‘बेळगाव लाईव्ह’चे संपादक प्रकाश बेळगोजी यांचा दिमाखदार सत्कार; ‘मराठा’ मार्गदर्शक पुस्तिकेचे प्रकाशन.
बेळगाव : संयुक्त महाराष्ट्र पत्रकार महासंघाच्या राज्य उपाध्यक्षपदी निवड झाल्याबद्दल ‘बेळगाव लाईव्ह’चे संपादक प्रकाश बेळगोजी यांचा बेळगावमध्ये दिमाखदार सत्कार करण्यात आला. विविध क्षेत्रांतील मान्यवरांच्या उपस्थितीत पार पडलेल्या या सोहळ्यात ‘मराठा : परंपरा, वर्तमान आणि भविष्य’ या अभ्यासपूर्ण मार्गदर्शक पुस्तिकेचे प्रकाशनही करण्यात आले. यावेळी “आपलं खानापूर” न्यूज पोर्टलच्या वतीने संपादक व माजी नगरसेवक दिनकर मरगाळे यांनी प्रकाश बेळगोजी यांचा शाल घालून, पुष्पगुच्छ देऊन सत्कार केला व शुभेच्छा दिल्या. यावेळी पत्रकार संदीप सुतार उपस्थित होते.
समाजाला योग्य दिशा देणारी, वास्तवावर आधारित आणि मार्गदर्शक स्वरूपाची ही पुस्तिका असून मराठा समाजातून तिचे स्वागत होत असल्याची भावना यावेळी व्यक्त करण्यात आली. उपस्थित मान्यवरांनी प्रकाश बेळगोजी यांच्या पत्रकारितेचे कौतुक करत त्यांची राज्य उपाध्यक्षपदी झालेली निवड हा संपूर्ण बेळगावकरांसाठी अभिमानाचा क्षण असल्याचे सांगितले.
कार्यक्रमात बोलताना मालोजीराव अष्टेकर यांनी बेळगावच्या मराठा समाजाचा इतिहास जतन करण्याची गरज अधोरेखित केली. विस्मृतीत गेलेल्या मराठा योद्ध्यांचे कार्य समाजासमोर आणणे आवश्यक असल्याचे त्यांनी नमूद केले. तसेच सीमाप्रश्न आणि मराठी माणसांच्या समस्यांवर प्रकाश बेळगोजी यांनी सातत्याने आवाज उठवत राहावे, असे आवाहनही त्यांनी केले.
रमाकांत कोंडुसकर यांनी समाजातील सुशिक्षित मुलींच्या सुरक्षिततेचा प्रश्न उपस्थित करत केवळ चर्चा न करता प्रत्यक्ष कृतीची गरज असल्याचे स्पष्ट केले. मुलींच्या संरक्षणासाठी कोणत्याही कायदेशीर लढ्यासाठी आपण सज्ज असल्याचे त्यांनी सांगितले.
गुणवंत पाटील यांनी प्रकाश बेळगोजी यांच्या गेल्या १५ वर्षांच्या पत्रकारितेचा आढावा घेत सामान्य माणसाचा आवाज शासन आणि प्रशासनापर्यंत पोहोचवण्यात त्यांनी मोलाची भूमिका बजावल्याचे सांगितले. राज्य उपाध्यक्षपद हा संपूर्ण बेळगावसाठी गौरव असल्याचे त्यांनी नमूद केले.
अॅड. अमर येळ्ळूरकर यांनी समाजासमोरील व्यवसाय, रोजगार, शिक्षण आणि विवाह या ज्वलंत प्रश्नांवर भाष्य करत समाजाने एकत्रित चिंतन शिबिर आयोजित करण्याची आवश्यकता व्यक्त केली.
तरुणांच्या जडणघडणीसाठी समाजात आचारसंहिता आवश्यक असल्याचे सांगत शुभम शेळके यांनी यात्रा-जत्रांच्या नावाखाली होणाऱ्या अवाजवी खर्चावर चिंता व्यक्त केली. ‘मराठा’ पुस्तिकेच्या माध्यमातून समाजाला योग्य दिशा देण्याचा प्रकाश बेळगोजी यांनी घेतलेला पुढाकार स्तुत्य असल्याचे त्यांनी म्हटले.
या कार्यक्रमाला रायगड येथून आलेले पत्रकार नरेश पाटील, विविध राजकीय पक्षांचे पदाधिकारी, मराठा समाजाचे नेते, लोकप्रतिनिधी आणि नागरिक मोठ्या संख्येने उपस्थित होते.
