चापगांव परिसरातील रस्ते व बंधाऱ्याच्या दुरुस्तीसाठी पालकमंत्र्यांना निवेदन: प्रशासनाला एक महिन्याची मुदत.
खानापूर : चापगाव व परिसरातील विविध गावांना जोडणाऱ्या खराब झालेल्या रस्त्यांची तातडीने दुरुस्ती व नव्याने डांबरीकरण करावे, तसेच वड्डेबैल-चापगाव-यडोगा-लोकोळी-लक्केबैल परिसरातील नादुरुस्त बंधाऱ्याची दुरुस्ती व आवश्यक असल्यास पुनर्बांधणी करावी, अशा मागण्यांचे निवेदन ग्रामस्थांच्या वतीने पालकमंत्री तथा सार्वजनिक बांधकाम मंत्री सतीश जारकिहोळी यांना देण्यात आले.

खानापूर येथील लोकमान्य भवनात आयोजित ‘प्रजासेवा आंदोलन’ उपक्रमात हे निवेदन सादर करण्यात आले. तालुका व जिल्हास्तरावरील विविध प्रशासकीय विभागांच्या अधिकाऱ्यांना एकत्रित आणून नागरिकांच्या सार्वजनिक समस्या जाणून घेऊन त्यावर प्रशासकीय पातळीवर तोडगा काढण्यासाठी या उपक्रमाचे आयोजन करण्यात आले होते. यावेळी बेळगांव जिल्ह्याचे पालक मंत्री तथा सार्वजनिक बांधकाम मंत्री मा. सतीश जारकिहोळी साहेब, बेळगावचे जिल्हाधिकारी मोहम्मद रोशन, खानापूरचे आमदार विठ्ठलराव हलगेकर, विधान परिषद सदस्य चन्नराज हट्टीहोळी तसेच विविध शासकीय विभागांचे अधिकारी उपस्थित होते.
माजी ग्रामपंचायत अध्यक्ष रमेश धबाले यांनी चापगाव व परिसरातील नागरिकांच्या रस्ते तसेच बंधाऱ्याशी संबंधित समस्यांकडे पालकमंत्री सतीश जारकिहोळी यांचे लक्ष वेधले.
चापगाव ग्रामपंचायत तसेच परिसरातील गावांना जोडणारे चापगाव–कारलगा–लालवाडी, चापगाव–चिकदिनकोप, चापगाव–जळगे–करंबळ, चापगाव–यडोगा–खानापूर आणि चापगाव–बेकवाड हे प्रमुख रस्ते अत्यंत खराब झाले असून ठिकठिकाणी मोठमोठे खड्डे पडले आहेत. डांबरीकरण उखडल्यामुळे हे मार्ग धोकादायक बनले असून विद्यार्थी, महिला, शेतकरी, कामगार, ज्येष्ठ नागरिक तसेच रुग्णांना मोठ्या अडचणींचा सामना करावा लागत असल्याचे निवेदनात नमूद करण्यात आले आहे. विशेषतः गर्भवती महिला, लहान मुले आणि दुचाकीस्वारांच्या सुरक्षिततेचा प्रश्न गंभीर बनला असून आपत्कालीन परिस्थितीत रुग्णांना दवाखान्यात नेण्यासाठीही अडचणी निर्माण होत असल्याचे ग्रामस्थांनी सांगितले. तसेच कारलगा येथे श्री लक्ष्मीदेवीची जत्रा होणार असल्याने चापगाव–कारलगा –लालवाडी रस्त्याची तातडीने दुरुस्ती करणे आवश्यक असल्याचे निवेदनात नमूद करण्यात आले.
दुसऱ्या निवेदनात वड्डेबैल, चापगाव, यडोगा, लोकोळी व लक्केबैल परिसरातील बंधाऱ्याच्या दुरवस्थेकडे लक्ष वेधण्यात आले. बंधाऱ्याच्या खालच्या भागातून पाण्याची गळती होत असल्याने अपेक्षित पाणीसाठा निर्माण होत नाही. परिणामी शेकडो हेक्टर शेती तसेच परिसरातील शेतकरी, नागरिक आणि पशुधनावर त्याचा परिणाम होत असल्याचे ग्रामस्थांनी सांगितले. बंधाऱ्याची तातडीने तांत्रिक पाहणी करून पाण्याची गळती थांबवावी, आवश्यक दुरुस्ती किंवा पुनर्बांधणी करावी आणि बंधाऱ्यात पुरेसा पाणीसाठा निर्माण होईल अशी कायमस्वरूपी व्यवस्था करावी, अशी मागणी करण्यात आली. बांधकाम निकृष्ट असल्याचे चौकशीत निष्पन्न झाल्यास संबंधितांवर नियमानुसार कारवाई करण्याची मागणीही निवेदनातून करण्यात आली.
