डॉ. डी. एम. मुल्ला यांची राणी चन्नम्मा विद्यापीठ हिंदी अध्यापक संघाच्या अध्यक्षपदी बिनविरोध निवड.
बेळगाव, प्रतिनिधी : राणी चन्नम्मा विद्यापीठाशी संलग्न महाविद्यालयांतील हिंदी प्राध्यापकांच्या संघटनेची सर्वसाधारण सभा उत्साहात पार पडली. या सभेत राणी चन्नम्मा विद्यापीठ हिंदी अध्यापक संघाच्या नवीन कार्यकारिणीची एकमताने निवड करण्यात आली. संघाच्या अध्यक्षपदी मराठा मंडळ कला, वाणिज्य, विज्ञान व गृहविज्ञान महाविद्यालय तसेच एम.कॉम. व एम.एस्सी. स्नातकोत्तर केंद्र, बेळगाव येथील हिंदी विभागाचे ज्येष्ठ प्राध्यापक डॉ. डी. एम. मुल्ला यांची बिनविरोध निवड करण्यात आली.
हिंदी भाषा व साहित्याच्या अध्यापन, संशोधन, शैक्षणिक उपक्रमांचे आयोजन तसेच विद्यापीठ स्तरावरील विविध शैक्षणिक कार्यात डॉ. मुल्ला यांनी दिलेल्या उल्लेखनीय योगदानाची दखल घेत त्यांच्यावर अध्यक्षपदाची जबाबदारी सोपविण्यात आली.
सभेत संघाच्या इतर पदाधिकाऱ्यांचीही निवड करण्यात आली. विजयपूर जिल्ह्याच्या उपाध्यक्षपदी अंजुमन महाविद्यालयाचे प्रा. एम. ए. पिरों, बेळगाव जिल्ह्याच्या उपाध्यक्षपदी बी. के. महाविद्यालयाचे प्रा. सुनील ताटे, तर चिकोडी शैक्षणिक जिल्ह्याच्या उपाध्यक्षपदी निपाणी जी.आय. बागेवाडी महाविद्यालयाचे प्रा. शंकरमूर्ती यांची निवड झाली. संघाच्या सचिवपदी संकेश्वर महाविद्यालयाच्या डॉ. प्रेमा गाडवी, तर कोषाध्यक्षपदी रायबाग सरकारी प्रथम दर्जा महाविद्यालयाचे प्रा. संतोष समाजे यांची निवड करण्यात आली.
कार्यकारिणी सदस्य म्हणून निपाणी जी.आय. बागेवाडी महाविद्यालयाच्या डॉ. महादेवी गुरव, गुळेदगुड्ड महाविद्यालयाच्या डॉ. सुमंगला अंगडी, रामदुर्ग येथील बेंबळगी महाविद्यालयाचे डॉ. एस. बी. संगम, कुडची महाविद्यालयाच्या डॉ. सुरेखा बेळगली तसेच अथणी महाविद्यालयाचे प्रा. सुरेश जाधव यांची निवड करण्यात आली.
नवीन कार्यकारिणीच्या माध्यमातून राणी चन्नम्मा विद्यापीठाच्या कार्यक्षेत्रातील हिंदी विषयाच्या अध्यापनाचा दर्जा उंचावणे, संशोधनाला चालना देणे तसेच राष्ट्रीय शैक्षणिक धोरणानुसार कार्यशाळा, परिसंवाद, अभ्यासक्रम विकास उपक्रम आणि प्राध्यापकांसाठी प्रशिक्षण कार्यक्रम आयोजित करण्याचा संकल्प यावेळी व्यक्त करण्यात आला.
या निवडीबद्दल राणी चन्नम्मा विद्यापीठाच्या कार्यक्षेत्रातील हिंदी प्राध्यापकांनी डॉ. डी. एम. मुल्ला आणि नव्याने निवड झालेल्या सर्व पदाधिकाऱ्यांचे अभिनंदन करून त्यांच्या भावी कार्यासाठी शुभेच्छा दिल्या.
