खानापूर येथे अखंड हिंदू संमेलनाच्या तयारीसाठी पंडित ओगले समर्थक व हिंदुत्ववादी संघटनांची बैठक संपन्न.
खानापूर : मलप्रभा क्रीडांगण खानापूर येथे शुक्रवार दिनांक 6 फेब्रुवारी 2026 रोजी सायंकाळी 4.00 वाजता अखंड हिंदू संमेलनाचे भव्य आयोजन करण्यात आले आहे. या कार्यक्रमाच्या तयारीसाठी जोरदार हालचाली सुरू असून, या पार्श्वभूमीवर हिंदुत्ववादी युवा नेते तसेच भाजप युवा मोर्चाचे बेळगाव जिल्हा उपाध्यक्ष पंडित ओगले यांनी आपल्या समर्थक, मित्रपरिवार व विविध हिंदुत्ववादी संघटनांच्या पदाधिकाऱ्यांची बैठक मंगळवार दिनांक 3 फेब्रुवारी 2026 रोजी श्री मलप्रभा नदी घाटावरील इस्कॉन मंदिरात आयोजित केली होती. या बैठकीला तालुक्यातील हिंदुत्ववादी कार्यकर्ते मोठ्या संख्येने उपस्थित होते.
बैठकीच्या सुरुवातीला एडवोकेट चेतन मनेरिकर यांनी प्रास्ताविक व स्वागत केले. त्यानंतर कुसमळीचे युवा नेते अनंत सावंत, भाजपाचे जिल्हा उपाध्यक्ष प्रमोद कोचेरी, भाजपाचे नेते संजय कुबल, अखंड हिंदू संमेलनाचे अध्यक्ष विश्वास किरमटे यांनी उपस्थितांना संबोधित केले.
बैठकीचे आयोजक हिंदुत्ववादी युवा नेते पंडित ओगले यांनी शुक्रवारी 6 फेब्रुवारी रोजी होणाऱ्या अखंड हिंदू संमेलनाची रूपरेषा मांडली. तसेच संमेलनाचे आयोजन, व्यवस्थापन, जनसंपर्क, कार्यकर्त्यांची भूमिका आणि सभा यशस्वी करण्याबाबत सविस्तर मार्गदर्शन केले.
यावेळी राष्ट्रीय स्वयंसेवक संघाचे पदाधिकारी सुभाष देशपांडे यांनी कार्यक्रमाची संपूर्ण रूपरेषा व नियोजनाबाबत मार्गदर्शन केले. अखंड हिंदू संमेलनाचे कार्याध्यक्ष नितीन राजाराम पाटील यांनी अखंड हिंदू संमेलन आयोजित करण्यामागील उद्देश स्पष्ट करत उपस्थित कार्यकर्त्यांना संबोधित केले आणि आभार प्रदर्शन केले.
बैठकीच्या शेवटी प्रेरणा मंत्राने कार्यक्रमाची सांगता करण्यात आली.
या बैठकीस तालुका पंचायतीचे माजी उपसभापती सुरेश देसाई, रवी काटगी, गुंडू तोपिनकट्टी, शिवप्रतिष्ठानचे अध्यक्ष मनोहर गावडे, सनातन संस्थेचे कोनेरी कुमरूतवाडकर, इदलहोंड कृषी पत्तीनचे अध्यक्ष चांगाप्पा बाचोळकर, जांबोटी ग्रामपंचायत उपाध्यक्ष सुनील देसाई, संजय मयेकर तसेच बजरंग दल, शिवप्रतिष्ठान हिंदुस्थान, सनातन संस्था, विश्व हिंदू परिषद, तसेच पंडित ओगले समर्थक व मित्रपरिवार आणि तालुक्यातील हिंदुत्ववादी कार्यकर्ते मोठ्या संख्येने उपस्थित होते.
ಖಾನಾಪುರದಲ್ಲಿ ಅಖಂಡ ಹಿಂದೂ ಸಂಮೇಳದ ತಯಾರಿ ಕುರಿತು ಪಂಡಿತ್ ಒಗಲೆ ಜೋತೆ ಅವರ ಬೆಂಬಲಿ ಬಳಗ ಹಾಗೂ ಹಿಂದುತ್ವವಾದಿ ಸಂಘಟನೆಗಳ ಸಭೆ ಸಂಪನ್ನ.
