खानापूरात रविवारी सामान्यज्ञान प्रज्ञाशोध परीक्षा; मराठी सांस्कृतिक प्रतिष्ठान आणि राज्य मराठी विकास संस्थेकडून आयोजन.
खानापूर : येथील मराठी सांस्कृतिक प्रतिष्ठान आणि राज्य मराठी विकास संस्था यांच्या संयुक्त विद्यमाने येत्या रविवारी (ता. २२) सामान्यज्ञान प्रज्ञाशोध परीक्षेचे आयोजन करण्यात आले आहे. ही परीक्षा खानापूर येथील मराठा मंडळच्या ताराराणी हायस्कूलमध्ये पार पडणार असून, खानापूर तालुक्यातील प्राथमिक व माध्यमिक शाळांमधील विद्यार्थ्यांनी मोठ्या संख्येने सहभागी व्हावे, असे आवाहन प्रतिष्ठानचे अध्यक्ष तथा राज्य मराठी विकास संस्थेचे सदस्य नारायण कापोलकर यांनी केले आहे.
दोन्ही संस्थांच्यावतीने दरवर्षी तालुक्यातील विद्यार्थ्यांसाठी प्रज्ञाशोध परीक्षेचे आयोजन केले जाते. या परीक्षेमध्ये प्राथमिक विभागात इयत्ता सातवीपर्यंतचे, तर माध्यमिक विभागात आठवी ते दहावीपर्यंतचे विद्यार्थी सहभागी होऊ शकतात. विद्यार्थ्यांच्या सर्वांगीण बौद्धिक विकासासाठी सर्व विषयांचे मूलभूत ज्ञान, सामान्यज्ञान, बुद्धिमत्ता चाचणी तसेच चालू घडामोडी या विषयांचा समावेश अभ्यासक्रमात करण्यात आला आहे.
ही परीक्षा ५० बहुपर्यायी प्रश्नांची असून एकूण १०० गुणांची असेल, अशी माहिती प्रतिष्ठानतर्फे देण्यात आली आहे.
आकर्षक बक्षिसांची घोषणा
या स्पर्धेत यशस्वी ठरणाऱ्या विद्यार्थ्यांना रोख पारितोषिके देण्यात येणार आहेत.
प्राथमिक विभागासाठी अनुक्रमे रु. ३५००, २५००, २०००, १५००, १०००, ८००, ७०० आणि ५०० अशी बक्षिसे जाहीर करण्यात आली आहेत.
तर माध्यमिक विभागासाठी रु. ४०००, ३०००, २५००, २०००, १५००, १२००, १००० आणि ७०० अशी बक्षिसे देण्यात येणार आहेत.
याशिवाय स्पर्धेत सहभागी होणाऱ्या प्रत्येक विद्यार्थ्याला प्रमाणपत्र देऊन सन्मानित करण्यात येणार आहे.
नोंदणीची अंतिम मुदत शुक्रवारपर्यंत
परीक्षार्थींची नावे शुक्रवार (ता. २०) पर्यंत मराठी सांस्कृतिक प्रतिष्ठानच्या वाझ बिल्डिंग, मिनीविधान सौधसमोरील प्रबोधनकार ठाकरे वाचनालयात नोंदवावीत, असे आवाहन नारायण कापोलकर यांनी केले आहे. पालक, विद्यार्थी आणि शिक्षकांनी वेळेत नोंदणी करून या उपक्रमात सहभागी व्हावे, असेही त्यांनी सांगितले.
शैक्षणिक दर्जा उंचावण्याचा उद्देश
खानापूर तालुक्यातील मराठी शाळांमधील शैक्षणिक दर्जा उंचावण्यासाठी प्रतिष्ठान सातत्याने प्रयत्नशील आहे. प्रज्ञाशोध परीक्षेच्या माध्यमातून विद्यार्थ्यांचे ज्ञानमूल्यांकन होण्याबरोबरच त्यांना प्राथमिक आणि माध्यमिक स्तरापासूनच स्पर्धा परीक्षांची तोंडओळख व्हावी, हा या उपक्रमामागील मुख्य उद्देश आहे.
गेल्या दहा वर्षांपासून सुरू असलेल्या या परीक्षांना तालुक्यातून उत्स्फूर्त प्रतिसाद मिळत असून, यंदाही मोठ्या संख्येने विद्यार्थी सहभागी होतील, असा विश्वास श्री. कापोलकर यांनी व्यक्त केला आहे.
ಖಾನಾಪುರದಲ್ಲಿ ಭಾನುವಾರ ಸಾಮಾನ್ಯ ಜ್ಞಾನ ಪ್ರಜ್ಞಾಶೋಧ ಪರೀಕ್ಷೆ; ಮರಾಠಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ರಾಜ್ಯ ಮರಾಠಿ ಅಭಿವೃದ್ಧಿ ಸಂಸ್ಥೆಯಿಂದ ಜಂಟಿಯಾಗಿ ಆಯೋಜನೆ..
ಖಾನಾಪುರ : ಇಲ್ಲಿನ ಮರಾಠಿ ಸಂಸ್ಕೃತಿ ಪ್ರತಿಷ್ಠಾನ ಹಾಗೂ ರಾಜ್ಯ ಮರಾಠಿ ವಿಕಾಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ (ತಾ. ೨೨) ಸಾಮಾನ್ಯ ಜ್ಞಾನ ಪ್ರಜ್ಞಾಶೋಧ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಈ ಪರೀಕ್ಷೆ ಖಾನಾಪುರದ ಮರಾಠಾ ಮಂಡಳ ತಾರಾರಾಣಿ ಹೈಸ್ಕೂಲ್ನಲ್ಲಿ ನಡೆಯಲಿದ್ದು, ಖಾನಾಪುರ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಜ್ಯ ಮರಾಠಿ ಅಭಿವೃದ್ಧಿ ಸಂಸ್ಥೆಯ ಸದಸ್ಯರಾದ ನರಾಯಣ ಕಾಪೋಲ್ಕರ್ ಮನವಿ ಮಾಡಿದ್ದಾರೆ.
