मलप्रभा नदीत बेपत्ता व्यक्तीचा मृतदेह आढळला; आत्महत्येचा प्राथमिक संशय.
खानापूर : प्रतिनिधी
खानापूर येथील मलप्रभा नदी घाट परिसरात बेपत्ता असलेल्या एका व्यक्तीचा मृतदेह आढळून आल्याने परिसरात खळबळ उडाली आहे. कुंदन वसंत कलघटकर (वय ४८, रा. येरमाळा रोड, वडगाव) असे मृत व्यक्तीचे नाव असून त्यांनी आत्महत्या केल्याचा प्राथमिक अंदाज व्यक्त केला जात आहे. या घटनेचा अधिक तपास खानापूर पोलिसांकडून सुरू आहे.

माहितीनुसार, कुंदन कलघटकर हे गेल्या दोन दिवसांपासून बेपत्ता होते. रविवारी दुपारनंतर ते घराबाहेर पडले होते; मात्र त्यानंतर त्यांचा कुटुंबीयांशी कोणताही संपर्क झाला नव्हता. ते खानापूरच्या दिशेने गेल्याची शक्यता लक्षात घेऊन नातेवाईक व मित्रमंडळींनी त्यांचा शोध सुरू केला.
शोधमोहीमेदरम्यान मलप्रभा नदी घाट परिसरात त्यांची दुचाकी आढळून आली. तसेच परिसरातील सीसीटीव्ही कॅमेऱ्यांमध्येही ते फिरताना दिसून आल्याने नदी परिसरात शोधकार्य वाढविण्यात आले. दरम्यान, नदीतील एका डोहाजवळ चप्पल तरंगताना आढळल्याने संशय अधिक गडद झाला.
यानंतर एनडीआरएफच्या मदतीने नदीपात्रात शोधकार्य हाती घेण्यात आले; मात्र सुरुवातीच्या प्रयत्नांना यश आले नाही. त्यानंतर एचआरएफसी (HRFC) पथकाला पाचारण करण्यात आले. पथकाचे प्रमुख बसवराज हिरेमठ यांनी आपल्या सहकाऱ्यांसह घटनास्थळी दाखल होत अत्याधुनिक पाण्याखालील कॅमेऱ्यांच्या साहाय्याने शोधमोहीम राबविली. अखेर डोहाच्या खोल भागात कुंदन कलघटकर यांचा मृतदेह सापडला.
या शोधकार्यात उमेश अंधारे (यडोगा) व रुपेश मुतगेकर (लोकोळी) यांनी विशेष मेहनत घेतली. घटनास्थळी खानापूर गुन्हे शाखेच्या पोलीस निरीक्षक श्रीमती सपाटे यांच्यासह पोलीस अधिकारी व कर्मचारी उपस्थित होते.
पोलिसांनी मृतदेह ताब्यात घेऊन पुढील तपास सुरू केला असून मृत्यूचे नेमके कारण शवविच्छेदन अहवालानंतर स्पष्ट होणार आहे.
ಮಲಪ್ರಭಾ ನದಿಯಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಶವ ಪತ್ತೆ; ಆತ್ಮಹತ್ಯೆಗೆ ಶರಣಾಗಿರುವ ಪ್ರಾಥಮಿಕ ಶಂಕೆ
ಖಾನಾಪುರ : ಪ್ರತಿನಿಧಿ
ಖಾನಾಪುರದ ಮಲಪ್ರಭಾ ನದಿ ಘಾಟ್ ಪ್ರದೇಶದಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ಕುಂದನ್ ವಸಂತ ಕಲಘಟ್ಕರ್ (ವಯಸ್ಸು 48, ಯೆರಮಾಳಾ ರಸ್ತೆ, ವಡಗಾವ್ ನಿವಾಸಿ) ಮೃತ ವ್ಯಕ್ತಿಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಪ್ರಾಥಮಿಕ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕುರಿತು ಖಾನಾಪುರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಕುಂದನ್ ಕಲಘಟ್ಕರ್ ಅವರು ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದರು. ಭಾನುವಾರ ಮಧ್ಯಾಹ್ನ ಅವರು ಮನೆಯಿಂದ ಹೊರಟಿದ್ದರು. ನಂತರ ಕುಟುಂಬದವರೊಂದಿಗೆ ಯಾವುದೇ ಸಂಪರ್ಕ ಸಾಧಿಸಿರಲಿಲ್ಲ. ಅವರು ಖಾನಾಪುರದ ಕಡೆಗೆ ತೆರಳಿರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಕರು ಹಾಗೂ ಸ್ನೇಹಿತರು ಅವರ ಹುಡುಕಾಟ ಆರಂಭಿಸಿದ್ದರು.