यावेळी ग्रामस्थांनी दोन्ही प्रश्नांवर तातडीने प्रशासकीय कार्यवाही करून नागरिकांना दिलासा देण्याची मागणी केली. रस्ते व बंधारा दुरुस्तीची कामे एका महिन्याच्या आत सुरू न झाल्यास लोकशाही मार्गाने रस्ता रोको आंदोलन करण्याचा इशाराही निवेदनातून देण्यात आला आहे. बंधाऱ्याच्या प्रश्नावरही शेतकरी व ग्रामस्थांनी लोकशाही मार्गाने आंदोलन करण्याचा इशारा दिला.
निवेदन देण्यासाठी माजी ग्रामपंचायत अध्यक्ष रमेश धबाले, जयदेव अंबाजी, मुकुंद पाटील, नारायण गोदी, बाजीराव पाटील, भास्कर पाटील, उदय पाटील, रामा कुकडोळकर, प्रभू कदम, मष्णू चोपडे, विलास धबाले सर, फोंडू धबाले, विठ्ठल पाटील, अर्जुन सुतार, पुंडलिक जीवई, अरविंद पाटील, अशोक बेळगावकर, महाबळेश्वर घारशी, सतीश पाटील, बाळू पाटील, हनुमंत बेळगावकर, पांडुरंग पाटील, सूर्याजी पाटील, कल्लाप्पा पाटील, अरविंद पाटील, अनिल बेळगांवकर, परशराम येळगुळकर, मष्णू बिरजे, चेतन मादार, मल्लाप्पा मादार आदी ग्रामस्थ व शेतकरी उपस्थित होते.
ग्रामस्थांच्या या मागण्यांवर संबंधित विभागांनी प्रत्यक्ष स्थळ पाहणी करून आवश्यक प्रशासकीय मंजुरी, तांत्रिक अहवाल व निधीची तरतूद करून कामांना गती द्यावी, अशी अपेक्षा नागरिकांनी व्यक्त केली.
ಚಾಪಗಾಂವ ಹಾಗೂ ಅದರ ಪಕ್ಕದ ರಸ್ತೆ ಹಾಗೂ ಬಾಂಧಾರ ದುರಸ್ತಿಗಾಗಿ ಉಸ್ತುವಾರಿ ಸಚಿವರಿಗೆ ಮನವಿ; ಆಡಳಿತಕ್ಕೆ ಒಂದು ತಿಂಗಳ ಗಡುವು.
ಖಾನಾಪುರ : ಪ್ರತಿನಿಧಿ
ಚಾಪಗಾಂವ್ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳನ್ನು ಸಂಪರ್ಕಿಸುವ ಹದಗೆಟ್ಟ ರಸ್ತೆಗಳನ್ನು ತುರ್ತಾಗಿ ದುರಸ್ತಿಗೊಳಿಸಿ, ಹೊಸದಾಗಿ ಡಾಂಬರೀಕರಣ ಮಾಡಬೇಕು. ಹಾಗೆಯೇ ವಡ್ಡೇಬೈಲ್– ಚಾಪಗಾಂವ್–ಯಡೋಗಾ–ಲೋಕೋಳಿ–ಲಕ್ಕೇಬೈಲ್ ಪರಿಸರದಲ್ಲಿರುವ ದುರಸ್ತಿಗೊಳಿಸಬೇಕಾದ ನೀರು ತಡೆಯಲು ಕಟ್ಟಲಾದ ಬಾಂಧಾರವನ್ನು ದುರಸ್ತಿಗೊಳಿಸಬೇಕು ಹಾಗೂ ಅಗತ್ಯವಿದ್ದಲ್ಲಿ ಪುನರ್ನಿರ್ಮಾಣ ಮಾಡಬೇಕು ಎಂಬ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಗ್ರಾಮಸ್ಥರ ಪರವಾಗಿ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಸಲ್ಲಿಸಲಾಯಿತು.
