नाशिकमध्ये मोटार विहिरीत कोसळून सहा विद्यार्थ्यांसह नऊ जणांचा मृत्यू.
नाशिक (महाराष्ट्र) : खासगी क्लासच्या स्नेहसंमेलन कार्यक्रमानंतर घरी परतत असताना मोटार शेतातील पाण्याने भरलेल्या विहिरीत कोसळून नऊ जणांचा दुर्दैवी मृत्यू झाल्याची भीषण घटना शुक्रवारी रात्री दिंडोरी येथे घडली. मृतांमध्ये सहा विद्यार्थी व त्यांच्या पालकांचा समावेश असून संपूर्ण परिसरात शोककळा पसरली आहे.
दिंडोरी येथील शिवाजीनगर भागातील राजे बॅक्वेट हॉल व मंगल कार्यालयात शुक्रवारी सायंकाळी खासगी क्लासतर्फे स्नेहसंमेलन व गुणगौरव सोहळ्याचे आयोजन करण्यात आले होते. या कार्यक्रमासाठी दिंडोरी शहरासह परिसरातील अनेक गावांमधून विद्यार्थी व पालक मोठ्या संख्येने उपस्थित होते. कार्यक्रम रात्री सुमारे दहा वाजता संपल्यानंतर इंदोरे येथील दरगोडे कुटुंबातील सदस्य एर्टिगा मोटारीने घरी परतण्यासाठी निघाले.
मात्र मंगल कार्यालय परिसरातील शेतातील कठडा नसलेल्या विहिरीचा अंदाज न आल्याने मोटार थेट विहिरीत कोसळली. विहीर पाण्याने पूर्ण भरलेली असल्यामुळे मोटार पाण्यात बुडाली आणि आत अडकलेल्या प्रवाशांना बाहेर पडता आले नाही. ही घटना समजल्यानंतर परिसरात एकच खळबळ उडाली.
घटनेची माहिती मिळताच दिंडोरी नगरपंचायतीचे अग्निशमन दल, आपत्ती व्यवस्थापन पथक तसेच पोलीस तात्काळ घटनास्थळी दाखल झाले. विहिरीत पाणी असल्याने बचावकार्याला मोठ्या अडचणींचा सामना करावा लागला. परिसरात मोठी गर्दी जमली होती. अखेर तीन क्रेनच्या साहाय्याने मध्यरात्री सुमारे १२ वाजता मोटार विहिरीतून बाहेर काढण्यात आली.
या भीषण दुर्घटनेत सुनील दत्तात्रेय दरगोडे (35), रेश्मा सुनील दरगोडे (33), राखी सुनील दरगोडे, आशा अनिल दरगोडे, सृष्टी अनिल दरगोडे (16), श्रेयस अनिल दरगोडे (11), माधुरी अनिल दरगोडे, श्रावणी अनिल दरगोडे आणि समृद्धी राजेश दरगोडे (7) यांचा मृत्यू झाल्याची माहिती पोलिसांनी दिली.
प्राथमिक अंदाजानुसार, रात्रीच्या अंधारात चालकाला विहिरीभोवती कठडा नसल्याचा अंदाज आला नसावा, असे प्रत्यक्षदर्शींनी सांगितले. संबंधित विहीर राजू राजे यांच्या मालकीची असल्याचे समजते. या दुर्घटनेत दिंडोरी तालुक्यातील इंदोरे येथील सुनील दरगोडे व अनिल दरगोडे या दोन भावांच्या कुटुंबातील सदस्यांचा समावेश असल्याने परिसरात हळहळ व्यक्त होत आहे.
घटनेचा अधिक तपास पोलीस करत असून, अशा प्रकारच्या उघड्या व संरक्षक कठडा नसलेल्या विहिरींबाबत प्रशासनाने तत्काळ उपाययोजना कराव्यात, अशी मागणी स्थानिकांकडून करण्यात येत आहे.
ಮಹಾರಾಷ್ಟ್ರದ ನಾಶಿಕ್ನಲ್ಲಿ ಕಾರು ಬಾವಿಗೆ ಬಿದ್ದು ಆರು ವಿದ್ಯಾರ್ಥಿಗಳೊಂದಿಗೆ ಒಂಬತ್ತು ಜನರ ದಾರುಣ ಸಾವು.
ನಾಶಿಕ್ (ಮಹಾರಾಷ್ಟ್ರ) : ಮಕ್ಕಳ ಖಾಸಗಿ ತರಗತಿಯ ಸ್ನೇಹಸಮ್ಮೇಳನ ಕಾರ್ಯಕ್ರಮದ ನಂತರ ಮನೆಗೆ ಹಿಂದಿರುಗುವ ವೇಳೆ ಕಾರು ಹೊಲದಲ್ಲಿದ್ದ ನೀರಿನಿಂದ ತುಂಬಿದ ಬಾವಿಗೆ ಬಿದ್ದು ಒಂಬತ್ತು ಮಂದಿ ದುರ್ಮರಣ ಹೊಂದಿದ ಭೀಕರ ಘಟನೆ ಶುಕ್ರವಾರ ರಾತ್ರಿ ಮಾಹಾರಾಷ್ಟ್ರದ ದಿಂಡೋರಿ ಇಲ್ಲಿ ನಡೆದಿದೆ. ಮೃತರಲ್ಲಿ ಆರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೂ ಸೇರಿದ್ದು, ಸಂಪೂರ್ಣ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ದಿಂಡೋರಿ ನಗರದ ಶಿವಾಜೀನಗರ ಪ್ರದೇಶದ ರಾಜೆ ಬ್ಯಾಂಕ್ವೆಟ್ ಹಾಲ್ ಮತ್ತು ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಸಂಜೆ ಖಾಸಗಿ ಕ್ಲಾಸಿನ ವತಿಯಿಂದ ಸ್ನೇಹಸಮ್ಮೇಳನ ಹಾಗೂ ಗುಣಗೌರವ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ದಿಂಡೋರಿ ನಗರ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ರಾತ್ರಿ ಸುಮಾರು ಹತ್ತು ಗಂಟೆಗೆ ಮುಗಿದ ಬಳಿಕ ಇಂದೋರೆ ಗ್ರಾಮದ ದರ್ಗೋಡೆ ಕುಟುಂಬದ ಸದಸ್ಯರು ಎರ್ಟಿಗಾ ಕಾರಿನಲ್ಲಿ ಮನೆಗೆ ತೆರಳಲು ಹೊರಟಿದ್ದರು.
