जिद्द, कष्ट आणि समाजसेवेचा प्रेरणादायी प्रवास; उद्योजक शिवानंद चन्नेवाडकर यांच्याकडून जन्मगावातील विद्यार्थ्यांना शैक्षणिक भेट.
खानापूर : प्रतिनिधी
यशाच्या सर्वोच्च शिखरावर पोहोचल्यानंतरही आपल्या जन्मभूमीशी असलेले नाते जपणारी माणसे समाजात क्वचितच आढळतात. पुणे येथील कात्रज (दत्तनगर) परिसरातील एस. एस. इंडस्ट्रीज या सीएनसी उद्योगाचे संचालक तथा यशस्वी उद्योजक शिवानंद रुद्रप्पा चन्नेवाडकर यांनी आपल्या जन्मगाव गर्बेनहट्टी (ता. खानापूर) येथील गरजू विद्यार्थ्यांसाठी पुन्हा एकदा सामाजिक बांधिलकीचे दर्शन घडविले आहे.

आपले वडील कै. रुद्रप्पा होनाप्पा चन्नेवाडकर यांच्या स्मृतिप्रीत्यर्थ आणि मातोश्री जानकूबाई रुद्रप्पा चन्नेवाडकर यांच्या प्रेरणेतून त्यांनी गावातील मराठी शाळेतील 40 गरजू विद्यार्थ्यांना दर्जेदार, ब्रँडेड स्कूल बॅगचे वाटप केले. नवीन शालेय बॅग मिळाल्याने विद्यार्थ्यांच्या चेहऱ्यावर उमटलेला आनंद हा या उपक्रमाचा सर्वात मोठा सन्मान ठरला.
शिवानंद चन्नेवाडकर यांचा जीवनप्रवास संघर्षातून यशाकडे नेणारा प्रेरणादायी आदर्श आहे. सुमारे तीन दशकांपूर्वी आर्थिक परिस्थितीमुळे त्यांनी गाव सोडून रोजगाराच्या शोधात बेळगाव आणि त्यानंतर हुबळी येथे विविध ठिकाणी काम केले. मात्र, केवळ नोकरीवर समाधान न मानता स्वतःचा उद्योग उभारण्याचे स्वप्न त्यांनी जपले.
पुढे पुणे शहरात एका मित्राच्या सहकार्याने त्यांनी उद्योगक्षेत्रात पहिले पाऊल टाकले. अथक परिश्रम, प्रामाणिकपणा, चिकाटी आणि गुणवत्तेच्या बळावर त्यांनी एस. एस. इंडस्ट्रीजची यशस्वी उभारणी केली. आज ते पुण्यातील यशस्वी उद्योजक म्हणून ओळखले जात असले तरी आपल्या गावाशी असलेली नाळ त्यांनी कधीही तुटू दिली नाही.
दरवर्षी आपल्या जन्मगावी येऊन विद्यार्थ्यांना शैक्षणिक साहित्याचे वाटप करण्याची त्यांची परंपरा आजही अखंड सुरू आहे. समाजाप्रती असलेली कृतज्ञता आणि आई-वडिलांनी दिलेले संस्कार यांचे हे जिवंत उदाहरण असल्याची भावना ग्रामस्थांनी व्यक्त केली.
आज अनेकजण शहरात स्थायिक झाल्यानंतर आपल्या गावाकडे पाठ फिरवतात. मात्र, शिवानंद चन्नेवाडकर यांनी आपल्या यशाचा वाटा गावातील विद्यार्थ्यांच्या शिक्षणासाठी अर्पण करण्याचा घेतलेला संकल्प निश्चितच अनुकरणीय आहे. “आपण ज्या मातीत वाढलो, ज्या शाळेने आपल्याला घडवले, त्या समाजाचे काहीतरी देणे लागतो,” हा संदेश त्यांच्या कार्यातून अधोरेखित होत आहे.
स्वतःच्या जिद्दीने आणि कष्टाने आयुष्य घडवतानाच समाजातील वंचित मुलांच्या शिक्षणासाठी सातत्याने योगदान देणारे उद्योजक शिवानंद चन्नेवाडकर यांचे हे कार्य खानापूर तालुक्यातील तरुणांसाठी प्रेरणादायी ठरत असून, त्यांच्या या सामाजिक उपक्रमाचे सर्वत्र कौतुक होत आहे.
