केसरेकर दाम्पत्य हत्याकांडाच्या निषेधार्थ खानापुरात हिंदू संघटनांचा विराट मोर्चा; आरोपीला फाशीची मागणी.
खानापूर : सांगली जिल्ह्यातील कुपवाड येथे खानापूर तालुक्यातील हेब्बाळ गावचे रहिवासी मोहन केसरेकर व त्यांच्या पत्नी मनीषा केसरेकर यांच्यावर झालेल्या प्राणघातक हल्ल्यात दोघांचाही मृत्यू झाल्याच्या घटनेच्या निषेधार्थ गुरुवारी खानापुरात विविध हिंदू संघटनांच्या वतीने विराट मोर्चा काढण्यात आला. मुसळधार पावसाची पर्वा न करता हजारो नागरिक, महिला, युवक व विविध संघटनांचे पदाधिकारी मोर्चात सहभागी झाले. यावेळी आरोपीला कठोरात कठोर शिक्षा, फाशीची शिक्षा देण्यात यावी तसेच केसरेकर कुटुंबीयांना शासनाकडून आर्थिक मदत देण्यात यावी, अशी जोरदार मागणी करण्यात आली.
मोर्चाच्या अग्रभागी दिवंगत मोहन केसरेकर व मनीषा केसरेकर यांची मुले मनाली व त्यांचा मुलगा सहभागी झाले होते. आई-वडिलांच्या दुर्दैवी निधनानंतर कुटुंबावर कोसळलेल्या संकटाची भावना उपस्थितांच्या मनाला चटका लावून गेली.
लक्ष्मी मंदिरापासून तहसीलदार कार्यालयापर्यंत मोर्चा…
मोर्चाची सुरुवात लक्ष्मी मंदिर येथून झाली. घोडे गल्ली, स्टेशन रोड मार्गे मोर्चा शिवस्मारक सर्कल येथे पोहोचला. तेथे आंदोलकांनी मानवी साखळी करून निषेध व्यक्त केला. यावेळी आरोपीच्या निषेधार्थ तसेच केसरेकर कुटुंबाला न्याय मिळावा, यासाठी जोरदार घोषणाबाजी करण्यात आली. त्यानंतर मोर्चा तहसीलदार कार्यालयावर नेण्यात आला.
ग्रेड-2 तहसीलदार एस. के. तंगोळी यांनी आंदोलकांचे निवेदन स्वीकारले. निवेदनावर तातडीने कार्यवाही करून ते महाराष्ट्राच्या मुख्यमंत्र्यांकडे पाठविण्यात येईल, असे त्यांनी सांगितले.
आमदार हलगेकरांकडून दोन लाखांची मदत…
आमदार विठ्ठल हलगेकर यांनी या घटनेचा तीव्र निषेध व्यक्त केला. ते म्हणाले, “महाराष्ट्र सरकारने या घटनेची गांभीर्याने दखल घ्यावी. आरोपीला लवकरात लवकर फाशीची शिक्षा व्हावी आणि केसरेकर कुटुंबाला शासनाकडून आर्थिक मदत मिळावी, यासाठी हा मोर्चा आहे.”
यावेळी आमदार हलगेकर यांनी वैयक्तिक स्वतःकडून केसरेकर कुटुंबाला दोन लाख रुपयांचा धनादेश दिला. तसेच खानापुरात एक समिती स्थापन करून शिष्टमंडळामार्फत महाराष्ट्राच्या मुख्यमंत्र्यांची लवकरच भेट घेण्यात येईल आणि केसरेकर कुटुंबासाठी 25 लाख रुपयांच्या आर्थिक मदतीची मागणी करण्यात येईल, असे त्यांनी जाहीर केले.
अरविंद पाटील यांचा रोजगाराच्या मुद्द्यावर इशारा…
माजी आमदार अरविंद पाटील यांनी केसरेकर कुटुंबाला न्याय मिळालाच पाहिजे, अशी भूमिका मांडली. महाराष्ट्रात रोजगारासाठी गेलेल्या कर्नाटकातील नागरिकांना भविष्यात कोणत्याही प्रकारचा त्रास झाल्यास त्याविरोधात लढा उभारण्याचा इशाराही त्यांनी दिला. तसेच केसरेकर कुटुंबासाठी 50 हजार रुपयांची वैयक्तिक मदत जाहीर केली.