कार्यक्रमाच्या अध्यक्षस्थानी रणजीत चव्हाण पाटील होते. सूत्रसंचालन आणि प्रास्ताविक अनंत लाड यांनी केले. यावेळी प्रकाश मरगाळे, किरण जाधव, माजी आमदार अनिल बेनके, शिवाजी सुंठकर, धनंजय जाधव, युवराज जाधव, नागेश देसाई, रमेश गोरल, रेणू किल्लेकर, शिवाजी हंडे, एस. एम. बेळवटकर, दिगंबर पवार, आर. आय. पाटील, शरद पाटील, जयराज हलगेकर, धनंजय पाटील, सुहास हुद्दार आदी मान्यवर उपस्थित होते.
‘ಬೆಳಗಾವಿ ಲೈವ್’ ಸುದ್ದಿ ಸಂಸ್ಥೆ ಸಂಪಾದಕ ಪ್ರಕಾಶ ಬೆಳಗೋಜಿ ಅವರಿಗೆ ಭವ್ಯ ಸನ್ಮಾನ; ‘ಮರಾಠಾ’ ಮಾರ್ಗದರ್ಶಕ ಪುಸ್ತಕದ ಬಿಡುಗಡೆ
ಬೆಳಗಾವಿ : ಸಂಯುಕ್ತ ಮಹಾರಾಷ್ಟ್ರ ಪತ್ರಕರ್ತ ಮಹಾಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ‘ಬೆಳಗಾವಿ ಲೈವ್’ ಸುದ್ದಿ ಸಂಸ್ಥೆ ಸಂಪಾದಕ ಪ್ರಕಾಶ ಬೆಳಗೋಜಿ ಅವರನ್ನು ಬೆಳಗಾವಿಯಲ್ಲಿ ಭವ್ಯವಾಗಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ‘ಮರಾಠಾ : ಪರಂಪರೆ, ವರ್ತಮಾನ ಮತ್ತು ಭವಿಷ್ಯ’ ಎಂಬ ಅಧ್ಯಯನಪೂರ್ಣ ಮಾರ್ಗದರ್ಶಕ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ “ಆಪಲ ಖಾನಾಪುರ” ನ್ಯೂಸ್ ಪೋರ್ಟಲ್ ಪರವಾಗಿ ಸಂಪಾದಕ ಹಾಗೂ ಮಾಜಿ ನಗರಸಭಾ ಸದಸ್ಯ ದಿನಕರ ಮರಗಾಳೆ ಅವರು ಪ್ರಕಾಶ ಬೆಳಗೋಜಿ ಅವರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸನ್ಮಾನಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಪತ್ರಕರ್ತ ಸಂದೀಪ್ ಸುತಾರ್ ಉಪಸ್ಥಿತರಿದ್ದರು
ಸಮಾಜಕ್ಕೆ ಸರಿಯಾದ ದಿಕ್ಕು ತೋರಿಸುವ, ವಾಸ್ತವಾಧಾರಿತ ಮತ್ತು ಮಾರ್ಗದರ್ಶಕ ಸ್ವರೂಪದ ಈ ಪುಸ್ತಕವನ್ನು ಮರಾಠಾ ಸಮಾಜದಿಂದ ಉತ್ತಮ ಸ್ವಾಗತ ದೊರೆಯುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಪ್ರಕಾಶ ಬೆಳಗೋಜಿ ಅವರ ಪತ್ರಿಕೋದ್ಯಮವನ್ನು ಶ್ಲಾಘಿಸಿ, ರಾಜ್ಯ ಉಪಾಧ್ಯಕ್ಷರಾಗಿ ಅವರ ಆಯ್ಕೆ ಸಂಪೂರ್ಣ ಬೆಳಗಾವಿಗರ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಲೋಜಿರಾವ್ ಅಷ್ಟೇಕರ್ ಅವರು ಬೆಳಗಾವಿಯ ಮರಾಠಾ ಸಮಾಜದ ಇತಿಹಾಸವನ್ನು ಸಂರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದರು. ಮರೆತುಹೋಗಿರುವ ಮರಾಠಾ ಯೋಧರ ಕಾರ್ಯವನ್ನು ಸಮಾಜದ ಮುಂದಿಡುವುದು ಅಗತ್ಯವೆಂದರು. ಜೊತೆಗೆ ಗಡಿ ವಿವಾದ ಹಾಗೂ ಮರಾಠಿ ಭಾಷಿಕರ ಸಮಸ್ಯೆಗಳ ಕುರಿತು ಪ್ರಕಾಶ ಬೆಳಗೋಜಿ ಅವರು ನಿರಂತರವಾಗಿ ಧ್ವನಿ ಎತ್ತುತ್ತಿರಬೇಕು ಎಂದು ಮನವಿ ಮಾಡಿದರು.
