जटगे परिसरात वाघाचा धुमाकूळ; शेतकऱ्याचा बैल ठार, वनविभागाकडून पंचनामा.
खानापूर : प्रतिनिधी
खानापूर तालुक्यातील जटगे गावाजवळ शुक्रवारी (दि. 12 जून) वाघाच्या हल्ल्यात एका शेतकऱ्याचा बैल मृत्यूमुखी पडल्याची घटना घडली. या घटनेमुळे परिसरातील शेतकरी व ग्रामस्थांमध्ये भीतीचे वातावरण निर्माण झाले असून वनविभागाने तत्काळ घटनास्थळी भेट देत पंचनामा केला आहे.
मिळालेल्या माहितीनुसार, जटगे येथील शेतकरी राजाराम पाटील यांचा बैल शेतातील परिसरात चरण्यासाठी सोडण्यात आला होता. यावेळी शेतालगतच्या जंगलातून अचानक बाहेर आलेल्या वाघाने बैलावर झडप घालत हल्ला केला. हल्ला इतका भीषण होता की बैलाचा जागीच मृत्यू झाला. शेतकऱ्यांना ही घटना समजताच त्यांनी तत्काळ वनविभागाला माहिती दिली.
घटनेची माहिती मिळताच वनविभागाचे अधिकारी व कर्मचारी घटनास्थळी दाखल झाले. त्यांनी मृत जनावराची पाहणी करून पंचनामा केला असून नुकसानभरपाईसाठी आवश्यक प्रक्रिया सुरू करण्यात आली आहे. या हल्ल्यामुळे राजाराम पाटील यांचे मोठे आर्थिक नुकसान झाले असून शासनाकडून तातडीने मदत मिळावी, अशी मागणी करण्यात येत आहे.
दरम्यान, जटगे व आसपासचा परिसर घनदाट जंगलाने वेढलेला असल्याने वन्यप्राण्यांचा वावर नेहमीच आढळून येतो. मागील काही महिन्यांत बिबट्या, अस्वल आणि वाघाच्या हालचालींच्या घटना समोर आल्याने शेतकरी वर्गात चिंता वाढली आहे. शेतात काम करताना तसेच जनावरे चराईसाठी नेताना विशेष खबरदारी घेण्याचे आवाहन वनविभागाने केले आहे.
ग्रामस्थांनी जंगलालगतच्या भागात वनविभागाने गस्त वाढवावी, वन्यप्राण्यांच्या हालचालींवर लक्ष ठेवण्यासाठी कॅमेरे बसवावेत आणि शेतकऱ्यांना त्वरित नुकसानभरपाई द्यावी, अशी मागणी केली आहे. या घटनेमुळे जटगे परिसरात पुन्हा एकदा मानव-वन्यजीव संघर्षाचा प्रश्न ऐरणीवर आला आहे.
ಜಟಗೆ ಪ್ರದೇಶದಲ್ಲಿ ಹುಲಿಯ ಅಟ್ಟಹಾಸ; ರೈತನ ಆಕಳು ಬಲಿ, ಅರಣ್ಯ ಇಲಾಖೆಯಿಂದ ಪಂಚನಾಮೆ.
ಖಾನಾಪುರ : ಪ್ರತಿನಿಧಿಖಾನಾಪುರ ತಾಲ್ಲೂಕಿನ ಜಟಗೆ ಗ್ರಾಮದ ಸಮೀಪ ಶುಕ್ರವಾರ (ದಿ. 12 ಜೂನ್) ಹುಲಿಯ ದಾಳಿಯಲ್ಲಿ ರೈತನೊಬ್ಬನ ಹಸು ಸಾವನ್ನಪ್ಪಿದ ಘಟನೆ ನಡೆದಿದೆ. ಈ ಘಟನೆಯಿಂದ ಭಾಗದ ರೈತರು ಹಾಗೂ ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದೆ.