भाजपाचे राज्य कार्यकारिणी सदस्य प्रमोद कोचेरी यांनी घटनेचा निषेध करत केसरेकर कुटुंबाला न्याय मिळवून देण्यासाठी हिंदू समाजातील नागरिक मोठ्या संख्येने एकत्र आल्याबद्दल सर्वांचे आभार मानले. आरोपीला तात्काळ कठोर शिक्षा देण्याची मागणी करत त्यांनी 11 हजार रुपयांची मदत जाहीर केली.
सरकारने कुटुंबाचे पालकत्व स्वीकारावे : पंडित ओगले…
पंडित ओगले यांनी सरकारने केसरेकर कुटुंबाचे पालकत्व स्वीकारावे, घरावरील कर्ज माफ करावे तसेच आरोपीच्या घराचा लिलाव करून त्यातून मिळणारी रक्कम केसरेकर कुटुंबाला देण्यात यावी, अशी जोरदार मागणी केली. त्यांनी स्वतःकडून 5 हजार रुपयांची मदत जाहीर केली.
यावेळी केसरेकर कुटुंबीयांच्या वतीने विश्वनाथ केसरेकर व मनाली मोहन केसरेकर यांनी आपले मनोगत व्यक्त केले. त्यांच्या भावना ऐकताना उपस्थित नागरिक भावूक झाले.
विविध मान्यवरांकडून मदतीची घोषणा…
मोर्चादरम्यान विविध मान्यवरांनी केसरेकर कुटुंबाला आर्थिक मदत जाहीर केली. यामध्ये जोतिबा रेमाणी 21 हजार रुपये, सुरेश देसाई 5 हजार, ॲड. चेतन मनेरीकर 5 हजार, प्रशांत लक्केबैलकर 11 हजार, सुनिता पाटील 5 हजार, बाबुराव देसाई 5 हजार, कृष्णा गुरव (माजी सैनिक) 5 हजार, संजय कुबल 5 हजार, मल्लाप्पा मारीहाळ 5 हजार, सयाजी पाटील 5 हजार, महाबळेश्वर पाटील आणि प्रल्हाद पाटील 5 हजार रुपये यांचा समावेश आहे. धनश्री सरदेसाई, बसवराज सानीकोप तसेच सनातन संस्थेच्या साधकांनीही केसरेकर कुटुंबाला न्याय मिळावा, अशी मागणी केली.
विविध संघटनांचा उत्स्फूर्त सहभाग…
मोर्चामध्ये सनातन संस्था, विश्व हिंदू परिषद, भाजपा, शिवप्रतिष्ठान हिंदुस्थान, स्वामी समर्थ भक्त, माजी सैनिक, हेब्बाळ ग्रामस्थ, महिला, युवक तसेच विविध सामाजिक संघटनांचे कार्यकर्ते व नागरिक मोठ्या संख्येने सहभागी झाले होते.
यावेळी शंकर बाळाराम पाटील, गुंडू तोपीनकट्टी, किशोर हेब्बाळकर, रेणुका धबाले, प्रकाश गावडे, दत्ता कदम, नितीन पाटील, मारुती पाटील, पंकज कुट्रे आदी उपस्थित होते.
केसरेकर कुटुंबाला मदतीचे आवाहन…
केसरेकर कुटुंबावर आलेल्या आर्थिक संकटाच्या पार्श्वभूमीवर नागरिक, सामाजिक संस्था व दानशूर व्यक्तींनी मदतीसाठी पुढे यावे, असे आवाहन मोर्चातील नेतेमंडळींनी केले. मदत पाठविण्यासाठी कुटुंबीयांच्या नावाने खालील बँक खाते उपलब्ध करून देण्यात आले आहे.
खातेधारक : MANALI MOHAN KESAREKAR
खाते क्रमांक : 375402010485050
IFSC : UBIN0537543
बँक : Union Bank of India
शाखा : Nandgad
केसरेकर कुटुंबाला न्याय मिळवून देण्यासाठी कायदेशीर लढ्यासोबतच त्यांच्या उदरनिर्वाहासाठी आवश्यक आर्थिक आधार मिळावा, यासाठी समाजातील नागरिकांनी शक्य ती मदत करावी, असे आवाहन यावेळी करण्यात आले.

