डॉ. बाबू जगजीवनराम यांच्या 119 व्या जयंतीनिमित्त खानापूरात भव्य कार्यक्रमाचे आयोजन.
खानापूर : कर्नाटक सरकार, तालुका प्रशासन, तालुका पंचायत, नगर पंचायत तसेच समाज कल्याण विभाग खानापूर यांच्या संयुक्त विद्यमाने रविवार दिनांक 5 एप्रिल 2026 रोजी सकाळी 10 वाजता हरित क्रांतीचे शिल्पकार, राष्ट्रनेते व भारताचे माजी उपपंतप्रधान डॉ. बाबू जगजीवनराम यांच्या 119 व्या जयंतीनिमित्त भव्य कार्यक्रमाचे आयोजन करण्यात आले आहे.
या कार्यक्रमाचे अध्यक्षस्थान व उद्घाटन खानापूरचे आमदार विठ्ठल सोमण्णा हलगेकर करणार आहेत. विशेष आमंत्रित म्हणून कर्नाटक सरकारचे नवी दिल्ली येथील विशेष प्रतिनिधी श्री. प्रकाश बा. हुकेरी उपस्थित राहणार आहेत.
मुख्य अतिथी म्हणून उत्तर कन्नडचे खासदार विश्वेश्वर हेगडे-कागेरी तसेच राज्यसभेचे खासदार श्री. ईरन्ना कडाडी उपस्थित राहणार आहेत. याशिवाय विधान परिषद सदस्य चन्नराज हट्टीहोळी, लखन जारकीहोळी, हनमंत निराणी, डॉ. तळवार साबण्णा तसेच गॅरंटी योजना समितीचे तालुका अध्यक्ष सूर्यकांत कृष्णा कुलकर्णी, डॉ. गीतांजली एम. कुरुडगी यांच्यासह खानापूर तालुक्यातील विविध संघटनांचे पदाधिकारी व नागरिक मोठ्या संख्येने उपस्थित राहणार आहेत.
सकाळी 9 वाजता आमदार विठ्ठल हलगेकर यांच्या हस्ते डॉ. बाबू जगजीवनराम यांच्या प्रतिमेचे पूजन होणार असून त्यानंतर बसवेश्वर चौकातून मुख्य रस्त्याने मिरवणूक काढण्यात येणार आहे. त्यानंतर या मिरवणूकीची समाप्ती तालुका पंचायतीच्या सभागृहात होईल.
मिरवणुकीची समाप्ती झाल्यानंतर सकाळी 10 वाजता तालुका पंचायत सभागृहात व्यासपीठावरील कार्यक्रम पार पडणार असून त्यामध्ये प्रार्थना, स्वागत भाषण, मालार्पण, अतिथींची भाषणे, अध्यक्षीय भाषण व आभार प्रदर्शन असे विविध कार्यक्रम होणार आहेत.
या कार्यक्रमास सर्व नागरिकांनी उपस्थित राहून जयंती सोहळा यशस्वी करावा, असे आवाहन तहसीलदार व तालुका जयंती उत्सव समितीचे अध्यक्ष श्री. दुंडाप्प कोमार, समाज कल्याण विभागाचे सहायक संचालक श्री. व्ही. आर. नागनूर, तालुका पंचायतचे कार्यकारी अधिकारी श्री. रमेश जी. मेत्री तसेच नगर पंचायतचे मुख्याधिकारी श्री. संतोष कुरबेट यांनी केले आहे.
ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ನಿಮಿತ್ತ ಖಾನಾಪುರದಲ್ಲಿ ಭವ್ಯ ಕಾರ್ಯಕ್ರಮ ಆಯೋಜನೆ.
ಖಾನಾಪುರ : ಕರ್ನಾಟಕ ಸರ್ಕಾರ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಖಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ದಿನಾಂಕ 5 ಏಪ್ರಿಲ್ 2026 ರಂದು ಬೆಳಿಗ್ಗೆ 10 ಗಂಟೆಗೆ ಹಸಿರು ಕ್ರಾಂತಿಯ ಶಿಲ್ಪಿ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ನಿಮಿತ್ತ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಖಾನಾಪುರ ಶಾಸಕ ವಿಠ್ಠಲ ಸೋಮಣ್ಣ ಹಲಗೆಕರ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶ್ರೀ ಪ್ರಕಾಶ ಬಾ. ಹುಕ್ಕೇರಿ ಉಪಸ್ಥಿತರಾಗಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಹಾಗೂ ರಾಜ್ಯಸಭಾ ಸದಸ್ಯ ಶ್ರೀ ಈರಣ್ಣ ಕಡಾಡಿ ಭಾಗವಹಿಸಲಿದ್ದಾರೆ.
ಇದಲ್ಲದೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಲಖನ್ ಜಾರಕಿಹೊಳಿಯವರು, ಹನಮಂತ ನಿರಾಣಿ, ಡಾ. ತಳವಾರ ಸಾಬಣ್ಣ, ಗ್ಯಾರಂಟಿ ಯೋಜನೆ ಸಮಿತಿಯ ತಾಲೂಕು ಅಧ್ಯಕ್ಷ ಸೂರ್ಯಕಾಂತ ಕೃಷ್ಣ ಕುಲಕರ್ಣಿ, ಡಾ. ಗೀತಾಂಜಲಿ ಎಂ. ಕುರುಡಗಿ ಸೇರಿದಂತೆ ಖಾನಾಪುರ ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಶಾಸಕ ವಿಠ್ಠಲ ಹಲಗೆಕರ ಅವರಿಂದ ಡಾ. ಬಾಬು ಜಗಜೀವನ ರಾಮ್ ಅವರ ಪ್ರತಿಮೆಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಬಸವೇಶ್ವರ ಚೌಕದಿಂದ ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಮಾಪ್ತಿಯಾಗಲಿದೆ.
ಮೆರವಣಿಗೆಯ ನಂತರ ಬೆಳಿಗ್ಗೆ 10 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಸ್ವಾಗತ ಭಾಷಣ, ಮಾಲಾರ್ಪಣೆ, ಅತಿಥಿಗಳ ಭಾಷಣ, ಅಧ್ಯಕ್ಷೀಯ ಭಾಷಣ ಹಾಗೂ ಕೃತಜ್ಞತಾ ಭಾಷಣ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಈ ಕಾರ್ಯಕ್ರಮಕ್ಕೆ ಎಲ್ಲಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಜಯಂತಿೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ್ ಹಾಗೂ ತಾಲೂಕು ಜಯಂತಿೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ದುಂಡಪ್ಪ ಕೋಮಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ವಿ. ಆರ್. ನಾಗನೂರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಮೇಶ್ ಜಿ. ಮೇತ್ರಿ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀ ಸಂತೋಷ ಕುರಬೆಟ್ ಅವರು ವಿನಂತಿಸಿಕೊಂಡಿದ್ದಾರೆ.



