लिंगनमठ क्रॉस येथे ऊसदरासाठी शेतकऱ्यांचा विराट एल्गार! आठ तास महामार्ग रोखला; हजारो शेतकऱ्यांचा सहभाग, 5,500 रुपये प्रतिटन दराची मागणी!
खानापूर : प्रतिनिधी
ऊस उत्पादक शेतकऱ्यांना प्रतिटन 5,500 रुपये दर मिळावा, या प्रमुख मागणीसाठी सुरू असलेल्या राज्यव्यापी आंदोलनाला खानापूर तालुक्यात शनिवारी (31 ऑक्टोबर) मोठे स्वरूप प्राप्त झाले. केंद्र व राज्य सरकारच्या मध्यस्थीने ऊसदराचा प्रश्न सोडवावा, या मागणीसाठी लिंगनमठ क्रॉस येथे शेतकऱ्यांनी तब्बल आठ तास रास्ता रोको आंदोलन केले. सकाळी 10 ते सायंकाळी 6 वाजेपर्यंत सुरू असलेल्या या आंदोलनामुळे ताळगुप्पा-बेळगाव तसेच रामनगर-धारवाड राज्य महामार्गावरील वाहतूक पूर्णपणे विस्कळीत झाली.

अखिल कर्नाटक किसान संघ (रजि.), बेंगळुरू आणि कर्नाटक राज्य रयत संघ हसिरू सेना यांच्या नेतृत्वाखाली हे आंदोलन करण्यात आले. ऊसदराच्या प्रश्नावर झालेली चर्चा व तडजोडीची बैठक निष्फळ ठरल्यानंतर राज्यभरातील शेतकरी संघटनांनी राज्य महामार्ग बंद आंदोलनाची हाक दिली होती. त्याला प्रतिसाद देत लिंगनमठ क्रॉस येथे हजारोंच्या संख्येने शेतकरी, ग्रामस्थ, महिला आणि विविध संघटनांचे कार्यकर्ते एकत्र आले.
खानापूरसह सहा तालुक्यांतील शेतकऱ्यांचा सहभाग….
या आंदोलनात खानापूर, अळ्णावर, कित्तूर, हळियाळ आणि बैलहोंगलसह परिसरातील विविध भागांतील शेतकऱ्यांनी सहभाग नोंदविला. कक्केरी, लिंगनमठ, चुंचवाड, हुलेकेरी, रामापूर, सुरापूर, दड्डी, घसवोळी, भुरणकी, मस्केनट्टी, सुरपूर-केरवाड, मुकबसवनगर, कलमेश्वरनगर, गोळ्ळीहळ्ळी, बीडी, नंदगड, खानापूर, बेकवाड, बैलूर, गुंडेनट्टी, गोसेनट्टी, पारिश्वाड, देवलत्ती, बलोगा, गंदिगवाड, तोलगी, इटगी, गोधोळी, पूर, गुंडोळी, गोदगेरी, तावरगट्टी, नागरगाळी, बाळगुंद, कुंभारवाडा, लोंढा, कडबगट्टी, कोगिलगेरी, अरवटगी, कुंभारकोप्प, अंबोली, डोरी, बेणची, काशिनट्टी, कंबरगणी, कत्रीदड्डी, दिंडलकोप्प आणि सागर आदी अनेक गावांतील शेतकरी सहभागी झाले होते.
विशेष म्हणजे या आंदोलनाला पक्षीय राजकारण बाजूला ठेवून विविध राजकीय पक्षांचे कार्यकर्ते, जातीय व धार्मिक भेदभाव बाजूला ठेवून नागरिक, कर्नाटक रक्षण वेदिकेचे कार्यकर्ते, दलित संघटना तसेच महिला संघटनांनीही पाठिंबा दिला. त्यामुळे लिंगनमठ क्रॉस येथे शेतकऱ्यांचा मोठा जनसमुदाय जमला होता.
5,500 रुपये प्रतिटन दरासाठी केंद्र-राज्य सरकारने पुढाकार घ्यावा!….