ಆದರೆ ಮಂಗಳ ಕಾರ್ಯಾಲಯದ ಸಮೀಪದ ಹೊಲದಲ್ಲಿದ್ದ ರಕ್ಷಣಾ ಕಟ್ಟೆ ಇಲ್ಲದ ಬಾವಿಯನ್ನು ಗಮನಿಸದೆ ಕಾರು ನೇರವಾಗಿ ಬಾವಿಗೆ ಬಿದ್ದಿದೆ. ಬಾವಿ ಸಂಪೂರ್ಣವಾಗಿ ನೀರಿನಿಂದ ತುಂಬಿದ್ದರಿಂದ ಕಾರು ನೀರಿನಲ್ಲಿ ಮುಳುಗಿತು ಮತ್ತು ಒಳಗೆ ಸಿಲುಕಿದ್ದ ಪ್ರಯಾಣಿಕರಿಗೆ ಹೊರಬರಲು ಅವಕಾಶ ಸಿಗಲಿಲ್ಲ. ಘಟನೆ ತಿಳಿದ ತಕ್ಷಣ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಮಾಹಿತಿ ದೊರಕುತ್ತಿದ್ದಂತೆ ದಿಂಡೋರಿ ನಗರ ಪಂಚಾಯತಿಯ ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ತಂಡ ಹಾಗೂ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಬಾವಿಯಲ್ಲಿ ನೀರು ತುಂಬಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ಅಡಚಣೆಗಳು ಎದುರಾದವು. ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಕೊನೆಗೆ ಮೂರು ಕ್ರೇನ್ಗಳ ಸಹಾಯದಿಂದ ಮಧ್ಯರಾತ್ರಿ ಸುಮಾರು 12 ಗಂಟೆಗೆ ಕಾರನ್ನು ಬಾವಿಯಿಂದ ಹೊರತೆಗೆದರು.
ಈ ಭೀಕರ ದುರಂತದಲ್ಲಿ ಸುನೀಲ್ ದತ್ತಾತ್ರೇಯ ದರ್ಗೋಡೆ (35), ರೇಶ್ಮಾ ಸುನೀಲ್ ದರ್ಗೋಡೆ (33), ರಾಖಿ ಸುನೀಲ್ ದರ್ಗೋಡೆ, ಆಶಾ ಅನಿಲ್ ದರ್ಗೋಡೆ, ಸೃಷ್ತಿ ಅನಿಲ್ ದರ್ಗೋಡೆ (16), ಶ್ರೇಯಸ್ ಅನಿಲ್ ದರ್ಗೋಡೆ (11), ಮಾಧುರಿ ಅನಿಲ್ ದರ್ಗೋಡೆ, ಶ್ರಾವಣಿ ಅನಿಲ್ ದರ್ಗೋಡೆ ಮತ್ತು ಸಮೃದ್ಧಿ ರಾಜೇಶ್ ದರ್ಗೋಡೆ (7) ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ, ರಾತ್ರಿ ಕತ್ತಲೆಯಲ್ಲಿ ಚಾಲಕನಿಗೆ ಬಾವಿಯ ಸುತ್ತ ರಕ್ಷಣಾ ಕಟ್ಟೆ ಇಲ್ಲದಿರುವುದು ಗೋಚರಿಸದೇ ಇರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಂಬಂಧಿತ ಬಾವಿ ರಾಜು ರಾಜೆ ಅವರ ಮಾಲಿಕತ್ವದಲ್ಲಿದೆ ಎಂದು ತಿಳಿದುಬಂದಿದೆ.
ಈ ದುರಂತದಲ್ಲಿ ದಿಂಡೋರಿ ತಾಲೂಕಿನ ಇಂದೋರೆ ಗ್ರಾಮದ ಸುನೀಲ್ ದರ್ಗೋಡೆ ಹಾಗೂ ಅನಿಲ್ ದರ್ಗೋಡೆ ಎಂಬ ಇಬ್ಬರು ಸಹೋದರರ ಕುಟುಂಬ ಸದಸ್ಯರು ಸಾವನ್ನಪ್ಪಿರುವುದರಿಂದ ಪ್ರದೇಶದಲ್ಲಿ ತೀವ್ರ ಶೋಕ ವ್ಯಕ್ತವಾಗುತ್ತಿದೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇಂತಹ ರಕ್ಷಣಾ ಕಟ್ಟೆ ಇಲ್ಲದ ಬಾವಿಗಳ ಬಗ್ಗೆ ಆಡಳಿತವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಸ್ಥಳೀಯರಿಂದ ಕೇಳಿಬರುತ್ತಿದೆ.



