खानापूर काँग्रेसची जिल्हा पंचायत व तालुका पंचायत निवडणूकपूर्व तयारी बैठक संपन्न! तालुकाभर सक्षम उमेदवार देणार” – डॉ. अंजलीताई निंबाळकर यांचे कार्यकर्त्यांना आवाहन.
खानापूर : प्रतिनिधी
खानापूर येथील रायगड निवासस्थानी खानापूर काँग्रेसतर्फे आगामी जिल्हा पंचायत व तालुका पंचायत निवडणुकांच्या पूर्वतयारीसंदर्भात आज बैठक पार पडली. या बैठकीत खानापूरच्या माजी आमदार तथा एआयसीसी सचिव डॉ. अंजलीताई हेमंत निंबाळकर यांनी कार्यकर्त्यांना निवडणुकीच्या कामाला लागण्याचे निर्देश दिले. तसेच निवडणूक लढविण्यास इच्छुक असलेल्या उमेदवारांनी आपले अर्ज सादर करावेत, अशा सूचना त्यांनी केल्या.

या बैठकीला बेळगाव जिल्हा काँग्रेसचे नवनियुक्त अध्यक्ष बसवराज सिग्गावी उपस्थित होते. अध्यक्षपदी निवड झाल्यानंतर डॉ. अंजलीताई निंबाळकर यांची त्यांच्याशी भेट झाली नव्हती. त्यामुळे त्यांनी यावेळी डॉ. निंबाळकर यांचा सत्कार केला. तसेच खानापूर ब्लॉक काँग्रेसतर्फे नवनियुक्त जिल्हाध्यक्ष बसवराज सिग्गावी यांचा सत्कार करण्यात आला.
बैठकीदरम्यान उपस्थित पदाधिकारी व कार्यकर्त्यांनी आगामी निवडणुकांच्या अनुषंगाने आपापली मते मांडली. निवडणुकीची रणनीती, उमेदवारांची निवड आणि पक्ष संघटना मजबूत करण्याबाबत विविध सूचना करण्यात आल्या.
उमेदवार निवडीसाठी तालुका स्तरावर स्क्रीनिंग कमिटी
आगामी निवडणुकीसाठी तालुका स्तरावर स्क्रीनिंग कमिटी स्थापन करण्यात येणार असल्याचे डॉ. अंजलीताई निंबाळकर यांनी सांगितले. इच्छुक उमेदवारांकडून प्राप्त होणारे सर्व अर्ज या कमिटीसमोर ठेवण्यात येतील. त्यानंतर योग्य उमेदवारांची निवड केली जाईल. खानापूर तालुक्यातील सर्व मतदारसंघांत सक्षम उमेदवार देण्याचा काँग्रेसचा प्रयत्न राहणार असल्याचेही त्यांनी स्पष्ट केले.
तालुक्यातील काही व्यक्तींना काँग्रेस पक्षात प्रवेश करण्याची इच्छा असून, योग्य वेळी त्यांचा पक्षप्रवेश करून घेतला जाईल, असेही डॉ. निंबाळकर यांनी सांगितले.
महिलांच्या राजकीय सहभागावर भर
यंदा जिल्हा पंचायत व तालुका पंचायत निवडणुकांमध्ये महिलांसाठी मोठ्या प्रमाणात आरक्षण उपलब्ध झाले असून, महिलांचा राजकारणातील सहभाग वाढणे आवश्यक आहे, असे मत डॉ. अंजलीताई निंबाळकर यांनी व्यक्त केले. महिलांना राजकीय क्षेत्रात अधिक संधी मिळणे ही सकारात्मक बाब असल्याचे त्यांनी नमूद केले.
खानापूर ब्लॉक काँग्रेसच्या महिला अध्यक्षा सावित्री मादार यांनीही महिलांच्या आरक्षणाबाबत आनंद व्यक्त केला.
अनेक पदाधिकारी व कार्यकर्त्यांची उपस्थिती
या बैठकीत अॅड. घाडी, मानतेश राऊत, लक्ष्मण भाऊ मादार, रियाझ पटेल, बेनी पिंटो, काशिम हट्टीहोळी यांच्यासह जिल्हाध्यक्ष व डॉ. अंजलीताई निंबाळकर यांनी निवडणुकीसंदर्भात आपले विचार मांडले. आगामी निवडणुकांच्या पार्श्वभूमीवर पक्ष संघटनात्मक पातळीवर सक्रिय करण्यावर बैठकीत भर देण्यात आला.