अखिल कर्नाटक किसान संघाचे बेंगळुरू राज्य उपाध्यक्ष किशोर मिठारी यांनी आंदोलनस्थळी बोलताना सांगितले की, ऊस उत्पादक शेतकऱ्यांना प्रतिटन 5,500 रुपये दर मिळणे आवश्यक आहे. केंद्र आणि राज्य सरकारने मध्यस्थी करून शेतकऱ्यांना योग्य दर जाहीर करावा. ऊस उत्पादनासाठी शेतकरी मोठ्या प्रमाणात खर्च करतात; मात्र उत्पादन खर्चाच्या तुलनेत मिळणारा दर समाधानकारक नसल्याने शेतकरी आर्थिक अडचणीत सापडत आहेत.
यावेळी त्यांनी खानापूर तालुक्यातील सिंचनाच्या प्रश्नाकडेही सरकारचे लक्ष वेधले. खानापूर तालुक्यातील कणकुंबी येथे उगम पावणाऱ्या मलप्रभा नदीचे पाणी अलमट्टी धरणापर्यंत पोहोचते; मात्र ज्या तालुक्यात या नदीचा उगम होतो, त्याच खानापूर तालुक्यातील शेतकऱ्यांना पुरेसे सिंचनाचे पाणी मिळत नाही, ही दुर्दैवी बाब आहे. त्यामुळे खानापूर तालुक्यात धरण व सिंचन योजना राबवून स्थानिक शेतकऱ्यांना पाणी उपलब्ध करून द्यावे, अशी मागणी त्यांनी राज्य सरकारकडे केली.
न्याय मिळेपर्यंत अहोरात्र धरणे आंदोलनाचा इशारा…..
यावेळी काशिम हत्तीहोळी यांनीही सरकारच्या भूमिकेवर नाराजी व्यक्त केली. ताळगुप्पा-बेळगाव आणि रामनगर-धारवाड या महत्त्वाच्या राज्य महामार्गांवर आठ तास रास्ता रोको करून शेतकऱ्यांनी पक्षविरहित आणि जातीय सलोख्याच्या माध्यमातून आपली एकजूट दाखवून दिली आहे. मुख्यमंत्री डी. के. शिवकुमार तसेच केंद्र सरकारचे अन्न व नागरी पुरवठा मंत्री प्रल्हाद जोशी यांनी शेतकऱ्यांच्या मागण्यांकडे लक्ष देऊन तातडीने निर्णय घ्यावा, अशी मागणी त्यांनी केली.
लिंगनमठ क्रॉस येथे शेतकऱ्यांना न्याय मिळेपर्यंत निरंतर अहोरात्र धरणे सत्याग्रह सुरू ठेवण्यात येईल, असा निर्धारही त्यांनी व्यक्त केला.
महामार्गावर वाहनांच्या लांबच लांब रांगा…..
आठ तास चाललेल्या रास्ता रोको आंदोलनामुळे महामार्गाच्या दोन्ही बाजूंना शेकडो वाहने अडकून पडली. हजारो वाहनांची वाहतूक ठप्प झाल्याने प्रवासी, महिला, लहान मुले आणि इतर वाहनधारकांना मोठ्या गैरसोयींचा सामना करावा लागला. वाहनांच्या लांबच लांब रांगा लागल्याचे चित्र दिवसभर पाहायला मिळाले.
आंदोलनस्थळी परमपूज्य श्री चन्नबसव देवरा (बिळकी), अडवी सिद्धेश्वर स्वामी, प्रभुदेव स्वामी, रमानंद स्वामी, महादेव स्वामी, सुरेश जाधव यांच्यासह विविध मान्यवर उपस्थित होते.
तसेच पांडुरंग मिटगार, श्रीशैल माटोळी, बाबू बिजापूर, महांतेश संगोळी, राजू रपाटे, बसवराज मुगळिहाळी, इनास डिसोझा, पावेल फर्नांडिस, बैरू मांडवी, श्रीकांत पाटील, आनंद माटोळी, मनोहर कदम, शामीर हत्तीहोळी, हबीब हंदूर, यल्लारी निलजकर, दत्त बिडकर, अशफाक अहमद पटेल, नागप्पा कुलमनट्टी, दयानंद गुपित, रमेश वीरापूर, बिष्टप्पा सुंबळी, अंतोनी सोजा यांच्यासह विविध संघटनांचे पदाधिकारी, शेतकरी नेते व कार्यकर्ते मोठ्या संख्येने उपस्थित होते.
