನು ಗುರುತಿಸಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಯ್ಕೆ ಮಾಡಿರುವುದರಿಂದ ಖಾನಾಪುರ ತಾಲೂಕಿಗೆ ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ದೊರೆತಂತಾಗಿದೆ.
ಡಾ. ಅಂಜಲಿ ನಿಂಬಾಳ್ಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಆಯ್ಕೆಯಿಂದ ಖಾನಾಪುರ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದ್ದು, ಮಹಾದೇವ ಕೋಳಿ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
ಈ ಆಯ್ಕೆಯಿಂದ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಖಾನಾಪುರ ತಾಲೂಕಿನ ಪಾಲ್ಗೊಳ್ಳುವಿಕೆ ಹೆಚ್ಚಾಗಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಮಹಾದೇವ ಕೋಳಿ ಅವರ ಆಯ್ಕೆಗೆ ಖಾನಾಪುರ ತಾಲೂಕಿನ ವಿವಿಧ ಭಾಗಗಳಿಂದ ಅಭಿನಂದನೆಗಳು ಹಾಗೂ ಮುಂದಿನ ಕಾರ್ಯಗಳಿಗೆ ಶುಭಾಶಯಗಳನ್ನು ವ್ಯಕ್ತಪಡಿಸಲಾಗುತ್ತಿದೆ.



