कक्केरी (ता. खानापूर) येथे मरेम्मा देवी यात्रोत्सव उत्साहात; हजारो भाविकांची उपस्थिती.
कक्केरी : खानापूर तालुक्यातील कक्केरी गावात दर तीन वर्षांनी साजरी होणारी मरेम्मा देवीचा पारंपरिक यात्रोत्सव यंदा मंगळवार ते बुधवार या कालावधीत मोठ्या भक्तिभावात आणि उत्साहात पार पडला. प्राचीन परंपरेनुसार साजऱ्या होणाऱ्या या यात्रेला हजारो भाविकांनी उपस्थिती लावली होती.
मंगळवारी सकाळी मंदिराचे पुजारी बिष्टप्पा केदारजी यांच्या हस्ते मरेम्मा देवीचा अभिषेक व विधिवत पूजा करण्यात आली. यावेळी महिला व सुवासिनींनी तसेच ग्रामस्थ आणि भाविकांनी देवीचे दर्शन घेऊन पूजा अर्चा केली व देवीला ओठी अर्पण करून नवस फेडण्यात आले.
यात्रेनिमित्त संपूर्ण गाव सणासुदीच्या वातावरणात नटले होते. प्रत्येक घरासमोर आंब्याच्या पानांचे तोरण बांधून सजावट करण्यात आली होती. आकर्षक रांगोळ्या, विद्युत रोषणाई तसेच विविध राजकीय नेते व संघटनांचे फलक लावण्यात आले होते. महिला, पुरुष, युवक-युवती, ज्येष्ठ नागरिक आणि लहान मुले नव्या कपड्यांत सजून आनंदाने गाणी म्हणत, नाचत-गात जत्रेचा आनंद लुटत होते.
मंगळवारी रात्री जागरणाचे आयोजन करण्यात आले होते. यावेळी सांस्कृतिक कार्यक्रम, भजन तसेच जोगत्यांकडून पारंपरिक कार्यक्रम सादर करण्यात आले. यावेळी मंदिर समितीच्या वतीने महिला व सुहासिनींची ओठी भरण्यात आली. तसेच दोन दिवस महाप्रसाद व अन्नसंतर्पण कार्यक्रम, यात्रोत्सव कमिटीच्यावतीने राबविण्यात आला. यावेळी हजारो भाविकांनी महाप्रसादाचा लाभ घेतला.
ही यात्रा पावसासाठी करण्यात येणारी पारंपरिक धार्मिक प्रथा असल्याचे ग्रामस्थांचे मत आहे. यात्रेनंतर चांगला पाऊस व भरघोस पीक येते, असा विश्वास असल्याने ही परंपरा अनेक वर्षांपासून अखंडितपणे पाळली जात आहे.
या यात्रेला बिष्टादेवी मंदिराचे अध्यक्ष कार्तिक अंबोजी, ग्रामपंचायतीचे माजी अध्यक्ष भीमप्पा अंबोजी, पीकेपीएस अध्यक्ष यल्लाप्पा गुपित, ॲड. सूर्यकांत तरिहाळ, केएमएफ सदस्य प्रकाश अंबोजी, पीकेपीएस उपाध्यक्ष डॉ. प्रसन्न दोड्डेबैलकर, एसडीएमसी अध्यक्ष सुरेश मंगुमाळी, खानापूर पीएलडी बँक सदस्य राजू गुंजीकर, शेतकरी संघटनेचे नेते यल्लाप्पा चन्नापूर, शिवाजी अंबडगट्टी, रमेश वीरापूर, बिष्टप्पा सुंबळी, रवी अंबडगट्टी, राजू वीरापूर, गोपाल अगसिमनी, नारायण पाटील, रमानंद अंबडगट्टी, मंजनाथ अंबडगट्टी, बिष्टप्पा मनतुर्गी, अशोक गंदीगवाड, परशुराम बिरजी, संगप्पा माटोळी, सुरेश बंडरगाळी यांच्यासह विविध संघटनांचे पदाधिकारी, पीकेपीएस व ग्रामपंचायतीचे सदस्य, एसडीएमसी सदस्य, महिला संघटनांचे पदाधिकारी व ग्रामस्थ मोठ्या संख्येने उपस्थित होते.