ಕಠಿಣ ಪರಿಶ್ರಮ ಮತ್ತು ಸಮಾಜಸೇವೆಯ ಪ್ರೇರಣಾದಾಯಕ ಪಯಣ; ಉದ್ಯಮಿ ಶಿವಾನಂದ ಚನ್ನೇವಾಡಕರರಿಂದ ಸ್ವಗ್ರಾಮದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉಡುಗೊರೆ
ಖಾನಾಪುರ : ಪ್ರತಿನಿಧಿ
ಯಶಸ್ಸಿನ ಅತ್ಯುನ್ನತ ಶಿಖರವನ್ನು ತಲುಪಿದ ನಂತರವೂ ತಮ್ಮ ಜನ್ಮಭೂಮಿಯೊಂದಿಗೆ ಇರುವ ನಂಟನ್ನು ಕಾಪಾಡಿಕೊಂಡಿರುವ ವ್ಯಕ್ತಿಗಳು ಸಮಾಜದಲ್ಲಿ ಅಪರೂಪ. ಪುಣೆಯ ಕಾತ್ರಜ್ (ದತ್ತನಗರ) ಪ್ರದೇಶದಲ್ಲಿರುವ ಎಸ್. ಎಸ್. ಇಂಡಸ್ಟ್ರೀಸ್ ಎಂಬ ಸಿಎನ್ಸಿ ಕೈಗಾರಿಕೆಯ ನಿರ್ದೇಶಕರಾಗಿರುವ ಯಶಸ್ವಿ ಉದ್ಯಮಿ ಶಿವಾನಂದ ರುದ್ರಪ್ಪ ಚನ್ನೇವಾಡಕರ ಅವರು ತಮ್ಮ ಜನ್ಮಗ್ರಾಮವಾದ ಗರ್ಬೇನಹಟ್ಟಿ (ತಾ. ಖಾನಾಪುರ) ಗ್ರಾಮದ ಬಡ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ ಮತ್ತೊಮ್ಮೆ ತಮ್ಮ ಸಾಮಾಜಿಕ ಬದ್ಧತೆಯನ್ನು ಮೆರೆದಿದ್ದಾರೆ.
ತಮ್ಮ ತಂದೆ ದಿವಂಗತ ರುದ್ರಪ್ಪ ಹೊನಪ್ಪ ಚನ್ನೇವಾಡಕರ ಅವರ ಸ್ಮರಣಾರ್ಥ ಹಾಗೂ ತಾಯಿ ಜಾನಕಿಬಾಯಿ ರುದ್ರಪ್ಪ ಚನ್ನೇವಾಡಕರ ಅವರ ಪ್ರೇರಣೆಯಿಂದ ಅವರು ಗ್ರಾಮದ ಮರಾಠಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 40 ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬ್ರಾಂಡೆಡ್ ಶಾಲಾ ಬ್ಯಾಗ್ಗಳನ್ನು ವಿತರಿಸಿದರು. ಹೊಸ ಶಾಲಾ ಬ್ಯಾಗ್ಗಳನ್ನು ಪಡೆದ ವಿದ್ಯಾರ್ಥಿಗಳ ಮುಖದಲ್ಲಿ ಮೂಡಿದ ಸಂತಸವೇ ಈ ಸಮಾಜಮುಖಿ ಕಾರ್ಯಕ್ಕೆ ದೊರೆತ ಅತ್ಯಂತ ದೊಡ್ಡ ಗೌರವವಾಗಿದೆ.
ಶಿವಾನಂದ ಚನ್ನೇವಾಡಕರ ಅವರ ಜೀವನ ಪಯಣವು ಹೋರಾಟದಿಂದ ಯಶಸ್ಸಿಯತ್ತ ಸಾಗಿದ ಪ್ರೇರಣಾದಾಯಕ ಕಥೆಯಾಗಿದೆ. ಸುಮಾರು ಮೂರು ದಶಕಗಳ ಹಿಂದೆ ಆರ್ಥಿಕ ಸಂಕಷ್ಟದ ಕಾರಣದಿಂದ ಅವರು ತಮ್ಮ ಊರನ್ನು ತೊರೆದು ಉದ್ಯೋಗ ಅರಸಿ ಮೊದಲು ಬೆಳಗಾವಿ, ನಂತರ ಹುಬ್ಬಳ್ಳಿಯ ವಿವಿಧ ಕಡೆಗಳಲ್ಲಿ ಕೆಲಸ ಮಾಡಿದರು. ಆದರೆ ಕೇವಲ ಉದ್ಯೋಗಕ್ಕೆ ಸೀಮಿತರಾಗದೇ ಸ್ವಂತ ಉದ್ಯಮ ಸ್ಥಾಪಿಸುವ ಕನಸನ್ನು ಅವರು ಸದಾ ಜೀವಂತವಾಗಿಟ್ಟುಕೊಂಡಿದ್ದರು.