उद्या खानापूरमध्ये काँग्रेसचे आंदोलन
दरम्यान, निवडणूक आयोगाचे ज्ञानेश कुमार यांच्या विरोधात खानापूर काँग्रेसतर्फे उद्या, बुधवार दिनांक १४ ऑक्टोबर रोजी आंदोलन करण्यात येणार आहे. सकाळी ९.३० वाजता खानापूर येथील डॉ. बाबासाहेब आंबेडकर यांच्या पुतळ्याला हार अर्पण करून आंदोलनाला सुरुवात होणार आहे.
या आंदोलनात काँग्रेस पदाधिकारी, कार्यकर्ते आणि समर्थकांनी सकाळी ९.३० वाजता आंबेडकर पुतळ्याजवळ मोठ्या संख्येने उपस्थित राहावे, असे आवाहन करण्यात आले आहे.
ಖಾನಾಪುರ ಕಾಂಗ್ರೆಸ್ನ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣಾ ಪೂರ್ವಸಿದ್ಧತಾ ಸಭೆ ಸಂಪನ್ನ! ತಾಲ್ಲೂಕಿನಾದ್ಯಂತ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು” – ಡಾ. ಅಂಜಲಿತಾಯಿ ನಿಂಬಾಳ್ಕರ್.
ಖಾನಾಪುರ : ಪ್ರತಿನಿಧಿ
ಖಾನಾಪುರದ ರಾಯಗಡ ನಿವಾಸದಲ್ಲಿ ಖಾನಾಪುರ ಕಾಂಗ್ರೆಸ್ ವತಿಯಿಂದ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಇಂದು ಸಭೆ ನಡೆಯಿತು. ಈ ಸಭೆಯಲ್ಲಿ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿತಾಯಿ ಹೇಮಂತ ನಿಂಬಾಳ್ಕರ್ ಅವರು ಕಾರ್ಯಕರ್ತರಿಗೆ ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೆ, ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕೆಂದು ಸೂಚಿಸಿದರು.
ಈ ಸಭೆಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷ ಬಸವರಾಜ ಸಿಗ್ಗಾವಿ ಅವರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಡಾ. ಅಂಜಲಿತಾಯಿ ನಿಂಬಾಳ್ಕರ್ ಅವರು ಬಸವರಾಜ ಸಿಗ್ಗಾವಿ ಅವರನ್ನು ಭೇಟಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಡಾ. ನಿಂಬಾಳ್ಕರ್ ಅವರು ಬಸವರಾಜ ಸಿಗ್ಗಾವಿ ಅವರನ್ನು ಸತ್ಕರಿಸಿದರು. ಹಾಗೆಯೇ ಖಾನಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೂತನ ಜಿಲ್ಲಾ ಅಧ್ಯಕ್ಷ ಬಸವರಾಜ ಸಿಗ್ಗಾವಿ ಅವರನ್ನು ಸನ್ಮಾನಿಸಲಾಯಿತು.
ಸಭೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಚುನಾವಣಾ ಕಾರ್ಯತಂತ್ರ, ಅಭ್ಯರ್ಥಿಗಳ ಆಯ್ಕೆ ಹಾಗೂ ಪಕ್ಷದ ಸಂಘಟನೆಯನ್ನು ಬಲಪಡಿಸುವ ಕುರಿತು ವಿವಿಧ ಸಲಹೆಗಳನ್ನು ನೀಡಲಾಯಿತು.