घोषणांनी परिसर दणाणला!…..
‘आमचा ऊस, आमचा हक्क, आमची वाटचाल लिंगनमठ क्रॉसकडे’, ‘शेतकरी हा देशाचा कणा आहे’, ‘देशाला अन्न देणारा शेतकरी’, ‘शेतकरी कर्जदार नाही, सरकारच थकबाकीदार आहे’, ‘उठा, जागे व्हा, ध्येय गाठेपर्यंत थांबू नका’, अशा घोषणांनी संपूर्ण परिसर दणाणून गेला होता.
नंदगड पोलीस ठाण्याचे पोलीस निरीक्षक रविकुमार धर्मट्टी यांच्या मार्गदर्शनाखाली पोलिसांनी मोठा बंदोबस्त तैनात केला होता. संभाव्य अनुचित प्रकार टाळण्यासाठी आवश्यक खबरदारी घेण्यात आली. संपूर्ण आंदोलन शांततेत पार पडले.
ऊसदराचा प्रश्न केवळ खानापूर तालुक्यापुरता मर्यादित नसून राज्यातील ऊस उत्पादक शेतकऱ्यांच्या आर्थिक भवितव्याशी निगडित आहे. त्यामुळे 5,500 रुपये प्रतिटन दराच्या मागणीवर सरकार काय निर्णय घेते, याकडे आता ऊस उत्पादक शेतकऱ्यांचे लक्ष लागले आहे.
ಲಿಂಗನಮಠ ಕ್ರಾಸ್ನಲ್ಲಿ ಕಬ್ಬಿನ ಬೆಲೆಗಾಗಿ ರೈತರ ಬೃಹತ್ ಹೋರಾಟ! ಎಂಟು ಗಂಟೆಗಳ ಕಾಲ ರಾಜ್ಯ ಹೆದ್ದಾರಿ ಬಂದ್; ಸಾವಿರಾರು ರೈತರ ಭಾಗಿ, ಪ್ರತಿ ಟನ್ಗೆ ₹5,500 ದರ ನೀಡುವಂತೆ ಆಗ್ರಹ!
ಖಾನಾಪುರ : ಪ್ರತಿನಿಧಿ
ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ₹5,500 ದರ ನೀಡಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟಕ್ಕೆ ಖಾನಾಪುರ ತಾಲೂಕಿನಲ್ಲಿ ಶನಿವಾರ (ಅಕ್ಟೋಬರ್ 31) ಭಾರೀ ಸ್ವರೂಪ ದೊರೆಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯಸ್ಥಿಕೆಯಲ್ಲಿ ಕಬ್ಬಿನ ಬೆಲೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಲಿಂಗನಮಠ ಕ್ರಾಸ್ನಲ್ಲಿ ರೈತರು ಬರೋಬ್ಬರಿ ಎಂಟು ಗಂಟೆಗಳ ಕಾಲ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಈ ಪ್ರತಿಭಟನೆಯಿಂದ ತಾಳಗುಪ್ಪ-ಬೆಳಗಾವಿ ಹಾಗೂ ರಾಮನಗರ-ಧಾರವಾಡ ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಅಖಿಲ ಕರ್ನಾಟಕ ಕಿಸಾನ್ ಸಂಘ (ರಿ.), ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಬ್ಬಿನ ಬೆಲೆ ಸಮಸ್ಯೆಗೆ ಸಂಬಂಧಿಸಿದಂತೆ ನಡೆದ ಚರ್ಚೆ ಹಾಗೂ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರೈತ ಸಂಘಟನೆಗಳು ರಾಜ್ಯ ಹೆದ್ದಾರಿ ಬಂದ್ಗೆ ಕರೆ ನೀಡಿದ್ದವು. ಇದಕ್ಕೆ ಸ್ಪಂದಿಸಿದ ಲಿಂಗನಮಠ ಕ್ರಾಸ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು, ಗ್ರಾಮಸ್ಥರು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಒಂದೆಡೆ ಸೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಖಾನಾಪುರ ಸೇರಿದಂತೆ ಆರು ತಾಲೂಕುಗಳ ರೈತರ ಭಾಗಿ….
