मडवाळच्या लक्ष्मी यात्रेला दिलासा; अरविंद पाटील यांच्या देणगीतून खोदलेल्या कुपनलिकेला तीन इंच पाणी
24 गावांच्या ऐतिहासिक यात्रेपूर्वी पाणीटंचाईचा प्रश्न सुटला; ग्रामस्थांकडून आभार व्यक्त.
खानापूर : खानापूर तालुक्यातील मडवाळ गावात पुढील वर्षी होणाऱ्या 24 गावांच्या मडवाळ–कापोली श्री लक्ष्मी यात्रेच्या पार्श्वभूमीवर निर्माण झालेला पिण्याच्या पाण्याचा गंभीर प्रश्न अखेर मार्गी लागला आहे. माजी आमदार तथा बेळगाव जिल्हा मध्यवर्ती सहकारी बँकेचे संचालक अरविंद पाटील यांनी देणगी स्वरूपात बोरवेल खोदून दिलेल्या नवीन कुपनलिकेला तब्बल तीन इंच पाण्याचा मुबलक स्रोत उपलब्ध झाला आहे. त्यामुळे मडवाळसह पंचक्रोशीतील ग्रामस्थांमध्ये आनंदाचे वातावरण निर्माण झाले आहे.
मडवाळ येथे पुढील वर्षी पारंपरिक आणि धार्मिकदृष्ट्या महत्त्वपूर्ण असलेली 24 गावांची मडवाळ-कापोली श्री लक्ष्मी यात्रा भरविण्यात येणार आहे. यात्रेच्या नियोजनाला सुरुवात झाली असतानाच गावात गेल्या तीन वर्षांपासून तीव्र पाणीटंचाईची समस्या निर्माण झाली होती. गावचा मुख्य पाणीपुरवठा जुन्या कुपनलिकेवर अवलंबून असल्याने आणि तिची पाण्याची क्षमता घटल्याने ग्रामस्थांसमोर मोठे संकट उभे राहिले होते.
या पार्श्वभूमीवर गावातील ज्येष्ठ नागरिक व सामाजिक कार्यकर्ते बाबासाहेब देसाई तसेच ग्रामस्थांच्या शिष्टमंडळाने माजी आमदार अरविंद पाटील यांची भेट घेऊन परिस्थितीची माहिती दिली. समस्येचे गांभीर्य लक्षात घेऊन अरविंद पाटील यांनी कोणताही विलंब न लावता स्वतःच्या खर्चातून बोरवेल मशीन उपलब्ध करून देत कुपनलिकेची खोदाई करून दिली.
खोदाईदरम्यान कुपनलिकेला सुमारे तीन इंच पाण्याचा स्रोत मिळाल्याने ग्रामस्थांच्या आशा पल्लवित झाल्या. त्यानंतर बाबासाहेब देसाई, संदीप देसाई आणि ग्रामस्थांनी ग्रामपंचायतीचे (पीडीओ) विकास अधिकाऱ्यांकडे विद्युत पंप बसविण्याची मागणी केली. त्यानुसार आज गुरुवारी (दि. 11 जून) रोजी कुपनलिकेवर विद्युत पंप बसविण्यात आला असून पाणी उपसा सुरू झाला आहे.
ग्रामस्थांच्या माहितीनुसार, मडवाळ येथे 1982 साली खोदण्यात आलेल्या कुपनलिकेवर अनेक वर्षे गावचा पाणीपुरवठा सुरळीत सुरू होता. मात्र गेल्या काही वर्षांत भूजलपातळी घटल्यामुळे त्या कुपनलिकेतील पाण्याचे प्रमाण कमी झाले. नवीन स्रोत शोधण्यासाठी विविध ठिकाणी बोरवेलची खोदाई करण्यात आली; परंतु अपेक्षित यश मिळाले नव्हते.
अखेर अरविंद पाटील यांच्या पुढाकारातून खोदण्यात आलेल्या नव्या कुपनलिकेमुळे गावाची पिण्याच्या पाण्याची समस्या मोठ्या प्रमाणात दूर झाली असून आगामी श्री लक्ष्मी यात्रेसाठीही पाण्याची चिंता मिटली आहे. याबद्दल मडवाळ व पंचक्रोशीतील ग्रामस्थांनी अरविंद पाटील यांचे आभार मानत त्यांच्याप्रती कृतज्ञता व्यक्त केली आहे.
ठळक मुद्दे…
मडवाळ येथे पुढील वर्षी 24 गावांची श्री लक्ष्मी यात्रा.
तीन वर्षांपासून गावात तीव्र पाणीटंचाई.
अरविंद पाटील यांनी स्वखर्चातून कुपनलिका खोदून दिली.