ಅಭ್ಯರ್ಥಿಗಳ ಆಯ್ಕೆಗಾಗಿ ತಾಲ್ಲೂಕು ಮಟ್ಟದಲ್ಲಿ ಸ್ಕ್ರೀನಿಂಗ್ ಕಮಿಟಿ
ಮುಂಬರುವ ಚುನಾವಣೆಗಳಿಗಾಗಿ ತಾಲ್ಲೂಕು ಮಟ್ಟದಲ್ಲಿ ಸ್ಕ್ರೀನಿಂಗ್ ಕಮಿಟಿಯನ್ನು ರಚಿಸಲಾಗುವುದು ಎಂದು ಡಾ. ಅಂಜಲಿತಾಯಿ ನಿಂಬಾಳ್ಕರ್ ತಿಳಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಸ್ವೀಕರಿಸಲಾದ ಎಲ್ಲ ಅರ್ಜಿಗಳನ್ನು ಈ ಸಮಿತಿಯ ಮುಂದೆ ಮಂಡಿಸಲಾಗುವುದು. ಬಳಿಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಖಾನಾಪುರ ತಾಲ್ಲೂಕಿನ ಎಲ್ಲ ಮತಕ್ಷೇತ್ರಗಳಲ್ಲಿಯೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ತಾಲ್ಲೂಕಿನ ಕೆಲವು ವ್ಯಕ್ತಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಆಸಕ್ತಿ ವ್ಯಕ್ತಪಡಿಸಿದ್ದು, ಸೂಕ್ತ ಸಮಯದಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಡಾ. ನಿಂಬಾಳ್ಕರ್ ತಿಳಿಸಿದರು.
ಮಹಿಳೆಯರ ರಾಜಕೀಯ ಭಾಗವಹಿಸುವಿಕೆಗೆ ಒತ್ತು
ಈ ಬಾರಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿ ಲಭ್ಯವಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುವುದು ಅಗತ್ಯವಾಗಿದೆ ಎಂದು ಡಾ. ಅಂಜಲಿತಾಯಿ ನಿಂಬಾಳ್ಕರ್ ಅಭಿಪ್ರಾಯಪಟ್ಟರು. ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಖಾನಾಪುರ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಮಾದಾರ ಅವರು ಕೂಡ ಮಹಿಳೆಯರಿಗೆ ದೊರೆತಿರುವ ಮೀಸಲಾತಿಯ ಕುರಿತು ಸಂತಸ ವ್ಯಕ್ತಪಡಿಸಿದರು.
ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಉಪಸ್ಥಿತಿ
ಈ ಸಭೆಯಲ್ಲಿ ಅಡ್ವೊಕೇಟ್ ಈಶ್ವರ ಘಾಡಿ, ಮಾಹಾತೇಶ ರಾವುತ್, ಲಕ್ಷ್ಮಣ ಭಾವು ಮಾದಾರ, ರಿಯಾಜ್ ಪಟೇಲ್, ಬಿನಿ ಪಿಂಟೋ, ಕಾಶಿಮ್ ಹಟ್ಟಿಹೊಳಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಅಧ್ಯಕ್ಷ ಬಸವರಾಜ ಸಿಗ್ಗಾವಿ ಮತ್ತು ಡಾ. ಅಂಜಲಿತಾಯಿ ನಿಂಬಾಳ್ಕರ್ ಅವರು ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಯನ್ನು ತಾಲ್ಲೂಕಿನಾದ್ಯಂತ ಬಲಪಡಿಸುವುದು ಹಾಗೂ ಕಾರ್ಯಕರ್ತರನ್ನು ಚುನಾವಣಾ ಕಾರ್ಯಕ್ಕೆ ಸಜ್ಜುಗೊಳಿಸುವುದರ ಮೇಲೆ ಸಭೆಯಲ್ಲಿ ಒತ್ತು ನೀಡಲಾಯಿತು.
ನಾಳೆ ಖಾನಾಪುರದಲ್ಲಿ ಕಾಂಗ್ರೆಸ್ನಿಂದ ಪ್ರತಿಭಟನೆ
ಇದೇ ಸಂದರ್ಭದಲ್ಲಿ, ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಖಾನಾಪುರ ಕಾಂಗ್ರೆಸ್ ವತಿಯಿಂದ ನಾಳೆ, ಬುಧವಾರ ದಿನಾಂಕ 14 ಅಕ್ಟೋಬರ್ 2026ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9.30 ಗಂಟೆಗೆ ಖಾನಾಪುರದಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಗುವುದು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರು ಬೆಳಿಗ್ಗೆ 9.30 ಗಂಟೆಗೆ ಅಂಬೇಡ್ಕರ್ ಪ್ರತಿಮೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು ಮನವಿ ಮಾಡಲಾಗಿದೆ.