ಈ ಪ್ರತಿಭಟನೆಯಲ್ಲಿ ಖಾನಾಪುರ, ಅಳ್ನಾವರ, ಕಿತ್ತೂರು, ಹಳಿಯಾಳ ಹಾಗೂ ಬೈಲಹೊಂಗಲ ಸೇರಿದಂತೆ ಸುತ್ತಮುತ್ತಲಿನ ವಿವಿಧ ಭಾಗಗಳ ರೈತರು ಪಾಲ್ಗೊಂಡಿದ್ದರು. ಕಕ್ಕೇರಿ, ಲಿಂಗನಮಠ, ಚುಂಚವಾಡ, ಹುಲ್ಲಿಕೇರಿ, ರಾಮಾಪುರ, ಸುರಾಪುರ, ದಡ್ಡಿ, ಘಸ್ತೊಳ್ಳಿ ಭುರಣಕಿ, ಮಾಸ್ಕೇನಟ್ಟಿ, ಸುರಾಪುರ-ಕೇರವಾಡ, ಮುಕಬಸವನಗರ, ಕಲ್ಮೇಶ್ವರನಗರ, ಗೊಲ್ಲಿಹಳ್ಳಿ, ಬೀಡಿ, ನಂದಗಡ, ಖಾನಾಪುರ, ಬೇಕವಾಡ, ಬೈಲೂರು, ಗುಂಡೇನಟ್ಟಿ, ಗೋಸೇನಟ್ಟಿ, ಪಾರಿಶ್ವಾಡ, ದೇವಲತ್ತಿ, ಬಲೋಗಾ, ಗಂದಿಗವಾಡ, ತೊಳಗಿ, ಇಟಗಿ, ಗೋಧೋಳಿ, ಪೂರ, ಗುಂಡೊಳ್ಳಿ, ಗೂದಗೇರಿ, ತಾವರಗಟ್ಟಿ, ನಾಗರಗಾಳಿ, ಬಾಳಗುಂದ, ಕುಂಬಾರವಾಡ, ಲೋಂಡಾ, ಕಡಬಗಟ್ಟಿ, ಕೊಗಿಲಗೇರಿ, ಅರವಟಗಿ, ಕುಂಬಾರಕೊಪ್ಪ, ಅಂಬೋಳಿ, ಡೋರಿ, ಬೆಣಚಿ, ಕಾಶಿನಟ್ಟಿ, ಕಂಬಾರಗಣಿ, ಕತ್ರಿದಡ್ಡಿ, ದಿಂಡಲಕೊಪ್ಪ ಹಾಗೂ ಸಾಗರ ಸೇರಿದಂತೆ ಅನೇಕ ಗ್ರಾಮಗಳ ರೈತರು ಭಾಗವಹಿಸಿದ್ದರು.
ವಿಶೇಷವೆಂದರೆ ಈ ಹೋರಾಟಕ್ಕೆ ಪಕ್ಷ ರಾಜಕಾರಣವನ್ನು ಬದಿಗಿಟ್ಟು ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಜಾತಿ ಹಾಗೂ ಧರ್ಮದ ಭೇದಭಾವ ಮರೆತು ಸಾರ್ವಜನಿಕರು, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ದಲಿತ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳು ಬೆಂಬಲ ನೀಡಿದವು. ಇದರಿಂದ ಲಿಂಗನಮಠ ಕ್ರಾಸ್ನಲ್ಲಿ ರೈತರ ಬೃಹತ್ ಜನಸಾಗರವೇ ನೆರೆದಿತ್ತು.
ಪ್ರತಿ ಟನ್ಗೆ ₹5,500 ದರಕ್ಕಾಗಿ ಕೇಂದ್ರ-ರಾಜ್ಯ ಸರ್ಕಾರಗಳು ಮಧ್ಯಸ್ಥಿಕೆ ವಹಿಸಲಿ!….