ಕಕ್ಕೇರಿಯಲ್ಲಿ (ತಾಲೂಕಾ ಖಾನಾಪುರ) ಮಾರೆಮ್ಮ ದೇವಿ ಜಾತ್ರೆ ಸಂಭ್ರಮದಿಂದ ಆಚರಣೆ; ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಉಪಸ್ಥಿತಿ.
ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಮರೆಮ್ಮಾ ದೇವಿಯ ಜಾತ್ರೆಯು ಪುರಾತನ ಕಾಲದಿಂದಲೂ ನಡೆಯುತ್ತಾ ಬಂದಿದೆ. ಈ ಜಾತ್ರೆಯು ಮಂಗಳವಾರದಿಂದ ಬುಧವಾರದ ವರಗೆ ನಡೆಯಿತು.
ಮಂಗಳವಾರದಂದು ಬೆಳಿಗ್ಗೆ ಮರೆಮ್ಮಾ ದೇವಿಗೆ ಅಭಿಷೇಕ, ಪೂಜೆಯನ್ನು ಮಂದಿರದ ಅರ್ಚಕ ಬಿಷ್ಟಪ್ಪಾ ಕೇದಾರ್ಜಿ ನೆರವೇರಿಸಿದರು.
ಮುತ್ತೈದೆಯರು, ಭಕ್ತರು, ಗ್ರಾಮಸ್ಥರು, ದೇವಿಗೆ ಪೂಜೆ ಸಲ್ಲಿಸಿ ಉಡಿ ತುಂಬಿದರು ಹಾಗೂ ಬೇಡಿಕೊಂಡ ಹರಕೆಯನ್ನು ತೀರಿಸಿಕೊಂಡರು.
ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಭಾಗವಹಿಸಿದ್ದು.
ಗ್ರಾಮದ ಪ್ರತಿಯೊಂದು ಮನೆಯ ಮುಂದೆ ಮಾವಿನ ತೋರಣ, ರಂಗೋಲಿ ಚಿತ್ತಾರ, ವಿದ್ಯುತ್ ದೀಪಗಳಿಂದ ಅಲಂಕಾರ, ರಾಜಕೀಯ ಧುರೀಣರ ಹಾಗೂ ಹಲವಾರು ಸಂಘಟನೆಗಳ ಕಟಾವುಟಗಳು ರಾಜಾಜಿಸಿದ್ದವು ಸುಮಂಗಲೆಯರು, ಮುತ್ತೈದೆಯರು, ಯುವಕರು, ಯುವತಿಯರು, ಮಹಿಳೆಯರು, ಪುರುಷರು, ಹಿರಿಯರು, ಚಿಕ್ಕ ಮಕ್ಕಳು, ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ಕುಣಿದು, ಕುಪ್ಪಳಿಸಿದರು.
ಮಂಗಳವಾರ ರಾತ್ರಿ ಜಾಗರಣೆ ಮಾಡಿ ಸಂಸ್ಕೃತಿಕ ಕಾರ್ಯಕ್ರಮ, ಭಜನೆ, ಹಾಗೂ ಜೋಗತಿಯರಿಂದ ಪಡ್ಡಲಗಿ ತುಂಬಲಾಯಿತು.
ಮಂದಿರದ ವತಿಯಿಂದ ಮುತ್ತೈದೆಯರಿಗೆ, ಸುಮಂಗಲೆಯರಿಗೆ, ಉಡಿ ತುಂಬಲಾಯಿತು.
ಎರಡು ದಿನಗಳ ಕಾಲ ಮಹಾಪ್ರಸಾದ ಅನ್ನಸಂತ್ರಪಣೀ ಕಾರ್ಯಕ್ರಮವನ್ನು ಜಾತ್ರಾ ಕಮಿಟಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು.
