दिल्लीतील अपघातानंतर अभय पाटील यांनी सांगितला थरारक अनुभव ; पंडित ओगले व दिनकर मरगाळे यांनी घेतली भेट.
बेळगाव : बेळगाव दक्षिणचे आमदार अभय पाटील आणि त्यांचे मित्र दिल्लीचे आमदार अनिल झा यांचा रविवारी रात्री साडेनऊच्या सुमारास दिल्ली येथे अपघात झाला. या अपघातात दोन्ही आमदारांसह त्यांचे सहकारी किरकोळ जखमी झाले. सुदैवाने कोणालाही गंभीर दुखापत झाली नसून, सर्वांची प्रकृती स्थिर आहे.

अपघातानंतर दोन्ही आमदारांना दिल्लीतील रुग्णालयात नेण्यात आले. तेथे एक्स-रे व स्कॅनिंगसह आवश्यक वैद्यकीय तपासण्या करण्यात आल्या. सर्व वैद्यकीय अहवाल नॉर्मल आल्यानंतर आमदार अभय पाटील यांना रुग्णालयातून घरी जाण्याची परवानगी देण्यात आली.
दरम्यान, आमदार अभय पाटील सोमवारी, २४ ऑगस्ट रोजी सकाळी विमानाने दिल्लीहून बेळगाव येथे दाखल झाले. सांबरा विमानतळावर तसेच त्यांच्या कार्यालयात व निवासस्थानी त्यांच्या प्रकृतीची विचारपूस करण्यासाठी हजारो कार्यकर्ते, पदाधिकारी व हितचिंतकांनी गर्दी केली होती. सर्वांनी त्यांना लवकरात लवकर पूर्णपणे बरे होण्यासाठी शुभेच्छा दिल्या.

यावेळी भाजप युवा मोर्चाचे जिल्हा उपाध्यक्ष पंडित ओगले तसेच ‘आपलं खानापूर’ न्यूज पोर्टल व ग्रुपच्या वतीने संपादक तथा माजी नगरसेवक दिनकर मरगाळे यांनी आमदार अभय पाटील यांची त्यांच्या निवासस्थानी जाऊन भेट घेतली व त्यांच्या प्रकृतीची आस्थेने विचारपूस केली. तसेच त्यांना उत्तम आरोग्यासाठी शुभेच्छा दिल्या.
यावेळी अपघाताची माहिती देताना आमदार अभय पाटील यांनी सांगितले की, हा अपघात अत्यंत भीषण होता. रस्त्याच्या दुसऱ्या बाजूने येणाऱ्या स्विफ्ट कारने रस्त्याच्या मध्यभागी असलेले लोखंडी ग्रीलचे डिव्हायडर तोडून त्यांच्या इनोव्हा कारला जोरदार धडक दिली. या धडकेत इनोव्हा व स्विफ्ट कारचे मोठे नुकसान झाले. सिग्नल असल्याने आपली गाडी केवळ 20 स्पीडने जात होती परंतु रस्त्याच्या पलीकडील बाजूने आलेल्या कारने आपल्या कारला धडक दिली त्यामुळे अपघात घडला असल्याचे त्यांनी सांगितले.
मात्र, दैव बलवत्तर असल्याने आमदार अभय पाटील, दिल्लीचे आमदार अनिल झा आणि त्यांचे सहकारी किरकोळ जखमी होऊन बचावले. स्विफ्ट कारमधील चालक व त्याच्या पत्नीच्या चेहऱ्यावर कारच्या काचा लागल्याने किरकोळ दुखापत झाली. त्यांच्यासोबत असलेल्या दोन लहान मुलांना मात्र सुदैवाने कोणतीही दुखापत झाली नाही.
विशेष म्हणजे हा अपघात दिल्लीतील एका पोलीस ठाण्यासमोरच झाला. त्यामुळे घटनेनंतर पोलीस तत्काळ घटनास्थळी धावून आले आणि त्यांनी जखमींना मदत केली.
अपघाताची माहिती बेळगावात समजताच आमदार अभय पाटील यांच्या कार्यकर्त्यांमध्ये चिंता निर्माण झाली होती. मात्र, त्यांच्या सर्व वैद्यकीय तपासण्या सामान्य आल्याचे समजल्यानंतर कार्यकर्त्यांनी सुटकेचा नि:श्वास सोडला. सोमवारी बेळगावात परतल्यानंतर मोठ्या संख्येने कार्यकर्ते व हितचिंतकांनी त्यांची भेट घेऊन प्रकृतीची विचारपूस केली.