ರಮಾಕಾಂತ ಕೊಂಡುಸ್ಕರ್ ಅವರು ಸಮಾಜದಲ್ಲಿನ ಸುಶಿಕ್ಷಿತ ಯುವತಿಯರ ಭದ್ರತೆ ಪ್ರಶ್ನೆಯನ್ನು ಮುಂದಿಟ್ಟು, ಕೇವಲ ಚರ್ಚೆ ಮಾಡದೆ ನೈಜ ಕಾರ್ಯಾಚರಣೆ ಅಗತ್ಯವೆಂದು ಹೇಳಿದರು. ಯುವತಿಯರ ರಕ್ಷಣೆಗೆ ಯಾವುದೇ ಕಾನೂನು ಹೋರಾಟಕ್ಕೂ ತಾವು ಸಿದ್ಧರಾಗಿರುವುದಾಗಿ ತಿಳಿಸಿದರು.
ಗುಣವಂತ ಪಾಟೀಲ ಅವರು ಪ್ರಕಾಶ ಬೆಳಗೋಜಿ ಅವರ ಕಳೆದ ೧೫ ವರ್ಷದ ಪತ್ರಿಕೋದ್ಯಮದ ಅವಲೋಕನ ಮಾಡಿ, ಸಾಮಾನ್ಯ ಜನರ ಧ್ವನಿಯನ್ನು ಸರ್ಕಾರ ಮತ್ತು ಆಡಳಿತದವರೆಗೆ ತಲುಪಿಸುವಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದಾರೆ ಎಂದು ಹೇಳಿದರು. ರಾಜ್ಯ ಉಪಾಧ್ಯಕ್ಷ ಸ್ಥಾನ ಸಂಪೂರ್ಣ ಬೆಳಗಾವಿಗೆ ಗೌರವ ತಂದುಕೊಟ್ಟಿದೆ ಎಂದರು.
ಅಡ್ವೊಕೇಟ್ ಅಮರ ಯೆಳ್ಳೂರಕರ ಅವರು ಸಮಾಜದ ಮುಂದೆ ಇರುವ ಉದ್ಯೋಗ, ವ್ಯವಹಾರ, ಶಿಕ್ಷಣ ಮತ್ತು ವಿವಾಹದಂತಹ ಜ್ವಲಂತ ಪ್ರಶ್ನೆಗಳ ಕುರಿತು ಮಾತನಾಡಿ, ಸಮಾಜವು ಒಟ್ಟಾಗಿ ಚಿಂತನಾ ಶಿಬಿರ ಆಯೋಜಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಯುವಕರ ಸರ್ವಾಂಗೀಣ ಬೆಳವಣಿಗೆಗೆ ಸಮಾಜದಲ್ಲಿ ಆಚಾರಸಂಹಿತೆ ಅಗತ್ಯವಿದೆ ಎಂದು ಹೇಳಿದ ಶುಭಂ ಶೇಳಕೆ ಅವರು ಜಾತ್ರೆ-ಯಾತ್ರೆಗಳ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ಖರ್ಚಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. ‘ಮರಾಠಾ’ ಪುಸ್ತಕದ ಮೂಲಕ ಸಮಾಜಕ್ಕೆ ಸರಿಯಾದ ದಿಕ್ಕು ನೀಡಲು ಪ್ರಕಾಶ ಬೆಳಗೋಜಿ ಕೈಗೊಂಡಿರುವ ಉಪಕ್ರಮ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ರೈಗಡದಿಂದ ಆಗಮಿಸಿದ್ದ ಪತ್ರಕರ್ತ ನರೇಶ್ ಪಾಟೀಲ, ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಮರಾಠಾ ಸಮಾಜದ ಮುಖಂಡರು, ಜನಪ್ರತಿನಿಧಿಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಣಜೀತ್ ಚವ್ಹಾಣ ಪಾಟೀಲ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಮತ್ತು ಪ್ರಾಸ್ತಾವಿಕವನ್ನು ಅನಂತ ಲಾಡ್ ನಡೆಸಿದರು.
ಈ ವೇಳೆ ಪ್ರಕಾಶ ಮರಗಾಳೆ, ಕಿರಣ ಜಾಧವ, ಮಾಜಿ ಶಾಸಕ ಅನಿಲ್ ಬೆನಕೆ, ಶಿವಾಜಿ ಸುಂಠಕರ, ಧನಂಜಯ ಜಾಧವ, ಯುವರಾಜ ಜಾಧವ, ನಾಗೇಶ್ ದೇಸಾಯಿ, ರಮೇಶ್ ಗೋರಲ್, ರೇಣು ಕಿಲ್ಲೇಕರ್, ಶಿವಾಜಿ ಹಂಡೆ, ಎಸ್. ಎಂ. ಬೆಳವಟ್ಕರ್, ದಿಗಂಬರ ಪವಾರ್, ಆರ್. ಐ. ಪಾಟೀಲ, ಶರದ್ ಪಾಟೀಲ, ಜಯರಾಜ್ ಹಲಗೇಕರ್, ಧನಂಜಯ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