ಎರಡೂ ಸಂಸ್ಥೆಗಳ ವತಿಯಿಂದ ಪ್ರತಿವರ್ಷ ಖಾನಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗಾಗಿ ಪ್ರಜ್ಞಾಶೋಧ ಪರೀಕ್ಷೆಯನ್ನು ಆಯೋಜಿಸಲಾಗುತ್ತಿದೆ. ಪ್ರಾಥಮಿಕ ವಿಭಾಗದಲ್ಲಿ ಏಳನೇ ತರಗತಿ ವರೆಗೆ ಹಾಗೂ ಪ್ರೌಢ ವಿಭಾಗದಲ್ಲಿ ಎಂಟನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ವಿದ್ಯಾರ್ಥಿಗಳು ಭಾಗವಹಿಸಬಹುದು. ಎಲ್ಲಾ ವಿಷಯಗಳ ಮೂಲಭೂತ ಜ್ಞಾನ, ಸಾಮಾನ್ಯ ಜ್ಞಾನ, ಬುದ್ಧಿಮತ್ತೆ ಹಾಗೂ ಸಮಕಾಲೀನ ಘಟನೆಗಳ ಕುರಿತು ಪ್ರಶ್ನೆಗಳು ಪರೀಕ್ಷೆಯಲ್ಲಿ ಇರಲಿವೆ.
ಈ ಪರೀಕ್ಷೆಯಲ್ಲಿ ಒಟ್ಟು ೫೦ ಬಹು ಆಯ್ಕೆ ಪ್ರಶ್ನೆಗಳು ಇರಲಿದ್ದು, ೧೦೦ ಅಂಕಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಪ್ರತಿಷ್ಠಾನ ತಿಳಿಸಿದೆ.
ಆಕರ್ಷಕ ಬಹುಮಾನಗಳ ಘೋಷಣೆ
ಪ್ರಾಥಮಿಕ ವಿಭಾಗದ ವಿಜೇತರಿಗೆ ಕ್ರಮವಾಗಿ ರೂ. ೩೫೦೦, ೨೫೦೦, ೨೦೦೦, ೧೫೦೦, ೧೦೦೦, ೮೦೦, ೭೦೦ ಮತ್ತು ೫೦೦ ಬಹುಮಾನಗಳನ್ನು ನೀಡಲಾಗುವುದು.
ಪ್ರೌಢ ವಿಭಾಗದ ವಿಜೇತರಿಗೆ ರೂ. ೪೦೦೦, ೩೦೦೦, ೨೫೦೦, ೨೦೦೦, ೧೫೦೦, ೧೨೦೦, ೧೦೦೦ ಮತ್ತು ೭೦೦ ಹೀಗೆ ಬಹುಮಾನಗಳನ್ನು ನೀಡಲಾಗುತ್ತದೆ.
ಇದಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ.
ನೋಂದಣಿಗೆ ಶುಕ್ರವಾರ ಅಂತಿಮ ದಿನಾಂಕ
ಪರೀಕ್ಷಾರ್ಥಿಗಳ ಹೆಸರುಗಳನ್ನು ಶುಕ್ರವಾರ (ತಾ. ೨೦) ರೊಳಗೆ ಮರಾಠಿ ಸಾಂಸ್ಕೃತಿಕ ಪ್ರತಿಷ್ಠಾನದ ವಾಜ್ ಬಿಲ್ಡಿಂಗ್, ಮಿನಿ ವಿಧಾನಸೌಧ ಎದುರಿನ ಪ್ರಬೋಧನಕಾರ ಠಾಕರೆ ವಾಚನಾಲಯದಲ್ಲಿ ನೋಂದಾಯಿಸಬೇಕು ಎಂದು ನರಾಯಣ ಕಾಪೋಲ್ಕರ್ ತಿಳಿಸಿದ್ದಾರೆ. ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಮಯಕ್ಕೆ ಸರಿಯಾಗಿ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಶೈಕ್ಷಣಿಕ ಮಟ್ಟ ಉನ್ನತಿಗೊಳಿಸುವ ಉದ್ದೇಶ
ಖಾನಾಪುರ ತಾಲ್ಲೂಕಿನ ಮರಾಠಿ ಶಾಲೆಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಪ್ರತಿಷ್ಠಾನ ನಿರಂತರವಾಗಿ ಪ್ರಯತ್ನಿಸುತ್ತಿದೆ. ಪ್ರಜ್ಞಾಶೋಧ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ಜ್ಞಾನ ಮೌಲ್ಯಮಾಪನ ಮಾಡುವುದರ ಜೊತೆಗೆ, ಪ್ರಾಥಮಿಕ ಹಾಗೂ ಪ್ರೌಢ ಮಟ್ಟದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಪರಿಚಯವಾಗಬೇಕು ಎಂಬುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.
ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಈ ಪರೀಕ್ಷೆಗೆ ತಾಲ್ಲೂಕಿನಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು, ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ನರಾಯಣ ಕಾಪೋಲ್ಕರ್ ವ್ಯಕ್ತಪಡಿಸಿದ್ದಾರೆ.