ಅಖಿಲ ಕರ್ನಾಟಕ ಕಿಸಾನ್ ಸಂಘದ ಬೆಂಗಳೂರು ರಾಜ್ಯ ಉಪಾಧ್ಯಕ್ಷ ಕಿಶೋರ್ ಮಿಠಾರಿ ಅವರು ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿ, ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ₹5,500 ದರ ದೊರೆಯಲೇಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯಸ್ಥಿಕೆ ವಹಿಸಿ ರೈತರಿಗೆ ನ್ಯಾಯಯುತ ಬೆಲೆಯನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಯಲು ರೈತರು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ. ಆದರೆ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ದೊರೆಯುತ್ತಿರುವ ಬೆಲೆ ಸಮಾಧಾನಕರವಾಗಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಖಾನಾಪುರ ತಾಲೂಕಿನ ನೀರಾವರಿ ಸಮಸ್ಯೆಯ ಬಗ್ಗೆಯೂ ಸರ್ಕಾರದ ಗಮನ ಸೆಳೆದರು. ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಉಗಮವಾಗುವ ಮಲಪ್ರಭಾ ನದಿಯ ನೀರು ಆಲಮಟ್ಟಿ ಅಣೆಕಟ್ಟಿನವರೆಗೆ ಹರಿದು ಹೋಗುತ್ತದೆ. ಆದರೆ ಯಾವ ತಾಲೂಕಿನಲ್ಲಿ ಈ ನದಿ ಹುಟ್ಟುತ್ತದೆಯೋ ಅದೇ ಖಾನಾಪುರ ತಾಲೂಕಿನ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ದೊರೆಯದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಆದ್ದರಿಂದ ಖಾನಾಪುರ ತಾಲೂಕಿನಲ್ಲಿ ಅಣೆಕಟ್ಟು ಹಾಗೂ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಸ್ಥಳೀಯ ರೈತರಿಗೆ ನೀರು ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನ್ಯಾಯ ಸಿಗುವವರೆಗೆ ಹಗಲು-ರಾತ್ರಿ ಧರಣಿ ಸತ್ಯಾಗ್ರಹದ ಎಚ್ಚರಿಕೆ…..
ಈ ಸಂದರ್ಭದಲ್ಲಿ ಕಾಶಿಮ್ ಹಟ್ಟಿಹೊಳಿ ಅವರು ಕೂಡ ಸರ್ಕಾರದ ಧೋರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತಾಳಗುಪ್ಪ-ಬೆಳಗಾವಿ ಹಾಗೂ ರಾಮನಗರ-ಧಾರವಾಡ ಎಂಬ ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಎಂಟು ಗಂಟೆಗಳ ಕಾಲ ರಸ್ತೆ ತಡೆ ನಡೆಸುವ ಮೂಲಕ ರೈತರು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ರೈತರ ಬೇಡಿಕೆಗಳತ್ತ ಗಮನಹರಿಸಿ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲಿಂಗನಮಠ ಕ್ರಾಸ್ನಲ್ಲಿ ರೈತರಿಗೆ ನ್ಯಾಯ ದೊರೆಯುವವರೆಗೆ ನಿರಂತರವಾಗಿ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಅವರು ದೃಢ ನಿರ್ಧಾರ ವ್ಯಕ್ತಪಡಿಸಿದರು.
ಹೆದ್ದಾರಿಯಲ್ಲಿ ವಾಹನಗಳ ಉದ್ದನೆಯ ಸಾಲು…..
ಎಂಟು ಗಂಟೆಗಳ ಕಾಲ ನಡೆದ ರಸ್ತೆ ತಡೆ ಪ್ರತಿಭಟನೆಯಿಂದ ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಿಲುಕಿಕೊಂಡವು. ಸಾವಿರಾರು ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು, ಮಹಿಳೆಯರು, ಮಕ್ಕಳು ಹಾಗೂ ಇತರ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಯಿತು. ವಾಹನಗಳ ಉದ್ದನೆಯ ಸಾಲುಗಳು ದಿನವಿಡೀ ಕಂಡುಬಂದವು.
