तांत्रिक शिक्षण हेच बदलत्या युगातील यशाचे प्रवेशद्वार- डॉ. आर. एस पाटील ; व्ही. वाय. चव्हाण पॉलिटेक्निकमध्ये प्रथम वर्षाच्या विद्यार्थ्यांचे उत्साहात स्वागत.
खानापूर (प्रतिनिधी) : बदलत्या तंत्रज्ञानाच्या युगात केवळ पदवी मिळवणे पुरेसे नसून कौशल्य, संशोधनवृत्ती आणि कार्यकुशलता आत्मसात करणे अत्यंत आवश्यक आहे. तांत्रिक शिक्षण हे विद्यार्थ्यांच्या उज्ज्वल करिअरची गुरुकिल्ली असून शिस्त, सातत्य, जिज्ञासा आणि कठोर परिश्रम यांच्या बळावरच यश संपादन करता येते, असे प्रतिपादन ज्येष्ठ शिक्षणतज्ज्ञ डॉ. आर. एस. पाटील यांनी केले.

लोकमान्य एज्युकेशन सोसायटी संचलित व्ही. वाय. चव्हाण पॉलिटेक्निक, खानापूर येथे प्रथम वर्षातील नवागत विद्यार्थ्यांच्या स्वागत समारंभात प्रमुख मार्गदर्शक म्हणून ते बोलत होते. कार्यक्रमाच्या अध्यक्षस्थानी संस्थेचे उपाध्यक्ष पंढरी परब होते.
कार्यक्रमाची सुरुवात दीपप्रज्वलनाने झाली. यानंतर स्व. व्ही. वाय. चव्हाण आणि कै. बाबुराव ठाकूर यांच्या प्रतिमांचे पूजन करून त्यांना अभिवादन करण्यात आले. प्राचार्य डॉ. शिरीष केरूर यांनी उपस्थितांचे स्वागत करून महाविद्यालयाच्या शैक्षणिक वाटचालीचा आढावा घेत विद्यार्थ्यांना प्रेरणादायी मार्गदर्शन केले.
यावेळी व्यासपीठावर संचालक डॉ. दामोदर वागळे, गजानन धामणेकर, प्रकाश चव्हाण, निवृत्त प्राचार्य बी. एल. मजुकर, सल्लागार डॉ. जी. आर. उडपी, विवेक गिरी, प्रा. शरयू कदम, संस्थेचे सचिव सत्यव्रत नाईक तसेच महेश इनामदार उपस्थित होते.
मार्गदर्शन करताना डॉ. आर. एस. पाटील म्हणाले की, तांत्रिक शिक्षण म्हणजे केवळ प्रमाणपत्र किंवा पदवी मिळवण्याचा मार्ग नसून विद्यार्थ्यांच्या व्यक्तिमत्त्वाचा सर्वांगीण विकास घडवणारी प्रक्रिया आहे. गणित, भौतिकशास्त्र, प्रयोगशीलता, नवकल्पना आणि आधुनिक तंत्रज्ञानाचा अभ्यास यावर भर दिल्यास विद्यार्थ्यांना राष्ट्रीय व आंतरराष्ट्रीय स्तरावरही संधी उपलब्ध होऊ शकतात. मोठी स्वप्ने पाहण्याबरोबरच त्यासाठी वेळेचे नियोजन, शिस्त आणि सातत्यपूर्ण प्रयत्न आवश्यक असल्याचे त्यांनी अधोरेखित केले.
यावेळी डॉ. डी. एन. मिसाळे यांनी विद्यार्थ्यांना संबोधित करताना प्रयोगशाळेतील प्रत्यक्ष अनुभव, प्रकल्पाधारित शिक्षण, संशोधनाची आवड आणि सामाजिक बांधिलकी यांचे महत्त्व विशद केले. तंत्रज्ञानाच्या झपाट्याने बदलणाऱ्या युगात कौशल्याधारित शिक्षणामुळे रोजगाराच्या विविध संधी उपलब्ध होत असल्याने विद्यार्थ्यांनी स्पष्ट ध्येय निश्चित करून त्यादृष्टीने वाटचाल करावी, असा सल्लाही त्यांनी दिला.
अध्यक्षीय समारोपात पंढरी परब यांनी लोकमान्य संस्थेच्या शैक्षणिक परंपरेचा आढावा घेत कै. बाबुराव ठाकूर यांनी ग्रामीण भागात शिक्षणाची ज्योत पेटवण्याचे कार्य केले असल्याचे सांगितले. त्याच विचारातून किरण ठाकूर यांनी खानापूरसारख्या दुर्गम भागात तांत्रिक शिक्षणाची सुविधा उपलब्ध करून देत ग्रामीण विद्यार्थ्यांसाठी मोठी संधी निर्माण केली आहे. या सुवर्णसंधीचा लाभ घेऊन विद्यार्थ्यांनी आपल्या करिअरला नवी दिशा द्यावी, असे आवाहन त्यांनी केले.