नव्या कुपनलिकेला तीन इंच पाण्याचा स्रोत.
विद्युत पंप बसवून पाणीपुरवठा सुरू.
यात्रेसह ग्रामस्थांच्या पाण्याचा प्रश्न मार्गी.
ಮಡವಾಳ ಊರಿನ ಲಕ್ಷ್ಮೀ ಜಾತ್ರೆ ವೇಳೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ; ಅರವಿಂದ ಪಾಟೀಲರ ದೇಣಿಗೆಯಿಂದ ತೋಡಿಸಿದ ಕೊಳವೆಬಾವಿಗೆ ಮೂರು ಇಂಚು ನೀರು.24 ಗ್ರಾಮಗಳ ಐತಿಹಾಸಿಕ ಜಾತ್ರೆಗೆ ಮುನ್ನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ;ಕೃತಜ್ಞತೆ ವ್ಯಕ್ತ ಪಡಿಸಿದ ಗ್ರಾಮಸ್ಥರು
ಖಾನಾಪುರ : ಖಾನಾಪುರ ತಾಲ್ಲೂಕಿನ ಮಡವಾಳ ಗ್ರಾಮದಲ್ಲಿ ಮುಂದಿನ ವರ್ಷ ನಡೆಯಲಿರುವ 24 ಗ್ರಾಮಗಳ ಮಡವಾಳ–ಕಾಪೋಲಿ ಶ್ರೀ ಲಕ್ಷ್ಮೀ ಜಾತ್ರೆಯ ಹಿನ್ನೆಲೆಯಲ್ಲಿ ಉದ್ಭವಿಸಿದ್ದ ಕುಡಿಯುವ ನೀರಿನ ತೀವ್ರ ಸಮಸ್ಯೆಗೆ ಅಂತಿಮವಾಗಿ ಪರಿಹಾರ ದೊರೆತಿದೆ. ಮಾಜಿ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಅರವಿಂದ ಪಾಟೀಲ ಅವರು ದೇಣಿಗೆಯ ರೂಪದಲ್ಲಿ ತೋಡಿಸಿಕೊಟ್ಟ ಹೊಸ ಕೊಳವೆಬಾವಿಯಲ್ಲಿ ಸುಮಾರು ಮೂರು ಇಂಚು ನೀರಿನ ಸಮೃದ್ಧ ಮೂಲ ಲಭ್ಯವಾಗಿದ್ದು, ಮಡವಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಮಡವಾಳದಲ್ಲಿ ಮುಂದಿನ ವರ್ಷ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ 24 ಗ್ರಾಮಗಳ ಮಡವಾಳ–ಕಾಪೋಲಿ ಶ್ರೀ ಲಕ್ಷ್ಮೀ ಜಾತ್ರೆ ನಡೆಯಲಿದ್ದು, ಅದರ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ. ಆದರೆ ಕಳೆದ ಮೂರು ವರ್ಷಗಳಿಂದ ಗ್ರಾಮದಲ್ಲಿ ತೀವ್ರ ನೀರಿನ ಕೊರತೆ ಉಂಟಾಗಿದ್ದರಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ಗ್ರಾಮದ ಮುಖ್ಯ ನೀರುಪೂರೈಕೆ ಹಳೆಯ ಕೊಳವೆಬಾವಿಯ ಮೇಲೆಯೇ ಅವಲಂಬಿತವಾಗಿದ್ದು, ಅದರ ನೀರಿನ ಸಾಮರ್ಥ್ಯ ಕುಸಿದ ಕಾರಣ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯ ನಾಗರಿಕ ಹಾಗೂ ಸಾಮಾಜಿಕ ಕಾರ್ಯಕರ್ತ ಬಾಬಾಸಾಹೇಬ ದೇಸಾಯಿ ಮತ್ತು ಗ್ರಾಮಸ್ಥರ ನಿಯೋಗವು ಮಾಜಿ ಶಾಸಕ ಅರವಿಂದ ಪಾಟೀಲರನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಿತು. ಸಮಸ್ಯೆಯ ತೀವ್ರತೆಯನ್ನು ಅರಿತ ಅರವಿಂದ ಪಾಟೀಲ ಅವರು ಯಾವುದೇ ವಿಳಂಬವಿಲ್ಲದೆ ತಮ್ಮ ಸ್ವಂತ ವೆಚ್ಚದಲ್ಲಿ ಬೋರ್ವೆಲ್ ಯಂತ್ರವನ್ನು ಒದಗಿಸಿ ಹೊಸ ಕೊಳವೆಬಾವಿ ತೋಡಿಸುವ ಕಾರ್ಯಕ್ಕೆ ಮುಂದಾದರು. ಕೊಳವೆಬಾವಿ ತೋಡುವ ವೇಳೆ ಸುಮಾರು ಮೂರು ಇಂಚು ನೀರಿನ ಮೂಲ ದೊರೆತಿದ್ದು, ಗ್ರಾಮಸ್ಥರಲ್ಲಿ ಹೊಸ ಭರವಸೆ ಮೂಡಿಸಿತು.
