सीमाप्रश्नाच्या सुनावणीसाठी एक लाख सह्यांची मोहीम; ३१ मार्च रोजी खानापूरात बैठक.
खानापूर : दीर्घकाळ प्रलंबित राहिलेल्या महाराष्ट्र–कर्नाटक सीमाप्रश्नासंदर्भातील दावा (क्रमांक 4/2004) दि. 29 मार्च 2004 रोजी राज्यघटनेच्या अनुच्छेद 131 (ब) अन्वये सर्वोच्च न्यायालयात दाखल करण्यात आला आहे. मात्र तब्बल 22 वर्षे उलटूनही या दाव्याची सलग सुनावणी होऊ शकलेली नाही. त्यामुळे सदर प्रकरणाची सुनावणी लवकरात लवकर जलदगतीने घ्यावी, अशी मागणी बेळगाव जिल्हा मराठी पत्रकार संघाच्या वतीने सरन्यायाधीशांकडे करण्यात येणार आहे.
या मागणीसाठी सीमा भागातील मराठी भाषिकांच्या एक लाख सह्यांचे निवेदन सादर करण्याचा निर्णय घेण्यात आला आहे. या सह्या संकलन मोहिमेचा शुभारंभ करण्यासाठी खानापूर तालुका महाराष्ट्र एकीकरण समितीची बैठक मंगळवार दि. 31 मार्च रोजी सकाळी 11.00 वाजता शिवस्मारक, खानापूर येथे आयोजित करण्यात आली आहे.
या बैठकीस खानापूर तालुका समितीचे सर्व पदाधिकारी, कार्यकर्ते तसेच मराठी भाषिक नागरिकांनी मोठ्या संख्येने उपस्थित राहावे, असे आवाहन तालुका समितीचे अध्यक्ष गोपाळराव देसाई, माजी आमदार दिगंबरराव पाटील, कार्याध्यक्ष मुरलीधर पाटील, कार्याध्यक्ष निरंजन सरदेसाई आणि सरचिटणीस आबासाहेब दळवी यांनी केले आहे.
ಸೀಮಾ ಪ್ರಶ್ನೆಯ ವಿಚಾರಣೆಗೆ ಒಂದು ಲಕ್ಷ ಸಹಿ ಸಂಗ್ರಹಿಸುವ ಅಭಿಯಾನ; 31 ಮಾರ್ಚ್ ರಂದು ಖಾನಾಪೂರಿನಲ್ಲಿ ಸಭೆ
ಖಾನಾಪೂರು : ದೀರ್ಘಕಾಲದಿಂದ ಪ್ರಲಂಬಿತವಾಗಿರುವ ಮಹಾರಾಷ್ಟ್ರ–ಕರ್ನಾಟಕ ಗಡಿವಿವಾದ ಸಂಬಂಧಿತ ದಾವೆ (ಕ್ರಮಾಂಕ 4/2004) ಅನ್ನು ದಿ. 29 ಮಾರ್ಚ್ 2004 ರಂದು ರಾಜ್ಯಘಟನೆಯ ಅನುಚ್ಛೇದ 131 (ಬಿ) ಅನ್ವಯ ಸುಪ್ರೀಂ ಕೋರ್ಟ್ನಲ್ಲಿ ದಾಖಲಿಸಲಾಗಿದೆ. ಆದರೆ 22 ವರ್ಷಗಳು ಕಳೆದರೂ ಈ ದಾವೆಯ ನಿರಂತರ ವಿಚಾರಣೆ ನಡೆದಿಲ್ಲ. ಆದ್ದರಿಂದ ಸದರಿ ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಹಾಗೂ ವೇಗವಾಗಿ ಕೈಗೊಳ್ಳಬೇಕೆಂದು ಬೇಡಿಕೆ ಸಲ್ಲಿಸಲು ಬೆಳಗಾವಿ ಜಿಲ್ಲಾ ಮರಾಠಿ ಪತ್ರಕರ್ತರ ಸಂಘದ ವತಿಯಿಂದ ಸರನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗುವುದು.
ಈ ಬೇಡಿಕೆಗೆ ಬೆಂಬಲವಾಗಿ ಗಡಿಭಾಗದ ಮರಾಠಿ ಭಾಷಿಕರ ಒಂದು ಲಕ್ಷ ಸಹಿಗಳನ್ನು ಸಂಗ್ರಹಿಸಿ ಮನವಿ ಜೋತೆ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲು ಖಾನಾಪೂರು ತಾಲ್ಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯನ್ನು ಮಂಗಳವಾರ ದಿ. 31 ಮಾರ್ಚ್ ರಂದು ಬೆಳಿಗ್ಗೆ 11 ಗಂಟೆಗೆ ಶಿವಸ್ಮಾರಕ, ಖಾನಾಪೂರು ಇಲ್ಲಿ ಆಯೋಜಿಸಲಾಗಿದೆ.
ಈ ಸಭೆಗೆ ಖಾನಾಪೂರು ತಾಲ್ಲೂಕು ಸಮಿತಿಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮರಾಠಿ ಭಾಷಿಕ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಾಲ್ಲೂಕು ಸಮಿತಿಯ ಅಧ್ಯಕ್ಷ ಗೋಪಾಲರಾವ್ ದೇಶಾಯಿ, ಮಾಜಿ ಶಾಸಕರಾದ ದಿಗಂಬರರಾವ್ ಪಾಟೀಲ್, ಕಾರ್ಯಾಧ್ಯಕ್ಷ ಮುರಳೀಧರ ಪಾಟೀಲ್, ಕಾರ್ಯಾಧ್ಯಕ್ಷ ನಿರಂಜನ್ ಸರದೇಶಾಯಿ ಮತ್ತು ಪ್ರಧಾನ ಕಾರ್ಯದರ್ಶಿ ಆಬಾಸಾಹೇಬ ದಳವಿ ಅವರು ಮನವಿ ಮಾಡಿದ್ದಾರೆ.



