खानापूर मतदारसंघात 100 टक्के एन्युमरेशन फॉर्मचे वितरण; 1.92 लाखांहून अधिक भरलेले फॉर्म बीएलओंकडे जमा ; बलराम चव्हाण.
खानापूर (प्रतिनिधी) : भारत निवडणूक आयोगाच्या निर्देशानुसार सुरू असलेल्या विशेष मतदार यादी पुनरावलोकन-2026 (SIR) कार्यक्रमांतर्गत खानापूर विधानसभा मतदारसंघात घरोघरी जाऊन मतदारांना एन्युमरेशन फॉर्म वितरित करण्याचे काम यशस्वीरीत्या पूर्ण करण्यात आले असल्याची माहिती मतदार नोंदणी अधिकारी बलराम चव्हाण यांनी प्रसिद्धीस दिलेल्या पत्रकाद्वारे दिली आहे.
24 जुलै 2026 रोजी सायंकाळी 6.00 वाजेपर्यंत खानापूर विधानसभा मतदारसंघातील एकूण 2,19,152 मतदारांपैकी सर्व 2,19,152 मतदारांना एन्युमरेशन फॉर्मचे 100 टक्के वितरण करण्यात आले आहे. त्यापैकी 1,92,397 भरलेले एन्युमरेशन फॉर्म संबंधित बीएलओ (Booth Level Officer) यांच्याकडे परत प्राप्त झाले आहेत.
उर्वरित मतदारांनीही आपला एन्युमरेशन फॉर्म अचूकपणे भरून आवश्यक कागदपत्रांसह संबंधित बीएलओकडे विहित मुदतीत जमा करावा, असे आवाहन करण्यात आले आहे.
तसेच खानापूर विधानसभा मतदारसंघातील सर्व मतदारांनी भारत निवडणूक आयोगाच्या या महत्त्वपूर्ण उपक्रमाला पूर्ण सहकार्य करून आपल्या मतदार नोंदी अचूक व अद्ययावत ठेवण्यासाठी आवश्यक ती कार्यवाही करावी, असे आवाहन मतदार नोंदणी अधिकारी, 14-खानापूर विधानसभा मतदारसंघ बलराम चव्हाण यांनी प्रसिद्धीपत्रकाद्वारे केले आहे.
ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.100ರಷ್ಟು ಎನ್ಯುಮರೇಷನ್ ಫಾರ್ಮ್ಗಳ ವಿತರಣೆ; 1.92 ಲಕ್ಷಕ್ಕೂ ಹೆಚ್ಚು ಭರ್ತಿ ಮಾಡಿದ ಫಾರ್ಮ್ಗಳು ಬಿಎಲ್ಒಗಳಿಗೆ ಸಲ್ಲಿಕೆ : ಬಲರಾಮ್ ಚವ್ಹಾಣ್.
ಖಾನಾಪುರ (ಪ್ರತಿನಿಧಿ) : ಭಾರತದ ಚುನಾವಣಾ ಆಯೋಗಿನ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ–2026 (SIR) ಕಾರ್ಯಕ್ರಮದ ಅಂಗವಾಗಿ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಮತದಾರರಿಗೆ ಎನ್ಯುಮರೇಷನ್ ಫಾರ್ಮ್ಗಳನ್ನು ವಿತರಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಮತದಾರರ ನೋಂದಣಿ ಅಧಿಕಾರಿ ಬಲರಾಮ್ ಚವ್ಹಾಣ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
2026ರ ಜುಲೈ 24ರಂದು ಸಂಜೆ 6.00 ಗಂಟೆಯವರೆಗೆ, ಖಾನಾಪುರ ವಿಧಾನಸಭಾ ಕ್ಷೇತ್ರದ ಒಟ್ಟು 2,19,152 ಮತದಾರರಲ್ಲಿ ಎಲ್ಲಾ 2,19,152 ಮತದಾರರಿಗೂ ಎನ್ಯುಮರೇಷನ್ ಫಾರ್ಮ್ಗಳನ್ನು ಶೇ.100ರಷ್ಟು ವಿತರಣೆ ಮಾಡಲಾಗಿದೆ. ಅವುಗಳಲ್ಲಿ 1,92,397 ಭರ್ತಿಯಾದ ಎನ್ಯುಮರೇಷನ್ ಫಾರ್ಮ್ಗಳು ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿಗಳಾದ (Booth Level Officer – BLO) ಅವರ ಬಳಿ ಮರಳಿ ಸ್ವೀಕರಿಸಲ್ಪಟ್ಟಿವೆ.
ಉಳಿದಿರುವ ಮತದಾರರು ಕೂಡ ತಮ್ಮ ಎನ್ಯುಮರೇಷನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಬಿಎಲ್ಒ ಅವರಿಗೆ ನಿಗದಿತ ಅವಧಿಯೊಳಗೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ.
ಅದೇ ರೀತಿ, ಖಾನಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಮತದಾರರು ಭಾರತದ ಚುನಾವಣಾ ಆಯೋಗದ ಈ ಮಹತ್ವದ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವ ಮೂಲಕ ತಮ್ಮ ಮತದಾರರ ದಾಖಲೆಗಳನ್ನು ನಿಖರ ಹಾಗೂ ನವೀಕರಿತವಾಗಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಖಾನಾಪುರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿ ಬಲರಾಮ್ ಚವ್ಹಾಣ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