आमदार अभय पाटील यांची प्रकृती ठणठणीत असून, त्यांनी सर्व कार्यकर्ते व हितचिंतकांनी व्यक्त केलेल्या प्रेमाबद्दल आणि शुभेच्छांबद्दल आभार मानले.
ದೆಹಲಿ ಅಪಘಾತದ ಬಳಿಕ ಶಾಸಕ ಅಭಯ ಪಾಟೀಲರು ವಿವರಿಸಿದ ರೋಚಕ ಅನುಭವ; ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಪಂಡಿತ ಓಗಲೆ ಹಾಗೂ ದಿನಕರ ಮರಗಾಳೆ.
ಬೆಳಗಾವಿ : ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಅವರ ಸ್ನೇಹಿತ, ದೆಹಲಿ ಶಾಸಕ ಅನಿಲ್ ಝಾ ಅವರು ಭಾನುವಾರ ರಾತ್ರಿ ಸುಮಾರು 9.30ರ ವೇಳೆಗೆ ದೆಹಲಿಯಲ್ಲಿ ಅಪಘಾತಕ್ಕೆ ಒಳಗಾಗಿದ್ದರು. ಈ ಅಪಘಾತದಲ್ಲಿ ಇಬ್ಬರು ಶಾಸಕರು ಸೇರಿದಂತೆ ಅವರ ಸಹಚರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಎಲ್ಲರ ಆರೋಗ್ಯ ಸ್ಥಿರವಾಗಿದೆ.
ಅಪಘಾತದ ಬಳಿಕ ಇಬ್ಬರು ಶಾಸಕರನ್ನು ದೆಹಲಿಯ ಆಸ್ಪತ್ರೆಗೆ ಕರೆದೊಯ್ದು. ಅಲ್ಲಿ ಎಕ್ಸ್-ರೇ, ಸ್ಕ್ಯಾನಿಂಗ್ ಸೇರಿದಂತೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಎಲ್ಲಾ ವೈದ್ಯಕೀಯ ವರದಿಗಳು ಸಾಮಾನ್ಯವಾಗಿದ್ದರಿಂದ ಶಾಸಕ ಅಭಯ ಪಾಟೀಲರಿಗೆ ಆಸ್ಪತ್ರೆಯಿಂದ ಮನೆಗೆ ತೆರಳಲು ವೈದ್ಯರು ಅನುಮತಿ ನೀಡಿದರು.
ಈ ನಡುವೆ ಶಾಸಕ ಅಭಯ ಪಾಟೀಲರು ಸೋಮವಾರ, ಆಗಸ್ಟ್ 24ರಂದು ಬೆಳಗ್ಗೆ ವಿಮಾನದ ಮೂಲಕ ದೆಹಲಿಯಿಂದ ಬೆಳಗಾವಿಗೆ ಆಗಮಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹಾಗೂ ಅವರ ಕಚೇರಿ ಮತ್ತು ನಿವಾಸದಲ್ಲಿ ಅವರ ಆರೋಗ್ಯ ವಿಚಾರಿಸಲು ಸಾವಿರಾರು ಕಾರ್ಯಕರ್ತರು, ಮುಖಂಡರು ಹಾಗೂ ಹಿತೈಷಿಗಳು ಜಮಾಯಿಸಿದ್ದರು. ಎಲ್ಲರೂ ಅವರು ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಪಂಡಿತ ಓಗಲೆ ಹಾಗೂ ‘ಆಪಲ ಖಾನಾಪುರ’ ನ್ಯೂಸ್ ಪೋರ್ಟಲ್ ಮತ್ತು ಗ್ರೂಪ್ನ ಪರವಾಗಿ ಸಂಪಾದಕ ಹಾಗೂ ಮಾಜಿ ನಗರಸಭಾ ಸದಸ್ಯ ದಿನಕರ ಮರಗಾಳೆ ಅವರು ಶಾಸಕ ಅಭಯ ಪಾಟೀಲರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅಲ್ಲದೆ, ಅವರಿಗೆ ಉತ್ತಮ ಆರೋಗ್ಯಕ್ಕಾಗಿ ಶುಭಾಶಯಗಳನ್ನು ಸಲ್ಲಿಸಿದರು.
ಈ ವೇಳೆ ಅಪಘಾತದ ಕುರಿತು ವಿವರಣೆ ನೀಡಿದ ಶಾಸಕ ಅಭಯ ಪಾಟೀಲರು, ಅಪಘಾತ ಅತ್ಯಂತ ಭೀಕರವಾಗಿತ್ತು ಎಂದು ತಿಳಿಸಿದರು. ರಸ್ತೆಯ ಇನ್ನೊಂದು ಬದಿಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ರಸ್ತೆ ಮಧ್ಯದಲ್ಲಿದ್ದ ಕಬ್ಬಿಣದ ಗ್ರಿಲ್ನ ಡಿವೈಡರ್ಗೆ ಡಿಕ್ಕಿ ಹೊಡೆದು ಅದನ್ನು ಮುರಿದು, ಬಳಿಕ ತಮ್ಮ ಇನೋವಾ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ ಎಂದು ಹೇಳಿದರು.