ಕೆಸರೆಕರ್ ದಂಪತಿ ಹತ್ಯೆ ಖಂಡಿಸಿ ಖಾನಾಪುರದಲ್ಲಿ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನಾ ಮೆರವಣಿಗೆ; ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹ.
ಖಾನಾಪುರ : ಸಾಂಗ್ಲಿ ಜಿಲ್ಲೆಯ ಕುಪವಾಡದಲ್ಲಿ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿಗಳಾದ ಮೋಹನ್ ಕೆಸರೆಕರ್ ಹಾಗೂ ಅವರ ಪತ್ನಿ ಮನಿಷಾ ಕೆಸರೆಕರ್ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ಇಬ್ಬರೂ ಮೃತಪಟ್ಟ ಘಟನೆಯನ್ನು ಖಂಡಿಸಿ ಗುರುವಾರ ಖಾನಾಪುರದಲ್ಲಿ ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ನಾಗರಿಕರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಆರೋಪಿಗೆ ಕಠಿಣ ಶಿಕ್ಷೆ, ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಕೆಸರೆಕರ್ ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ನೆರವು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮೆರವಣಿಗೆಯ ಮುಂದಾಳತ್ವದಲ್ಲಿ ದಿವಂಗತ ಮೋಹನ್ ಕೆಸರೆಕರ್ ಹಾಗೂ ಮನಿಷಾ ಕೆಸರೆಕರ್ ಅವರ ಮಕ್ಕಳಾದ ಮನಾಲಿ ಹಾಗೂ ಅವರ ಸಹೋದರ ಭಾಗವಹಿಸಿದ್ದರು. ತಂದೆ-ತಾಯಿಯನ್ನು ದುರಂತದಲ್ಲಿ ಕಳೆದುಕೊಂಡ ಕುಟುಂಬದ ನೋವು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಮನಸ್ಸು ಮುಟ್ಟಿತು.
ಲಕ್ಷ್ಮೀ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ
ಮೆರವಣಿಗೆಯು ಶ್ರೀ ಲಕ್ಷ್ಮೀ ದೇವಸ್ಥಾನದಿಂದ ಆರಂಭವಾಗಿ ಘೋಡೆ ಗಲ್ಲಿ, ಸ್ಟೇಷನ್ ರಸ್ತೆ ಮೂಲಕ ಶಿವಸ್ಮಾರಕ ವೃತ್ತ ತಲುಪಿತು. ಅಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯ ವಿರುದ್ಧ ಹಾಗೂ ಕೆಸರೆಕರ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಘೋಷಣೆಗಳನ್ನು ಕೂಗಿದರು. ನಂತರ ಮೆರವಣಿಗೆ ತಹಶೀಲ್ದಾರ್ ಕಚೇರಿಗೆ ತೆರಳಿತು.
ಗ್ರೇಡ್-2 ತಹಶೀಲ್ದಾರ್ ಎಸ್.ಕೆ. ತಂಗೋಳಿ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಮನವಿಯ ಕುರಿತು ತುರ್ತು ಕ್ರಮ ಕೈಗೊಂಡು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.
ಶಾಸಕ ವಿಠ್ಠಲ ಹಲಗೇಕರ ಅವರಿಂದ ಸಂತ್ರಸ್ತರ ಕುಟುಂಬಕ್ಕೆ ಎರಡು ಲಕ್ಷ ರೂ. ನೆರವು
ಶಾಸಕ ವಿಠ್ಠಲ ಹಲಗೇಕರ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿ. “ಮಹಾರಾಷ್ಟ್ರ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗೆ ಶೀಘ್ರ ಗಲ್ಲು ಶಿಕ್ಷೆಯಾಗಬೇಕು ಹಾಗೂ ಕೆಸರೆಕರ್ ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ನೆರವು ದೊರೆಯಬೇಕು ಎಂಬ ಬೇಡಿಕೆಯೊಂದಿಗೆ ಈ ಮೆರವಣಿಗೆ ನಡೆಸಲಾಗಿದೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಹಲಗೇಕರ ಅವರು ವೈಯಕ್ತಿಕವಾಗಿ ಕೆಸರೆಕರ್ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿಗಳ ಚೆಕ್ ನೀಡಿದರು. ಅಲ್ಲದೆ ಖಾನಾಪುರದಲ್ಲಿ ಸಮಿತಿ ರಚಿಸಿ ನಿಯೋಗದ ಮೂಲಕ ಶೀಘ್ರವೇ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೆಸರೆಕರ್ ಕುಟುಂಬಕ್ಕೆ 25 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಘೋಷಿಸಿದರು.
