बेळगावातील संरक्षण विभागाची जमीन कर्नाटक सरकारला परत द्या ; IT व सेमीकंडक्टर पार्क उभारण्याची आमदार अभय पाटील यांची मागणी.
बेळगाव : बेळगावातील संरक्षण विभागाच्या ताब्यात असलेली जमीन कर्नाटक सरकारला परत देऊन त्या ठिकाणी IT आणि सेमीकंडक्टर पार्क उभारण्यात यावा, अशी मागणी बेळगाव दक्षिणचे आमदार अभय पाटील यांनी केंद्रीय संरक्षण मंत्री राजनाथ सिंह यांच्याकडे केली आहे.

आमदार अभय पाटील यांनी नवी दिल्ली येथे संरक्षण मंत्री राजनाथ सिंह यांची भेट घेऊन बेळगावच्या विकासासंदर्भात ही मागणी मांडली. संरक्षण विभागाची जमीन कर्नाटक सरकारकडे हस्तांतरित करणे शक्य नसल्यास, त्याच जागेवर संरक्षण उत्पादन प्रकल्प (Defence Manufacturing Unit) उभारण्यात यावा, अशी पर्यायी मागणीही त्यांनी केली आहे.

बेळगावमध्ये IT, सेमीकंडक्टर किंवा संरक्षण उत्पादन क्षेत्रातील मोठा प्रकल्प उभारल्यास स्थानिक पातळीवर मोठ्या प्रमाणात रोजगाराच्या संधी निर्माण होऊ शकतात. विशेषतः बेळगावातील तरुणांना रोजगार मिळण्यास याचा मोठा फायदा होईल, असा मुद्दा आमदार अभय पाटील यांनी मांडला आहे.
बेळगावमध्ये उपलब्ध असलेल्या संरक्षण विभागाच्या जमिनीचा उपयोग स्थानिक विकास आणि रोजगारनिर्मितीसाठी व्हावा, यासाठी केंद्र सरकारने सकारात्मक निर्णय घ्यावा, अशी अपेक्षाही त्यांनी व्यक्त केली.
ಬೆಳಗಾವಿಯ ರಕ್ಷಣಾ ಇಲಾಖೆಯ ಜಮೀನನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿ; IT ಹಾಗೂ ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪಿಸಲು ಶಾಸಕ ಅಭಯ ಪಾಟೀಲರ ಆಗ್ರಹ.
ಬೆಳಗಾವಿ : ಬೆಳಗಾವಿಯಲ್ಲಿ ರಕ್ಷಣಾ ಇಲಾಖೆಯ ವಶದಲ್ಲಿರುವ ಜಮೀನನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿ, ಆ ಸ್ಥಳದಲ್ಲಿ IT ಮತ್ತು ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪಿಸಬೇಕು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ.
ಅಭಯ ಪಾಟೀಲ ಅವರು ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ ಬೆಳಗಾವಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಬೇಡಿಕೆಯನ್ನು ಮಂಡಿಸಿದರು. ರಕ್ಷಣಾ ಇಲಾಖೆಯ ಜಮೀನನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸುವುದು ಸಾಧ್ಯವಾಗದಿದ್ದರೆ, ಅದೇ ಸ್ಥಳದಲ್ಲಿ ರಕ್ಷಣಾ ಉತ್ಪಾದನಾ ಘಟಕ (Defence Manufacturing Unit) ಸ್ಥಾಪಿಸಬೇಕು ಎಂಬ ಪರ್ಯಾಯ ಬೇಡಿಕೆಯನ್ನೂ ಅವರು ಮುಂದಿಟ್ಟಿದ್ದಾರೆ.
ಬೆಳಗಾವಿಯಲ್ಲಿ IT, ಸೆಮಿಕಂಡಕ್ಟರ್ ಅಥವಾ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಯೋಜನೆಯನ್ನು ಸ್ಥಾಪಿಸಿದರೆ, ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೆಳಗಾವಿಯ ಯುವಕರಿಗೆ ಉದ್ಯೋಗ ದೊರೆಯಲು ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂಬ ಅಂಶವನ್ನು ಶಾಸಕ ಅಭಯ ಪಾಟೀಲ ಅವರು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.ಬೆಳಗಾವಿಯಲ್ಲಿ ಲಭ್ಯವಿರುವ ರಕ್ಷಣಾ ಇಲಾಖೆಯ ಜಮೀನನ್ನು ಸ್ಥಳೀಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ಅಭಯ ಪಾಟೀಲ ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಲಭ್ಯವಿರುವ ರಕ್ಷಣಾ ಇಲಾಖೆಯ ಜಮೀನನ್ನು ಸ್ಥಳೀಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ಅಭಯ ಪಾಟೀಲ ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.



