विज्ञान-गणित शिक्षकांची व्यावसायिक विकास कार्यशाळा एक दिवस पुढे ढकलली; आता 29 व 30 ऑगस्टला.
खानापूर : IISER, पुणे आणि लोकमान्य एज्युकेशन सोसायटी, बेळगाव यांच्या संयुक्त विद्यमाने खानापूर तालुक्यातील विज्ञान व गणित विषयाच्या शिक्षकांसाठी आयोजित करण्यात आलेली दोन दिवसीय शिक्षक व्यावसायिक विकास कार्यशाळा तांत्रिक अडचणीमुळे एक दिवस पुढे ढकलण्यात आली आहे.
ही कार्यशाळा पूर्वनियोजित 28 व 29 ऑगस्ट 2026 ऐवजी आता शनिवार, 29 ऑगस्ट आणि रविवार, 30 ऑगस्ट 2026 रोजी आयोजित करण्यात येणार आहे. कार्यशाळेचे आयोजन लोकमान्य भवन, व्ही. वाय. चव्हाण पॉलिटेक्निक कॉलेज, खानापूर येथे करण्यात आले आहे.
IISER, पुणे ही मूलभूत विज्ञानातील संशोधन व अध्यापनासाठी देशातील अग्रगण्य संस्थांपैकी एक असून, लोकमान्य एज्युकेशन सोसायटीच्या सहकार्याने शिक्षकांना विज्ञान व गणित विषय अधिक प्रभावीपणे शिकविण्यासाठी तसेच विद्यार्थ्यांमध्ये वैज्ञानिक दृष्टिकोन व गणितीय विचारसरणी विकसित करण्यासाठी या कार्यशाळेचे आयोजन करण्यात आले आहे.
या दोन दिवसीय कार्यशाळेत विज्ञान व गणित अध्यापनातील आधुनिक पद्धती, संकल्पनाधारित शिक्षण, प्रयोग व कृतींच्या माध्यमातून विषय समजावून सांगण्याच्या पद्धती तसेच विद्यार्थ्यांचा विषयातील सहभाग वाढविण्यासाठी उपयुक्त अध्यापन तंत्रांवर मार्गदर्शन मिळण्याची अपेक्षा आहे.
खानापूर तालुक्यातील सरकारी व अनुदानित माध्यमिक शाळांमधील विज्ञान व गणित विषयाच्या शिक्षकांनी कार्यशाळेच्या सुधारित तारखांची नोंद घ्यावी आणि निर्धारित वेळेत उपस्थित राहावे, असे आवाहन लोकमान्य शिक्षण संस्थेच्या वतीने करण्यात आले आहे.
ವಿಜ್ಞಾನ-ಗಣಿತ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಾಗಾರ ಒಂದು ದಿನದ ಮಟ್ಟಿಗೆ ಮುಂದೂಡಿಕೆ; ಈಗ ಆಗಸ್ಟ್ 29 ಮತ್ತು 30 ರಂದು ಕಾರ್ಯಾಗಾರ ತರಬೇತಿ.
ಖಾನಾಪುರ : IISER, ಪುಣೆ ಹಾಗೂ ಲೋಕಮಾನ್ಯ ಎಜುಕೇಶನ್ ಸೊಸೈಟಿ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಖಾನಾಪುರ ತಾಲ್ಲೂಕಿನ ವಿಜ್ಞಾನ ಮತ್ತು ಗಣಿತ ವಿಷಯದ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಾಗಾರವನ್ನು ತಾಂತ್ರಿಕ ಕಾರಣಗಳಿಂದ ಒಂದು ದಿನ ಮಟ್ಟಿಗೆ ಮುಂದೂಡಲಾಗಿದೆ.
ಈ ಕಾರ್ಯಾಗಾರವು ಪೂರ್ವನಿಗದಿಯಂತೆ ಆಗಸ್ಟ್ 28 ಮತ್ತು 29, 2026ರಂದು ನಡೆಯಬೇಕಾಗಿತ್ತು. ಆದರೆ ಈಗ ಕಾರ್ಯಾಗಾರವನ್ನು ಶನಿವಾರ, ಆಗಸ್ಟ್ 29 ಮತ್ತು ಭಾನುವಾರ, ಆಗಸ್ಟ್ 30, 2026ರಂದು ಆಯೋಜಿಸಲಾಗಿದೆ.
ಕಾರ್ಯಾಗಾರವು ಲೋಕಮಾನ್ಯ ಭವನ, ವಿ. ವೈ. ಚವ್ಹಾಣ ಪಾಲಿಟೆಕ್ನಿಕ್ ಕಾಲೇಜು, ಖಾನಾಪುರ ಇಲ್ಲಿ ನಡೆಯಲಿದೆ.
IISER, ಪುಣೆ ಸಂಸ್ಥೆಯು ಮೂಲಭೂತ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಬೋಧನೆಗೆ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಲೋಕಮಾನ್ಯ ಎಜುಕೇಶನ್ ಸೊಸೈಟಿಯ ಸಹಕಾರದೊಂದಿಗೆ ಶಿಕ್ಷಕರು ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬೋಧಿಸಲು, ಹಾಗೆಯೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಮತ್ತು ಗಣಿತೀಯ ಚಿಂತನಾ ಸಾಮರ್ಥ್ಯವನ್ನು ಬೆಳೆಸಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಎರಡು ದಿನಗಳ ಈ ಕಾರ್ಯಾಗಾರದಲ್ಲಿ ವಿಜ್ಞಾನ ಮತ್ತು ಗಣಿತ ಬೋಧನೆಯಲ್ಲಿನ ಆಧುನಿಕ ವಿಧಾನಗಳು, ಪರಿಕಲ್ಪನೆ ಆಧಾರಿತ ಕಲಿಕೆ, ಪ್ರಯೋಗಗಳು ಹಾಗೂ ವಿವಿಧ ಚಟುವಟಿಕೆಗಳ ಮೂಲಕ ವಿಷಯಗಳನ್ನು ಸುಲಭವಾಗಿ ಅರ್ಥೈಸುವ ವಿಧಾನಗಳು, ವಿದ್ಯಾರ್ಥಿಗಳ ವಿಷಯಾಸಕ್ತಿ ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಉಪಯುಕ್ತವಾದ ಬೋಧನಾ ತಂತ್ರಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಗುವುದು.
ಖಾನಾಪುರ ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ವಿಜ್ಞಾನ ಮತ್ತು ಗಣಿತ ವಿಷಯದ ಶಿಕ್ಷಕರು ಕಾರ್ಯಾಗಾರದ ಪರಿಷ್ಕೃತ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ನಿಗದಿತ ದಿನಾಂಕದಂದು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು, ಎಂದು ಲೋಕಮಾನ್ಯ ಶಿಕ್ಷಣ ಸಂಸ್ಥೆಯ ವತಿಯಿಂದ ಮನವಿ ಮಾಡಲಾಗಿದೆ.