ನಂತರ ಬಾಬಾಸಾಹೇಬ ದೇಸಾಯಿ, ಸಂದೀಪ್ ದೇಸಾಯಿ ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರ ಬಳಿ ವಿದ್ಯುತ್ ಪಂಪ್ ಅಳವಡಿಸುವಂತೆ ಮನವಿ ಮಾಡಿದರು. ಅದರಂತೆ ಇಂದು ಗುರುವಾರ (ಜೂನ್ 11) ಕೊಳವೆಬಾವಿಗೆ ವಿದ್ಯುತ್ ಪಂಪ್ ಅಳವಡಿಸಲಾಗಿದ್ದು, ನೀರು ಎತ್ತುವ ಕಾರ್ಯ ಆರಂಭವಾಗಿದೆ.
ಗ್ರಾಮಸ್ಥರ ಮಾಹಿತಿಯ ಪ್ರಕಾರ, ಮಡವಾಳದಲ್ಲಿ 1982ರಲ್ಲಿ ತೋಡಿಸಲಾದ ಕೊಳವೆಬಾವಿಯ ಮೂಲಕ ಹಲವು ವರ್ಷಗಳ ಕಾಲ ಗ್ರಾಮಕ್ಕೆ ಸಮರ್ಪಕವಾಗಿ ನೀರುಪೂರೈಕೆ ನಡೆಯುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಭೂಗರ್ಭ ಜಲಮಟ್ಟ ಕುಸಿದ ಪರಿಣಾಮ ಆ ಕೊಳವೆಬಾವಿಯಲ್ಲಿನ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು. ಹೊಸ ಜಲಮೂಲ ಕಂಡುಹಿಡಿಯಲು ವಿವಿಧ ಸ್ಥಳಗಳಲ್ಲಿ ಬೋರ್ವೆಲ್ ತೋಡಲಾಗಿದ್ದರೂ ನಿರೀಕ್ಷಿತ ಯಶಸ್ಸು ದೊರಕಿರಲಿಲ್ಲ.
ಅಂತಿಮವಾಗಿ ಅರವಿಂದ ಪಾಟೀಲರ ಮುಂದಾಳತ್ವದಲ್ಲಿ ತೋಡಿಸಲಾದ ಈ ಹೊಸ ಕೊಳವೆಬಾವಿಯಿಂದ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಹುಮಟ್ಟಿಗೆ ನಿವಾರಣೆಯಾಗಿದ್ದು, ಮುಂದಿನ ಶ್ರೀ ಲಕ್ಷ್ಮೀ ಜಾತ್ರೆಗೆ ಅಗತ್ಯವಾದ ನೀರಿನ ಚಿಂತೆಯೂ ದೂರವಾಗಿದೆ. ಈ ಹಿನ್ನೆಲೆಯಲ್ಲಿ ಮಡವಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಅರವಿಂದ ಪಾಟೀಲರಿಗೆ ಕೃತಜ್ಞತೆ ಸಲ್ಲಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮುಖ್ಯಾಂಶಗಳು…
ಮಡವಾಳದಲ್ಲಿ ಮುಂದಿನ ವರ್ಷ 24 ಗ್ರಾಮಗಳ ಶ್ರೀ ಲಕ್ಷ್ಮೀ ಜಾತ್ರೆ.
ಕಳೆದ ಮೂರು ವರ್ಷಗಳಿಂದ ತೀವ್ರ ನೀರಿನ ಕೊರತೆ.
ಅರವಿಂದ ಪಾಟೀಲರು ಸ್ವಂತ ವೆಚ್ಚದಲ್ಲಿ ಕೊಳವೆಬಾವಿ ತೋಡಿಸಿದರು.
ಹೊಸ ಕೊಳವೆಬಾವಿಯಲ್ಲಿ ಮೂರು ಇಂಚು ನೀರಿನ ಮೂಲ ದೊರೆತಿದೆ.
ವಿದ್ಯುತ್ ಪಂಪ್ ಅಳವಡಿಸಿ ನೀರುಪೂರೈಕೆ ಆರಂಭ.
ಜಾತ್ರೆ ಹಾಗೂ ಗ್ರಾಮಸ್ಥರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ದಾರಿ.


