ईस्टरच्या दिवशी फटाके उडवल्याच्या कारणावरून मारहाण; खानापूर पोलीस ठाण्यात गुन्हा दाखल.
खानापूर : खानापूर तालुक्यातील लोंडा येथील चर्च गल्ली परिसरात ईस्टर सणाच्या दिवशी फटाके उडवल्याच्या कारणावरून झालेल्या वादातून मारहाण झाल्याची घटना दि. 5 एप्रिल 2026 रोजी सायंकाळी सुमारे 4 वाजण्याच्या सुमारास घडली. याप्रकरणी खानापूर पोलीस ठाण्यात गुन्हा क्रमांक 113/2026 अन्वये भादंवि कलम 189, 191(2), 191(3), 126, 115(2), 118(1), 351, 352, 190 सहकलमान्वये गुन्हा नोंद करण्यात आला आहे.
पोलिसांनी दिलेल्या माहितीनुसार, फिर्यादी संतोष उर्फ पीटर जॉन्सन अरेकर (राहणार चर्च गल्ली, लोंडा) व त्यांचा भाऊ रोबिन जॉन्सन अरेकर (वय 36) हे दोघेही दि. 5 एप्रिल रोजी सायंकाळी 4 वाजता आपल्या घरासमोरील रस्त्यावर ईस्टर सणानिमित्त फटाके उडवत होते. त्यावेळी आरोपी जॉन्सन पुलामीन डिकोस्टा, विल्सन पुलामीन डिकोस्टा, नेल्सन पुलामीन डिकोस्टा, अझर कंजारी आणि विनोद भंडारी (सर्व राहणार लोंडा, ता. खानापूर) हे एकत्र जमून तेथे आले.
आरोपींनी शिव्या देत “भोसडीच्यानो” आज “का फटाके उडवत आहात?” असे विचारत शिवीगाळ केली. फिर्यादींनी ईस्टर सणानिमित्त फटाके उडवत असल्याचे सांगितल्यावर आरोपी संतापून म्हणाले ईस्टर काल झाला मग आज का फटाके उडवत आहात असे म्हटले व फिर्यादी संतोष उर्फ पीटर जॉन्सन अरेकर व त्यांच्या भावाला घेरून लाथा बुक्क्याने मारहाण केली. या मारहाणीत फिर्यादींच्या कपाळावर डाव्या डोळ्याच्या भुवईजवळ किरकोळ दुखापत झाली. तसेच आरोपी क्रमांक 2 याने विटेने रोबिन जॉन्सन अरेकर यांच्या डोक्याच्या डाव्या बाजूस मारून गंभीर दुखापत केल्याचे तक्रारीत नमूद आहे.
यावेळी “पुन्हा फटाके उडवले तर ठार करू” अशी धमकीही आरोपींनी दिल्याचा आरोप आहे.
या प्रकरणाचा पुढील तपास महिला पोलीस उपनिरीक्षक श्रीमती आर. एस. सपाटे या करीत आहेत.