ಡಾ. ಡಿ. ಎಂ. ಮುಲ್ಲಾ ಅವರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹಿಂದಿ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ
ಬೆಳಗಾವಿ : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಂಯೋಜಿತ ಮಹಾವಿದ್ಯಾಲಯಗಳ ಹಿಂದಿ ಅಧ್ಯಾಪಕರ ಸಂಘದ ಸಾಮಾನ್ಯ ಸಭೆ ಇತ್ತೀಚೆಗೆ ಉತ್ಸಾಹದಿಂದ ನಡೆಯಿತು. ಈ ಸಭೆಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹಿಂದಿ ಅಧ್ಯಾಪಕರ ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ಏಕಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷರಾಗಿ ಮರಾಠಾ ಮಂಡಳ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಗೃಹ ವಿಜ್ಞಾನ ಮಹಾವಿದ್ಯಾಲಯ ಹಾಗೂ ಎಂ.ಕಾಂ. ಮತ್ತು ಎಂ.ಎಸ್ಸಿ. ಸ್ನಾತಕೋತ್ತರ ಕೇಂದ್ರ, ಬೆಳಗಾವಿಯ ಹಿಂದಿ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಡಿ. ಎಂ. ಮುಲ್ಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹಿಂದಿ ಭಾಷೆ ಮತ್ತು ಸಾಹಿತ್ಯದ ಬೋಧನೆ, ಸಂಶೋಧನೆ, ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ವಿಶ್ವವಿದ್ಯಾಲಯ ಮಟ್ಟದ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ಡಾ. ಮುಲ್ಲಾ ಅವರು ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ, ಅವರಿಗೆ ಅಧ್ಯಕ್ಷರ ಜವಾಬ್ದಾರಿಯನ್ನು ವಹಿಸಲಾಯಿತು.
ಈ ಸಭೆಯಲ್ಲಿ ಇತರ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು. ವಿಜಯಪುರ ಜಿಲ್ಲೆಯ ಉಪಾಧ್ಯಕ್ಷರಾಗಿ ಅಂಜುಮನ್ ಮಹಾವಿದ್ಯಾಲಯದ ಪ್ರೊ. ಎಂ. ಎ. ಪಿರೋಂ, ಬೆಳಗಾವಿ ಜಿಲ್ಲೆಯ ಉಪಾಧ್ಯಕ್ಷರಾಗಿ ಬಿ. ಕೆ. ಮಹಾವಿದ್ಯಾಲಯದ ಪ್ರೊ. ಸುನೀಲ ತಾಟೆ, ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪಾಧ್ಯಕ್ಷರಾಗಿ ನಿಪ್ಪಾಣಿ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದ ಪ್ರೊ. ಶಂಕರಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿಯಾಗಿ ಸಂಕೇಶ್ವರ ಮಹಾವಿದ್ಯಾಲಯದ ಡಾ. ಪ್ರೇಮಾ ಗಡವಿ, ಹಾಗೂ ಖಜಾಂಚಿಯಾಗಿ ರಾಯಬಾಗ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರೊ. ಸಂತೋಷ ಸಮಾಜೆ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಿಪ್ಪಾಣಿ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದ ಡಾ. ಮಹಾದೇವಿ ಗುರವ್, ಗುಳೆದಗುಡ್ಡ ಮಹಾವಿದ್ಯಾಲಯದ ಡಾ. ಸುಮಂಗಲಾ ಅಂಗಡಿ, ರಾಮದುರ್ಗದ ಬೆಂಬಳಗಿ ಮಹಾವಿದ್ಯಾಲಯದ ಡಾ. ಎಸ್. ಬಿ. ಸಂಗಮ, ಕುಡಚಿ ಮಹಾವಿದ್ಯಾಲಯದ ಡಾ. ಸುರೇಖಾ ಬೆಳಗಲಿ, ಹಾಗೂ ಅಥಣಿ ಮಹಾವಿದ್ಯಾಲಯದ ಪ್ರೊ. ಸುರೇಶ್ ಜಾಧವ್ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಕಾರ್ಯಕಾರಿ ಸಮಿತಿಯ ಮೂಲಕ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ ಹಿಂದಿ ವಿಷಯದ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದು, ಸಂಶೋಧನೆಗೆ ಉತ್ತೇಜನ ನೀಡುವುದು, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ವಿವಿಧ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ಪಠ್ಯಕ್ರಮ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಅಧ್ಯಾಪಕರಿಗಾಗಿ ಶೈಕ್ಷಣಿಕ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು.
ಈ ಆಯ್ಕೆಯ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯ ಹಿಂದಿ ಅಧ್ಯಾಪಕರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.