कार्यक्रमात व्ही. वाय. चव्हाण महाविद्यालयातील गुणवंत विद्यार्थी देवयानी कुट्रे, महांतेश पाटील आणि गणेश पाटील यांचा शैक्षणिक गुणवत्तेबद्दल मान्यवरांच्या हस्ते सत्कार करण्यात आला.
समारंभास प्राध्यापक, कर्मचारी, पालक आणि विद्यार्थी मोठ्या संख्येने उपस्थित होते. कार्यक्रमाचे सूत्रसंचालन राघवेंद्र मडवाळकर व अश्विनी घाडी यांनी केले, तर रोहित वाघधरे यांनी आभार प्रदर्शन केले.
ಬದಲಾಗುತ್ತಿರುವ ಅನ್ಯವೇಶ ಯುಗಕ್ಕೆ ತಾಂತ್ರಿಕ ಶಿಕ್ಷಣವೇ. ಯಶಸ್ಸಿನ ಪ್ರವೇಶದ್ವಾರ – ಡಾ. ಆರ್. ಎಸ್. ಪಾಟೀಲ್; ವಿ. ವೈ. ಚವಾಣ್ ಪಾಲಿಟೆಕ್ನಿಕ್ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉತ್ಸಾಹದ ಸ್ವಾಗತ
ಖಾನಾಪುರ (ಪ್ರತಿನಿಧಿ): ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಕೇವಲ ಪದವಿ ಪಡೆಯುವುದಷ್ಟೇ ಸಾಕಾಗುವುದಿಲ್ಲ. ಕೌಶಲ್ಯ, ಸಂಶೋಧನಾ ಮನೋಭಾವ ಹಾಗೂ ಕಾರ್ಯದಕ್ಷತೆಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ತಾಂತ್ರಿಕ ಶಿಕ್ಷಣವು ವಿದ್ಯಾರ್ಥಿಗಳ ಉಜ್ವಲ ವೃತ್ತಿಜೀವನದ ಕೀಲಿಕೈ ಆಗಿದ್ದು, ಶಿಸ್ತು, ನಿರಂತರತೆ, ಜಿಜ್ಞಾಸೆ ಹಾಗೂ ಕಠಿಣ ಪರಿಶ್ರಮದ ಬಲದಿಂದಲೇ ಯಶಸ್ಸು ಸಾಧಿಸಲು ಸಾಧ್ಯ ಎಂದು ಹಿರಿಯ ಶಿಕ್ಷಣ ತಜ್ಞ ಡಾ. ಆರ್. ಎಸ್. ಪಾಟೀಲ್ ಅಭಿಪ್ರಾಯಪಟ್ಟರು.
ಅವರು ಲೋಕಮಾನ್ಯ ಎಜುಕೇಶನ್ ಸೊಸೈಟಿ ವತಿಯಿಂದ ನಡೆಸಲ್ಪಡುವ ವಿ. ವೈ. ಚವಾಣ್ ಪಾಲಿಟೆಕ್ನಿಕ್, ಖಾನಾಪುರದಲ್ಲಿ ಪ್ರಥಮ ವರ್ಷದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿ ಹಾಗೂ ಮಾರ್ಗದರ್ಶಕರಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಪಂಢರಿ ಪರಬ್ ವಹಿಸಿದ್ದರು.
ಕಾರ್ಯಕ್ರಮವು ದೀಪ ಬೆಳಗಿಸುವ ಮೂಲಕ ಆರಂಭವಾಯಿತು. ನಂತರ ದಿವಂಗತ ವಿ. ವೈ. ಚವಾಣ್ ಹಾಗೂ ದಿವಂಗತ ಬಾಬುರಾವ್ ಠಾಕೂರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು. ಪ್ರಾಂಶುಪಾಲ ಡಾ. ಶಿರೀಷ್ ಕೆರೂರ್ ಅವರು ಉಪಸ್ಥಿತರಿದ್ದ ಗಣ್ಯರು ಹಾಗೂ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಮಹಾವಿದ್ಯಾಲಯದ ಶೈಕ್ಷಣಿಕ ಪಯಣದ ಅವಲೋಕನ ನೀಡಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಿರ್ದೇಶಕರಾದ ಡಾ. ದಾಮೋದರ ವಾಗಳೆ, ಗಜಾನನ ಧಾಮಣೆಕರ, ಪ್ರಕಾಶ್ ಚವಾಣ್, ನಿವೃತ್ತ ಪ್ರಾಂಶುಪಾಲ ಬಿ. ಎಲ್. ಮಜುಕರ, ಸಲಹೆಗಾರ ಡಾ. ಜಿ. ಆರ್. ಉಡುಪಿ, ವಿವೇಕ್ ಗಿರಿ, ಪ್ರಾ. ಶರಯು ಕದಮ್, ಸಂಸ್ಥೆಯ ಕಾರ್ಯದರ್ಶಿ ಸತ್ಯವ್ರತ ನಾಯಕ್ ಹಾಗೂ ಮಹೇಶ್ ಇನಾಮದಾರ್ ಉಪಸ್ಥಿತರಿದ್ದರು.