ಉದ್ಯೋಗದ ವಿಚಾರದಲ್ಲಿ ಅರವಿಂದ ಪಾಟೀಲ ಎಚ್ಚರಿಕೆ
ಮಾಜಿ ಶಾಸಕ ಅರವಿಂದ ಪಾಟೀಲ ಅವರು ಕೆಸರೆಕರ್ ಕುಟುಂಬಕ್ಕೆ ನ್ಯಾಯ ದೊರಕಲೇಬೇಕು ಎಂದು ಆಗ್ರಹಿಸಿದರು. ಮಹಾರಾಷ್ಟ್ರದಲ್ಲಿ ಉದ್ಯೋಗಕ್ಕಾಗಿ ತೆರಳುವ ಕರ್ನಾಟಕದ ನಾಗರಿಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದರೆ ಅದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅವರು ಕೆಸರೆಕರ್ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ರೂಪಾಯಿ ನೆರವು ಘೋಷಿಸಿದರು.
ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ ಕೋಚೇರಿ ಅವರು ಘಟನೆಯನ್ನು ಖಂಡಿಸಿ, ಕೆಸರೆಕರ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಹಿಂದೂ ಸಮಾಜದ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಒಗ್ಗೂಡಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಆರೋಪಿಗೆ ತಕ್ಷಣ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ 11 ಸಾವಿರ ರೂಪಾಯಿ ನೆರವು ಘೋಷಿಸಿದರು.
ಸರ್ಕಾರ ಕುಟುಂಬದ ಪಾಲಕತ್ವ ವಹಿಸಬೇಕು : ಪಂಡಿತ ಓಗಲೆ
ಪಂಡಿತ ಓಗಲೆ ಅವರು ಸರ್ಕಾರವು ಕೆಸರೆಕರ್ ಕುಟುಂಬದ ಪಾಲಕತ್ವ ವಹಿಸಬೇಕು, ಮನೆಯ ಮೇಲಿರುವ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಆರೋಪಿಯ ಮನೆಯನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಕೆಸರೆಕರ್ ಕುಟುಂಬಕ್ಕೆ ನೀಡಬೇಕು ಎಂದು ಆಗ್ರಹಿಸಿದರು. ಅವರು ವೈಯಕ್ತಿಕವಾಗಿ 5 ಸಾವಿರ ರೂಪಾಯಿ ನೆರವು ಘೋಷಿಸಿದರು.
ಈ ಸಂದರ್ಭದಲ್ಲಿ ಕೆಸರೆಕರ್ ಕುಟುಂಬದ ಪರವಾಗಿ ವಿಶ್ವನಾಥ ಕೆಸರೆಕರ್ ಹಾಗೂ ಮನಾಲಿ ಮೋಹನ್ ಕೆಸರೆಕರ್ ಅವರು ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದರು. ಅವರ ಮಾತುಗಳನ್ನು ಕೇಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕರು ಭಾವುಕರಾದರು.
ವಿವಿಧ ಗಣ್ಯರಿಂದ ಆರ್ಥಿಕ ನೆರವಿನ ಘೋಷಣೆ
ಮೆರವಣಿಗೆಯ ಸಂದರ್ಭದಲ್ಲಿ ವಿವಿಧ ಗಣ್ಯರು ಕೆಸರೆಕರ್ ಕುಟುಂಬಕ್ಕೆ ಆರ್ಥಿಕ ನೆರವು ಘೋಷಿಸಿದರು. ಜೋತಿಬಾ ರೇಮಾನಿ 21 ಸಾವಿರ ರೂ., ಸುರೇಶ್ ದೇಸಾಯಿ 5 ಸಾವಿರ ರೂ., ಅಡ್ವೊಕೇಟ್ ಚೇತನ ಮನೇರೀಕರ 5 ಸಾವಿರ ರೂ., ಪ್ರಶಾಂತ್ ಲಕ್ಕೆಬೈಲಕರ 11 ಸಾವಿರ ರೂ., ಸುನಿತಾ ಪಾಟೀಲ 5 ಸಾವಿರ ರೂ., ಬಾಬುರಾವ್ ದೇಸಾಯಿ 5 ಸಾವಿರ ರೂ., ಕೃಷ್ಣಾ ಗುರವ (ಮಾಜಿ ಸೈನಿಕ) 5 ಸಾವಿರ ರೂ., ಸಂಜಯ ಕುಬಲ್ 5 ಸಾವಿರ ರೂ., ಮಲ್ಲಪ್ಪ ಮಾರಿಹಾಳ 5 ಸಾವಿರ ರೂ., ಸಯಾಜಿ ಪಾಟೀಲ 5 ಸಾವಿರ ರೂ. ಹಾಗೂ ಪ್ರಲ್ಹಾದ್ ಪಾಟೀಲ 5 ಸಾವಿರ ರೂಪಾಯಿ ನೆರವು ಘೋಷಿಸಿದರು.