ಹುಡುಕಾಟದ ವೇಳೆ ಮಲಪ್ರಭಾ ನದಿ ಘಾಟ್ ಸಮೀಪ ಅವರ ದ್ವಿಚಕ್ರ ವಾಹನ ಪತ್ತೆಯಾಯಿತು. ಅಲ್ಲದೆ ಸಿಸಿಟಿವಿ ಕ್ಯಾಮೆರಾಗಳಲ್ಲಿಯೂ ಅವರು ಆ ಪ್ರದೇಶದಲ್ಲಿ ಸಂಚರಿಸುತ್ತಿರುವ ದೃಶ್ಯಗಳು ದಾಖಲಾಗಿದ್ದವು. ಇದರಿಂದ ನದಿ ಪ್ರದೇಶದಲ್ಲಿ ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಯಿತು.
ಈ ನಡುವೆ ನದಿಯ ಒಂದು ಆಳವಾದ ಗುಂಡಿಯ ಸಮೀಪ ಚಪ್ಪಲಿ ತೇಲುತ್ತಿರುವುದು ಕಂಡುಬಂದಿದ್ದು, ಅನುಮಾನ ಮತ್ತಷ್ಟು ಗಾಢವಾದ ಬಳಿಕ ಎನ್ಡಿಆರ್ಎಫ್ (NDRF) ತಂಡದ ಸಹಾಯದಿಂದ ನದಿ ಪಾತ್ರದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಯಿತು. ಆದರೆ ಆರಂಭಿಕ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿಲ್ಲ.
ನಂತರ ಎಚ್ಆರ್ಎಫ್ಸಿ (HRFC) ತಂಡವನ್ನು ಸ್ಥಳಕ್ಕೆ ಕರೆಯಿಸಲಾಯಿತು. ತಂಡದ ಮುಖ್ಯಸ್ಥ ಬಸವರಾಜ ಹಿರೇಮಠ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ಅತ್ಯಾಧುನಿಕ ನೀರೊಳಗಿನ ಕ್ಯಾಮೆರಾಗಳ ಸಹಾಯದಿಂದ ಶೋಧ ಕಾರ್ಯ ನಡೆಸಿದರು. ಅಂತಿಮವಾಗಿ ನದಿಯ ಆಳವಾದ ಭಾಗದಲ್ಲಿ ಕುಂದನ್ ಕಲಘಟ್ಕರ್ ಅವರ ಶವ ಪತ್ತೆಯಾಯಿತು.
ಈ ಶೋಧ ಕಾರ್ಯದಲ್ಲಿ ಉಮೇಶ್ ಅಂಧಾರೆ (ಯಡೋಗಾ) ಹಾಗೂ ರೂಪೇಶ್ ಮುತಗೆಕರ (ಲೋಕೋಳಿ) ಅವರು ವಿಶೇಷ ಪರಿಶ್ರಮ ವಹಿಸಿದರು.
ಘಟನಾ ಸ್ಥಳದಲ್ಲಿ ಖಾನಾಪುರ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕಿ ಶ್ರೀಮತಿ ಸಪಾಟೆ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಆರಂಭಿಸಿದ್ದು, ಸಾವಿನ ನಿಖರ ಕಾರಣವು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸ್ಪಷ್ಟವಾಗಲಿದೆ.