ಖಾನಾಪುರ ತಾಲ್ಲೂಕಿನ ಜಟಗೆ ಗ್ರಾಮದ ಸಮೀಪ ಶುಕ್ರವಾರ (ದಿ. 12 ಜೂನ್) ಹುಲಿಯ ದಾಳಿಯಲ್ಲಿ ರೈತನೊಬ್ಬನ ಹಸು ಸಾವನ್ನಪ್ಪಿದ ಘಟನೆ ನಡೆದಿದೆ. ಈ ಘಟನೆಯಿಂದ ಭಾಗದ ರೈತರು ಹಾಗೂ ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಜಟಗೆ ಗ್ರಾಮದ ರೈತ ರಾಜಾರಾಮ ಪಾಟೀಲ್ ಅವರ ಹಸು ಹೊಲದ ಸಮೀಪ ಮೇಯಲು ಬಿಡಲಾಗಿತ್ತು. ಈ ವೇಳೆ ಹೊಲಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಿಂದ ಏಕಾಏಕಿ ಹೊರಬಂದ ಹುಲಿ ಎಮ್ಮೆಯ ಮೇಲೆ ದಾಳಿ ನಡೆಸಿದೆ. ದಾಳಿ ಎಷ್ಟು ಭೀಕರವಾಗಿದ್ದು , ಎಮ್ಮೆ ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆ ತಿಳಿದ ಕೂಡಲೇ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅವರು ಮೃತಪಟ್ಟ ಪಶುವಿನ ಪರಿಶೀಲನೆ ನಡೆಸಿ ಪಂಚನಾಮೆ ಮಾಡಿದ್ದು, ಪರಿಹಾರ ನೀಡಲು ಅಗತ್ಯ ಕ್ರಮಗಳನ್ನು ಆರಂಭಿಸಿದ್ದಾರೆ. ಈ ದಾಳಿಯಿಂದ ರಾಜಾರಾಮ ಪಾಟೀಲ್ ಅವರಿಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದ್ದು, ಸರ್ಕಾರದಿಂದ ತಕ್ಷಣ ನೆರವು ದೊರಕಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ಇದೇ ವೇಳೆ, ಜಟಗೆ ಹಾಗೂ ಸುತ್ತಮುತ್ತಲಿನ ಪ್ರದೇಶ ದಟ್ಟ ಅರಣ್ಯದಿಂದ ಆವೃತವಾಗಿರುವುದರಿಂದ ಕಾಡುಪ್ರಾಣಿಗಳ ಸಂಚಾರ ಸಾಮಾನ್ಯವಾಗಿ ಕಂಡುಬರುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ಚಿರತೆ, ಕರಡಿ ಹಾಗೂ ಹುಲಿಗಳ ಸಂಚಾರಕ್ಕೆ ಸಂಬಂಧಿಸಿದ ಹಲವು ಘಟನೆಗಳು ವರದಿಯಾಗಿರುವುದರಿಂದ ರೈತ ವರ್ಗದಲ್ಲಿ ಆತಂಕ ಹೆಚ್ಚಾಗಿದೆ. ಹೊಲದಲ್ಲಿ ಕೆಲಸ ಮಾಡುವಾಗ ಹಾಗೂ ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯುವಾಗ ವಿಶೇಷ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಗ್ರಾಮಸ್ಥರು ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಗಸ್ತು ಹೆಚ್ಚಿಸಬೇಕು, ಕಾಡುಪ್ರಾಣಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ರೈತರಿಗೆ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಯಿಂದ ಜಟಗೆ ಪ್ರದೇಶದಲ್ಲಿ ಮತ್ತೊಮ್ಮೆ ಮಾನವ–ವನ್ಯಜೀವಿ ಸಂಘರ್ಷದ ಪ್ರಶ್ನೆ ಪ್ರಮುಖವಾಗಿ ಮುನ್ನೆಲೆಗೆ ಬಂದಿದೆ.