ಈ ಅಪಘಾತದಲ್ಲಿ ಇನೋವಾ ಹಾಗೂ ಸ್ವಿಫ್ಟ್ ಕಾರುಗಳಿಗೆ ಭಾರೀ ಹಾನಿಯಾಗಿದ್ದು. ಸಿಗ್ನಲ್ ಇದ್ದ ಕಾರಣ ತಮ್ಮ ಕಾರು ಕೇವಲ ಗಂಟೆಗೆ ಸುಮಾರು 20 ಕಿ.ಮೀ ವೇಗದಲ್ಲಿ ಸಾಗುತ್ತಿತ್ತು. ಆದರೆ ರಸ್ತೆಯ ಮತ್ತೊಂದು ಬದಿಯಿಂದ ಬಂದ ಸ್ವಿಫ್ಟ್ ಕಾರು ಡಿವೈಡರ್ ಮುರಿದು ತಮ್ಮ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಅಭಯ ಪಾಟೀಲರು ವಿವರಿಸಿದರು.
ಆದರೆ ದೈವ ಬಲವತ್ತಾಗಿದ್ದರಿಂದ ಶಾಸಕ ಅಭಯ ಪಾಟೀಲ, ದೆಹಲಿ ಶಾಸಕ ಅನಿಲ್ ಝಾ ಹಾಗೂ ಅವರ ಸಹಚರರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ವಿಫ್ಟ್ ಕಾರಿನ ಚಾಲಕ ಹಾಗೂ ಅವರ ಪತ್ನಿಯ ಮುಖಕ್ಕೆ ಕಾರಿನ ಗಾಜು ತಾಗಿ ಸಣ್ಣಪುಟ್ಟ ಗಾಯಗಳಾಗಿವೆ. ಅವರೊಂದಿಗೆ ಇದ್ದ ಇಬ್ಬರು ಚಿಕ್ಕ ಮಕ್ಕಳಿಗೆ ಮಾತ್ರ ಅದೃಷ್ಟವಶಾತ್ ಯಾವುದೇ ಗಾಯವಾಗಿಲ್ಲ.
ವಿಶೇಷವೆಂದರೆ, ಈ ಅಪಘಾತ ದೆಹಲಿಯ ಪೊಲೀಸ್ ಠಾಣೆಯೊಂದರ ಮುಂಭಾಗದಲ್ಲೇ ಸಂಭವಿಸಿದೆ. ಹೀಗಾಗಿ ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡವರಿಗೆ ನೆರವು ನೀಡಿದ್ದಾರೆ ಎಂದು ಶಾಸಕ ಅಭಯ ಪಾಟೀಲರು ತಿಳಿಸಿದ್ದಾರೆ.
ಅಪಘಾತದ ಸುದ್ದಿ ಬೆಳಗಾವಿಗೆ ತಿಳಿಯುತ್ತಿದ್ದಂತೆ ಶಾಸಕ ಅಭಯ ಪಾಟೀಲರ ಕಾರ್ಯಕರ್ತರಲ್ಲಿ ಆತಂಕ ಉಂಟಾಗಿತ್ತು. ಆದರೆ ಆಸ್ಪತ್ರೆಯಲ್ಲಿ ನಡೆಸಿದ ಎಲ್ಲಾ ವೈದ್ಯಕೀಯ ಪರೀಕ್ಷೆಗಳ ವರದಿಗಳು ಸಾಮಾನ್ಯವಾಗಿವೆ ಎಂಬ ಮಾಹಿತಿ ದೊರೆತ ಬಳಿಕ ಕಾರ್ಯಕರ್ತರು ನಿಟ್ಟುಸಿರು ಬಿಟ್ಟರು.
ಸೋಮವಾರ ಬೆಳಗಾವಿಗೆ ಮರಳಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಹಿತೈಷಿಗಳು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಶಾಸಕ ಅಭಯ ಪಾಟೀಲರ ಆರೋಗ್ಯ ಉತ್ತಮವಾಗಿದ್ದು, ತಮ್ಮ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಹಾಗೂ ಶುಭಾಶಯಗಳನ್ನು ಸಲ್ಲಿಸಿದ ಎಲ್ಲಾ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
.