ಈಸ್ಟರ್ ಹಬ್ಬದ ದಿನ ಪಟಾಕಿ ಸಿಡಿಸಿದ್ದರಿಂದ ಗಲಾಟೆ; ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಖಾನಾಪುರ : ಖಾನಾಪುರ ತಾಲ್ಲೂಕಿನ ಲೋಂಡಾ ಗ್ರಾಮದ ಚರ್ಚ್ ಗಲ್ಲಿ ಪ್ರದೇಶದಲ್ಲಿ ಈಸ್ಟರ್ ಹಬ್ಬದ ನಿಮಿತ್ತ ಪಟಾಕಿ ಸಿಡಿಸಿದ್ದರಿಂದ ಉಂಟಾದ ವಾಗ್ವಾದವು ಮಾರಾಮಾರಿಗೆ ತಿರುಗಿದ ಘಟನೆ ದಿನಾಂಕ 5 ಏಪ್ರಿಲ್ 2026 ರಂದು ಸಂಜೆ 4 ಗಂಟೆಯ ಸುಮಾರಿಗೆ ನಡೆದಿದೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 113/2026 ಅನ್ವಯ ಭಾರತೀಯ ದಂಡ ಸಂಹಿತೆಯ ಕಲಂ 189, 191(2), 191(3), 126, 115(2), 118(1), 351, 352, 190 ಸಹ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ದೂರುದಾರ ಸಂತೋಷ ಅಲಿಯಾಸ್ ಪೀಟರ್ ಜಾನ್ಸನ್ ಅರೇಕರ್ (ಸಾ: ಚರ್ಚ್ ಗಲ್ಲಿ, ಲೋಂಡಾ) ಹಾಗೂ ಅವರ ಸಹೋದರ ರೋಬಿನ್ ಜಾನ್ಸನ್ ಅರೇಕರ್ (ವಯಸ್ಸು 36 ವರ್ಷ) ಇವರು ದಿನಾಂಕ 5 ಏಪ್ರಿಲ್ ರಂದು ಸಂಜೆ 4 ಗಂಟೆಗೆ ತಮ್ಮ ಮನೆಯ ಎದುರಿನ ರಸ್ತೆಯಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಆರೋಪಿತರಾದ ಜಾನ್ಸನ್ ಪುಲಾಮಿನ್ ಡಿಕೋಸ್ಟಾ, ವಿಲ್ಸನ್ ಪುಲಾಮಿನ್ ಡಿಕೋಸ್ಟಾ, ನೆಲ್ಸನ್ ಪುಲಾಮಿನ್ ಡಿಕೋಸ್ಟಾ, ಅಜರ್ ಕಂಜಾರಿ ಮತ್ತು ವಿನೋದ ಭಂಡಾರಿ (ಎಲ್ಲರೂ ಸಾ: ಲೋಂಡಾ, ತಾ. ಖಾನಾಪುರ) ಇವರು ಒಟ್ಟಾಗಿ ಸೇರಿ ಅಲ್ಲಿಗೆ ಬಂದು ಇಂದು ಏಕೆ ಪಟಾಕಿ ಸಿಡಿಸುತ್ತಿದ್ದೀರಿ?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದಕ್ಕೆ ದೂರುದಾರರು ಈಸ್ಟರ್ ಹಬ್ಬದ ನಿಮಿತ್ತ ಪಟಾಕಿ ಸಿಡಿಸುತ್ತಿರುವುದಾಗಿ ತಿಳಿಸಿದ್ದಾರೆ. ಆಗ ಆರೋಪಿತರು “ಈಸ್ಟರ್ ನಿನ್ನೆ ಆಗಿದೆ, ಆದರೆ ಇಂದು ಏಕೆ ಪಟಾಕಿ ಸಿಡಿಸುತ್ತಿದ್ದೀರಿ?” ಎಂದು ಕೋಪಗೊಂಡು ದೂರುದಾರ ಸಂತೋಷ ಅಲಿಯಾಸ್ ಪೀಟರ್ ಜಾನ್ಸನ್ ಅರೇಕರ್ ಹಾಗೂ ಅವರ ಸಹೋದರರನ್ನು ಸುತ್ತುವರೆದು ಕೈ ಕಾಲು ಗಳಿಂದ ಹಲ್ಲೆ ಮಾಡಿದ್ದಾರೆ.
ಈ ಹಲ್ಲೆಯಲ್ಲಿ ದೂರುದಾರರ ಎಡ ಕಣ್ಣಿನ ಭಾಗದ ಸಮೀಪ ಸಣ್ಣ ಪ್ರಮಾಣದ ಗಾಯವಾಗಿದೆ. ಜೊತೆಗೆ ಆರೋಪಿ ಸಂಖ್ಯೆ 2 ಅವರು ರೋಬಿನ್ ಜಾನ್ಸನ್ ಅರೇಕರ್ ಅವರ ತಲೆಯ ಎಡಭಾಗಕ್ಕೆ ಇಟ್ಟಿಗೆಯಿಂದ ಹೊಡೆದು ಗಂಭೀರ ಗಾಯ ಉಂಟುಮಾಡಿರುವುದಾಗಿ ದೂರುದಲ್ಲಿ ಉಲ್ಲೇಖಿಸಲಾಗಿದೆ.
ಇದೇ ಸಂದರ್ಭದಲ್ಲಿ “ಮತ್ತೆ ಪಟಾಕಿ ಸಿಡಿಸಿದರೆ ಕೊಂದು ಹಾಕುತ್ತೇವೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಪ್ರಕರಣದ ಮುಂದಿನ ತನಿಖೆಯನ್ನು ಮಹಿಳಾ ಪೊಲೀಸ್ ಉಪನಿರೀಕ್ಷಕಿ ಶ್ರೀಮತಿ ಆರ್. ಎಸ್. ಸಪಾಟೆ ಅವರು ನಡೆಸುತ್ತಿದ್ದಾರೆ.