ಧನಶ್ರೀ ಸರದೇಶಾಯಿ, ಬಸವರಾಜ ಸಾನಿಕೋಪ್ ಹಾಗೂ ಸನಾತನ ಸಂಸ್ಥೆಯ ಸಾಧಕರು ಕೂಡ ಕೆಸರೆಕರ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ವಿವಿಧ ಸಂಘಟನೆಗಳ ಉತ್ಸಾಹಭರಿತ ಭಾಗವಹಿಸುವಿಕೆ
ಮೆರವಣಿಗೆಯಲ್ಲಿ ಸನಾತನ ಸಂಸ್ಥೆ, ವಿಶ್ವ ಹಿಂದೂ ಪರಿಷತ್, ಬಿಜೆಪಿ, ಶಿವಪ್ರತಿಷ್ಠಾನ ಹಿಂದೂಸ್ತಾನ್, ಸ್ವಾಮಿ ಸಮರ್ಥ ಭಕ್ತರು, ಮಾಜಿ ಸೈನಿಕರು, ಹೆಬ್ಬಾಳ ಗ್ರಾಮಸ್ಥರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಶಂಕರ ಬಾಳಾರಾಮ ಪಾಟೀಲ, ಗುಂಡು ತೋಪಿನಕಟ್ಟಿ, ಕಿಶೋರ್ ಹೆಬ್ಬಾಳಕರ, ರೇಣುಕಾ ಧಬಾಲೆ, ಪ್ರಕಾಶ ಗಾವಡೆ, ದತ್ತಾ ಕದಮ, ನಿತಿನ್ ಪಾಟೀಲ, ಮಾರುತಿ ಪಾಟೀಲ, ಪಂಕಜ್ ಕುಟ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೇಸರೆಕರ ಕುಟುಂಬಕ್ಕೆ ನೆರವು ನೀಡುವಂತೆ ಮನವಿ…
ಕೇಸರೆಕರ ಕುಟುಂಬ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ನಾಗರಿಕರು, ಸಾಮಾಜಿಕ ಸಂಸ್ಥೆಗಳು ಹಾಗೂ ದಾನಶೂರ ವ್ಯಕ್ತಿಗಳು ನೆರವಿಗೆ ಮುಂದಾಗಬೇಕು ಎಂದು ಮೆರವಣಿಗೆಯ ಮುಖಂಡರು ಮನವಿ ಮಾಡಿದರು. ನೆರವು ನೀಡಲು ಕುಟುಂಬದ ಹೆಸರಿನಲ್ಲಿ ಕೆಳಗಿನ ಬ್ಯಾಂಕ್ ಖಾತೆಯನ್ನು ಒದಗಿಸಲಾಗಿದೆ.
ಖಾತೆದಾರರು : MANALI MOHAN KESAREKAR
ಖಾತೆ ಸಂಖ್ಯೆ : 375402010485050
IFSC : UBIN0537543
ಬ್ಯಾಂಕ್ : Union Bank of India
ಶಾಖೆ : Nandgad
ಕೇಸರೆಕರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಕಾನೂನು ಹೋರಾಟದ ಜೊತೆಗೆ, ಅವರ ಜೀವನ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ನೆರವು ದೊರಕಬೇಕು. ಈ ನಿಟ್ಟಿನಲ್ಲಿ ಸಮಾಜದ ನಾಗರಿಕರು ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು.