ಖಾನಾಪುರ : ಮಲಪ್ರಭಾ ಕ್ರೀಡಾಂಗಣ ಖಾನಾಪುರದಲ್ಲಿ ಶುಕ್ರವಾರ ದಿನಾಂಕ 6 ಫೆಬ್ರವರಿ 2026 ರಂದು ಸಂಜೆ 4.00 ಗಂಟೆಗೆ ಅಖಂಡ ಹಿಂದೂ ಸಂಮೇಳದ ಭವ್ಯ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದ ತಯಾರಿಗಾಗಿ ಚಟುವಟಿಕೆಗಳು ವೇಗವಾಗಿ ನಡೆಯುತ್ತಿದ್ದು, ಈ ಹಿನ್ನೆಲೆ ಹಿಂದೂತ್ವವಾದಿ ಯುವ ನಾಯಕ ಹಾಗೂ ಬಿಜೆಪಿಯ ಯುವ ಮೋರ್ಚಾ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಪಂಡಿತ್ ಓಗಲೆ ಅವರು ತಮ್ಮ ಬೆಂಬಲಿಗ, ಸ್ನೇಹಿತರು ಮತ್ತು ವಿವಿಧ ಹಿಂದೂತ್ವವಾದಿ ಸಂಘಟನೆಗಳ ಪದಾಧಿಕಾರಿಗಳ ಜೊತೆ ಸಭೆಯನ್ನು ಮಂಗಳವಾರ ದಿನಾಂಕ 3 ಫೆಬ್ರವರಿ 2026 ರಂದು ಶ್ರೀ ಮಲಪ್ರಭಾ ನದಿ ಘಾಟ್ ಬಳಿ ಇರುವ ಇಸ್ಕಾನ್ ದೇವಸ್ಥಾನದಲ್ಲಿ ಆಯೋಜಿಸಿದ್ದರು. ಈ ಸಭೆಗೆ ತಾಲ್ಲೂಕಿನ ಹಿಂದೂತ್ವವಾದಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಸಭೆಯ ಆರಂಭದಲ್ಲಿ ಅಡ್ವೊಕೇಟ್ ಚೇತನ ಮನೆರಿಕರ್ ಅವರು ಪ್ರಸ್ತಾವನೆ ಹಾಗೂ ಸ್ವಾಗತ ಭಾಷಣ ಮಾಡಿದರು. ನಂತರ ಕುಸಮಳಿಯ ಯುವ ನಾಯಕ ಅನಂತ್ ಸಾವಂತ್, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೊಚೇರಿ, ಬಿಜೆಪಿಯ ನಾಯಕ ಸಂಜಯ ಕುಬಲ್ ಅವರು ಹಾಜರಿದ್ದವರನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯ ಆಯೋಜಕರಾದ ಹಿಂದೂತ್ವವಾದಿ ಯುವ ನಾಯಕ ಪಂಡಿತ್ ಓಗಲೆ ಅವರು ಶುಕ್ರವಾರ 6 ಫೆಬ್ರವರಿ ನಡೆಯಲಿರುವ ಅಖಂಡ ಹಿಂದೂ ಸಂಮೇಳದ ರೂಪರೇಖೆಯನ್ನು ವಿವರಿಸಿದರು. ಜೊತೆಗೆ ಸಂಮೇಳದ ಆಯೋಜನೆ, ನಿರ್ವಹಣೆ, ಜನಸಂಪರ್ಕ, ಕಾರ್ಯಕರ್ತರ ಪಾತ್ರ ಮತ್ತು ಸಭೆಯನ್ನು ಯಶಸ್ವಿಗೊಳಿಸುವ ಕುರಿತು ಸವಿಸ್ತಾರವಾಗಿ ಮಾರ್ಗದರ್ಶನ ನೀಡಿದರು.
ಈ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿ ಸುಭಾಷ್ ದೇಶಪಾಂಡೆ ಅವರು ಕಾರ್ಯಕ್ರಮದ ಸಂಪೂರ್ಣ ರೂಪರೇಖೆ ಮತ್ತು ಯೋಜನೆ ಕುರಿತು ಮಾರ್ಗದರ್ಶನ ನೀಡಿದರು. ಅಖಂಡ ಹಿಂದೂ ಸಂಮೇಳದ ಅಧ್ಯಕ್ಷ ನಿತಿನ್ ರಾಜಾರಾಮ ಪಾಟೀಲ್ ಅವರು ಅಖಂಡ ಹಿಂದೂ ಸಂಮೇಳವನ್ನು ಆಯೋಜಿಸುವ ಉದ್ದೇಶವನ್ನು ಸ್ಪಷ್ಟಪಡಿಸಿ ಹಾಜರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಧನ್ಯವಾದ ಅರ್ಪಿಸಿದರು. ಸಭೆಯ ಅಂತ್ಯದಲ್ಲಿ ಪ್ರೇರಣಾ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಈ ಸಭೆಗೆ ತಾಲೂಕಾ ಪಂಚಾಯಿತಿಯ ಮಾಜಿ ಉಪಸಭಾಪತಿ ಸುರೇಶ್ ದೇಸಾಯಿ, ರವಿ ಕಾಡಗಿ, ಗುಂಡು ತೋಪಿನಕಟ್ಟಿ, ಶಿವಪ್ರತಿಷ್ಠಾನದ ಅಧ್ಯಕ್ಷ ಮನೋಹರ್ ಗಾವಡೆ, ಸನಾತನ ಸಂಸ್ಥೆಯ ಕೋನೆರಿ ಕುಮರೂತ್ವಾಡಕರ, ಇದಲಹೊಂಡ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಾಂಗಪ್ಪ ಬಾಚೋಳಕರ, ಜಾಂಬೋಟಿ ಗ್ರಾಮಪಂಚಾಯತ್ ಉಪಾಧ್ಯಕ್ಷ ಸುನಿಲ್ ದೇಸಾಯಿ, ಸಂಜಯ ಮಯೇಕರ್ ಹಾಗು ಬಜರಂಗ ದಳ, ಶಿವಪ್ರತಿಷ್ಠಾನ ಹಿಂದೂಸ್ಥಾನ, ಸನಾತನ ಸಂಸ್ಥೆ, ವಿಶ್ವ ಹಿಂದೂ ಪರಿಷತ್, ಜೊತೆಗೆ ಪಂಡಿತ್ ಓಗಲೆ ಸ್ನೇಹಿತ ಬಳಗ, ಬೆಂಬಲಿಗರು ಹಾಗೂ ತಾಲ್ಲೂಕಿನ ಹಿಂದೂತ್ವವಾದಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.