ಮಾರ್ಗದರ್ಶನ ನೀಡಿದ ಡಾ. ಆರ್. ಎಸ್. ಪಾಟೀಲ್ ಅವರು, ತಾಂತ್ರಿಕ ಶಿಕ್ಷಣವೆಂದರೆ ಕೇವಲ ಪ್ರಮಾಣಪತ್ರ ಅಥವಾ ಪದವಿ ಪಡೆಯುವ ಮಾರ್ಗವಲ್ಲ; ಅದು ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ಮಾಡುವ ಪ್ರಕ್ರಿಯೆಯಾಗಿದೆ ಎಂದು ಹೇಳಿದರು. ಗಣಿತ, ಭೌತಶಾಸ್ತ್ರ, ಪ್ರಯೋಗಶೀಲತೆ, ನವೀನತೆ ಹಾಗೂ ಆಧುನಿಕ ತಂತ್ರಜ್ಞಾನದ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಿದರೆ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಅವಕಾಶಗಳು ದೊರೆಯಬಹುದು. ದೊಡ್ಡ ಕನಸುಗಳನ್ನು ಕಾಣುವುದರ ಜೊತೆಗೆ ಅವುಗಳನ್ನು ನನಸಾಗಿಸಲು ಸಮಯದ ಸಮರ್ಪಕ ನಿರ್ವಹಣೆ, ಶಿಸ್ತು ಮತ್ತು ನಿರಂತರ ಪರಿಶ್ರಮ ಅಗತ್ಯವೆಂದು ಅವರು ಒತ್ತಿಹೇಳಿದರು.
ಈ ಸಂದರ್ಭದಲ್ಲಿ ಡಾ. ಡಿ. ಎನ್. ಮಿಸಾಳೆ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಪ್ರಯೋಗಾಲಯದ ನೈಜ ಅನುಭವ, ಯೋಜನಾ ಆಧಾರಿತ ಶಿಕ್ಷಣ, ಸಂಶೋಧನೆಯ ಆಸಕ್ತಿ ಹಾಗೂ ಸಾಮಾಜಿಕ ಬದ್ಧತೆಯ ಮಹತ್ವವನ್ನು ವಿವರಿಸಿದರು. ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಕೌಶಲ್ಯಾಧಾರಿತ ಶಿಕ್ಷಣದಿಂದ ಉದ್ಯೋಗದ ವಿವಿಧ ಅವಕಾಶಗಳು ಲಭ್ಯವಾಗುತ್ತಿರುವುದರಿಂದ ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಿ ಅದಕ್ಕೆ ಅನುಗುಣವಾಗಿ ತಮ್ಮ ಶಿಕ್ಷಣ ಮತ್ತು ವೃತ್ತಿಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷೀಯ ಸಮಾರೋಪ ಭಾಷಣದಲ್ಲಿ ಪಂಢರಿ ಪರಬ್ ಅವರು ಲೋಕಮಾನ್ಯ ಸಂಸ್ಥೆಯ ಶೈಕ್ಷಣಿಕ ಪರಂಪರೆಯನ್ನು ಸ್ಮರಿಸಿ, ದಿವಂಗತ ಬಾಬುರಾವ್ ಠಾಕೂರ್ ಅವರು ಗ್ರಾಮೀಣ ಭಾಗದಲ್ಲಿ ಶಿಕ್ಷಣದ ದೀಪ ಬೆಳಗಿಸುವ ಮಹತ್ತರ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು. ಅದೇ ಚಿಂತನೆಯಿಂದ ಕಿರಣ್ ಠಾಕೂರ್ ಅವರು ಖಾನಾಪುರದಂತಹ ದುರ್ಗಮ ಪ್ರದೇಶದಲ್ಲಿ ತಾಂತ್ರಿಕ ಶಿಕ್ಷಣದ ಸೌಲಭ್ಯವನ್ನು ಒದಗಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ನಿರ್ಮಿಸಿದ್ದಾರೆ. ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನಕ್ಕೆ ಹೊಸ ದಿಕ್ಕು ನೀಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿ. ವೈ. ಚವಾಣ್ ಮಹಾವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಾದ ದೇವಯಾನಿ ಕೂಟ್ರೆ , ಮಹಾಂತೇಶ್ ಪಾಟೀಲ್ ಮತ್ತು ಗಣೇಶ್ ಪಾಟೀಲ್ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪ್ರಾಧ್ಯಾಪಕರು, ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರಾಗವೇಂದ್ರ ಮಡವಾಳಕರ ಹಾಗೂ ಅಶ್ವಿನಿ ಘಾಡಿ ನಿರೂಪಿಸಿದರು. ರೋಹಿತ್ ವಾಘಧರೆ ಅವರು ವಂದನಾರ್ಪಣೆ ಸಲ್ಲಿಸಿದರು.