ಖಾನಾಪುರದ ಲೋಕಮಾನ್ಯ ಭವನದಲ್ಲಿ ಆಯೋಜಿಸಲಾಗಿದ್ದ ‘ಪ್ರಜಾಸೇವಾ ಆಂದೋಲನ’ ಕಾರ್ಯಕ್ರಮದಲ್ಲಿ ಈ ಮನವಿಯನ್ನು ಸಲ್ಲಿಸಲಾಯಿತು. ತಾಲೂಕು ಹಾಗೂ ಜಿಲ್ಲಾಮಟ್ಟದ ವಿವಿಧ ಆಡಳಿತಾತ್ಮಕ ಇಲಾಖೆಗಳ ಅಧಿಕಾರಿಗಳನ್ನು ಒಂದೇ ವೇದಿಕೆಗೆ ಕರೆತಂದು, ನಾಗರಿಕರ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಆಡಳಿತಾತ್ಮಕ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಮಾನ್ಯ ಸತೀಶ್ ಜಾರಕಿಹೊಳಿ ಸಾಹೇಬರು, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಖಾನಾಪುರ ತಾಲೂಕಿನ ಶಾಸಕ ವಿಠ್ಠಲರಾವ್ ಹಲಗೇಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಧಬಾಲೆ ಅವರು ಚಾಪಗಾಂವ್ ಹಾಗೂ ಸುತ್ತಮುತ್ತಲಿನ ರಸ್ತೆ ಮತ್ತು ಬಾಂಧಾರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನ ಸೆಳೆದರು.
ಚಾಪಗಾಂವ್ ಗ್ರಾಮ ಪಂಚಾಯಿತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ಸಂಪರ್ಕಿಸುವ ಚಾಪಗಾಂವ್–ಕಾರಲಗಾ–ಲಾಲವಾಡಿ, ಚಾಪಗಾಂವ್–ಚಿಕದಿನಕೊಪ್ಪ, ಚಾಪಗಾಂವ್–ಜಳಗೆ–ಕರಂಬಳ, ಚಾಪಗಾಂವ್–ಯಡೋಗಾ– ಖಾನಾಪುರ ಹಾಗೂ ಚಾಪಗಾಂವ್–ಬೇಕ್ವಾಡ್ ಪ್ರಮುಖ ರಸ್ತೆಗಳು ಅತ್ಯಂತ ಹದಗೆಟ್ಟಿದ್ದು, ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಡಾಂಬರೀಕರಣ ಕಿತ್ತುಹೋಗಿರುವುದರಿಂದ ಈ ಮಾರ್ಗಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ಇದರಿಂದ ವಿದ್ಯಾರ್ಥಿಗಳು, ಮಹಿಳೆಯರು, ರೈತರು, ಕಾರ್ಮಿಕರು, ಹಿರಿಯ ನಾಗರಿಕರು ಹಾಗೂ ರೋಗಿಗಳು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಶೇಷವಾಗಿ ಗರ್ಭಿಣಿಯರು, ಚಿಕ್ಕ ಮಕ್ಕಳು ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ಪ್ರಶ್ನೆ ಗಂಭೀರವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಕೂಡ ತೊಂದರೆಗಳು ಉಂಟಾಗುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೆ ಕಾರಲಗಾ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿಯ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಚಾಪಗಾಂವ್–ಕಾರಲಗಾ–ಲಾಲವಾಡಿ ರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸುವುದು ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎರಡನೇ ಮನವಿಯಲ್ಲಿ ವಡ್ಡೇಬೈಲ್, ಚಾಪಗಾಂವ್, ಯಡೋಗಾ, ಲೋಕೋಳಿ ಹಾಗೂ ಲಕ್ಕೇಬೈಲ್ ಪರಿಸರದಲ್ಲಿರುವ ಬಾಂಧಾರದ ದುಸ್ಥಿತಿಯ ಬಗ್ಗೆ ಗಮನ ಸೆಳೆಯಲಾಗಿದೆ. ಬಾಂಧಾರದ ಕೆಳಭಾಗದಿಂದ ನೀರು