ನಂತರ ಪುಣೆ ನಗರದಲ್ಲಿ ಸ್ನೇಹಿತರೊಬ್ಬರ ಸಹಕಾರದೊಂದಿಗೆ ಕೈಗಾರಿಕಾ ಕ್ಷೇತ್ರಕ್ಕೆ ಮೊದಲ ಹೆಜ್ಜೆಯಿಟ್ಟರು. ಅವಿರತ ಪರಿಶ್ರಮ, ಪ್ರಾಮಾಣಿಕತೆ, ದೃಢಸಂಕಲ್ಪ ಹಾಗೂ ಗುಣಮಟ್ಟದ ಬದ್ಧತೆಯ ಮೂಲಕ ಅವರು ಎಸ್. ಎಸ್. ಇಂಡಸ್ಟ್ರೀಸ್ ಅನ್ನು ಯಶಸ್ವಿಯಾಗಿ ಬೆಳೆಸಿದರು. ಇಂದು ಅವರು ಪುಣೆಯ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದರೂ ತಮ್ಮ ಹುಟ್ಟೂರಿನೊಂದಿಗೆ ಇರುವ ಬಾಂಧವ್ಯವನ್ನು ಎಂದಿಗೂ ಮರೆತಿಲ್ಲ.
ಪ್ರತಿ ವರ್ಷ ತಮ್ಮ ಜನ್ಮಗ್ರಾಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುವ ಪರಂಪರೆಯನ್ನು ಅವರು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸಮಾಜದ ಮೇಲಿನ ಕೃತಜ್ಞತೆ ಹಾಗೂ ತಂದೆ-ತಾಯಿಯಿಂದ ಪಡೆದ ಉತ್ತಮ ಸಂಸ್ಕಾರಗಳ ಜೀವಂತ ಉದಾಹರಣೆಯೇ ಅವರ ಈ ಕಾರ್ಯ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಇಂದು ಅನೇಕರು ನಗರಗಳಲ್ಲಿ ನೆಲೆಸಿದ ನಂತರ ತಮ್ಮ ಊರನ್ನು ಮರೆತುಬಿಡುತ್ತಾರೆ. ಆದರೆ ಶಿವಾನಂದ ಚನ್ನೇವಾಡಕರ ಅವರು ತಮ್ಮ ಯಶಸ್ಸಿನ ಒಂದು ಭಾಗವನ್ನು ಗ್ರಾಮದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಮರ್ಪಿಸುವ ಸಂಕಲ್ಪ ಮಾಡಿಕೊಂಡಿರುವುದು ನಿಜಕ್ಕೂ ಅನುಕರಣೀಯವಾಗಿದೆ.
“ನಾವು ಬೆಳೆದ ಮಣ್ಣು, ನಮ್ಮನ್ನು ರೂಪಿಸಿದ ಶಾಲೆ ಮತ್ತು ಸಮಾಜಕ್ಕೆ ಏನಾದರೂ ಮರಳಿ ನೀಡುವುದು ನಮ್ಮ ಕರ್ತವ್ಯ” ಎಂಬ ಸಂದೇಶವನ್ನು ಅವರ ಸಮಾಜಮುಖಿ ಕಾರ್ಯ ಸ್ಪಷ್ಟವಾಗಿ ಸಾರುತ್ತಿದೆ.
ತಮ್ಮ ಕಠಿಣ, ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಬದುಕನ್ನು ಕಟ್ಟಿಕೊಂಡಿರುವ ಶಿವಾನಂದ ಚನ್ನೇವಾಡಕರ ಅವರು, ಸಮಾಜದ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ನಿರಂತರವಾಗಿ ನೀಡುತ್ತಿರುವ ಕೊಡುಗೆ ಖಾನಾಪುರ ತಾಲ್ಲೂಕಿನ ಯುವಕರಿಗೆ ಪ್ರೇರಣೆಯಾಗಿದ್ದು, ಅವರ ಈ ಸಮಾಜಸೇವಾ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.