ಪುರಾತನ ಕಾಲದಿಂದಲೂ ಈ ಜಾತ್ರೆಯು ಮಳೆ ಗೋಸ್ಕರ ಆಚರಣೆ ಮಾಡುತ್ತಾ ಬರಲಾಗಿದೆ. ಜಾತ್ರೆ ಮಾಡಿದ ನಂತರ ಮಳೆ, ಬೆಳೆ, ಚೆನ್ನಾಗಿ ಬರುತ್ತದೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯ ಈ ಹಿನ್ನೆಲೆಯಲ್ಲಿ ಈ ಜಾತ್ರೆಯನ್ನು ಬಹುದಿನಗಳಿಂದ ಆಚರಣೆ ಮಾಡುತ್ತಾ ಬರುತ್ತಿದ್ದಾರೆ.
ಬಿಷ್ಟಾದೇವಿ ಮಂದಿರದ ಅಧ್ಯಕ್ಷ ಕಾರ್ತಿಕ ಅಂಬೋಜಿ, ಗ್ರಾಪಂ ಮಾಜಿ ಅಧ್ಯಕ್ಷ ಭೀಮಪ್ಪ ಅಂಬೋಜಿ, ಪಿಕೆಪಿಎಸ್ ಅಧ್ಯಕ್ಷ ಯಲ್ಲಪ್ಪಾ ಗುಪಿತ, ನ್ಯಾಯವಾದಿ ಸೂರ್ಯಕಾಂತ ತಾರಿಹಾಳ, ಕೆಎಂಎಫ್ ಸದಸ್ಯ ಪ್ರಕಾಶ ಅಂಬೋಜಿ, ಪಿಕೆಪಿಎಸ್ ಉಪಾಧ್ಯಕ್ಷ ಡಾ. ಪ್ರಸನ್ನ ದೊಡ್ಡೇಬೈಲಕರ ,ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ ಮಂಗುಮಾಳಿ, ಖಾನಾಪುರ ಪಿ ಎಲ್ ಡಿ ಬ್ಯಾಂಕ ಸದಸ್ಯ ರಾಜು ಗುಂಜಿಕರ,ರೈತ ಸಂಘದ ಮುಖಂಡರಾದ ಯಲ್ಲಪ್ಪಾ ಚನ್ನಾಪುರ, ಶಿವಾಜಿ ಅಂಬಡಗಟ್ಟಿ, ರಮೇಶ ವೀರಾಪುರ, ಬಿಷ್ಟಪ್ಪ ಸುಂಬಳಿ, ರವಿ ಅಂಬಡಗಟ್ಟಿ, ರಾಜು ವೀರಾಪುರ, ಗೋಪಾಲ ಅಗಸಿಮನಿ, ನಾರಾಯಣ ಪಾಟೀಲ, ರಮಾನಂದ ಅಂಬಡಗಟ್ಟಿ ,ಮಂಜುನಾಥ ಅಂಬಡಗಟ್ಟಿ, ಬಿಷ್ಟಪ್ಪಾ ಮನತುರ್ಗಿ, ಅಶೋಕ ಗಂದಿಗವಾಡ, ಗ್ರಾಮಸ್ಥರಾದ ಪರಶುರಾಮ ಬಿರ್ಜಿ, ಸಂಗಪ್ಪ ಮಾಟೋಳ್ಳಿ, ಸುರೇಶ ಬಂಡರಗಾಳಿ. ನಾನಾ ಸಂಘಟನೆಯ ಪದಾಧಿಕಾರಿಗಳು, ಪಿಕೆಪಿಎಸ್ ಪಿಕೆ ಪಿಎಸ್ ಸರ್ವ ಸದಸ್ಯರು ಹಾಗೂ ಗ್ರಾಪಂ ಸರ್ವ ಸದಸ್ಯರು, ಎಸ್ ಡಿ ಎಂ ಸಿ ಸರ್ವ ಸದಸ್ಯರು, ಮಹಿಳಾ ಸಂಘಟನೆಯ ಪದಾಧಿಕಾರಿಗಳು, ಇತರರಿದ್ದರು.


