चौथ्यांदा मंत्रीपदी निवड; सतीश जारकीहोळींच्या कार्याचा इरफान तालिकोटींकडून गौरव व सत्कार.
बेळगाव : प्रतिनिधी
कर्नाटक सरकारमध्ये चौथ्यांदा कॅबिनेट मंत्रीपदी निवड झाल्याबद्दल राज्याचे वरिष्ठ नेते व मंत्री सतीश जारकीहोळी यांचा सामाजिक कार्यकर्ते व युवा काँग्रेसचे माजी अध्यक्ष व अंजुमन इस्लाम कमिटी तालुका अध्यक्ष इरफान तालिकोटी यांनी शाल व पुष्पगुच्छ देऊन सत्कार केला.
यावेळी इरफान तालिकोटी यांनी सतीश जारकीहोळी यांच्या नेतृत्वाचे कौतुक करताना सांगितले की, गेल्या बारा वर्षांपासून त्यांच्या नेतृत्वाखाली काम करण्याची संधी मिळाली असून त्यांनी केवळ पदामुळे नव्हे तर आपल्या कार्यशैली, दूरदृष्टी आणि कृतीतून खरे नेतृत्व सिद्ध केले आहे.
“सतीश जारकीहोळी यांनी नेहमीच सर्वसामान्यांना सोबत घेऊन काम केले आहे. त्यांचे समर्पण, कार्यावरील लक्ष आणि प्रत्येकाला बरोबर घेऊन पुढे जाण्याची वृत्ती प्रेरणादायी आहे. त्यांनी आदर कधीही मागितला नाही, तर आपल्या सातत्यपूर्ण कार्यातून तो मिळवला आहे. त्यांच्या नेतृत्वाखाली समाजहिताचे अनेक उपक्रम राबविण्यात आले असून त्यांनी जनतेच्या मनात वेगळे स्थान निर्माण केले आहे,” असे तालिकोटी यांनी नमूद केले.
यावेळी त्यांनी सतीश जारकीहोळी यांना चौथ्यांदा मंत्रीपदाची जबाबदारी मिळाल्याबद्दल शुभेच्छा देत त्यांच्या पुढील वाटचालीसाठी शुभेच्छा व्यक्त केल्या.
ನಾಲ್ಕನೇ ಬಾರಿ ಸಚಿವರಾಗಿ ಆಯ್ಕೆ; ಸತೀಶ ಜಾರಕಿಹೊಳಿಯವರ ಕಾರ್ಯಕ್ಕೆ ಇರ್ಫಾನ್ ತಾಲಿಕೋಟಿ ಅವರಿಂದ ಗೌರವ ಹಾಗೂ ಸನ್ಮಾನ
ಬೆಳಗಾವಿ : ಪ್ರತಿನಿಧಿ
ಕರ್ನಾಟಕ ಸರ್ಕಾರದಲ್ಲಿ ನಾಲ್ಕನೇ ಬಾರಿ ಸಚಿವ ಸಂಪುಟ ಸಚಿವರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜ್ಯದ ಹಿರಿಯ ನಾಯಕ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸಮಾಜಸೇವಕ ಮತ್ತು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಮತ್ತು ಅಂಜುಮನ್- ಎ-ಇಸ್ಲಾಂ ಸಮಿತಿಯ ತಾಲೂಕಾ ಅಧ್ಯಕ್ಷರುಇರ್ಫಾನ್ ತಾಳಿಕೋಟಿ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಇರ್ಫಾನ್ ತಾಲಿಕೋಟಿ ಅವರು ಸತೀಶ ಜಾರಕಿಹೊಳಿಯವರ ನಾಯಕತ್ವವನ್ನು ಪ್ರಶಂಸಿಸಿ ಮಾತನಾಡಿ, ಕಳೆದ 12 ವರ್ಷಗಳಿಂದ ಅವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸುವ ಅವಕಾಶ ದೊರೆತಿದ್ದು, ಅವರು ಕೇವಲ ಹುದ್ದೆಯಿಂದಲ್ಲ, ತಮ್ಮ ಕಾರ್ಯಶೈಲಿ, ದೂರದೃಷ್ಟಿ ಹಾಗೂ ಕ್ರಿಯಾಶೀಲತೆಯ ಮೂಲಕ ನಿಜವಾದ ನಾಯಕತ್ವವನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
“ಸತೀಶ ಜಾರಕಿಹೊಳಿ ಅವರು ಸದಾ ಸಾಮಾನ್ಯ ಜನರನ್ನು ಜೊತೆಯಾಗಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಅವರ ಸಮರ್ಪಣೆ, ಕಾರ್ಯದ ಮೇಲಿನ ಗಮನ ಹಾಗೂ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಮನೋಭಾವ ಪ್ರೇರಣಾದಾಯಕವಾಗಿದೆ. ಅವರು ಗೌರವವನ್ನು ಎಂದಿಗೂ ಕೇಳಿಕೊಂಡಿಲ್ಲ; ತಮ್ಮ ನಿರಂತರ ಸೇವೆ ಮತ್ತು ಕಾರ್ಯಗಳಿಂದ ಅದನ್ನು ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಸಮಾಜಮುಖಿ ಅನೇಕ ಕಾರ್ಯಕ್ರಮಗಳು ಜಾರಿಗೊಂಡಿದ್ದು, ಜನರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ,” ಎಂದು ತಾಲಿಕೋಟಿ ಹೇಳಿದರು.
ಈ ವೇಳೆ ಸತೀಶ ಜಾರಕಿಹೊಳಿ ಅವರಿಗೆ ನಾಲ್ಕನೇ ಬಾರಿ ಸಚಿವ ಸ್ಥಾನ ದೊರೆತಿರುವುದಕ್ಕೆ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ರಾಜಕೀಯ ಹಾಗೂ ಸಾರ್ವಜನಿಕ ಜೀವನದ ಪಯಣಕ್ಕೆ ಶುಭ ಹಾರೈಸಿದರು.