ಪ್ರತಿಭಟನಾ ಸ್ಥಳದಲ್ಲಿ ಪರಮಪೂಜ್ಯ ಶ್ರೀ ಚನ್ನಬಸವ ದೇವರು (ಬಿಳಕಿ), ಅಡವಿ ಸಿದ್ದೇಶ್ವರ ಸ್ವಾಮೀಜಿ, ಪ್ರಭುದೇವ ಸ್ವಾಮೀಜಿ, ರಮಾನಂದ ಸ್ವಾಮೀಜಿ, ಮಹಾದೇವ ಸ್ವಾಮೀಜಿ, ಸುರೇಶ ಜಾಧವ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಅಲ್ಲದೆ ಪಾಂಡುರಂಗ ಮಿಟಗಾರ, ಶ್ರೀಶೈಲ ಮಾಟೋಳಿ, ಬಾಬು ಬಿಜಾಪುರ, ಮಹಾಂತೇಶ ಸಂಗೊಳ್ಳಿ, ರಾಜು ರಪಾಟೆ, ಬಸವರಾಜ ಮುಗಳಿಹಾಳಿ, ಇನಾಸ್ ಡಿಸೋಜಾ, ಪಾವೆಲ್ ಫರ್ನಾಂಡಿಸ್, ಬೈರು ಮಾಂಡವಿ, ಶ್ರೀಕಾಂತ ಪಾಟೀಲ, ಆನಂದ ಮಾಟೋಳಿ, ಮನೋಹರ ಕದಮ, ಶಮೀರ್ ಹಟ್ಟಿಹೊಳಿ, ಹಬೀಬ್ ಹಂದೂರು, ಯಲ್ಲಾರಿ ನಿಲಜಕರ, ದತ್ತ ಬಿದಕರ, ಅಶ್ಫಾಕ್ ಅಹ್ಮದ್ ಪಟೇಲ್, ನಾಗಪ್ಪ ಕುಲ್ಮನಟ್ಟಿ, ದಯಾನಂದ ಗುಪಿತ, ರಮೇಶ ವೀರಾಪುರ, ಬಿಷ್ಟಪ್ಪ ಸುಂಬಳಿ, ಅಂತೋನ ಸೋಜಾ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಘೋಷಣೆಗಳಿಂದ ಮೊಳಗಿದ ಲಿಂಗನಮಠ ಕ್ರಾಸ್!…..
‘ನಮ್ಮ ಕಬ್ಬು, ನಮ್ಮ ಹಕ್ಕು, ನಮ್ಮ ಹೋರಾಟದ ಪಯಣ ಲಿಂಗನಮಠ ಕ್ರಾಸ್ ಕಡೆಗೆ’, ‘ರೈತ ದೇಶದ ಬೆನ್ನೆಲುಬು’, ‘ದೇಶಕ್ಕೆ ಅನ್ನ ನೀಡುವವನು ರೈತ’, ‘ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ’, ‘ಎದ್ದೇಳಿ, ಜಾಗೃತರಾಗಿ, ಗುರಿ ತಲುಪುವವರೆಗೆ ನಿಲ್ಲಬೇಡಿ’ ಎಂಬ ಘೋಷಣೆಗಳಿಂದ ಇಡೀ ಪ್ರದೇಶ ಮೊಳಗಿತು.
ನಂದಗಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ ಧರ್ಮಟ್ಟಿ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಒಟ್ಟಾರೆ ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು.
ಕಬ್ಬಿನ ಬೆಲೆ ಸಮಸ್ಯೆ ಕೇವಲ ಖಾನಾಪುರ ತಾಲೂಕಿಗೆ ಸೀಮಿತವಾಗಿರದೆ ರಾಜ್ಯದ ಕಬ್ಬು ಬೆಳೆಗಾರರ ಆರ್ಥಿಕ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಚಾರವಾಗಿದೆ. ಹೀಗಾಗಿ ಪ್ರತಿ ಟನ್ಗೆ ₹5,500 ದರ ನೀಡಬೇಕೆಂಬ ರೈತರ ಬೇಡಿಕೆಗೆ ಸರ್ಕಾರ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಬ್ಬು ಬೆಳೆಗಾರರು ಇದೀಗ ಎದುರು ನೋಡುತ್ತಿದ್ದಾರೆ.