ಸೋರಿಕೆಯಾಗುತ್ತಿರುವುದರಿಂದ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗುತ್ತಿಲ್ಲ. ಇದರ ಪರಿಣಾಮವಾಗಿ ನೂರಾರು ಹೆಕ್ಟೇರ್ ಕೃಷಿ ಭೂಮಿ ಹಾಗೂ ಸುತ್ತಮುತ್ತಲಿನ ರೈತರು, ನಾಗರಿಕರು ಮತ್ತು ಜಾನುವಾರುಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬಾಂಧಾರವನ್ನು ತುರ್ತಾಗಿ ತಾಂತ್ರಿಕವಾಗಿ ಪರಿಶೀಲಿಸಿ, ನೀರಿನ ಸೋರಿಕೆಯನ್ನು ತಡೆಗಟ್ಟಬೇಕು. ಅಗತ್ಯ ದುರಸ್ತಿ ಅಥವಾ ಪುನರ್ನಿರ್ಮಾಣ ಕೈಗೊಳ್ಳಬೇಕು ಹಾಗೂ ಬಾಂಧಾರದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗುವಂತೆ ಶಾಶ್ವತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಬಾಂಧಾರದ ನಿರ್ಮಾಣ ಕಾಮಗಾರಿ ಕಳಪೆಯಾಗಿರುವುದು ತನಿಖೆಯಲ್ಲಿ ಕಂಡುಬಂದರೆ, ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನೂ ಮನವಿಯ ಮೂಲಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು ಎರಡೂ ಸಮಸ್ಯೆಗಳ ಕುರಿತು ತಕ್ಷಣ ಆಡಳಿತಾತ್ಮಕ ಕ್ರಮ ಕೈಗೊಂಡು ನಾಗರಿಕರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ರಸ್ತೆ ಹಾಗೂ ಬಾಂಧಾರ ದುರಸ್ತಿ ಕಾಮಗಾರಿಗಳು ಒಂದು ತಿಂಗಳೊಳಗೆ ಆರಂಭವಾಗದಿದ್ದರೆ, ಪ್ರಜಾಸತ್ತಾತ್ಮಕ ರೀತಿಯಲ್ಲಿ ರಸ್ತೆ ತಡೆ (ರಸ್ತಾ ರೋಕೋ) ಆಂದೋಲನ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಬಾಂಧಾರದ ಸಮಸ್ಯೆಯ ಬಗ್ಗೆಯೂ ರೈತರು ಹಾಗೂ ಗ್ರಾಮಸ್ಥರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮನವಿ ಸಲ್ಲಿಸಲು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಧಬಾಲೆ, ಜಯದೇವ ಅಂಬಾಜಿ, ಮುಕುಂದ ಪಾಟೀಲ್, ನಾರಾಯಣ ಗೋದಿ, ಬಾಜೀರಾವ್ ಪಾಟೀಲ್, ಭಾಸ್ಕರ್ ಪಾಟೀಲ್, ಉದಯ ಪಾಟೀಲ್, ರಾಮಾ ಕುಕಡೋಳ್ಕರ್, ಪ್ರಭು ಕದಮ್, ಮಷ್ಣು ಚೋಪಡೆ, ವಿಲಾಸ ಧಬಾಲೆ ಸರ್, ಫೊಂಡು ಧಬಾಲೆ, ವಿಠ್ಠಲ ಪಾಟೀಲ್, ಅರ್ಜುನ ಸುತಾರ್, ಪುಂಡಲಿಕ ಜೀವೈ, ಅರವಿಂದ ಪಾಟೀಲ್, ಅಶೋಕ ಬೆಳಗಾವ್ಕರ್, ಮಹಾಬಳೇಶ್ವರ ಘಾರಶಿ, ಸತೀಶ್ ಪಾಟೀಲ್, ಬಾಳು ಪಾಟೀಲ್, ಹನುಮಂತ ಬೆಳಗಾವ್ಕರ್, ಪಾಂಡುರಂಗ ಪಾಟೀಲ್, ಸೂರ್ಯಾಜಿ ಪಾಟೀಲ್, ಕಲ್ಲಪ್ಪ ಪಾಟೀಲ್, ಅರವಿಂದ ಪಾಟೀಲ್, ಅನಿಲ್ ಬೆಳಗಾವ್ಕರ್, ಪರಶರಾಮ ಯೇಳಗುಳ್ಕರ್, ಮಷ್ಣು ಬಿರಜೆ, ಚೇತನ ಮದಾರ್, ಮಲ್ಲಪ್ಪ ಮಾದಾರ್ ಸೇರಿದಂತೆ ಗ್ರಾಮಸ್ಥರು ಹಾಗೂ ರೈತರು ಉಪಸ್ಥಿತರಿದ್ದರು.
ಗ್ರಾಮಸ್ಥರ ಈ ಬೇಡಿಕೆಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ವರದಿ ಹಾಗೂ ಅನುದಾನದ ವ್ಯವಸ್ಥೆ ಮಾಡಿ ಕಾಮಗಾರಿಗಳಿಗೆ ವೇಗ ನೀಡಬೇಕು ಎಂದು ನಾಗರಿಕರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.




