गणेशोत्सवाच्या पार्श्वभूमीवर एसपींची खानापुरात पाहणी व मार्गदर्शन.
खानापूर : गणेश चतुर्थीच्या पार्श्वभूमीवर बेळगाव जिल्हा पोलिस अधीक्षक के. रामराजन यांनी शुक्रवारी (ता. 11) खानापूरला भेट देऊन सार्वजनिक गणेश मंडळांच्या पदाधिकाऱ्यांशी संवाद साधला. राजा शिवछत्रपती चौक येथे झालेल्या या भेटीत त्यांनी गणेशोत्सव शांततेत व उत्साहपूर्ण वातावरणात पार पाडण्यासाठी मंडळांच्या पदाधिकाऱ्यांना आवश्यक मार्गदर्शन केले.
गणेशोत्सव साजरा करताना कायद्याचे उल्लंघन होणार नाही, याची सर्वांनी दक्षता घ्यावी. सण शांततापूर्ण व सौहार्दपूर्ण वातावरणात साजरा करावा, असे आवाहन एसपी के. रामराजन यांनी केले. डॉल्बी व ध्वनिक्षेपकाच्या आवाजाबाबत तसेच गणेश विसर्जनाच्या मिरवणुकीदरम्यान कोणीही कायदा हातात घेण्याचा प्रयत्न केल्यास संबंधितांवर कायदेशीर कारवाई करण्यात येईल, असा इशाराही त्यांनी दिला.
यानंतर एसपी रामराजन यांनी गणेश विसर्जन मार्गाची पाहणी केली. मिरवणुकीदरम्यान वाहतूक व्यवस्था, कायदा व सुव्यवस्था याबाबत पोलिस अधिकाऱ्यांना आवश्यक सूचना दिल्या. गणेश मंडळांनी पोलिस प्रशासनाला सहकार्य करून शासनाने घालून दिलेल्या नियमांचे पालन करावे, असे त्यांनी सांगितले.
यावेळी डीवायएसपी डॉ विरया हिरेमठ, पीआय एल.एच. गोवंडी, गणेश महामंडळाचे अध्यक्ष पंडित ओगले, प्रकाश देशपांडे, रवी काटगी, अप्पाया कोडोळी, दीपक कवटणकर, गुड्डू टेकडी यांच्यासह विविध सार्वजनिक गणेश मंडळांचे पदाधिकारी व नागरिक उपस्थित होते.
ಗಣೇಶೋತ್ಸವದ ಹಿನ್ನೆಲೆಯಲ್ಲಿ ಎಸ್ಪಿ ಅವರಿಂದ ಖಾನಾಪುರದಲ್ಲಿ ಪರಿಶೀಲನೆ ಹಾಗೂ ಮಾರ್ಗದರ್ಶನ.
ಖಾನಾಪುರ : ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರು ಶುಕ್ರವಾರ (ತಾ. 11) ಖಾನಾಪುರಕ್ಕೆ ಭೇಟಿ ನೀಡಿ ಸಾರ್ವಜನಿಕ ಗಣೇಶ ಮಂಡಳಿಗಳ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ರಾಜಾ ಶಿವಛತ್ರಪತಿ ಚೌಕ್ನಲ್ಲಿ ನಡೆದ ಈ ಭೇಟಿಯಲ್ಲಿ ಗಣೇಶೋತ್ಸವವನ್ನು ಶಾಂತಿಯುತ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ಆಚರಿಸುವ ಕುರಿತು ಮಂಡಳಿಗಳ ಪದಾಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಕಾನೂನು ಉಲ್ಲಂಘನೆಯಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಆಚರಿಸಬೇಕು ಎಂದು ಎಸ್ಪಿ ಕೆ. ರಾಮರಾಜನ್ ಅವರು ಮನವಿ ಮಾಡಿದರು.
ಡಾಲ್ಬಿ ಹಾಗೂ ಧ್ವನಿವರ್ಧಕಗಳ ಶಬ್ದದ ಬಗ್ಗೆ ಮತ್ತು ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಯಾರಾದರೂ ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು, ಎಂದು ಅವರು ಎಚ್ಚರಿಕೆ ನೀಡಿದರು.
ನಂತರ ಎಸ್ಪಿ ರಾಮರಾಜನ್ ಅವರು ಗಣೇಶ ವಿಸರ್ಜನೆ ಮೆರವಣಿಗೆಯ ಮಾರ್ಗವನ್ನು ಪರಿಶೀಲಿಸಿದರು. ಮೆರವಣಿಗೆಯ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಗಣೇಶ ಮಂಡಳಿಗಳು ಪೊಲೀಸ್ ಆಡಳಿತದೊಂದಿಗೆ ಸಹಕರಿಸಿ, ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಡಾ. ವಿರಯ್ಯ ಹಿರೇಮಠ, ಪಿಐ ಎಲ್.ಎಚ್. ಗೋವಂಡಿ, ಗಣೇಶ ಮಹಾಮಂಡಳದ ಅಧ್ಯಕ್ಷ ಪಂಡಿತ ಓಗಲೆ, ಪ್ರಕಾಶ ದೇಶಪಾಂಡೆ, ರವಿ ಕಾಡಗಿ, ಅಪ್ಪಯ್ಯ ಕೊಡೋಳಿ, ದೀಪಕ ಕವಟಣಕರ, ಗುಡ್ಡು ಟೆಕಡಿ ಸೇರಿದಂತೆ ವಿವಿಧ ಸಾರ್ವಜನಿಕ ಗಣೇಶ ಮಂಡಳಿಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.

